ಪುಣೆ: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮೂವರ ಅರ್ಧಶತಕದ ನೆರವಿನಿಂದ 329 ರನ್ ಗಳಿಸಿ, ಹತ್ತು ಎಸೆತ ಗಳು ಬಾಕಿ ಇರುವಂತೆ ಪತನಗೊಂಡಿತು.
ಪುಣೆಯಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಆರಂಭ ಸಿಕ್ಕಿತು. ಈ ಜೋಡಿ 16 ಬೌಂಡರಿಗಳ ಸಹಿತ 103 ರನ್ ಕಲೆಹಾಕಿತು. ಬಳಿಕ ಕೀಪರ್ ಪಂತ್ ಹಾಗೂ ಆಲ್ರೌಂಡರ್ ಹಾರ್ದಿಕ್ಪ ಪಾಂಡ್ಯ ಜತೆಗೂಡಿ, ಲೀಲಾಜಾಲವಾಗಿ ಬ್ಯಾಟ್ ಬೀಸಿ, ತಂಡದ ಮೊತ್ತವನ್ನು 300 ಗಡಿ ತಂದು ನಿಲ್ಲಿಸಿದರು. ಇವರಿಬ್ಬರು ಬೆನ್ನುಬೆನ್ನಿಗೆ ಔಟಾದ ನಂತರ ತಂಡದ ರನ್ ಗತಿ ಕುಂಠಿತವಾಯಿತು.
ಕೃನಾಲ್ ಪಾಂಡ್ಯ ಸ್ಫೋಟಕ ಆಟ ಪ್ರದರ್ಶಿಸದೆ, 25 ರನ್ ಗಳಿಸಿ, ಕ್ಲೈಮಾಕ್ಸ್ ಹಂತದಲ್ಲಿ ಔಟಾಗಿದ್ದು, ಭಾರೀ ಮೊತ್ತ ಪೇರಿಸುವ ಕನಸಿಗೆ ಪೆಟ್ಟು ನೀಡಿತು. ಅಂತಿಮವಾಗಿ 329 ರನ್ ಗಳಿಗೆ ಆಲೌಟಾಯಿತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ
https://www.facebook.com/Vishwavanidaily