ಅಭಿವ್ಯಕ್ತಿ
ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೇಂದ್ರ ಶಿಕ್ಷಣ ಸಚಿವರು
ಭಾರತವು ಸಾಂಸ್ಕೃತಿಕ ವೈವಿಧ್ಯದೊಂದಿಗೆ ಸಾಟಿಯಿಲ್ಲದ ಭಾಷಾಸಂಪತ್ತನ್ನು ಹೊಂದಿದೆ. ಭಾಷೆ ಯನ್ನು ಪ್ರಬಲ ಸಾಧನ ವೆಂದು ಒಪ್ಪಿಕೊಳ್ಳಲಾಗಿದೆ. ಆ ಮೂಲಕ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಶಿಕ್ಷಣ ಸಚಿವಾಲ ಯವು ಶಿಕ್ಷಣ ಕ್ಷೇತ್ರದಲ್ಲಿ ಬಹುಭಾಷಾ ಶಿಕ್ಷಣವನ್ನು ಪ್ರೋತ್ಸಾಹಿಸಲು, ಮಾತೃಭಾಷೆಗಳ ಬಳಕೆ ಮತ್ತು ಪ್ರಸಾರವನ್ನು ಉತ್ತೇಜಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಭಾರತ ಸರಕಾರವು ಭಾರತದ ಅಳಿವಿ ನಂಚಿನಲ್ಲಿರುವ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣೆ ಯೋಜನೆ (ಎಸ್ಪಿಪಿಇಎಲ್)ಯನ್ನು ಆರಂಭಿಸಿದೆ.
ಜಗತ್ತಿನಲ್ಲಿ ಮಾತನಾಡುವ 6000 ಭಾಷೆಗಳಲ್ಲಿ ಶೇ.43ರಷ್ಟು ಅಳಿವಿನಂಚಿನಲ್ಲಿವೆ. ಇವುಗಳಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು
ಸಾರ್ವಜನಿಕ ವಲಯದಲ್ಲಿ ಕೆಲವು ನೂರು ಭಾಷೆಗಳನ್ನು ಮಾತ್ರ ಬಳಸಲಾಗುತ್ತಿದೆ.
ಡಿಜಿಟಲ್ ಪ್ರಪಂಚದಲ್ಲಿ ನೂರಕ್ಕಿಂತಲೂ ಕಡಿಮೆ ಭಾಷೆಗಳು ಬಳಕೆಯಾಗುತ್ತಿವೆ. ಭಾಷೆಯು ವ್ಯಕ್ತಿ ಮತ್ತು ಸಮುದಾಯಕ್ಕೆ ಸಂವಹನ ಮತ್ತು ಗುರುತಿನ ಸಾಧನವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜನಸಾಮಾನ್ಯರಿಗೆ ಮಾತೃ
ಭಾಷೆಯಲ್ಲಿ ಶಿಕ್ಷಣ ನೀಡಬೇಕು, ಅವರಿಗೆ ವಿಚಾರ ಗಳನ್ನು ತಿಳಿಸಿ; ಅವರು ಮಾಹಿತಿಯನ್ನು ಪಡೆಯುತ್ತಾರೆ, ಆದರೆ ಅದಕ್ಕಿಂತ ಹೆಚ್ಚಿನದು ಅಗತ್ಯ ಅಂದರೆ ಅವರಿಗೆ ಸಂಸ್ಕೃತಿಯನ್ನು ಕಲಿಸಿ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಇಲ್ಲಿ ಉಲ್ಲೇಖಿಸ ಬಹುದು.
ಪ್ರತಿಯೊಂದು ಭಾಷೆಯೂ ಸಂಸ್ಕೃತಿಯ ಪ್ರತಿಬಿಂಬ, ಭಾಷೆ ಒಂದು ಸಮಾಜದ ಆಲೋಚನೆ ಮತ್ತು ಜೀವನ ವಿಧಾನವಾಗಿದೆ. ಸಾಂಸ್ಕೃತಿಕ ವೈವಿಧ್ಯ ಮತ್ತು ಅಂತರ್ ಸಾಂಸ್ಕೃತಿಕತೆಯ ವಿನಿಮಯದಲ್ಲಿ ಭಾಷೆ ಒಗ್ಗೂಡಿಸುವ ಪಾತ್ರವನ್ನು ವಹಿಸುತ್ತದೆ. ಸಹಕಾರವನ್ನು ಬಲಪಡಿಸುವುದರ ಜೊತೆಗೆ, ಎಲ್ಲರನ್ನೂ ಒಳಗೊಂಡ ಜ್ಞಾನ ಸಮಾಜಗಳನ್ನು ನಿರ್ಮಿಸಲು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಭಾಷೆ ಸಹಾಯ ಮಾಡುತ್ತದೆ.
