Thursday, 12th December 2024

ಚುನಾವಣೆಗಳಲ್ಲಿ ಮತಬೇಟೆಯೋ ? ಮತ ಖರೀದಿಯೋ ?

ಅವಲೋಕನ

ರಮಾನಂದ ಶರ್ಮಾ

ಇತ್ತೀಚಿನ ದಿನಗಳಲ್ಲಿ ಇಂಥದೊಂದು ಗೊಂದಲ ದೇಶದ ಜನತೆಯನ್ನು ಕಾಡುತ್ತಿದೆ. ೧೯೫೧-೫೨ರಲ್ಲಿ ಈ ದೇಶದಲ್ಲಿ ಮೊದಲ ಚುನಾವಣಾ ನಡೆದ ನಂತರ, ಚುನಾವಣಾ ಪ್ರಕ್ರಿಯೆಯ ಸ್ವರೂಪ, ಮತ ಕೇಳುವ ವಿಧಾನ ಪ್ರತಿ ಚುನಾವಣೆಯಲ್ಲೂ ಬದಲಾಗು ತ್ತಿದೆ.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಪ್ರತಿಯೊಬ್ಬರೂ, ಇಂಗ್ಲೀಷರ ಕಪಿಮುಷ್ಟಿಯಿಂದ ದೇಶವನ್ನು ಗುಲಾಮಗಿರಿಯಿಂದ ರಕ್ಷಿಸಿದವರು ತಾವೇ ಎಂದು ಮತ ಕೇಳುತ್ತಿದ್ದರು. ಪ್ರತಿಯೊಬ್ಬ ಅಭ್ಯರ್ಥಿಯ ಭಾಷಣದಲ್ಲಿ, ಎರಡು ಶತಮಾನಗಳ ಕಾಲ ದೇಶವನ್ನು ಲೂಟಿಮಾಡಿದವರನ್ನು ತಾವು ಹೇಗೆ ಹೊಡೆದೋಡಿಸಿದ್ದೇವೆ ಎನ್ನುವ ರಂಗು ರಂಗಿನ ಕಥೆಗಳು ಧಾರಾವಾಹಿಯ ರೂಪದಲ್ಲಿ ಹೊರಬರುತ್ತಿದ್ದವು. ಈ ನಿಟ್ಟಿನಲ್ಲಿ ತಮ್ಮ ಕೊಡುಗೆಗೆ ನಾಲ್ಕು ತೊಲೆ ಹೆಚ್ಚು ಸೇರಿಸಿ ಕೊಚ್ಚಿಕೊಂಡು ಮತ ಬೇಟೆ
ಮಾಡುತ್ತಿದ್ದರು ಮತ್ತು ಈ ಸ್ವ ಹೊಗಳಿಕೆಯಲ್ಲಿ ಸಾಫಲ್ಯವನ್ನೂ ಕಾಣುತ್ತಿದ್ದರು.

ವರ್ಷಗಳು ಉರುಳಿದಂತೆ ಈ ಸ್ವಾತಂತ್ರ್ಯ ಹೋರಾಟ, ಗುಲಾಮಗಿರಿತನ, ದೇಶದ ಲೂಟಿ, ಸ್ವಾಭಿಮಾನ, ಸ್ವಾಯತ್ತತೆ, ದೇಶಪ್ರೇಮ ಸವಕಲು ಹೊಂದಿ ಮತಬೇಟೆಗೆ ಮಿಕಗಳು ದೊರಕುವುದು ಕಷ್ಟವಾದಾಗ, ರಾಜಕಾರಣಿಗಳು ಕ್ರಮೇಣ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಸ್ವಲ್ಪ ಎಡಪಂಥೀಯ ಮುಂದಾಲೋಚನೆ ಹೊಂದಿದ ಸಮಾಜವಾದಿ ವಿಚಾರಧಾರೆಗೆ ಒಲಿಯತೊಡಗಿದರು.

