ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ದಳ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯದ ಮುಂದೆ ಶುಕ್ರವಾರ ಸುದೀರ್ಘ ಆರೋಪಪಟ್ಟಿ ಸಲ್ಲಿಸಿದೆ.
ಆರೋಪ ಪಟ್ಟಿಯಲ್ಲಿ 33 ಆರೋಪಿಗಳ ಹೆಸರುಗಳಿದ್ದು, 200 ಸಾಕ್ಷಿಗಳ ಹೇಳಿಕೆ ಒಳಗೊಂಡಿದೆ ಎಂದು ವರದಿ ಮಾಡಿದೆ. 12,000 ಕ್ಕೂ ಹೆಚ್ಚು ಪುಟಗಳಿದ್ದು, ಡಿಜಿಟಲ್ ಸ್ವರೂಪವು 50,000 ಪುಟಗಳಲ್ಲಿದೆ ಎಂದು ತಿಳಿಸಿದೆ.