ಅಭಿವ್ಯಕ್ತಿ
ಸೌಮ್ಯ ಗಾಯತ್ರಿ
ಇವೆಲ್ಲದರ ಮಧ್ಯೆ ಮಕ್ಕಳ ಪರೀಕ್ಷೆಯ ಸಂಕಟ. ವರ್ಷವೆ ಆನ್ಲೈನ್ ಮಾಧ್ಯಮದಲ್ಲಿ ಕಲಿಕೆ ಮುಗಿಸಿ, ಬರವಣಿಗೆಗೆ ಆದ್ಯತೆಯೇ ಇಲ್ಲದಂತಾಗಿ ಮೊಬೈಲ, ಲ್ಯಾಪ್ಟಾಪ್ಗಳಿಗೆ ಒಗ್ಗಿಹೋಗಿರುವ ಮಕ್ಕಳ ಬಗ್ಗೆ ಯೋಚಿಸಿ ಯೋಚಿಸಿ ಬಳಲಿ ಬಸವಳಿದಿರುವ ಪೋಷಕರ ಸ್ಥಿತಿ ಕರೋನಾಕ್ಕೆ ತುತ್ತಾದವರಿಗಿಂತ ಗಂಭೀರ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ಎಂಬಂತಿದ್ದ ನಮ್ಮ ಘೋಷಣೆಗಳು ಮಾನ್ಯವಿಲ್ಲದಂತಾಗಿ ಶಾಲೆಗಳೇ ಮೊಬೈಲ್ ಗಳೊಳಗೆ ಅಡಕವಾಗು ವಂತಾಯಿತು. ನವ ವರ್ಷ ಪ್ರಾರಂಭವಾದಾಗ ನಮ್ಮ ಸುತ್ತ ಮುತ್ತಲ ನೆರೆಹೊರೆ ಸಹಜ ಸ್ಥಿತಿಗೆ ಮರಳು ತ್ತಿದೆ ಎಂಬಂತೆ ಅನಿಸಿತ್ತು. ಶಾಲಾ ಕಾಲೇಜುಗಳು ಪುನರಾರಂಭಗೊಂಡು ಮಕ್ಕಳು ಮೊದಲಿನಂತೆ ಶಿಕ್ಷಕರ ಸಮಕ್ಷಮದಲ್ಲಿ ಕಲಿಕೆ ಪ್ರಾರಂಭವಾಯಿತೆನ್ನುವ ಆಶಾವಾದ ಮನದಲ್ಲಿ ಇಳಿಯುವ ಮೊದಲೇ ಭಾರತಕ್ಕೆ ಕರೋನಾವಿನ ಎರಡನೇ ಅಲೆ ಚಂಡ ಮಾರುತದಂತೆ ಅಪ್ಪಳಿಸಿದೆ.
ತಾ ನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವುದು ನಮಗೆಲ್ಲರಿಗೂ ಚಿರ ಪರಿಚಿತ ನುಡಿಗಟ್ಟು. ಇಂಗ್ಲಿಷ್ನಲ್ಲಿ Man Proposes, God Disposes ಅಂತ ಹೇಳ್ತಾರೆ. ಹಾಗೆ ಇಂದು ಕರೋನಾ ಎಂಬ ಕಣ್ಣಿಗೆ ಕಾಣದ ಮಾನವ ನಿರ್ಮಿತವೋ, ಮಾನವನ ಕರ್ಮವೋ ಎಂಬುದು ತಿಳಿಯದ ಒಂದು ವೈರಾಣು ಒಬ್ಬಿಬ್ಬರನ್ನಲ್ಲ ಇಡೀ ಜಗತ್ತನ್ನೇ ತನ್ನ ರಾಗಕ್ಕೆ ಕುಣಿಸುತ್ತಿದೆ. ಎರಡು ದಿನಗಳ ಹಿಂದೆ ಅಮೆರಿಕಾದ NPR (ನ್ಯಾಷನಲ್ ಪಬ್ಲಿಕ್ ರೇಡಿಯೋ ಇದು ಖಾಸಗಿ ಮತ್ತು ಸಾರ್ವಜನಿಕ ವಾಗಿ ಧನಸಹಾಯ ಹೊಂದಿರುವ ಲಾಭರಹಿತ ಮಾಧ್ಯಮ ಸಂಸ್ಥೆ) ರಲ್ಲಿ ಒಂದು ಲೇಖನ, ಭರವಸೆಯ ಕಿರಣವಾಗಿದ್ದ ಭಾರತ ಅತಿ ಹೆಚ್ಚು COVID ಈ ಸಂಖ್ಯೆಗಳ ವಿಶ್ವ ದಾಖಲೆ ಹೊಂದುವಂತಾದ ವ್ಯಥೆಯನ್ನು ಓದಿ ಬೇಸರವಾಯಿತು.