ಭಾರತವು ಸಾಂಸ್ಕೃತಿಕ ವೈವಿಧ್ಯದೊಂದಿಗೆ ಸಾಟಿಯಿಲ್ಲದ ಭಾಷಾಸಂಪತ್ತನ್ನು ಹೊಂದಿದೆ. ಭಾಷೆ ಯನ್ನು ಪ್ರಬಲ ಸಾಧನ ವೆಂದು ಒಪ್ಪಿಕೊಳ್ಳಲಾಗಿದೆ. ಆ ಮೂಲಕ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಶಿಕ್ಷಣ ಸಚಿವಾ ಲಯವು ಶಿಕ್ಷಣ ಕ್ಷೇತ್ರದಲ್ಲಿ ಬಹುಭಾಷಾ ಶಿಕ್ಷಣವನ್ನು ಪ್ರೋತ್ಸಾಹಿಸಲು, ಮಾತೃಭಾಷೆಗಳ ಬಳಕೆ ಮತ್ತು ಪ್ರಸಾರವನ್ನು
ಉತ್ತೇಜಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ.
ಭಾರತ ಸರಕಾರವು ಭಾರತದ ಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣೆ ಯೋಜನೆ (ಎಸ್ಪಿಪಿಇಎಲ್)ಯನ್ನು
ಆರಂಭಿಸಿದೆ. ಈ ಯೋಜನೆಯಡಿ, ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯು (ಸಿಐಐಎಲ್) ೧೦,೦೦೦ ಕ್ಕಿಂತ ಕಡಿಮೆ ಜನರು ಮಾತನಾಡುವ ಅಂದರೆ ಅಳಿವಿನಂಚಿನಲ್ಲಿರುವ ಭಾರತದ ಎಲ್ಲಾ ಮಾತೃ ಭಾಷೆಗಳು / ಭಾಷೆಗಳ
ರಕ್ಷಣೆ, ಸಂರಕ್ಷಣೆ ಮತ್ತು ದಾಖಲಾತಿಯ ಬಗ್ಗೆ ಕಾರ್ಯನಿರ್ವಹಿಸುತ್ತದೆ.
ಯೋಜನೆಯ ಮೊದಲ ಹಂತದಲ್ಲಿ, ಅಳಿವಿ ನಂಚಿನಲ್ಲಿರುವ ಭಾರತದ 117 ಭಾಷೆಗಳು / ಮಾತೃ ಭಾಷೆಗಳನ್ನು ಅಧ್ಯಯನ ಮತ್ತು ದಾಖಲಾತಿಗಾಗಿ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗಿದೆ. ಅಳಿವಿನಂಚಿನಲ್ಲಿರುವ ಭಾಷೆಗಳನ್ನು ರಕ್ಷಿಸಲು ವಿಶ್ವವಿದ್ಯಾ ಲಯ ಧನಸಹಾಯ ಆಯೋಗವು ಎರಡು ಯೋಜನೆಗಳನ್ನು ಪ್ರಾರಂಭಿಸಿದೆ, ಅವುಗಳೆಂದರೆ ಭಾರತದಲ್ಲಿ ದೇಶೀಯ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗಾಗಿ ರಾಜ್ಯ ವಿಶ್ವವಿದ್ಯಾಲಯಗಳಿಗೆ ಧನಸಹಾಯ’ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಳಿವಿನಂಚಿನ ಭಾಷಾ ಕೇಂದ್ರಗಳ ಸ್ಥಾಪನೆ’.