ಊಳುವವನಿಗೇ ಭೂಮಿ, ದುಡಿಯುವ ಕೈಗಳಿಗೆ ದುಡ್ಡು, ಸಂಪತ್ತಿನ ಸಮಾನ ಹಂಚಿಕೆ, ಬಡವ ಬಲ್ಲಿದವರ ನಡುವೆ ಕಂದಕ ರಹಿತ ಬದುಕು ಮತ್ತು ಸೆಕ್ಯುಲಾರಿಸಂ ಮುಂತಾದ ಮತದಾರರನ್ನು ಪುಳಕ ಗೊಳಿಸುವ, ಸುಖಿ ಸಮಾಜವನ್ನು ಮತ್ತು ಆರ್ಥಿಕ ಚೇತರಿಕೆಯ ಭರವಸೆ ಮತ್ತು ಕನಸಿನ ಮೊಳಕೆ ಹುಟ್ಟಿಸುವ ಘೋಷಣೆಗಳು ಜನರನ್ನು ದಶಕಗಳ ಕಾಲ ಮರಳು ಮಾಡಿದವು.

ಯಾವುದೇ ಚಿಂತನೆಯಾಗಲಿ ಜನರ ಮನದಲ್ಲಿ ಬಹುಕಾಲ ನಿಲ್ಲುವುದಿಲ್ಲ ಮತ್ತು ನಿರೀಕ್ಷಿಸಿದಷ್ಟು ಕಾಲ ಡಿವಿಡೆಂಟನ್ನು
ನೀಡುವುದಿಲ್ಲ. ಅಂತೆಯೇ ಜನತೆ ಸಮಾಜವಾದದ ಪೊಳ್ಳುತನವನ್ನು ಗೃಹಿಸುತ್ತಿರುವಂತೆ ಮತ್ತು ಬೇರೆ ಏನನ್ನಾದರೂ ನಿರೀಕ್ಷಿಸುವಂತೆ ಇಂದಿರಾ ಗಾಂಧಿಯವರ ಗರೀಬಿ ಹಟಾವೋ ಮತ್ತು ಇಪ್ಪತ್ತು ಅಂಶಗಳ ಕಾರ್ಯಕ್ರಮ ಚುನಾವಣೆಯ ಮತ ಬೇಟೆಯಲ್ಲಿ ಹೊಸ ಅಧ್ಯಾಯವನ್ನು ಸ್ಥಾಪಿಸಿತು.

ಇಂದಿರಾಗಾಂಧಿಯವರ ನಂತರ ತೊಂಬತ್ತರ ದಶಕದಲ್ಲಿ ನರಸಿಂಹರಾವ್ ಮತ್ತು ಮನಮೋಹನ ಸಿಂಗರ ಆರ್ಥಿಕ ಸುಧಾರಣೆ, ಜಾಗತೀಕರಣ ಮತ್ತು ಉದಾರೀಕರಣ ತೀರಾ ಕೆಳವರ್ಗದವರನ್ನಲ್ಲದಿದ್ದರೂ ಮಧ್ಯಮ ಮತ್ತು ಮೇಲ್ವರ್ಗದವರನ್ನು ಚುನಾವಣೆ ಯಲ್ಲಿ ಬುಟ್ಟಿಗೆ ಹಾಕಿಕೊಳ್ಳಲು ಸಫಲವಾಯಿತು. ಈಗ ಹಿಂದುತ್ವ, ದೇಶಾಭಿಮಾನ, ದೇಶ ಪ್ರೇಮ, ಒಂದೇ ದೇಶ , ಒಂದೇ  ಕಾಯಿದೆ ಒಂದೇ ರೇಷನ್ ಕಾರ್ಡ್, ಒಂದೇ ತೆರಿಗೆ, ಒಂದೇ ಚುನಾವಣೆ, ಒಂದೇ ಪಕ್ಷ ಮುಂತಾದವುಗಳು ದೊಡ್ಡ ಸದ್ದು
ಮಾಡುತ್ತಿದ್ದು, ಮತ ಬೇಟೆಯಲ್ಲಿ ಟ್ರಂಪ್ ಕಾರ್ಡ್ ಆಗುತ್ತಿವೆ. ಇವು ಜನತೆಯ ಒಲವನ್ನು ದೃಢವಾಗಿ ಗಳಿಸುತ್ತಿವೆ.

ಚುನಾವಣೆಯಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾಡುವ ಘೋಷಣೆಗಳು ಮತ ಬೇಟೆಯಲ್ಲಿ ಮಹತ್ವ ಪಾತ್ರ
ವಹಿಸುವುದು ಹಳೆಯ ಮಾತಾಗಿದ್ದು, ಅವು ಸವಕಳಿ ಹೊಂದಿವೆ. ಈಗ ಅವು ನೆಪ ಮಾತ್ರಕ್ಕೆ ಚುನಾವಣೆಯಲ್ಲಿ ಕಾಣುತ್ತವೆ. ಅದರ ಬದಲಿಗೆ ಭರವಸೆಗಳು ಮತ್ತು ಬಾಯಲ್ಲಿ ನೀರೂರಿಸುವ ಕಾರ್ಯಕ್ರಮಗಳು ಮತ್ತು ಆಕಾಶಕ್ಕೆ ಏಣಿ ಹಾಕುವಂಥ ಯೋಜನೆಗಳು ಮೇಲ್ಮೆಗೆ ಬಂದಿವೆ.

ನದಿಯೇ ಇಲ್ಲದಿದ್ದರೂ ಸೇತುವೆಯ ಮಾತನಾಡುತ್ತಾರೆ, ಸಮುದ್ರ ಇಲ್ಲದಿದ್ದರೂ ಸಾರ್ವಕಾಲಿಕ ಬಂದರು ನಿರ್ಮಾಣದ ಭರವಸೆ
ನೀಡುತ್ತಾರೆ. ಪಶುಗಳು ಇಲ್ಲದ ಹಳ್ಳಿಯಲ್ಲಿ ಪಶುವೈದ್ಯ ಆಸ್ಪತ್ರೆಗೆ ಯೋಜನೆ ತಯಾರಿಸುತ್ತಾರೆ ಎಂದು ಖ್ಯಾತ ಪತ್ರಕರ್ತ, ನಾಟಕಕಾರ, ರಾಜಕಾರಿಣಿ ಮತ್ತು ಹಾಸ್ಯ ಲೇಖಕ ಚೋ ರಾಮಸ್ವಾಮಿ ತಮಾಷೆ ಮಾಡುತ್ತಿದ್ದರು. ರಾಜಕಾರಿಣಿಗಳಿಗೆ ಚುನಾವಣೆಗಳು ಯಾವಾಗ ನಡೆಯುತ್ತದೆ ಎನ್ನುವುದರ ಬಗೆಗ ಸ್ಪಷ್ಟ ಮಾಹಿತಿ ಇರುತ್ತಿದ್ದು, ಅದರ ವಾಸನೆ ತಟ್ಟಿದೊಡನೆ ತಾಪಿ ಮತ್ತು ಕತ್ತರಿ ಹಿಡಿದು ಅಡಿಗಲ್ಲು ಸಮಾರಂಭ ಮತ್ತು ರಿಬ್ಬನ್ ಕಟ್ ಸಮಾರಂಭಕ್ಕೆ ಸಜ್ಜಾಗುತ್ತಾರೆ.

ಸಾಮಾನ್ಯವಾಗಿ ಒಂದು ಯೋಜನೆಗೆ ಅಡಿಗಲ್ಲು ಹಾಕುವ, ರಿಬ್ಬನ್ ಕಟ್ ಮಾಡುವ ಪೂರ್ವದಲ್ಲಿ ಹಲವಾರು ಕ್ಲಿಯರೆನ್ಸ್‌ಗಳು ಮತ್ತು ಸುದೀರ್ಘ ಪ್ರಕ್ರಿಯೆಗಳು ಅವಷ್ಯಕ ಇರುತ್ತಿದ್ದು, ಅವುಗಳನ್ನು ಬದಿಗೆ ಸರಿಸಿ ಅಥವಾ -ಸ್ಟ್ರ್ಯಾಕ್ ಮಾರ್ಗದಲ್ಲಿ ಅನುಮತಿ ದೊರಕಿಸಿ ಇವುಗಳಿಗೆ ಚಾಲನೆ ನೀಡುತ್ತಾರೆ ಎನ್ನುವ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಚುನಾವಣೆಗಳನ್ನು ಗೆಲ್ಲಲೆಂದೇ ಯೋಜನೆಗಳನ್ನು ಮಾಡಿ ಅಡಿಗಲ್ಲು ಹಾಕಿ ಆಮೇಲೆ ಅವುಗಳನ್ನು ಮರೆಯುತ್ತಾರೆ ಎಂದು ರಾಜಕೀಯ ವೀಕ್ಷಕರು ಕುಹಕವಾಡುತ್ತಾರೆ.

