Saturday, 23rd November 2024

ಕಾನ್ಪುರದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೃದ್ದೆ ಸೇರಿ ಇಬ್ಬರ ಸಾವು

ಲಕ್ನೊ: ಉತ್ತರ ಪ್ರದೇಶ ರಾಜ್ಯದ ಕಾನ್ಪುರದ ಆಸ್ಪತ್ರೆಯೊಂದರಲ್ಲಿ ಭಾನು ವಾರ ಅಗ್ನಿ ಅವಘಡ ಸಂಭವಿಸಿ, ಹೃದ್ರೋಗ ವಿಭಾಗದಲ್ಲಿದ್ದ ವೃದ್ಧೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ ರೋಗಿಗಳನ್ನು ಸುರಕ್ಷಿತವಾಗಿ ಬೇರೆ ಆಸ್ಪತ್ರೆಗೆ ವರ್ಗಾಯಿಸ ಲಾಗಿದೆ.

ಮೃತ ರೋಗಿಗಳನ್ನು 80 ವರ್ಷದ ವೃದ್ಧೆ ರಸೂಲನ್ ಮತ್ತು ಹಮಿರ್ಪುರ್ ರಾತ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಐಸಿಯುನಲ್ಲಿ ದಾಖಲಾಗಿ ದ್ದರು. ಬೆಂಕಿ ಕಾಣಿಸಿಕೊಂಡ ನಂತರ ಏಳು ಅಗ್ನಿಶಾಮಕ ಟೆಂಡರ್‌ಗಳನ್ನು ಕಾನ್ಪುರ ನಗರದ ಗೋಲ್ ಚೌರಾಹದಲ್ಲಿರುವ ಎಲ್‌ಪಿಎಸ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಸ್ವರೂಪ್ ನಗರ ಅಶ್ವನಿ ಪಾಂಡೆ ತಿಳಿಸಿದ್ದಾರೆ.

ರೋಗಿಗಳು ಮತ್ತು ದಾದಿಯರನ್ನು ಹೊರತೆಗೆಯಲು ತುರ್ತು ವಿಭಾಗದ ನೆಲ ಮತ್ತು ಮೊದಲ ಮಹಡಿಯಲ್ಲಿನ ಕಿಟಕಿ ಗಾಜುಗಳನ್ನು ಮುರಿಯಲಾಯಿತು. 140 ರೋಗಿಗಳು ತುರ್ತು ವಾರ್ಡ್ ಮತ್ತು ಆಸ್ಪತ್ರೆಯ ಮೊದಲ ಮಹಡಿಯಲ್ಲಿ ದ್ದರು.

ಹೊಗೆಯಿಂದಾಗಿ ಪ್ರಜ್ಞೆ ತಪ್ಪಿಹೋಗಿರುವ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ರುವ ಜನರಿಗೆ ಅಗ್ನಿಶಾಮಕ ಇಲಾಖೆ ತಂಡಗಳು ತುರ್ತಾಗಿ ಬೇರೆಡೆಗೆ ಕಳುಹಿಸುವ ಕಾರ್ಯ ನಡೆಸಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾಡಳಿತಕ್ಕೆ ರೋಗಿಗಳನನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily