ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆರಾವೀಕ್ ಜಾಗತಿಕ ಶಕ್ತಿ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಗೆ ಭಾಜನರಾಗಿದ್ದು ಶುಕ್ರವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕೇಂಬ್ರಿಡ್ಜ್ ಇಂಧನ ಸಂಶೋಧನಾ ಸಹಯೋಗ ಸಪ್ತಾಹ (CERAWeek) 2021ರ ಸಮಾವೇಶ ನಡೆಯಲಿದ್ದು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಸಾಯಂಕಾಲ 7 ಗಂಟೆಗೆ ಭಾಷಣ ಮಾಡಲಿದ್ದಾರೆ.
ಸೆರಾವೀಕ್ ಅನ್ನು 1983 ರಲ್ಲಿ ಡಾ.ಡೇನಿಯಲ್ ಯರ್ಗಿನ್ ಸ್ಥಾಪಿಸಿದರು. ಇದನ್ನು ಪ್ರತಿವರ್ಷ ಮಾರ್ಚ್‌ನಲ್ಲಿ ಹೂಸ್ಟನ್‌ನಲ್ಲಿ ಆಯೋಜಿಸಲಾಗುತ್ತಿದ್ದು, ವಿಶ್ವದ ಪ್ರಮುಖ ವಾರ್ಷಿಕ ಇಂಧನ ವೇದಿಕೆಯೆಂದು ಪರಿಗಣಿಸಲಾಗಿದೆ. CERAWeek 2021 ಅನ್ನು ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ಆಚರಿಸಲಾಗುತ್ತದೆ.