ಇದರಲ್ಲಿ ಯಾವುದಾದರೂ ಅನುಷ್ಠಾನವಾಗಬಹುದೇ ಎನ್ನುವುದು ಇಲ್ಲಿ ಮುಖ್ಯ ಇರುವುದಿಲ್ಲ. ಆ ಯೋಜನೆಯಿಂದ ಆ ಭಾಗದ ಜನರಲ್ಲಿ ಆಭಿವೃದ್ಧಿ, ಉದ್ಯೋಗ ಸೃಷ್ಟಿಯ ಕನಸುಗಳನ್ನು ಬಿತ್ತಿ ಮತ ಪಡೆಯುವುದು ಇದರ ಹಿಂದಿನ ಗೌಪ್ಯ ಅಜೆಂಡಾ ಇರುತ್ತದೆ. ಚುನಾವಣಾ ಪ್ರಕ್ರಿಯೆಯನ್ನು ಘೋಷಿಸಿದ ನಂತರ ಮತದಾರರ ಓಲೈಕೆ ಮಾಡಲು ಸರಕಾರವು ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದು, ಯಾವುದೇ ಯೋಜನೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಬಾರದು, ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು, ಅಡಿಗಲ್ಲು ಹಾಕಬಾರದು ಮತ್ತು ರಿಬ್ಬನ್ ಕಟ್ ಮಾಡಬಾರದು ಎನ್ನುವ ಹಲವು
ನಿರ್ಭಂಧಗಳನ್ನು ಚುನಾವಣಾ ನೀತಿ ಸಂಹಿತೆ ದೃಷ್ಟಿಯಲ್ಲಿ ಹೇರಲಾಗುತ್ತದೆ.

ಆದರೆ, ರಂಗೋಲಿಯ ಕೆಳಗೆ ನುಸುಳುವ ಸರಕಾರಗಳು ಮತ್ತು ರಾಜಕಾರಣಿಗಳು ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸುವ ಪತ್ರಿಕಾಗೋಷ್ಠಿ ನಡೆಯುವವರೆಗೆ ಮತದಾರ ಸ್ನೇಹಿ ಹೊಸ ಹೊಸ ಯೋಜನೆಗಳನ್ನು ಮತ್ತು ಮಹತ್ವದ ತೀರ್ಮಾನಗಳನ್ನು ಪ್ರಕಟಿಸುತ್ತಲೇ ಇರುತ್ತವೆ. ಚುನಾವಣೆಯಲ್ಲಿ ಮತಗಳಿಸಲು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಹೊಸ ಹೊಸ ಆವಿಷ್ಕಾರಗಳನ್ನು ಹುಡುಕುತ್ತಿರುವಂತೆ ತಮಿಳುನಾಡಿನ ದ್ರಾಮುಕ ಪಕ್ಷಗಳು ಚುನಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮತ್ತು ಅಭಿವೃದ್ಧಿಯ ಕೊಡುಗೆಗಳಿಗಿಂಥ ವೈಯಕ್ತಿಕ ಕೊಡುಗೆಗಳು ಹೆಚ್ಚು ಪರಿಣಾಮಕಾರಿ
ಯಾಗಬಹುದು ಎನ್ನುವ ಸತ್ಯವನ್ನು ಕಂಡುಕೊಂಡು ಆ ನಿಟ್ಟಿನಲ್ಲಿ ದಾಪುಗಾಲು ಹಾಕತೊಡಗಿದವು.

