Thursday, 12th December 2024

ಅಂಬಾನಿ ನಿವಾಸದ ಬಳಿ ಕಾರ್’ನಲ್ಲಿ ಸ್ಪೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಬಂಧನ

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಕಾರ್ ಒಂದರಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್​​ಐಎ ಇಂದು ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಅವರನ್ನು ಬಂಧಿಸಿದೆ.

ಫೆ 28 ರಂದು ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದೆದುರು ಸ್ಕಾರ್ಪಿಯೋ ಒಂದರಲ್ಲಿ ಸ್ಪೋಟಕ ಮತ್ತು ಬೆದರಿಕೆ ಗಳು ಪತ್ತೆಯಾಗಿದ್ದವು. ಘಟನೆಯಲ್ಲಿ ಕಾಣಿಸಿಕೊಂಡ ಸ್ಕಾರ್ಪಿಯೋ ಕಾರ್​ ನನ್ನದೆಂದು ಮನ್​ಸುಖ್ ಹಿರೇನ್ ಎನ್ನುವ ದೂರು ದಾಖಲಿಸಿ ಒಂದು ದಿನದ ಒಳಗೆ ಮೃತಪಟ್ಟಿದ್ದ.

ಮನಸುಖ್ ಹಿರೇನ್ ನಿಗೂಢ ಸಾವಿನ ದಿನ ಸಚಿನ್ ವಾಜೆ ಅವನ ಜೊತೆಗಿದ್ದರು ಎಂದು ತಿಳಿದು ಬಂದಿದ್ದರಿಂದ ಹಾಗೂ ಹಿರೇನ್ ಪತ್ನಿ ವಾಜೆ ಮೇಲೆ ಆರೋಪ ಮಾಡಿದ್ದರಿಂದ ಎನ್​ಐಎ ವಾಜೆ ಅವರನ್ನು ವಿಚಾರಣೆ ನಡೆಸಿ ಭಾನುವಾರ ಬಂಧಿಸಿದೆ.

ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ವಾಜೆ ಮಧ್ಯಂತರ ಜಾಮೀನು ನೀಡುವಂತೆ ಹಾಗೂ ಮಾ.19 ರಂದು ನಡೆಯುವ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.