ಭುವನೇಶ್ವರ್: ಒಡಿಸ್ಸಿ ನರ್ತಕಿ ಲಕ್ಷ್ಮಿಪ್ರಿಯಾ ಮೋಹಪಾತ್ರ (86)ಅವರು ಭುವನೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮೋಹಪಾತ್ರ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು, ಪುತ್ರ ರತಿಕಾಂತ ಮೋಹಪಾತ್ರ ಮತ್ತು ಸೊಸೆ ಸುಜಾತಾ ಮೋಹಪಾತ್ರರನ್ನು ಅಗಲಿದ್ದಾರೆ.
ಪಾರಂಪರಿಕ ಒಡಿಸ್ಸಿ ಗುರು ಕೆಲುಚರಣ್ ಮೋಹಪಾತ್ರ ಪತ್ನಿ, ಲಕ್ಷ್ಮಿಪ್ರಿಯಾ 1947 ರಲ್ಲಿ ಪುರಿಯ ಅನ್ನಪೂರ್ಣ ರಂಗಮಂದಿರ ದಲ್ಲಿ (ಎ) ಒಡಿಸ್ಸಿ ನರ್ತಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದರು. ಲಕ್ಷ್ಮಿಪ್ರಿಯಾ ‘ಮೋಹಿನಿ’ ನಾಟಕದಲ್ಲಿ ಪಾದಾರ್ಪಣೆ ಮಾಡಿ ದರು.
‘ಮ್ಯಾನೇಜರ್’, ‘ಅಲೋಕಾ’, ‘ಭರಸಾ’, ‘ತಪೋಯಿ’, ‘ಮುಲಿಯಾ’, ‘ಕಲಾಪಹಾದ’, ‘ಜಹರಾ’, ಮತ್ತು ‘ದಾಸವತಾರಾ’ ಇವರ ಪ್ರಮುಖ ರಂಗ ಪ್ರಯೋಗಗಳಾಗಿವೆ. ಲಕ್ಷ್ಮಿಪ್ರಿಯಾ ನಾಲ್ಕು ಒಡಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾ ಯಕ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಲಕ್ಷ್ಮಿಪ್ರಿಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.