Saturday, 23rd November 2024

ಜೀನ್ಸ್ ಪ್ಯಾಂಟ್, ಶಾರ್ಟ್ಸ್ ಧರಿಸದಂತೆ ನಿಷೇದ ಹೇರಿದ ಖಾಪ್ ಪಂಚಾಯತ್

ಮುಜಫ್ಫರ್ ನಗರ: ಉತ್ತರಪ್ರದೇಶ ರಾಜ್ಯದ ಮುಝಫ್ಫರ್ ನಗರ ಜಿಲ್ಲೆಯ ಖಾಪ್ ಪಂಚಾಯತ್ ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸದಂತೆ, ಪುರುಷರು ಶಾರ್ಟ್ಸ್ ಧರಿಸದಂತೆ ನಿಷೇಧ ಹೇರಿದೆ.

ಉಡುಪುಗಳೆಲ್ಲಾ ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿದ್ದು, ಎಲ್ಲರೂ ಭಾರತೀಯ ಸಂಪ್ರದಾಯದಂತೆ ವಸ್ತ್ರಗಳನ್ನು ಧರಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಬಹಿಷ್ಕರಿಸಲಾಗುವುದು ಎಂದೂ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಪಂಚಾಯತ್ ನಿರ್ಧಾರ ಪ್ರಕಟಿಸಿದ ಸಮುದಾಯದ ಮುಖಂಡ, ಕಿಸಾನ್ ಸಂಘ ಮುಖ್ಯಸ್ಥ ಠಾಕೂರ್ ಪುರಾನ್ ಸಿಂಗ್, ಮಹಿಳೆಯರಿಗೆ ಜೀನ್ಸ್ ಮತ್ತು ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ನಾವು ನಮ್ಮ ಸಾಂಪ್ರದಾಯಿಕ ಬಟ್ಟೆಗಳಾದ ಸೀರೆಗಳು, ಘಾಗ್ರಾ” ಮತ್ತು “ಸಲ್ವಾರ್-ಕಮೀಜ್” ಗಳನ್ನು ಧರಿಸಬೇಕು “ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.