ಈ ಕೊಡುಗೆ ೧೯೬೭ರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರು ಮೂರು ಮಾಪು (ಸುಮಾರು ೪.೫ ಕೆಜಿ) ಅಕ್ಕಿಯನ್ನು ಕೆಜಿಗೆ ಒಂದು ರುಪಾಯಿಯಂತೆ ನೀಡಲು ಅರಂಭಿಸಿದಾಗ ಪ್ರಾರಂಭವಾಗಿದ್ದು, ಇದು ೨೦೦೬ರ ಹೊತ್ತಿಗೆ ಮುಗಿಲು ಮುಟ್ಟಿತು. ಇತ್ತೀಚೆಗೆ ಮತದಾರರನ್ನು ಓಲೈಸಲು ಪಕ್ಷಗಳು ಹುಚ್ಚು ಸರ್ದೆಯಲ್ಲಿದ್ದು, ಮತದಾರರಿಗೆ ಬಹುತೇಕ ದಿನನಿತ್ಯದ ಅವಶ್ಯಕತೆಗಳು ಉಚಿತವಾಗಿ ದೊರಕುತ್ತಿವೆ. ಒಂದು ವರದಿಯ ಪ್ರಕಾರ ತಮಿಳುನಾಡು ಜನತೆ ಉಚಿತ ಕೊಡುಗೆಯಾಗಿ ಸರಕಾರದಿಂದ
ಉಚಿತ ವಿದ್ಯುತ್ (ಕೆಲವು ವರ್ಗದವರಿಗೆ) ಪ್ರತಿಯೊಬ್ಬ ರೇಷನ್ ಕಾರ್ಡ್‌ದಾರರಿಗೆ ಪೊಂಗಲ್ ಸಮಯದಲ್ಲಿ ೨೦೦೦ ರು. ಗಿ-
ಹ್ಯಾಂಪರ್, ಕಟ್ಟಡ ನಿರ್ಮಿಸುವ ಕೆಲಸಗಾರರಿಗೆ ಉಚಿತ ಊಟ, ಕಲರ್ ಟಿವಿ, ಕೇಬಲ್ ಕನೆಕ್ಷನ್, ಕೆಲವು ನಿಶ್ಚಿತ ಪ್ರಮಾಣದಲ್ಲಿ ಉಚಿತ ಅಥವಾ ಕಡಿಮೆ ದರದಲ್ಲಿ ಎಣ್ಣೆ, ಬೇಳೆ, ಮತ್ತು ಅಕ್ಕಿ, ಮತ್ತು ಗೃಹಿಣಿಯರಿಗೆ ಮಾಸಿಕ ೧೦೦೦-೧೫೦೦ವರೆಗೆ ಸಂಬಳ, ಎರಡು ಬರ್ನರ್ ಇರುವ ಗ್ಯಾಸ್ ಸ್ಟವ್, ಸಹಕಾರಿ ಸಾಲ ಮನ್ನಾ, ೪೦ ಗ್ರಾಂ ಚಿನ್ನದ ವರೆಗಿನ ಚಿನ್ನದ ಸಾಲ ಮನ್ನಾ, ಪ್ರತಿ ಕುಟುಂಬಕ್ಕೆ ಒಂದು ಸರಕಾರಿ ನೌಕರಿ, ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್ ಉಚಿತ ಪಡೆಯಬಹುದು.

ಈ ಪಟ್ಟಿ -ರ್ಣ ಎಂದು ಹೇಳಲಾಗದು ಅಥವಾ ಪಟ್ಟಿಯಲ್ಲಿ ಕೆಲವು ಕಡಿಮೆಯಾಗಿರಲೂ ಬಹುದು. ಆದರೆ ಪಟ್ಟಿಯ ಉದ್ದ ಕಡಿಮೆಯಾಗುವುದು ಅಸಾಧ್ಯ ಎಂದು ಹೇಳಲಾಗುತ್ತದೆ. ಈದೇಶದಲ್ಲಿ ಒಮ್ಮೆ ನೀಡಿದ ಸೌಲಭ್ಯ, ಅದರಲ್ಲೂ ಮುಖ್ಯವಾಗಿ
ಉಚಿತವಾಗಿ ನೀಡಿದ ಸೌಲಭ್ಯವನ್ನು ಹಿಂತೆಗದುಕೊಳ್ಳುವುದು, ಒಂದು ರೈಲಿಗೆ ಅಥವಾ ಬಸ್ಸಿಗೆ ಒಂದು ಸ್ಥಳದಲ್ಲಿ ಒಂದು ನಿಲುಗಡೆ ಕೊಟ್ಟು, ಕಾಲಕ್ರಮೇಣ ಅದನ್ನು ರದ್ದು ಮಾಡುವ ಸಾಹಸದಂತೆ ಎನ್ನಬಹುದು.

