ಭಾರತ: ಗೃಹ ಸಾಧನಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನ ಜಾಗತಿಕ ನಾಯಕ ಮತ್ತು ಪ್ರಮುಖ ಸಾಧನಗಳಲ್ಲಿ ಸತತವಾಗಿ 12 ವರ್ಷಗಳಿಂದ ನಂ.1 ಬ್ರಾಂಡ್ ಆಗಿರುವ ಹಾಯರ್, ಇಂದು ತನ್ನ ಹೊಸ ಗ್ರಾಹಕ ಸೇವಾ ಉಪಕ್ರಮಕ್ಕೆ ಚಾಲನೆ ನೀಡಿದ್ದು ಅದು ವಾಟ್ಸಾಪ್ ಮೆಸೆಂಜರ್‌ನಲ್ಲಿ ಈಗ ಲಭ್ಯವಿದೆ. ಈ ಸೇವೆಯ ಮೂಲಕ ಹಾಯರ್ ಗ್ರಾಹಕ ಸಮೀಕ್ಷೆಯನ್ನು ವಾಟ್ಸಾಪ್ ಮೂಲಕ ನಿರ್ವಹಿಸುವ ಗುರಿ ಹೊಂದಿದ್ದು ಸೇವಾ ಅನುಭವವನ್ನು ಸುಧಾರಿಸುತ್ತದೆ.
2020ರಲ್ಲಿ ಹಾಯರ್ ವಾಟ್ಸಾಪ್ ಚಾನೆಲ್ ಪರಿಚಯಿಸಿದ್ದು ಅದು ತನ್ನ ಗ್ರಾಹಕರಿಗೆ ಸಮಸ್ಯೆಗಳನ್ನು ಪರಿಹರಿಸಲು, ಹೊಸ ಸೇವಾ ಕೋರಿಕೆಗಳನ್ನು ಉತ್ಪಾದಿಸಲು ಮತ್ತು ಪ್ರಸ್ತುತದ ಸ್ಥಾನಮಾನದ ಕುರಿತು ವಿಚಾರಣೆ ನಡೆಸಲು ನೆರವಾಗುತ್ತದೆ. ಈ ಚಾನೆಲ್ ಅನ್ನು ಚಾಟ್‌ಬೊಟ್‌ಗಳು ಮತ್ತು ಲೈವ್ ಏಜೆಂಟ್‌ಗಳ ಮೂಲಕ ಸನ್ನದ್ಧಗೊಳಿಸಲಾಗಿದ್ದು ಗ್ರಾಹಕರಿಗೆ ಅವರು ಎದುರಿಸುವ ಸಮಸ್ಯೆೆಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತವೆ. ಇದನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲು ಹಾಯರ್ ಉದ್ಯಮದ ಪ್ರಥಮ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದ್ದು ಇದು ರಿಯಲ್-ಟೈಮ್ ಆಧಾರದಲ್ಲಿ ಪೂರೈಸುವ
ಸೇವೆ ಕುರಿತು ಮಾಹಿತಿ ಸಂಗ್ರಹಿಸುತ್ತದೆ ಅಲ್ಲದೆ ಗ್ರಾಹಕರ ಅನುಭವ ಸುಧಾರಿಸುತ್ತದೆ. ಗ್ರಾಹಕರು ಈ ಸೇವೆಗೆ ತ್ವರಿತ ಸಂದೇಶ ಕಳುಹಿಸುವ ಮೂಲಕ ಮತ್ತು ಹಾಯರ್‌ನ ವಾಟ್ಸಾಪ್ ಖಾತೆ +91 8553049999 ಸಂಖ್ಯೆಗೆ ಮರು ನಿರ್ದೇಶಿಸುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅವರು ವಾಟ್ಸಾಪ್ ಅನ್ನು ಹಾಯರ್‌ನ ಎಲ್ಲ ವಿಭಾಗಗಳ ಅಪ್ಲಯನ್ಸಸ್, ಗ್ರಾಹಕ ಸೇವೆಗೆ ಪ್ರಮಾಣೀಕರಿಸಲು ಮತ್ತು ತಂತ್ರಜ್ಞರು ಹಾಗೂ ಎಂಜಿನಿಯರ್‌ಗಳ ಕುರಿತು ಫೀಡ್ ಬ್ಯಾಕ್ ನೀಡಲು ಬಳಸಬಹುದು.