ಸಿಐಐಎಲ್ ಜೊತೆಗೆ, ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷೆ ಆಯೋಗ (ಸಿ ಎಸ್ ಟಿ ಟಿ), ಮಹಾತ್ಮಗಾಂಧಿ ಅಂತಾರಾಷ್ಟ್ರೀಯ
ಹಿಂದಿ ವಿಶ್ವವಿದ್ಯಾಲಯ, ಕೇಂದ್ರೀಯ ಹಿಂದಿ ಸಂಸ್ಥೆ, ಉರ್ದು ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿ ಕೇಂದ್ರ (ಸಿಯು ಎಲ್ ಎಲ್ ಸಿ), ರಾಷ್ಟ್ರೀಯ ಸಿಂಧಿ ಭಾಷೆ ಪ್ರೋತ್ಸಾಹ ಮಂಡಳಿ (ಎನ್ಸಿಪಿಎಸಎಲ), ರಾಷ್ಟ್ರೀಯ ಉರ್ದು ಭಾಷೆ ಪ್ರೋತ್ಸಾಹ ಮಂಡಳಿ
(ಎನ್ಸಿಪಿಯುಎಲ್)ಗಳೂ ಸಹ ಭಾರತೀಯ ಭಾಷೆಗಳ ಪ್ರೋತ್ಸಾಹ, ರಕ್ಷಣೆ ಮತ್ತು ಸಂರಕ್ಷಣೆಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿವೆ.
ಇದಲ್ಲದೆ, ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ಯೊಂದಿಗೆ ಸಮಾಲೋಚಿಸಿ, ನವೋದಯ ವಿದ್ಯಾಲಯಗಳು ಇತ್ತೀಚೆಗೆ ಎನ್ವಿಎಸ್’ನ ಪ್ರಾದೇಶಿಕ ಭಾಷಾ ಶಿಕ್ಷಕರಿಗೆ ಬೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನ ಕುರಿತು ಆನ್ಲೈನ್ ಕೋರ್ಸ್
ಆಯೋಜಿಸಿವೆ. ಭಾಷೆಯ ಬೋಧನೆಗಾಗಿ ಎನ್ಎಲ್ಪಿ (ಸಹಜ ಭಾಷಾ ಸಂಸ್ಕರಣೆ) ಸಾಧನಗಳನ್ನು ಅನುಷ್ಠಾನಗೊಳಿಸಲು ಮತ್ತು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದ ಮೂಲಕ ಭಾಷಾ ಕೌಶಲ್ಯಗಳನ್ನು ಸುಧಾರಿಸಲು ಈ ಕೋರ್ಸ್ ಗಮನ ಹರಿಸುತ್ತದೆ.
ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗಾಗಿ ಇದನ್ನು ಏಕ್ ಭಾರತ್ ಶ್ರೇಷ್ಠ ಭಾರತ’ಗೆ ಅನುಗುಣವಾಗಿ ರೂಪಿಸಲಾಗಿದೆ.
ಇದಲ್ಲದೆ, ಶಿಕ್ಷಕರ ತರಬೇತಿ ಕಾರ್ಯಕ್ರಮ ಭಿನಿಷ್ಠಾಭಿದಲ್ಲಿ ಸುಮಾರು 23 ಲಕ್ಷ ಶಿಕ್ಷಕರು 10 ಭಾಷೆಗಳಲ್ಲಿ ಕೋರ್ಸ್ ಪೂರ್ಣ ಗೊಳಿಸಿದ್ದಾರೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಅನ್ನು ಗಮನದಲ್ಲಿಟ್ಟುಕೊಂಡು ಎನ್ಸಿಇಆರ್ಟಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆ ಗಳಿಗೆ ಭಾಷಾ ಸಂಗಮ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಭಾರತೀಯ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾದ 22 ಭಾರತೀಯ ಭಾಷೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಭಾರತದ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು, ಎನ್ಸಿಇಆರ್ಟಿ ಎಲ್ಲಾ ಭಾಷೆಗಳ ವಿದ್ಯಾರ್ಥಿಗಳನ್ನು
ಗಮನದಲ್ಲಿಟ್ಟುಕೊಂಡು 22 ಭಾಷೆಗಳಲ್ಲಿ ಸರಳ ಮತ್ತು ಸಾಮಾನ್ಯವಾಗಿ ಬಳಸುವ ವಾಕ್ಯಗಳನ್ನು ಒಳಗೊಂಡಿರುವ ಕಿರು ಸಂವಾದಗಳನ್ನು ಸಿದ್ಧಪಡಿಸಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಡಿಜಿಟಲ್ ಭಾಷಾ ಪ್ರಯೋಗಾಲಯ ಸ್ಥಾಪನೆ ಮತ್ತೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಕೇಳುವ ಮತ್ತು ಮಾತನಾಡುವ ಕೌಶಲ್ಯ ಗಳನ್ನು ಪೂರೈಸುವ ಸಮಗ್ರ ಮತ್ತು ಸಂವಾದಾತ್ಮಕ ಡಿಜಿಟಲ್ ವಿಷಯಗಳಿಗೆ ಈ ಪ್ರಯೋಗಾಲಯ ಒಂದು ವೇದಿಕೆಯಾಗಿದೆ.
