Friday, 22nd November 2024

ಸತತ 10ನೇ ದಿನ ತೈಲೋತ್ಪನ್ನ ದರದಲ್ಲಿ ಸ್ಥಿರತೆ

ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್​ ದರ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿಯೂ ಸ್ಥಿರವಾಗಿದೆ.

ಕಳೆದ ವಾರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್​ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ಬೆಲೆಯಲ್ಲಿ 14 ಪೈಸೆ ಕಡಿತಗೊಳಿಸಿದ್ದವು.

ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 40 ಪೈಸೆ,  ಡೀಸೆಲ್ ದರ 80 ರೂಪಾಯಿ 73 ಪೈಸೆ ಆಗಿದೆ. ಮುಂಬೈ ನಗರದಲ್ಲಿ ಪೆಟ್ರೋಲ್​ ದರ 96 ರೂಪಾಯಿ 83 ಪೈಸೆ, ಪ್ರತಿ ಲೀಟರ್​ ಡೀಸೆಲ್​ ದರ 87 ರೂಪಾಯಿ 81 ಪೈಸೆಯಷ್ಟಿದೆ. ಚೆನ್ನೈನಲ್ಲಿ  ಪೆಟ್ರೋಲ್​ ಬೆಲೆ 92 ರೂಪಾಯಿ 43 ಪೈಸೆ, ಡೀಸೆಲ್​ ದರ 85 ರೂಪಾಯಿ 75 ಪೈಸೆ ಇದೆ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ ಗಮನಿಸಿದಾಗ 90 ರೂಪಾಯಿ 20 ಆಗಿದ್ದು, ಪ್ರತಿ ಲೀಟರ್​ ಡೀಸೆಲ್​ ಬೆಲೆ 83 ರೂಪಾಯಿ 61 ಪೈಸೆ ಇದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಅನ್ನು 93 ರೂಪಾಯಿ 43 ಪೈಸೆ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ ಬೆಲೆ 85 ರೂಪಾಯಿ 60 ಪೈಸೆ ಇದೆ.  ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಗೆ 88 ರೂಪಾಯಿ 72 ಪೈಸೆ ಇದ್ದರೆ. ಪ್ರತಿ ಲೀಟರ್​ ಡೀಸೆಲ್​ ಬೆಲೆ 81 ರೂಪಾಯಿ 13 ಪೈಸೆ ಆಗಿದೆ.

ಏಪ್ರಿಲ್​ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್​ ದರವನ್ನು ಬದಲಾವಣೆ ಮಾಡಿರಲಿಲ್ಲ. 15 ದಿನಗಳ ನಂತರ ಗುರುವಾರ ಮೊದಲ ಬಾರಿಗೆ ಕಡಿತ ಕಂಡಿತು.