Friday, 18th October 2024

ಆಂಗ್ಲರ ಆರ್ಭಟ, ಪರದಾಡಿದ ಭಾರತ, ಸರಣಿ ಸಮಬಲ

ಪುಣೆ: ಭಾರೀ ಮೊತ್ತ ಪೇರಿಸಿಯೂ ಪ್ರವಾಸಿಗರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ, ಎರಡನೇ ಪಂದ್ಯ ದಲ್ಲಿ ಕಳಪೆ ಬೌಲಿಂಗಿನಿಂದಾಗಿ ಸೋಲಬೇಕಾಯಿತು. ಈ ಮೂಲಕ ಸರಣಿ ಸಮಬಲಗೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.  ಆರಂಭಿರನ್ನು ಅಗ್ಗದಲ್ಲೇ ಕಳೆದುಕೊಂಡ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್‌ ಉತ್ತಮ ಜತೆಯಾಟ ನೀಡಿದರು. ಬಳಿಕ ಕೆ.ಎಲ್‌.ರಾಹುಲ್‌ಗೆ ವಿಕೆಟ್ ಕೀಪರ್‌ ರಿಷಭ್ ಪಂತ್‌ ಸಮರ್ಥ ಜತೆಯಾಟ ನೀಡಿ, ತಂಡದ ಮೊತ್ತ ಮುನ್ನೂರರ ಗಡಿ ದಾಟಿಸಿದರು. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಆಟ ತಂಡಕ್ಕೆ ರನ್‌ ಗತಿ ಏರಿಸುವಲ್ಲಿ ನೆರವಾಯಿತು.

ಉತ್ತರವಾಗಿ, ಇಂಗ್ಲೆಂಡ್‌ ತನ್ನ ಎಂದಿನ ಸ್ಪೋಟಕ ಆಟ ಪ್ರದರ್ಶಿಸಿತು. ಇವರ ಲೋಪವಿಲ್ಲದ ಆಟದಲ್ಲಿ ಟೀಂ ಇಂಡಿಯಾ ಬೌಲರುಗಳು ವಿಕೆಟ್ ಕೀಳಲಾಗದೆ ಹೈರಾಣಾದರು. ಅಂತಿಮವಾಗಿ ರೋಹಿತ್ ಶರ್ಮಾ ಅವರ ಮಿಂಚಿನ ಕ್ಷೇತ್ರ ರಕ್ಷಣೆಯಿಂದ ಇವರ ಜತೆಯಾಟ ಮುರಿದು ಬಿತ್ತು. ಆದರೆ, ಬೆನ್‌ ಸ್ಟೋಕ್ಸ್ ಅವರ ಮಿಂಚಿನ ಆಟ ಆತಿಥೇಯರ ಮೇಲುಗೈ ಸಾಧಿಸದಂತೆ ತಡೆಯಿತು. ಸ್ಟೋಕ್ಸ್ ಕೂಡ ಅರ್ಧಶತಕ ಬಾರಿಸಿ, ತಂಡದ ಗೆಲುವನ್ನು ಖಚಿತಪಡಿಸಿದರು.

ಅಂತಿಮವಾಗಿ ಇಂಗ್ಲೆಂಡ್‌ 43.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಜಾನಿ ಬೆಸ್ಟೊ (124), ಬೆನ್ ಸ್ಟ್ರೋಕ್ (99) ಹಾಗೂ ಜೇಸನ್ ರಾಯ್ (55) ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ನೀಡಿದ ಗುರಿ ತಲುಪುವಲ್ಲಿ ಯಶಸ್ವಿಯಾದರು. ಜಾನಿ ಬೇರ್‌ಸ್ಟೋ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.