ಐವತ್ತು ವರ್ಷಗಳ ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಕಾಂಗ್ರೆಸ್ಗ ಹಿರಿಯ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನೂತನ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಆಲೋಚನೆಗಳನ್ನು ಇಂಗ್ಲಿಷ್ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿರುವುದು ಹೀಗೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ. ಇದೀಗ ರಾಜ್ಯಸಭೆಯಲ್ಲಿನ ನಿಮ್ಮ ನಾಯಕತ್ವವು ಕೇವಲ ಪ್ರಚಾರ ಎನಿಸಿಕೊಳ್ಳುತ್ತದೇಯೆ?
ಇಲ್ಲಿ ಯಾವುದೇ ರೀತಿಯ ಭಾಗಶಃ ನಾಯಕತ್ವವೆಂಬುದು ಇಲ್ಲ, ನಮ್ಮದು ರಾಷ್ಟ್ರೀಯ ಪಕ್ಷ, ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 10 ಕೋಟಿ ಮತ ಪಡೆದಿದ್ದೇವೆ. ನಾನು ಅದರ ನಾಯಕ್ವತವನ್ನು ವಹಿಸಿದ್ದೇನೆಯೇ ಹೊರತು ಯಾವುದೇ ಪ್ರಚಾರಕ್ಕಾಗಿ ಅಲ್ಲ. ರಾಜ್ಯಸಭೆಯ ವಿರೋಧಪಕ್ಷ ಸ್ಥಾನದಲ್ಲಿ ಕೂರಲು ಶೇ.10% ಸ್ಥಾನಗಳನ್ನು ಹೊಂದಿರಲೇಬೇಕು ಎಂಬ ನಿಯಮವಿದೆ. ಇದನ್ನು ಸಭಾಧ್ಯಕ್ಷರು ತೆಗೆದು ಹಾಕಬಹುದಿತ್ತು. ಆದರೆ, ಅವರಾಗಲೀ ಅಥವಾ ಸರಕಾರವಾಗಲೀ ಈ ಕೆಲಸ ಮಾಡಲಿಲ್ಲ. ನಮ್ಮ ಪಕ್ಷದ ನಾಯಕರು ಮತ್ತು ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಈ ಸ್ಥಾನಕ್ಕೇರಲು ಸಹಾಯ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕನೂ ಸದಾ ಸಾಮಾನ್ಯ ಜನರು, ರೈತಾಪಿ ಮತ್ತು ಶ್ರಮಿಕರ ಧ್ವನಿಯಂತೆ ಕೆಲಸ ಮಾಡಬೇಕು, ಅದು ಅವರಿಗಿರ ಬೇಕಾದ ಪ್ರಮುಖ ಅರ್ಹತೆ, ಅದು ನನಗೆ ಇದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಉನ್ನತ ವಾದದ್ದು, ಇಲ್ಲಿ ನಾನೊಬ್ಬನೆ ಪ್ರಭಾವಿ ನಾಯಕನಾಗಿದ್ದೇನೆ. ಈ ಹಿಂದೆ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಗುಲಾಬ್ ನಬೀ ಅಜರ್ ಅವರು ಇದ್ದಾಗ, ನಮ್ಮ ಪಕ್ಷದ ಸಂಖ್ಯಾಬಲ 70 ಇತ್ತು. ಪ್ರಸ್ತುತ ನಮ್ಮ ಸೈನ್ಯದ ಬಲ 36 ಇದೆ, ಯಾವುದೇ ಚಿಂತೆಯಿಲ್ಲ. ಇರುವ ಕಡಿಮೆ ಬಲದೊಂದಿಗೆ ನಾವು ಜನರ ಹಿತಕ್ಕಾಗಿ ಹೋರಾಡುತ್ತೇವೆ. ಇಂದು ನಮ್ಮ ಪಕ್ಷದ ಬಲಸಂಖ್ಯೆೆ ಕಡಿಮೆ ಎಂದು ನಮ್ಮನ್ನು ಅವರು ಅಣಕಿಸಬಹುದು. ಆದರೆ 1984ರಲ್ಲಿ ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ಕೇವಲ ಎರಡು ಸ್ಥಾನ ಮಾತ್ರ ಹೊಂದಿತ್ತು. ಆಗ ಅಧಿಕಾರ ದಲ್ಲಿದ್ದ ನಮ್ಮ ಪಕ್ಷ ಎಂದಿಗೂ ಅಟಲ್ ಬಿಹಾರ ವಾಜಪೇಯಿರಂತಹ ನಾಯಕರನ್ನು ಅವಮಾನಿಸಿರಲಿಲ್ಲ, ಇದನ್ನು ಬಿಜೆಪಿ ಮರೆತಂತಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಇಂದು ಕಾಂಗ್ರೆಸ್‌ನ ಸಂಖ್ಯಾಬಲ ಕೇವಲ 36 ಹೊಂದಿದೆ. ಇದನ್ನು ಹಿಂದಿನ ಪ್ರಭಾವಿ ನಾಯಕರಾದ ಡಾ.ಮನಮೋಹನ್ ಸಿಂಗ್, ಅಂಟೋನಿ, ಚಿದಂಬರಂ, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಕಪಿಲ್ ಸಿಬಲ್ ರಂತಹ ನಾಯಕತ್ವ ಮತ್ತೆ ಸಾಧ್ಯವೇ?
