Saturday, 26th October 2024

ಕೋವಿಡ್ ಲಸಿಕೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ: ವೈದ್ಯ ಲಿಂಗರಾಜು

ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕಾ ಅಭಿಯಾನ ನಡೆಸಲಾಯಿತು. ಅಭಿಯಾನದಲ್ಲಿ ಸುಮಾರು 45 ವರ್ಷ ಮೇಲ್ಪಟ್ಟವರು ಯಶಸ್ವಿಯಾಗಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ವೈದ್ಯ ಲಿಂಗರಾಜು ಹೇಳಿದರು.

ಸರ್ಕಾರ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಏ.11 ರಿಂದ 14ರ ವರೆಗೆ ಹಮ್ಮಿಕೊಳ್ಳಲಾಗಿದೆ. ಲಸಿಕೆ ಹಾಕಿಸಿ ಕೊಳ್ಳದ ಸಾರ್ವಜನಿಕರು ಸ್ವತಃ ಆ ಆರೋಗ್ಯ ಕೇಂದ್ರಗಳಿಗೆ ಬಂದು ಹಾಕಿಸಿಕೊಳ್ಳಬೇಕು. ಏಕೆಂದರೆ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ಸಂದರ್ಭದಲ್ಲಿ ಮಾತ್ರ ಕೋವಿಡ್ ಲಕ್ಷಣಗಳು ಕಾಣಲು ಸಾದ್ಯವಾಗುತ್ತದೆ. ಅದರಿಂದ ಲಸಿಕೆ ಪಡೆದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಯಾವುದೇ ತರಹದ ರೋಗಲಕ್ಷಣಗಳು ತಮ್ಮ ಹತ್ತಿರ ಬರುವುದಿಲ್ಲ.

ಹಾಗಾ ಗಿಯೇ, ತಪ್ಪದೆ ಪ್ರತಿಯೊಬ್ಬರು ಲಸಿಕೆ ಪಡೆದು ಕೋವಿಡ್ ಮುಕ್ತ ತಾಲ್ಲೂಕು ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿ ಕೊಂಡರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಗ್ರಾಮದ ವಿವಿಧ ಕಡೆಗಳಿಂದ ಜನರು ಮತ್ತು ಮುಖಂಡರು ಜನಪ್ರತಿನಿಧಿಗಳು ಅಭಿಯಾನ ದಲ್ಲಿ ಭಾಗವಹಿಸಿ ಲಸಿಕೆ ಪಡೆಯುಲು ಮುಂದಾದರು. ಈ ವೇಳೆ ಹಿರಿಯ ಆರೋಗ್ಯ ನೀರಿಕ್ಷಕರು ಶ್ರೀನಿವಾಸ್ ಮೂರ್ತಿ, ಆಶಾ ಕಾರ್ಯಕರ್ತೆಯರು, ಸುಗಮಕಾರರಾದ ವಾಣಿ ಸುರೇಶ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಶುಶ್ರೂಷಕರಾದ ವಿಶ್ವನಾಥ್ ಕಣಕ ಯಂತ್ರ ನಿರ್ವಾಹಕ ಬಾಬೇಶ್ ಶಿಬಿರ ನಿರ್ವಹಿಸಿದರು.