ಕೆಲ ತಿಂಗಳುಗಳ ಹಿಂದಷ್ಟೇ ಪ್ರಪಂಚದೆಡೆಗೆ ಕೋವಿಡ್ ಲಸಿಕೆಗಳು, Remdesivir ಚುಚ್ಚುಮದ್ದುಗಳು ಮತ್ತು ಅನೇಕ ಔಷಧಿ ಗಳನ್ನು ರಫ್ತು ಮಾಡಿ ಇಂತಹ ವೈದ್ಯಕೀಯ, ಮಾನಸಿಕ ತುರ್ತು ಪರಿಸ್ಥಿತಿಯಲ್ಲಿ ಭರವಸೆಯ ಆಶಾಕಿರಣ ಮೂಡಿಸಿದ ರಾಷ್ಟ್ರ ವಾಗಿದ್ದ ನಮ್ಮ ಭಾರತ ಇದ್ದಕ್ಕಿದ್ದ ಹಾಗೆ ಜಗತ್ತೇ ಕಳವಳಗೊಳ್ಳುವಂತಹ ಪರಿಸ್ಥಿತಿಯಲ್ಲಿ ಸಿಕ್ಕು ನಲುಗುತ್ತಿದೆ. ಇದು ಒಟ್ಟು ಮೂಲಸೌಕರ್ಯದ ವೈಫಲ್ಯವಾಗಿದೆ. ಆದರೆ ಯಾರಿದಕ್ಕೆ ಹೊಣೆ? ಸರಕಾರವೋ? ಜನ ಸಾಮಾನ್ಯರೋ? ಹಣೆ ಬರಹವೋ? ಪರಿಸರದ ಏರು ಪೇರೋ? ನೈಸರ್ಗಿಕ ವಿಪತ್ತೊ? ಏನೂ ಅರಿಯದಾಗಿದೆ.
ಜನಜೀವನದ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ ಇಂದಿನ ದಾರುಣ ಪರಿಸ್ಥಿತಿ. ಇವೆಲ್ಲದರ ಮಧ್ಯೆ ಮಕ್ಕಳ ಪರೀಕ್ಷೆಯ ಸಂಕಟ. ವರ್ಷವೆ ಆನ್ಲೈನ್ ಮಾಧ್ಯಮದಲ್ಲಿ ಕಲಿಕೆ ಮುಗಿಸಿ, ಬರವಣಿಗೆಗೆ ಆದ್ಯತೆಯೇ ಇಲ್ಲದಂತಾಗಿ ಮೊಬೈಲ, ಲ್ಯಾಪ್ ಟಾಪ್ಗಳಿಗೆ ಒಗ್ಗಿಹೋಗಿರುವ ಮಕ್ಕಳ ಬಗ್ಗೆ ಯೋಚಿಸಿ ಯೋಚಿಸಿ ಬಳಲಿ ಬಸವಳಿದಿರುವ ಪೋಷಕರ ಸ್ಥಿತಿ ಕರೋನಾಕ್ಕೆ
ತುತ್ತಾದವರಿಗಿಂತ ಗಂಭೀರ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ಎಂಬಂತಿದ್ದ ನಮ್ಮ ಘೋಷಣೆಗಳು ಮಾನ್ಯವಿಲ್ಲದಂತಾಗಿ ಶಾಲೆಗಳೇ ಮೊಬೈಲ್ಗಳೊಳಗೆ ಅಡಕವಾಗುವಂತಾಯಿತು.
