ಬಾಗ್ದಾದ್: ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ 82 ಜನ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಇರಾಕ್ ದೇಶದ ರಾಜಧಾನಿ ಬಾಗ್ದಾದ್ನಲ್ಲಿ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಸುಮಾರು 110 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಐಬಿಎನ್ ಕತಿಬ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಪೂರೈಸಲು ತಂದಿದ್ದ ಆಕ್ಸಿಜ್ ಟ್ಯಾಂಕ್ನಲ್ಲಿ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದ್ದರಿಂದ 70 ಕೋವಿಡ್ ರೋಗಿಗಳು ಹಾಗೂ 12 ಜನ ಅವರ ಸಂಬಂಧಿಕರು, ವೈದ್ಯರು, ನರ್ಸ್ಗಳು ಮೃತಪಟ್ಟಿದ್ದಾರೆ.
ದುರಂತ ನಡೆಯಲು ಮೇಲ್ನೋಟಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದ್ದು, ಇರಾಕ್ ಸರ್ಕಾರ ಈ ಕುರಿತು ಉನ್ನತ ತನಿಖೆಗೆ ಆದೇಶಿಸಿದೆ.