ಇಂಥ ಕೊಡುಗೆಗಳನ್ನು ಸಾಮಾಜಿಕ ವೈದ್ಯರುಗಳು, ಬಗ್ಗಿ ದುಡಿಯುವವರನ್ನು ಎಂದೆಂದೂ ಬಾಗದಂತೆ ಮಾಡುತ್ತಿವೆ ಎಂದು
ಟೀಕಿಸುತ್ತಾರೆ. ಈ ಉಚಿತ ಕೊಡುಗೆ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ, ಒಂದು ದ್ರಾಮುಕ ಪಕ್ಷ ಒಂದು, ತನ್ನ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡುತ್ತದೆಯಂತೆ. ಉತ್ತರದ ಕೆಲವು ರಾಜ್ಯಗಳಲ್ಲಿ ಇದು ಅವ್ಯಾಹತವಾಗಿ ನಡೆಯುವಾಗ ತಮಿಳರು ಮಾಡಿದರೆ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದೆ.

ಮುಂದಿನ ದಿನಗಳಲ್ಲಿ ಈ ಕೊಡುಗೆ ವಿವಾದವಾದರೆ ಆಶ್ಚರ್ಯವಿಲ್ಲ. ಅದು ಬೇರೆ ಮಾತು. ಈ ಎಲ್ಲಾ ಉಚಿತ ಕೊಡುಗೆಗಳು ಎಲ್ಲಾ ಮತದಾರರಿಗೆ ದೊರಕದಿದ್ದರೂ ಬಹುತೇಕರು ಇದರ ಲಾಭ ಪಡೆಯುವಲ್ಲಿ ಸಂಶಯವಿಲ್ಲ. ಇವರೇ ಚುನಾವಣಾ ಫಲಿತಾಂಶವನ್ನು ತಿರುಗಿಸುತ್ತಾರೆ ಎನ್ನುವುದು ಗಂಭೀರವಾಗಿ ಗಮನಿಸಬೇಕಾದ ಅಂಶ. ಕರ್ನಾಟಕದಲ್ಲಿ ಇತ್ತೀಚೆಗೆ ತಮಿಳು ಭಾಷಿಗ ವಲಸಿಗರು ಕಡಿಮೆಯಾಗಲು ಇದೂ ಒಂದು ಕಾರಣ ಎಂದು ಹಲವು ವಿಶ್ಲೇಷಕರು ಭಾಷ್ಯ ಬರೆಯುತ್ತಾರೆ. ಇದರಲ್ಲಿ ಸತ್ಯವಿಲ್ಲದಿಲ್ಲ.

ತೆರಿಗೆದಾರನ ಬೆವರಿನ ಹಣವನ್ನು ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಗೆಲುವಿಗೆ ಬಳಸಿಕೊಳ್ಳುವ ತಮಿಳುನಾಡಿನ ಪ್ರಯೋಗ ಇತ್ತೀಚೆಗೆ ದೇಶಾದ್ಯಂತ ಹರಡುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಮೂಡಿಸಿದೆ ಮತ್ತು ಇದು ಯಾವ ಮಟ್ಟಕ್ಕೆ ಹೋಗಬಹುದು ಎಂದು ದಿಗ್ಭ್ರಮೆ ಹುಟ್ಟಿಸಿದೆ. ಎಸ್. ಸುಬ್ರಮಣ್ಯಂ ಬಾಲಾಜಿ ಎನ್ನುವ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾರ್ವಜನಿಕ ಹಣದಿಂದ ಖಾಸಗಿ ಸೊತ್ತನ್ನು ಕಟ್ಟಲಾಗದು (ಠಿeಛಿqs Z ಟಠಿ ಛಿZಠಿಛಿ mಜಿqZಠಿಛಿ Zooಛಿಠಿ ಟ್ಠಠಿ ಟ್ಛ
mಚ್ಝಿಜ್ಚಿ bo ) ಎಂದು ಈ ಉಚಿತ ಕೊಡುಗೆಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರಂತೆ.

