Friday, 22nd November 2024

ಐದು ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಶನಿವಾರ ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾ ಸಂಸ್ಥಾನಮಠ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠ ಆಶ್ರಯದಲ್ಲಿ ಐದು ಕೃತಿಗಳ ಲೋಕಾ ರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸ ಲಾಗಿತ್ತು.

ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೃತಿಗಳ ಲೋಕಾರ್ಪಣೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ನಿರಾಭಾರಿ ಚರಮೂರ್ತಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಗೊ.ರು .ಚನ್ನಬಸಪ್ಪ, ಶಾಸಕ ನಾಗೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ .ವಿ. ವಸಂತ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಭಕ್ತಿಭಂಡಾರಿ ಬಸವಣ್ಣನವರು, ಬಸವದರ್ಶನ, ಸ್ವತಂತ್ರ ಸಿದ್ದಲಿಂಗೇಶ್ವರರು, ಹಾರ್ಟ್ ಟು ಹಾರ್ಟ್ ಮತ್ತು ಸುತ್ತೂರು ಶ್ರೀಮಠದ ಗ್ರಂಥಾ ಲಯ ಎಂಬ ಐದು ಕೃತಿಗಳು ಲೋಕಾರ್ಪಣೆಗೊಂಡವು.

ಸಮಾರಂಭದಲ್ಲಿ ಅರಿವೆ ಪ್ರಮಾಣು ಕೃತಿ ರಚನೆ ಮಾಡಿದ ಮಹಂತಪ್ಪ ನಂದೂರ ಅವರಿಗೆ 2019ನೇ ಸಾಲಿನ ಶ್ರೀ ಶಿವರಾತ್ರೀ ಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಚನ ಚಿತ್ರರಚನಾ ಪಿತಾಮಹ ಎಂ ವೀರಪ್ಪ ದತ್ತಿ ಪ್ರಶಸ್ತಿಯನ್ನು ರಾಧಾ ಮಲ್ಲಪ್ಪ ಅವರಿಗೆ ಹಾಗೂ ಡಿ ವಿ ಹಾಲಬಾವಿ ಪ್ರಶಸ್ತಿ ಯನ್ನು ಈಶ್ವರ .ಎನ್.ಜೋಶಿ ಅವರಿಗೆ ಪ್ರದಾನ ಮಾಡಲಾಯಿತು.

ಇದಲ್ಲದೇ, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿಗೆ ಭಾಜನರಾದ ಕೆ.ಎಸ್.ಮಹಾದೇವಸ್ವಾಮಿ ಪೊನ್ನಾಚಿ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.