ಪಡುಬಿದ್ರಿ: ಸಾಹಿತ್ಯ ಕ್ಷೇತ್ರದಲ್ಲಿ ಐದು ದಶಕಗಳಿಂದ ತೊಡಗಿಸಿಕೊಂಡಿದ್ದ ಉಡುಪಿ ಜಿಲ್ಲೆಯ ಬೆಳಪು ನಿವಾಸಿ ಮುಮ್ತಾಜ್ ಬೇಗಂ (72) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಮೃತರಿಗೆ ಇಬ್ಬರು ಪುತ್ರಿಯರು, ಹಾಗೂ ಓರ್ವ ಪುತ್ರ ಇದ್ದಾರೆ. ಮುಮ್ತಾಜ್ ಅವರಿಗೆ ಕೋವಿಡ್ ತಗುಲಿತ್ತು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪರದೇಶಿ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋತುಗಳೂ ನಿನಗಾಗಿ, ಅಂಕುರ ಸೇರಿದಂತೆ ಹಲವು ಕಥೆ, ಕವನ, ಕಾದಂಬರಿ ಗಳನ್ನು ಬರೆದಿದ್ದಾರೆ.
ಈ ಸಾಧನೆಗೆ ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವ ಸಾಹಿತ್ಯ ಕಲಾವೇದಿಕೆಯ ಬಸವಜ್ಯೋತಿ ಪ್ರಶಸ್ತಿಗಳು ಅವರಿಗೆ ಸಂದಿವೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