ನವ ವರ್ಷ ಪ್ರಾರಂಭವಾದಾಗ ನಮ್ಮ ಸುತ್ತ ಮುತ್ತಲ ನೆರೆಹೊರೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬಂತೆ ಅನಿಸಿತ್ತು. ಶಾಲಾ ಕಾಲೇಜುಗಳು ಪುನರಾರಂಭಗೊಂಡು ಮಕ್ಕಳು ಮೊದಲಿನಂತೆ ಶಿಕ್ಷಕರ ಸಮಕ್ಷಮದಲ್ಲಿ ಕಲಿಕೆ ಪ್ರಾರಂಭವಾಯಿತೆನ್ನುವ ಆಶಾವಾದ ಮನದಲ್ಲಿ ಇಳಿಯುವ ಮೊದಲೇ ಭಾರತಕ್ಕೆ ಕರೋನಾವಿನ ಎರಡನೇ ಅಲೆ ಚಂಡಮಾರುತದಂತೆ ಅಪ್ಪಳಿಸಿದೆ.
ದಿನೇ ದಿನೇ ಏರುತ್ತಿದ್ದ ಸೋಂಕಿತರ ಸಂಖ್ಯೆಗಳ ನಡುವೆ 10 ಮತ್ತು 12ನೆಯ ತರಗತಿಗಳ ಮಕ್ಕಳ, ಪೋಷಕರ Cancelboard exam ಎಂಬ ಕೂಗು ಟ್ವಿಟ್ಟರ್ನಂಥ ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತವಾಯಿತು.
ಅನೇಕ ಗಣ್ಯಾತಿಗಣ್ಯರು, ರಾಜಕೀಯ ನೇತಾರರು, ಸೆಲೆಬ್ರಿಟಿ ಗಳು ಈ ಕೂಗಿಗೆ ಬೆಂಬಲವಾಗಿ ನಿಂತರು. ಪ್ರಧಾನಿಯವರು ತುರ್ತು
ಸಭೆ ಕರೆದು 10ನೆಯ ತರಗತಿಯ ಪರೀಕ್ಷೆ ರದ್ದು ಮಾಡುವಂತೆ ಆದೇಶ ಹೊರಡಿಸಿದರು. CBSE ಪರೀಕ್ಷೆಯ ರದ್ದಿನ ಹಿನ್ನೆಲೆ ಯಲ್ಲಿಯೇ ICSE ಮಂಡಳಿಯೂ 10ನೆಯ ತರಗತಿಗಳ ಪರೀಕ್ಷೆಯನ್ನು ರದ್ದು ಮಾಡಿತು. ಆಯಾ ರಾಜ್ಯ ಸರಕಾರ ಗಳು ತಮ್ಮ ತಮ್ಮ ರಾಜ್ಯದ ಪರೀಕ್ಷೆಗಳ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಳ್ಳಬೇಕಿದೆ.
ಆದರೆ ಈ ಪರೀಕ್ಷೆಗಳು ರದ್ದಾಗಿದ್ದು ಎಷ್ಟು ಸಮಂಜಸ? ಪರೀಕ್ಷೆ ಎಂದರೆ ಭಯಭೀತಗೊಳ್ಳುವ, ಸಮಯಕ್ಕೆ ಸರಿಯಾಗಿ ಸೂಕ್ತ ತಯಾರಿ ನಡೆಸದೆ ಇದ್ದ ವಿದ್ಯಾರ್ಥಿಗಳಿಗೆ ಹಬ್ಬದ ಮನಸ್ಥಿತಿ. ಆದರೆ ವರ್ಷವೆ ಚೆನ್ನಾಗಿ ಪರಿಶ್ರಮ ಪಟ್ಟು ಓದಿದ ವಿದ್ಯಾರ್ಥಿಗಳಲ್ಲಿ ಸೂತಕದ ಛಾಯೆ. ಎಂತಹ ಉಭಯ ವಿರುದ್ಧ ಭಾವನೆಗಳು. ವಿಪರೀತವಾಗಿ ಹರಡುತ್ತಿರುವ, ಸದ್ಯಕ್ಕೆ ನಿಯಂತ್ರಣ ಕಾಣಸಿಗದ ಈ
ಮಾರಣಾಂತಿಕ ವೈರಾಣುವಿನ ವಿರುದ್ಧ ಹೋರಾಟದಲ್ಲಿ, ಪರೀಕ್ಷೆಯ ರದ್ದು ಅನೇಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವಿಕೆ ಯಲ್ಲಿ ಬಹಳ ಮಹತ್ವದ ನಿರ್ಧಾರವೆನಿಸಿಕೊಂಡಿದೆ.
