ಕೊಡಗು: ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಅವರು ಭಾನುವಾರ ಕರೋನಾ ಸೋಂಕಿನಿಂದ ನಿಧನರಾದರು.
ಕೊಡಗು ಜಿಲ್ಲೆ ನಾಪೋಕ್ಲು ಬೇತು ಗ್ರಾಮದ ನಿವಾಸಿ ಪುಚ್ಚಿಮಂಡ ಅನುಪಮಾ ಬೆಂಗಳೂರಿನಲ್ಲಿ ನೆಲೆಸಿದ್ದರು. ಒಂದು ವಾರ ದಿಂದ ಅನಾರೋಗ್ಯಕ್ಕೀಡಾಗಿದ್ದ ಅವರಿಗೆ ಕರೋನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಅನುಪಮಾ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅನುಪಮಾ ಅವರು ನೂರು ಅಂತಾರಾಷ್ಟ್ರೀಯ ಹಾಕಿ ಪಂದ್ಯದ ತೀರ್ಪುಗಾರಿಕೆ ಮಾಡಿದ್ದರು.