ಕೇಂದ್ರೀಯ ವಿದ್ಯಾಲಯಗಳು ಭಾಷಾ ಪ್ರಯೋಗಾಲಯಗಳ ಮೂಲಕ ಕಂಪ್ಯೂಟರ್ ಆಧಾರಿತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಭಾಷೆಯಲ್ಲಿ ಪರಿಣತಿ ಹೊಂದಲು ನೆರವಾಗುತ್ತವೆ. ಮೊದಲ ಹಂತದಲ್ಲಿ ಪ್ರತಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದರಂತೆ 276 ಡಿಜಿಟಲ್ ಭಾಷಾ ಪ್ರಯೋಗಾಲಯಗಳನ್ನು ಇಂಗ್ಲಿಷ್ ಸಾಫ್ಟ್’ವೇರ್‌ನೊಂದಿಗೆ ಸ್ಥಾಪಿಸಲಾಯಿತು.
ಎರಡನೇ ಹಂತದಲ್ಲಿ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿಯಲು ಸಾಫ್ಟ್’ವೇರ್‌ನೊಂದಿಗೆ ಸ್ಥಳಾವಕಾಶ (ಕೊಠಡಿ) ಮತ್ತು ಹಣದ ಲಭ್ಯತೆಗೆ ಅನುಗುಣವಾಗಿ 100 ಕೇಂದ್ರೀಯ ವಿದ್ಯಾಲಯಗಳಲ್ಲಿ ಸಮಗ್ರ ಡಿಜಿಟಲ್ ಭಾಷಾ ಪ್ರಯೋಗಾ ಲಯ ಸ್ಥಾಪಿಸಲಾಗಿದೆ. ಈ ಉಪಕ್ರಮಗಳು ಬಹು ಭಾಷೆಗಳನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿವೆ. ಬಹುಭಾಷಾ ಸಿದ್ಧಾಂತವು ಯುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ತಿಳಿವಳಿಕೆಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಆದ್ದರಿಂದ, ವಿದ್ಯಾರ್ಥಿಗಳು ಈಗ ಆರಂಭಿಕ ಹಂತದಿಂದಲೇ ವಿವಿಧ ಭಾಷೆಗಳಿಗೆ ತೆರೆದುಕೊಳ್ಳುತ್ತಾರೆ. ಮಗುವಿನ ಭಾಷೆ ಮತ್ತು ಬೋಧನಾ ಮಾಧ್ಯಮದ ನಡುವೆ ಈಗಿರುವ ಅಂತರವನ್ನು ತೊಡೆದುಹಾಕಲು ಸಮಗ್ರ ಪ್ರಯತ್ನ ಗಳನ್ನು ಮಾಡಲಾಗುವುದು. ಭಾಷೆಯನ್ನು ಕಲಿಯುವು ದೆಂದರೆ ಕೇವಲ ವರ್ಣಮಾಲೆ, ಅರ್ಥ, ವ್ಯಾಕರಣ ಮತ್ತು ಪದಗಳ ಜೋಡಣೆಯನ್ನು ಕಲಿಯುವುದು ಮಾತ್ರವಲ್ಲ. ಬದಲಿಗೆ ಜ್ಞಾನ ಸಂಪಾದನೆಯ ಕೌಶಲ್ಯಗಳನ್ನು ವೃದ್ಧಿಸುವ ಭಾಗವಾಗಿದೆ.