Thursday, 12th December 2024

ಧ್ವನಿಸುರುಳಿಗಳ ಟೇಪ್‌ ಅನ್ವೇಷಕ ಲಾವೊ ಒಟೆನ್ಸ್‌ ಇನ್ನಿಲ್ಲ

ದ ಹಾಗ್: ಧ್ವನಿಸುರುಳಿಗಳ ಟೇಪ್‌ ಅನ್ನು ಅನ್ವೇಷಿಸಿದ್ದ ನೆದರ್ಲೆಂಡ್ಸ್‌ನ ಲಾವೊ ಒಟೆನ್ಸ್‌ (94 )ಶನಿವಾರ ವಿಧಿವಶರಾದರು.

ಕಾಂಪ್ಯಾಕ್ಟ್‌ ಡಿಸ್ಕ್‌ ಅಭಿವೃದ್ಧಿಪಡಿಸಲು ಒಟೆನ್ಸ್‌ ಅವರು ಫಿಲಿಪ್ಸ್‌ ಕಂಪನಿಗೆ ನೆರವಾಗಿದ್ದರು. ಡೆಲ್ಫ್‌ನ ಪ್ರತಿಷ್ಠಿತ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಅವರು 1952ರಲ್ಲಿ ಫಿಲಿಪ್ಸ್‌ ಕಂಪನಿ ಸೇರಿದ್ದರು. ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿದ್ದು, ಟೇಪ್‌ ರೆಕಾರ್ಡರ್‌ಗೆ ಪರ್ಯಾಯ ಅನ್ವೇಷಿಸಲು ಒತ್ತು ನೀಡಿದ್ದರು.

ಧ್ವನಿಸುರುಳಿ ಮತ್ತು ಟೇಪ್‌ ರೆಕಾರ್ಡರ್‌ಗಳು 90ನೇ ದಶಕದ ಅಂತ್ಯದವರೆಗೂ ಅಸಂಖ್ಯ ಸಂಗೀತ ಪ್ರಿಯರು ಹಾಗೂ ಕೇಳುಗರ ಮೆಚ್ಚಿನ ಸಾಧನಗಳಾಗಿದ್ದವು.