10ನೆಯ ತರಗತಿಯ ಪರೀಕ್ಷೆ ಅಂತಹ ಗಂಭೀರ ಪ್ರಮಾಣದ್ದಲ್ಲವಾಗಿದೆ. ಇಲ್ಲಿಯವವರೆಗೂ 10ನೆಯ ತರಗತಿಯ ಅಂಕಪಟ್ಟಿ ಜನ್ಮ ದಿನಾಂಕದ ಪ್ರಮಾಣ ಪತ್ರವಾಗಿ ಉಪಯೋಗಕ್ಕೆ ಬಂದಿದೆಯೇ ವಿನಃ ಎಲ್ಲಿಯೂ ವೈಯಕ್ತಿಕ ವೃತ್ತಿ ನಿರ್ಧಾರದ ಪ್ರಕ್ರಿಯೆ ಯಲ್ಲಿ ಉಪಯೋಗಕ್ಕೆ ಬಂದೇ ಇಲ್ಲ. ತಮ್ಮ ವೃತ್ತಿ ನಿರ್ಧಾರ ಕೈಗೊಳ್ಳುವಲ್ಲಿ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇರುವಾಗ
ಅಪಾಯದಂಚಿಗೆ ದೂಡದೆ ಮಕ್ಕಳ, ಮಕ್ಕಳೊಂದಿಗೆ ಸಂಬಂಧಪಟ್ಟ ಹಲವಾರು ಕುಟುಂಬಗಳ ಪಾಲಿಗೆ ಆರೋಗ್ಯದ ದೃಷ್ಟಿ ಯಲ್ಲಿ ಉತ್ತಮ ನಿರ್ಧಾರವಾಗಿದೆ.
ಆದರೆ ಇವೆಲ್ಲ ಈ ನಿರ್ಧಾರದ ಪರವಾದ ವಾದವಾದಲ್ಲಿ, ವಿರೋಧದ ವಾದವೇನು? ಪರೀಕ್ಷೆ ಬರೆದ ನಂತರ ಗಳಿಸುವ ಅಂಕಗಳ
ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ತಮ್ಮ ಬಲಹೀನತೆಯನ್ನು ಗುರುತಿಸುವ ಆದ್ಯತೆಯೇ ಇಲ್ಲದಂತಾಗಿ ಸ್ವಯಂ ಮೌಲ್ಯ ಮಾಪನ
ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಹೀಗೆ ಈ ಕರೋನಾ ಮುಂದಿನ ವರ್ಷವೂ ಇರುತ್ತೆ ಆಗಲೂ ಪರೀಕ್ಷೆ ರದ್ದಾಗುತ್ತೆ ಎಂಬ ಪ್ರಾಸಂಗಿಕ ಮನೋಭಾವ ಮಕ್ಕಳ ಮನದಲ್ಲಿ ಮನೆಮಾಡಿ ತಮ್ಮ ಭವಿಷ್ಯದ ಬಗೆಗಿನ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ
ಋಣಾತ್ಮಕವಾಗಿ ಪ್ರಭಾವ ಬೀರುತ್ತದೆ.
