ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಕ ಮಾಡುವಂತೆ ಮೇಲ್ಮನವಿ ನ್ಯಾಯಾಧಿಕರಣ 2019ರ ಡಿ. 17ರಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಪಕ್ಕಕ್ಕಿರಿಸಿದೆ.
ಕಾನೂನಿನ ಎಲ್ಲ ಪ್ರಶ್ನೆಯೂ ಟಾಟಾ ಸಮೂಹದ ಪರವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತು.
ಟಾಟಾದ ಉಪ್ಪಿನಿಂದ ಹಿಡಿದು ತಂತ್ರಜ್ಞಾನ ಸಂಸ್ಥೆಗಳವರೆಗಿನ ಸುಮಾರು 100 ಬಿಲಿಯನ್ ಡಾಲರ್‌ಗಳ ಮೌಲ್ಯದ ವಿಭಾಗಗಳ ಸಮೂಹಕ್ಕೆ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮಿಸ್ತ್ರಿ ಅವರನ್ನು ಎನ್‌ಸಿಎಲ್‌ಎಟಿ ಪುನಃ ನೇಮಿಸಿ ಆದೇಶ ನೀಡಿತ್ತು.
ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದನ್ನು ಮಂಡಳಿಯು ತನ್ನ ಹಕ್ಕುಗಳ ಅಡಿಯಲ್ಲಿಯೇ ಮಾಡಿದೆ ಎಂದು ವಾದಿಸಿದ್ದ ಟಾಟಾ ಸಮೂಹ, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು.
2012ರಲ್ಲಿ ರತನ್ ಟಾಟಾ ಅವರ ಸ್ಥಾನಕ್ಕೆ ಮಿಸ್ತ್ರಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ನಾಟಕೀಯ ಪ್ರಕ್ರಿಯೆಯಲ್ಲಿ ಅವರನ್ನು ವಜಾಗೊಳಿಸಲಾಗಿತ್ತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