ಇಷ್ಟೇ ಅಲ್ಲದೆ, ಹಾಯರ್ ಗ್ರಾಹಕ ಸಂವಹನ ಮತ್ತು ಅನುಭವ ಕ್ಷೇತ್ರದಲ್ಲಿ ವಾಟ್ಸಾಪ್ ಮೂಲಕ ಮತ್ತಷ್ಟು ಆವಿಷ್ಕಾರ ಮತ್ತು ಸಂಶೋಧನೆ ನಡೆಸುವ ಉದ್ದೇಶ ಹೊಂದಿದೆ. ತನ್ನ ಗ್ರಾಹಕರಿಗೆ ಈ ವರ್ಗದ ಅತ್ಯುತ್ತಮ ಸೇವಾ ಕೊಡುಗೆಗಳನ್ನು ಒದಗಿಸುವ ಗುರಿಯೊಂದಿಗೆ ಕಂಪನಿಯು ಹೊಸ ವಿಶೇಷತೆಗಳನ್ನು ತರಲಿದೆ ಮತ್ತು ಪ್ರಸ್ತುತ ಇರುವ ವಿಶೇಷತೆಗಳನ್ನು ಗರಿಷ್ಠಗೊಳಿಸಲಿದೆ.
ಈ ಉಪಕ್ರಮ ಕುರಿತು ಹಾಯರ್ ಅಪ್ಲಯನ್ಸಸ್ ಇಂಡಿಯಾ ಅಧ್ಯಕ್ಷ ಶ್ರೀ ಎರಿಕ್ ಬ್ರಗಾಂಝಾ, ‘‘ನಾವು ಮಾಡುವ ಪ್ರತಿಯೊಂದರಲ್ಲೂ ಗ್ರಾಹಕರು ಕೇಂದ್ರದಲ್ಲಿರುತ್ತಾರೆ, ಮತ್ತು ನಾವು ಅವರಿಗೆ ಪ್ರಥಮ ದರ್ಜೆಯ ಗ್ರಾಹಕ ಅನುಭವವನ್ನು ನಮ್ಮ ಶ್ರೇಷ್ಠ ಸೇವಾ ಉಪಕ್ರಮಗಳಿಂದ ಒದಗಿಸಲು ಬದ್ಧರಾಗಿದ್ದೇವೆ. ಹೊಸ ಸಹಜತೆಯಲ್ಲಿ ನಮ್ಮ ಗ್ರಾಹಕರಿಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ನಮ್ಮ ವಾಟ್ಸಾಪ್ ಅಸಿಸ್ಟೆನ್ಸ್ ನಮ್ಮ ಗ್ರಾಹಕರಿಗೆ ಫೀಡ್‌ಬ್ಯಾಕ್ ನೀಡುವ ಅಥವಾ ಒಂದು ಗುಂಡಿ ಒತ್ತುವುದರೊಂದಿಗೆ ಸಮಸ್ಯೆಯನ್ನು ಎತ್ತಿ ತೋರುವ ಅವಕಾಶ ನೀಡುತ್ತಿದ್ದೇವೆ. ಈ ಹೊಸ ಸೇವಾ ಅಂಶವು ಅವರಿಗೆ ಸುಲಭಗೊಳಿಸುವುದಲ್ಲದೆ ನಮ್ಮ ಗ್ರಾಹಕ ಸೇವಾ ಬಾಂಧವ್ಯಗಳನ್ನು ಸರಳಗೊಳಿಸುತ್ತದೆ ಎಂಬ ಆಶಾವಾದ ಹೊಂದಿದ್ದೇವೆ. ನಮ್ಮ ಗ್ರಾಹಕರು ಹೊಸದಾಗಿ ಬಿಡುಗಡೆಯಾದ ವಾಟ್ಸಾಪ್ ಹೆಲ್ಪ್ ಲೈನ್ ಅನುಕೂಲ ಪಡೆಯಬಹುದು’’ ಎಂದರು.
ಸಾಂಪ್ರದಾಯಿಕವಾಗಿ ವಿದ್ಯುತ್ ಉಪಕರಣಗಳ ಕಂಪನಿಗಳು ಕರೆಗಳು ಮತ್ತು ಇಮೇಲ್‌ಗಳ ಮೂಲಕ ಗ್ರಾಹಕರ ಅನುಭವ ಸಮೀಕ್ಷೆಗಳನ್ನು ನಡೆಸುತ್ತವೆ. ಕಂಪನಿಯ ಟ್ರೇಡ್‌ಮಾರ್ಕ್ ಅಸಾಂಪ್ರದಾಯಿಕ ಮತ್ತು ಆವಿಷ್ಕಾರವನ್ನು ಮರು ವ್ಯಾಖ್ಯಾ ನಿಸುವುದಾಗಿದೆ, ಇದರಿಂದ ಹಾಯರ್ ಈ ನಿಟ್ಟಿನಲ್ಲಿ ನೇತೃತ್ವ ವಹಿಸಿದೆ ಮತ್ತು ವಾಟ್ಸಾಪ್ ಮೂಲಕ ಗ್ರಾಹಕರ ಅನುಭವ ಸಮೀಕ್ಷೆಯನ್ನು ಪ್ರಾರಂಭಿಸಿದ ಮೊದಲ ಗ್ರಾಹಕ ಉತ್ಪನ್ನಗಳ ಕಂಪನಿಯಾಗಿದೆ.
