Saturday, 23rd November 2024

ಪೈಲಟ್ ಮೇಲೆ ಬೆಕ್ಕಿನ ದಾಳಿ; ವಿಮಾನ ತುರ್ತು ಭೂಸ್ಪರ್ಶ

ಸುಡಾನ್ : ಸುಡಾನ್‍ನಲ್ಲಿ ಪುಟ್ಟ ಬೆಕ್ಕೊಂದು ಆಗಸದಲ್ಲಿ ಹಾರುತ್ತಿದ್ದ ವಿಮಾನ ಭೂಮಿಗೆ ಇಳಿಯುವಂತೆ ಮಾಡಿದೆ.

ಸಾಮಾನ್ಯವಾಗಿ ತಾಂತ್ರಿಕ ದೋಷ ಇಲ್ಲವೆ, ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದಂತಹ ಸಂದರ್ಭಗಳಲ್ಲಿ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿರುವ ಘಟನೆಗಳು ಸಾಕಷ್ಟು ನಡೆದಿವೆ.

ಸುಡಾನ್ ದೇಶದ ಖಾರ್ಟೌಮ್ ನಲ್ಲಿ ಪ್ರಯಾಣಿಕರನ್ನು ಹೊತ್ತು ಖಾರ್ಟೌಮ್‍ನಿಂದ ಪ್ರಯಾಣ ಬೆಳೆಸಿದ ವಿಮಾನ, ಅರ್ಧಗಂಟೆ ಯಲ್ಲಿ ಅದೇ ನಿಲ್ದಾಣಕ್ಕೆ ಹಿಂತಿರುಗಿ ಲ್ಯಾಂಡ್ ಆಗಿದೆ. ಈ ತುರ್ತು ಲ್ಯಾಂಡಿಂಗ್ ಗೆ ಕಾರಣವಾಗಿದ್ದು ಒಂದು ಬೆಕ್ಕು ಎಂಬ ವಿಚಾರ ಅಚ್ಚರಿ ಮೂಡಿಸಿದೆ.

ವಿಮಾನ ಟೆಕ್ ಆಫ್ ಆಗಿ ಅರ್ಧ ಗಂಟೆಯಾಗಿತ್ತು. ಈ ವೇಳೆ ಕಾಕ್‍ಪಿಟ್ ಪ್ರವೇಶಿಸಿದ ಬೆಕ್ಕು ಪೈಲಟ್ ಮೇಲೆ ದಾಳಿ ನಡೆಸಿದೆ. ಎಷ್ಟೇ ಪ್ರಯತ್ನ ಪಟ್ಟರೂ ಬೆಕ್ಕನ್ನು ಹಿಡಿಯಲು ವಿಮಾನದ ಸಿಬ್ಬಂದಿ ವಿಫಲರಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನವೆ ಅನಿವಾರ್ಯ ವಾಗಿ ವಿಮಾನವನ್ನು ಖಾರ್ಟೌಮ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.

ವಿಮಾನ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಈ ಬೆಕ್ಕು ಕಾಕ್‍ಪಿಟ್ ಪ್ರವೇಶಿಸಿದ್ದು ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ, ಅದು ಪ್ರಯಾಣಿಕರಿಗೆ ಸೇರಿದ ಬೆಕ್ಕು ಎನ್ನಲಾಗುತ್ತಿದೆ.