ಸುಮಾರು ಒಂದೂವರೆ ವರ್ಷಗಳು ಒಳ್ಳೆಯ ಗುಣಮಟ್ಟದ ಕಲಿಕಾ ಪ್ರಕ್ರಿಯೆ ಇಲ್ಲದೆ ಭವಿಷ್ಯದ ದಾರಿ ಕತ್ತಲಲ್ಲಿ ಕಾಣಸಿಗದಂತಾಗಿ ಮಕ್ಕಳು ತ್ರಿಶಂಕು ಸ್ಥಿತಿಯಲ್ಲಿ ಅವರದೇ ಲೋಕದಲ್ಲಿ ಸಂಚರಿಸುವಂತಾಗಿದೆ. ಪಾಪ ಏನೂ ಅರಿಯದ ಕಂದಮ್ಮಗಳಿಗೆ ಈ ರಜೆ ಮಜೆ. ಆದರೆ 10/12 ನೆಯ ತರಗತಿಗಳಲ್ಲಿರುವವರಿಗೆ ಇದು ಒಂದು ತರಹ ಬಿಸಿ ತುಪ್ಪ, ಉಗಿಯಲಾಗದೇ ನುಂಗಲಾಗದೇ ಇರುವ
ಪರಿಸ್ಥಿತಿ. ಸರಕಾರದ ಆದೇಶದಂತೆ ನಮ್ಮ ಮಕ್ಕಳೆಲ್ಲರೂ ಪಾಸ್ ಆದರೆ ಕಲಿಕೆ, ಜ್ಞಾನಾರ್ಜನೆಯ ವಿಷಯದಲ್ಲಿ, ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ನಪಾಸ್. Operation Success , Patient died ಎಂಬಂತೆ ಆಯಿತು ಈ ಪರೀಕ್ಷಾ ರದ್ದು ಪ್ರಹಸನ. ಮುಂದೇನು ಕಾದಿದೆಯೋ ಕಾಡು ನೋಡೋಣ.
ಸದ್ಯಕ್ಕೆ ನಿಯಂತ್ರಣ ಕಾಣಸಿಗದ ಈ ಮಾರಣಾಂತಿಕ ವೈರಾಣುವಿನ ವಿರುದ್ಧ ಹೋರಾಟದಲ್ಲಿ, ಪರೀಕ್ಷೆಯ ರದ್ದು ಅನೇಕ ವಿದ್ಯಾರ್ಥ ಗಳ ಆರೋಗ್ಯ ಕಾಪಾಡುವಿಕೆಯಲ್ಲಿ ಬಹಳ ಮಹತ್ವದ ನಿರ್ಧಾರವೆನಿಸಿಕೊಂಡಿದೆ. ೧೦ನೆಯ ತರಗತಿಯ ಪರೀಕ್ಷೆ ಅಂತಹ ಗಂಭೀರ ಪ್ರಮಾಣದ್ದಲ್ಲವಾಗಿದೆ. ಇಲ್ಲಿಯವವರೆಗೂ ೧೦ನೆಯ ತರಗತಿಯ ಅಂಕಪಟ್ಟಿ ಜನ್ಮ ದಿನಾಂಕದ ಪ್ರಮಾಣ ಪತ್ರವಾಗಿ ಉಪಯೋಗಕ್ಕೆ ಬಂದಿದೆಯೇ ವಿನಃ ಎಲ್ಲಿಯೂ ವೈಯಕ್ತಿಕ ವೃತ್ತಿ ನಿರ್ಧಾರದ ಪ್ರಕ್ರಿಯೆಯಲ್ಲಿ ಉಪಯೋಗಕ್ಕೆ ಬಂದೇ ಇಲ್ಲ. ತಮ್ಮ ವೃತ್ತಿ ನಿರ್ಧಾರ ಕೈಗೊಳ್ಳುವಲ್ಲಿ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇರುವಾಗ ಅಪಾಯದಂಚಿಗೆ ದೂಡದೆ ಮಕ್ಕಳ, ಮಕ್ಕಳೊಂದಿಗೆ ಸಂಬಂಧಪಟ್ಟ ಹಲವಾರು ಕುಟುಂಬ ಗಳ ಪಾಲಿಗೆ ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ನಿರ್ಧಾರವಾಗಿದೆ.