ಈ ಹಿಂದೆ ಚುನಾವಣೆಯಲ್ಲಿ ಮತ ಪಡೆಯುವುದು ಒಂದು ಕೌಶಲ್ಯವಾಗಿತ್ತು. ಅತ್ಯುತ್ತಮ ಮಾತುಗಾರರು, ವಾಗ್ಮಿಗಳು, ಆಕರ್ಷಕ ವ್ಯಕ್ತಿತ್ವ ಇದ್ದವರು ತತ್ತ್ವ ಆದರ್ಶಗಳ ಮೇಲೆ, ಒಂದು ನಿಶ್ಚಿತ ಕಾರ್ಯಕ್ರಮದ ಆಧಾರದ ಮೇಲೆ, ಒಂದು ಪಕ್ಷದ ಸಿದ್ಧಾಂತದ ಹಿನ್ನೆಲೆಯಲ್ಲಿ, ಅರ್ಹತೆ ಮತ್ತು ಜನಪ್ರಿಯತೆ ಆಧಾರದ ಮೇಲೆ ಚುನಾವಣೆಯಲ್ಲಿ ಹೋರಾಡುತ್ತಿದ್ದರು ಮತ್ತು ಗೆದ್ದು ಬೀಗು ತ್ತಿದ್ದರು. ಈಗ ಇವೆಲ್ಲ ನೇಪಥ್ಯಕ್ಕೆ ಸರಿದಿದ್ದು ಚುನಾವಣಾ ನೋಟುಮಯವಾಗುತ್ತಿದೆ.

ನೋಟಿಗೊಂದು ವೋಟು ಅಗೋಚರವಾಗಿ ಸೂತ್ರಧಾರಿಯಾಗಿ ಕೆಲಸ ಮಾಡುತ್ತಿದೆ. ಇದರೊಂದಿಗೆ ಮೀಸಲಾತಿ, ಹೆಚ್ಚು ಮೀಸಲಾತಿ ಮತ್ತು ಸಾಲ ಮನ್ನಾಗಳು ಚುನಾವಣೆಯನ್ನು ಗೆಲ್ಲುವ ಅಸ್ತ್ರಗಳಾಗುತ್ತಿರುವುದು ಇನ್ನೊಂದು ಆತಂಕಕಾರಿ ಬೆಳವಣಿಗೆ ಎನ್ನಬಹುದು. ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಪಕ್ಷಗಳು ಮಾಡುವ ವೆಚ್ಚ, ಅವರು ಮತದಾರರಿಗೆ ನೀಡುವ ಅಮಿಷಗಳು, ಉಚಿತ ಉಡುಗೊರೆಗಳು, ಅಗೋಚರ ಹಣದ ಹರಿವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಮತಬೇಟೆಯೋ, ಮತದಾನವೋ ಅಥವಾ ಮತ ಖರೀದಿಯೋ ಎನ್ನುವ ಗೊಂದಲ ಕಾಣುತ್ತದೆ.

ಚುನಾವಣೆಗಳು ತಮ್ಮ ಪಾವಿತ್ರ್ಯತೆಯನ್ನು ಕಳೆದುಕೊಂಡಿದ್ದು ಈಗ ಇತಿಹಾಸ. ಅದರೆ ಈ ಮಟ್ಟದಲ್ಲಿ ಅದು ಮೌಲ್ಯ ಕಳೆದು ಕೊಂಡಿದ್ದನ್ನು ಪ್ರಜ್ಞಾವಂತರೇಕೆ, ರಾಜಕೀಯದ ಅಂತರ್ಯ, ತಂತ್ರಗಾರಿಕೆ ಮತ್ತು ಒಳ ಹೂರಣ ತಿಳಿಯದ ಜನಸಾಮಾನ್ಯರೂ ನೋಡಿ ಬೆಚ್ಚಿ ಬೀಳುತ್ತಿzರೆ. ಚುನಾವಣಾ ಸಮಯದಲ್ಲಿ ಮತದಾರರಿಗೆ ಹಂಚಲು ತಂದ ಮೂಟೆಗಟ್ಟಲೆ , ಕೋಟಿಗಟ್ಟಲೆ ಹಣವು ಸಿಕ್ಕಿಬಿದ್ದ ಸುದ್ದಿಯನ್ನು ಮಾಧ್ಯಮದಲ್ಲಿ ಓದಿದಾಗ ಚುನಾವಣಾ ಪರಿಣಾಮದ ತಳಹದಿ ಅರ್ಥವಾಗ ದಿರದು. ಹಣಮಾಡಲು ಹಣ ಹೂಡುವ ವ್ಯವಸ್ಥೆಯೇ ಚುನಾವಣೆ ಎಂದು ಅರ್ಥೈಸಿದವರಿಗೆ ಬಹುಪರಾಕು.