ಅವರೆಲ್ಲಾರೂ ನಮ್ಮ ಪಕ್ಷದ ಅತೀ ಪ್ರಭಾವಿ ಮತ್ತು ಬುದ್ಧಿಶಾಲಿ ನಾಯಕರು. 1969ರಲ್ಲಿ ನಾನು ಈ ಪಕ್ಷವನ್ನು ಸೇರಿದಾಗಿ ನಿಂದಲೂ ಅವರನ್ನು ಬಲ್ಲೆ. ಕಾಂಗ್ರೆಸ್ ಪಕ್ಷವನ್ನು ಪುನಃ ಬಲಪಡಿಸಲು ಅವರ ಸಲಹೆ ಖಂಡಿತ ಪಡೆಯುವೆ. ಆದರೆ ಈಗ ನನಗೆ
ಇರುವ ಚಿಂತೆಯೆಂದರೆ ಪ್ರಮುಖ ವಿಷಯಗಳ ಕುರಿತಂತ ಚರ್ಚೆಗೆ ಆಡಳಿತ ಪಕ್ಷ ಸರಿಯಾದ ಸಮಯ ನೀಡುತ್ತದೆಯೇ ಇಲ್ಲವೇ ಎಂಬುದಷ್ಟೇ.
ಇತ್ತೀಚಿಗಷ್ಟೇ ರಾಷ್ಟ್ರಪತಿಗಳ ಭಾಷಣ ಕುರಿತಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷ ವಿಭಿನ್ನ ನಿಲುವು ವ್ಯಕ್ತಪಡಿಸಿದೆ. ಇದು ಪಕ್ಷದಲ್ಲಿನ ಸಮನಯ್ವತೆಯ ಕೊರತೆಯೇ?
ಈ ರೀತಿಯ ವಿಭಿನ್ನ ನಿಲುವುಗಳಿಗೆ ಪಕ್ಷದಲ್ಲಿನ ಸಮನ್ವಯತೆಯ ಕೊರತೆ ಎಂದು ಹೇಳಲಾಗುವುದಿಲ್ಲ. ಉಭಯ ಸದನಗಳಲ್ಲಿ ಆಡಳಿತ ಪಕ್ಷ ಯಾವ ರೀತಿ ಚರ್ಚೆಯ ವಿಷಯವನ್ನು ಪ್ರಸ್ತಾಪಿಸಿದೆ ಎಂಬುದರ ಆಧಾರದ ಮೇಲೆ ನಿಲುವುಗಳು ಅವಲಂಬಿತ ವಾಗಿರುತ್ತದೆಯೇ ಹೊರತು ಸಮನ್ವಯದ ಕೊರತೆಯಿಂದಲ್ಲ.
ನೀವು ಲೋಕಸಭೆಯಲ್ಲಿದ್ದಾಗ ದಿ.ಅನಂತ್ ಕುಮಾರ್ ರವರು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಈಗ
ಪ್ರಹ್ಲಾದ್ ಜೋಷಿಯವರು ಇದೊಂದು ಕಾಕತಾಳಿಯವೇ ಇರಬಹುದು, ಆದರೆ ಇದು ನಿಮಗೆ ಸಹಕಾರಿಯಾಗಲಿದೆಯೇ ?
ನಾವು ಒಂದೇ ರಾಜ್ಯದವರು ಇರಬಹುದು, ಆದರೆ ನಮ್ಮ ಪಕ್ಷ ಬೇರೆ ಮತ್ತು ನಿಲುವುಗಳೂ ಬೇರೆ. ನಾವು ಸರಕಾರದ ಉತ್ತಮ ಯೋಜನೆಗಳಿಗೆ ಖಂಡಿತ ಸಹಕರಿಸುತ್ತೇವೆ. ಸೂಕ್ಷ್ಮ ಸಂಸದೀಯ ಕಾರ್ಯನಿರ್ವಹಣೆಗಾಗಿ ಎಲ್ಲಾ ಪಕ್ಷಗಳನ್ನು ಒಂದಾಗಿಸಿ ಕಾರ್ಯನಿರ್ವಹಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ, ಅದನ್ನು ಬಿಟ್ಟು ಪಕ್ಷ ಒಡೆಯುವ ಕೆಲಸಮಾಡುವುದಲ್ಲ.
