ನವದೆಹಲಿ : ಶನಿವಾರ ದೆಹಲಿಯಲ್ಲಿ ಭಾರತದ ಮೊದಲ ಆಟಿಕೆ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡುವಂತೆ ಆಟಿಕೆ ತಯಾರಕರಿಗೆ ಮನವಿ ಮಾಡಿದ ಪ್ರಧಾನಿ, ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಿಸಿ, ಹೊಸತನಕ್ಕೆ ಒತ್ತು ನೀಡುವಂತೆ ರಾಷ್ಟ್ರೀಯ ಕಂಪೆನಿಗಳಿಗೆ ಮನವಿ ಮಾಡಿ ದ್ದಾರೆ. ಭಾರತವು ಆಟಿಕೆ ಕ್ಷೇತ್ರದಲ್ಲಿ ಮತ್ತು ಜಾಗತಿಕ ಪ್ರೇಕ್ಷಕರಿಗೆ ಸೇವೆ ಒದಗಿಸುವಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
100 ಶತಕೋಟಿ ಅಮೆರಿಕನ್ ಡಾಲರ್ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಬಹಳ ಕಡಿಮೆ ಎಂದು ಹೇಳಿದ ಮೋದಿ, ಭಾರತದ ಮಾರುಕಟ್ಟೆಯಲ್ಲಿ ಚೀನಾದ ಆಟಿಕೆಗಳ ಪ್ರಾಬಲ್ಯಕ್ಕೆ ಸವಾಲೊಡ್ಡುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಮುಂದಾಗಿದೆ ಎಂದು ಹೇಳಿದರು.
ದೇಶದಲ್ಲಿ ಮಾರಾಟವಾಗುವ ಆಟಿಕೆಗಳಲ್ಲಿ ಶೇ.85ರಷ್ಟು ಆಮದು ಮಾಡಿಕೊಳ್ಳುತ್ತೇವೆ. ಹೀಗಾಗಿ, ಇನ್ಮುಂದೆ ಮೇಡ್ ಇನ್ ಇಂಡಿಯಾ ಆಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.