ಗುವಾಹಟಿ : ಬಿಜೆಪಿ ಶಾಸಕ ಕೃಷ್ಣೇಂಡು ಪಾಲ್ ಅವರಿಗೆ ಸೇರಿದ ಕಾರಿನಲ್ಲಿಇವಿಎಂ ಮತ ಯಂತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಅಸ್ಸಾಂನ ಕರೀಂಗಂಜ್ ನಲ್ಲಿ ನಿಯೋಜಿಸ ಲ್ಪಟ್ಟ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಅಸ್ಸಾಂ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ನಂತರ ಕರೀಂಗಂಜ್ ನಲ್ಲಿ ಹಿಂಸಾಚಾರ ಭುಗಿಲೆದ್ದ ಮರುದಿನವೇ ಈ ಕ್ರಮ ನಡೆದಿದ್ದು, ಶಾಸಕರ ಮಹೀಂದ್ರ ಬೊಲೆರೊ ಕಾರಿನಲ್ಲಿ ಇವಿಎಂ ಪತ್ತೆಯಾ ಗಿತ್ತು. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿ ನೀಡಿದ ಪ್ರಾಥಮಿಕ ವರದಿ ಪ್ರಕಾರ, ‘ತಾವು ಪ್ರಯಾಣಿಸುತ್ತಿದ್ದ ವಾಹನವು ಬಿಜೆಪಿ ಶಾಸಕನಿಗೆ ಸೇರಿದ್ದು ಎಂದು ಮತಗಟ್ಟೆ ಅಧಿಕಾರಿಗಳಿಗೆ ಆರಂಭದಲ್ಲಿ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.
ಮತಗಟ್ಟೆಯ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದ್ದು, ಈ ಸಂಬಂಧ ಎಫ್ ಐಆರ್ ಕೂಡ ದಾಖಲಿಸಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ
https://www.facebook.com/Vishwavanidaily