ಈ ಹಿಂದೆ ಗುಲಾಮ್ ನಬೀ ಅಜಾದ್ ರವರು ವಿರೋಧ ಪಕ್ಷದ ನಾಯಕರಾಗಿದ್ದಾಗ, ರಾಜ್ಯಸಭೆಯ ಅಧ್ಯಕ್ಷರಾಗಿದ್ದ ವೆಂಕಯ್ಯನಾಯ್ಡು ಮತ್ತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಮುಂದೆ ನೀವು ಹೇಗೆ ಅದನ್ನು ನಿಭಾಯಿಸುತ್ತೀರಾ ?
ವೆಂಕಯ್ಯನಾಯ್ಡು ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದರೂ ಸಹ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು, ಪ್ರಸ್ತುತ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿದ್ದಾರೆ, ಅವರ ಸ್ಥಾನವನ್ನು ನಾನು ಗೌರವಿಸುತ್ತೇನೆ. ನಾನು ಅವರ ಕಾರ್ಯವೈಖರಿ ಯನ್ನು ಚೆನ್ನಾಗಿಬಲ್ಲೆ. ಹೀಗಾಗಿ ನಾನು ಅವರ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ. ಆದರೆ ನನ್ನ ಮನವಿ ಎಂದರೆ, ಪ್ರಧಾನಿ ಮೋದಿಯವರಂತೆ ಏಕಪಕ್ಷೀಯ ನಾಯಕನಂತೆ ನಡೆದುಕೊಳ್ಳದೆ, ವಿರೋಧ ಪಕ್ಷಗಳನ್ನೂ ಮನ್ನಣೆಗೆ ತೆಗೆದುಕೊಳ್ಳಬೇಕು ಎಂಬುದಷ್ಟೇ.
ಬಜೆಟ್‌ನಲ್ಲಿ ಕೆಲವು ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಮಸೂದೆಗಳ ಜತೆಗೆ ಖಾಸಗೀಕರಣ ಕುರಿತೂ ಪ್ರಸ್ತಾಪಿಸ ಲಾಯಿತು. ಇದರ ಮರುಪರಿಶೀಲನೆ ನಡೆಸುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದ್ದೇಕೆ?
ಲೋಕಸಭೆಯಲ್ಲಿ ಪಾಸ್ ಮಾಡಿದ ಬಿಲ್ ನ್ಯಾಯಾಂಗ ವಿಮರ್ಶೆಗೆ ಒಳಗಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣದ ಕೇಂದ್ರದ ಪ್ರಸ್ತಾವ ಸಮಂಜಸವಲ್ಲ. ಈಗಾಗಲೇ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದು ಳಿದ ವರ್ಗಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡಲಾಗಿದೆ. ಆದರೆ, ಖಾಸಗೀಕರಣದಿಂದಾಗಿ ಅವರ ಉದ್ಯೋಗ ಕ್ಷೇತ್ರದಲ್ಲಿನ ಮೀಸಲಿನ ಮೇಲೆ ನೇರ ಪರಿಣಾಮ ಬೀರಿ, ಮೀಸಲು ವ್ಯವಸ್ಥೆಯನ್ನೇ ಅಂತ್ಯ ಗೊಳಿಸುತ್ತದೆ. ಇದರಿಂದ ಖಾಸಗೀ ಕ್ಷೇತ್ರ ಬೆಳೆಯುತ್ತದೆಯೇ ಹೊರತು, ಜನಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲ
ಕೇಂದ್ರ ತನಿಖಾ ವಿಭಾಗ ಮತ್ತು ಕೇಂದ್ರ ಜಾಗೃತ ಆಯೋಗದಿಂದ ನೇಮಿಸಿದ ಸಮಿತಿಯಲ್ಲಿ ನೀವು ಪ್ರಧಾನಿ ಮೋದಿಯವರು ಸದಸ್ಯರಾಗಿದ್ದಾಗ, ಅವರ ಜೊತೆಗಿನ ನಿಮ್ಮ ಅನುಭವ ಹೇಗಿತ್ತು ?
ನಾವಿಬ್ಬರು ಆ ಸಮಿತಿಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಬಹುಮತ ದೃಷ್ಟಿಕೋನವೇ ಮೇಲುಗೈ ಸಾಧಿಸುತ್ತಿತ್ತು. ಕೇಂದ್ರ ತನಿಖಾ ವಿಭಾಗದ ನಿರ್ದೇಶಕರನ್ನು ಆಯ್ಕೆೆಮಾಡುವ ಸಂದರ್ಭದಲ್ಲಿ, ನಾನು ಅವರು ಸೂಚಿಸಿದ್ದ ಹೆಸರನ್ನು ವಿರೋಧಿಸಿದ್ದೆ, ಹೀಗಾಗಿ ನನ್ನನ್ನು ಸದಾ ವಿರೋಧಿಸುವ ನಾಯಕ ಎಂದೇ ಬಿಂಬಿಸಲಾಗುತ್ತಿತ್ತು. ಅವರು ಎಂದಿಗೂ ವಿರೋಧಪಕ್ಷದ ನಾಯಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಆ ಸಮಯದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅರ್ಥವೇ ಇಲ್ಲ
ದಂತಾಗಿತ್ತು.