ಚೆನ್ನೈ: ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಎಂಕೆ ಮುಖಂಡ ಎ.ರಾಜಾಗೆ 48 ತಾಸು ಚುನಾವಣಾ ಪ್ರಚಾರ ನಡೆಸದಂತೆ ಚುನಾ ವಣಾ ಆಯೋಗ ನಿಷೇಧಿಸಿದೆ.
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ತಾಯಿ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸರಿಯಾದ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಆಯೋಗ, ಕೂಡಲೇ ಜಾರಿಗೆ ಬರುವಂತೆ ಎರಡು ದಿನ ಪ್ರಚಾರದಿಂದ ನಿರ್ಬಂಧಿಸಲಾಗಿದೆ. ಮಹಿಳೆಯರು ಮತ್ತು ತಾಯಿಯ ಘನತೆ ಕುಂದಿಸುವಂತಹ ಅಥವಾ ಅಶ್ಲೀಲ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಮಾಜಿ ಕೇಂದ್ರ ಸಚಿವರು ತನ್ನ ವಿವರಣೆಯಲ್ಲಿ ಹೇಳಿದ್ದಾರೆ.
ಡಿಎಂಪಿ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಮತ್ತು ಪಳನಿಸ್ವಾಮಿ ಅವರನ್ನು ಹೋಲಿಸಿ ನೋಡುವ ಮೂಲಕ ರಾಜಕೀಯ ಮೌಲ್ಯ ಮಾಪನ ಮಾಡಲಾಗಿದೆ. ಸ್ಟಾಲಿನ್ ಯಾವುದೇ ಕೆಲಸ ಮಾಡದೆ ಡಿಎಂಕೆಯ ಮುಖ್ಯಸ್ಥರಾಗಿದ್ದಾರೆ ಎಂಬ ಪಳನಿಸ್ವಾಮಿ ಅವರ ಆರೋಪ ತಿರಸ್ಕರಿಸುವಂತೆ ಸಾಮಾನ್ಯ ಜನರಲ್ಲಿ ಸುಲಭವಾಗಿ ಅರ್ಥ ಮಾಡಿಸಲು ಇಬ್ಬರು ನಾಯಕರನ್ನು ಹೋಲಿಕೆ ಮಾಡಿರುವುದಾಗಿ ಹೇಳಿದ್ದರು.
ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