ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ 7ನೇ ಹಂತದ ಮತದಾನ ನಡೆದಿದೆ. ಇತ್ತೀಚಿನ ವರದಿ ಪ್ರಕಾರ, ಶೇ.17.47ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ 5 ಜಿಲ್ಲೆಗಳ 34 ಕ್ಷೇತ್ರಗಳಲ್ಲಿ 7ನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ದಕ್ಷಿಣ ದಿನಾಜ್‌ಪುರದ ಆರು, ಮಾಲ್ಡಾದಲ್ಲಿ ಆರು, ಮುರ್ಷಿದಾಬಾದ್‌ನಲ್ಲಿ ಒಂಬತ್ತು, ಪಶ್ಚಿಮ ಬರ್ಧಮಾನ್ ನಲ್ಲಿ ಒಂಭತ್ತು ಮತ್ತು ಕೋಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ಭರ ದಿಂದ ನಡೆಯುತ್ತಿದೆ.
ಏಳನೇ ಹಂತದ ಮತದಾನದಲ್ಲಿ ಸಿಲ್ಗುರಿ ಕ್ಷೇತ್ರದಿಂದ ಸಿಪಿಐ(ಎಂ)ನ ಅಶೋಕ್ ಭಟ್ಟಾಚಾರ್ಯ ಬಿಜೆಪಿ ಅಭ್ಯರ್ಥಿ ಶಂಕರ್ ಘೋಷ್ ಮತ್ತು ಟಿಎಂಸಿಯ ಒಂಪ್ರಕಾಶ್ ಮಿಶ್ರಾ ವಿರುದ್ಧ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಸಿಲಿಗುರಿಯ ಮಾಜಿ ಮೇಯರ್ ಭಟ್ಟಾ ಚಾರ್ಯ ಅವರು ಉತ್ತರ ಬಂಗಾಳದ ಪ್ರಮುಖ ಕಮ್ಯುನಿಸ್ಟ್ ನಾಯಕರಾಗಿದ್ದಾರೆ.
ಟಿಎಂಸಿಯ ಹಿರಿಯ ಮುಖಂಡ ಮತ್ತು ರಾಜ್ಯ ಸರ್ಕಾರದ ಸಚಿವ ಬ್ರಾತ್ಯ ಬಸು ಅವರು ದಮ್ ದಮ್ ಕ್ಷೇತ್ರದಿಂದ ಸ್ಪರ್ಧಿಸು ತ್ತಿದ್ದರೆ, ಸಿಪಿಐ(ಎಂ) ಪಲಾಶ್ ದಾಸ್ ಅವರನ್ನು ಮತ್ತು ಬಿಜೆಪಿ ಬಿಮಲ್ ಶಂಕರ್ ನಂದಾ ಅವರನ್ನು ಆ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ನಟ ಚಿರಂಜೀತ್ ಚಕ್ರವರ್ತಿ ಅವರು ಟಿಎಂಸಿ ಅಭ್ಯರ್ಥಿಯಾಗಿ ಬಾರಾಸತ್‌ನಿಂದ ಬಿಜೆಪಿ ಅಭ್ಯರ್ಥಿ ಶಂಕರ್ ಚಟರ್ಜಿ ಮತ್ತು ಫಾರ್ವರ್ಡ್ ಬ್ಲಾಕ್ ಅಭ್ಯರ್ಥಿ ಸಂಜಿಬ್ ಚಟ್ಟೋಪಾಧ್ಯಾಯ ವಿರುದ್ಧ ಸ್ಪರ್ಧಿಸಿದ್ದಾರೆ.