ತಂತ್ರಜ್ಞಾನಗಳು ಉಂಟು ಮಾಡಿರುವ ಸಂಚಲನಗಳಿಂದ ಇಂದು ವಾಟ್ಸಾಪ್ ಭಾರತದಲ್ಲಿ ಆದ್ಯತೆಯ ಸಂವಹನ ಮಾಧ್ಯಮ ವಾಗಿ ಬಳಕೆಯಾಗುತ್ತಿದೆ. ಈ ಹೆಜ್ಜೆಯು ಕಂಪನಿಗೆ ಹೆಚ್ಚು ಗ್ರಾಹಕರಿಗೆ ತಲುಪಲು ಸಾಧ್ಯವಾಗಿದ್ದು ಅದರ ಮೂಲಕ ಸೇವಾ ಅನುಭವ ಮತ್ತಷ್ಟು ಸುಧಾರಿಸಲು ಹಾಗೂ ಅದರ ಮೂಲಕ ಸಕಾರಾತ್ಮಕ ಮಾತುಗಳನ್ನು ಉಂಟು ಮಾಡಲು ಶಕ್ತವಾಗುತ್ತದೆ. ಗ್ರಾಹಕರಿಗೆ ಸಮೀಕ್ಷೆಗೆ ಎಲ್ಲಿಯೇ ಆಗಲಿ ಮತ್ತು ಹೇಗೆಯೇ ಆಗಲಿ ಪ್ರತಿಕ್ರಿಯಿಸಲು ಮತ್ತಷ್ಟು ಅನುಕೂಲ ಉಂಟು ಮಾಡುತ್ತದೆ.
ಗ್ರಾಹಕರ ಫೀಡ್‌ಬ್ಯಾಕ್‌ಗೆ ಪೂರಕವಾಗಿ ಪ್ರಶ್ನಾವಳಿಯನ್ನು ಸಂಕ್ಷಿಪ್ತ ಹಾಗೂ ಸುಲಭವಾಗಿ ಗ್ರಹಿಸುವಂತೆ ರೂಪಿಸಿದ್ದು ಇದು ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆಗೆ ಉತ್ತೇಜಿಸುತ್ತದೆ. ಗ್ರಾಹಕರು ಹಾಯರ್ ಗ್ರಾಾಹಕ ಸೇವಾ ಚಾನೆಲ್‌ಗಳನ್ನು ಸಂಪರ್ಕಿಸಿದಾಗ, ಕಾಂಟ್ಯಾಕ್ಟ್ ಸೆಂಟರ್ ಏಜೆಂಟ್‌ಗಳು ಗ್ರಾಹಕರ ವಾಟ್ಸಾಪ್ ಫೋನ್ ನಂಬರ್ ಕೇಳುತ್ತಾರೆ ಮತ್ತು ವಾಟ್ಸಾಪ್ ಮೂಲಕ ಸಂದೇಶ ಗಳನ್ನು ಪೂರೈಸಲು ಆಯ್ಕೆ ಮಾಡಿಕೊಳ್ಳಬೇಕು.
ಒಮ್ಮೆ ಹಾಯರ್ ಆಥರೈಸ್ಡ್ ಸರ್ವೀಸ್ ಎಂಜಿನಿರ್ ಗ್ರಾಹಕರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಿದ ನಂತರ ಗ್ರಾಹಕರಿಗೆ ಸಣ್ಣ ಸಮೀಕ್ಷೆಯಲ್ಲಿ ಭಾಗವಹಿಸಲು ಸಂದೇಶ ಕಳುಹಿಸಲಾಗುತ್ತದೆ. ಪ್ರಶ್ನಾವಳಿಯು ಕಿರಿದು ಹಾಗೂ ಅರ್ಥ ಮಾಡಿಕೊಳ್ಳಲು ಸರಳವಾಗಿರುತ್ತದೆ ಹಾಗೂ ಪ್ರತಿಕ್ರಿಯೆಯನ್ನು ಆಯ್ಕೆಗಳ ಮೂಲಕ ನೀಡಬಹುದು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