ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ
ಮಾನವಿ: ತಾಲೂಕು ಸೇರಿದಂತೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್ ಡೌನ್ ಘೋಷಣೆಯಾಗಿದ್ದು, ದಿನ ಬಳಕೆಯ ವಸ್ತುಗಳ ಬೆಲೆ ಮತ್ತು ತಂಬಾಕು ಉತ್ಪನ್ನಗಳ ಬೆಲೆಯೂ ಮೂಲ ಬೆಲೆ ಗಿಂತ ದುಪ್ಪಟ್ಟು ಏರಿಕೆಯಿಂದ ಬಡ ಜನರು ಆಡಳಿತ ಬಿಜೆಪಿ ಸರ್ಕಾರಕ್ಕೆ ಇಡಿ ಶಾಪವನ್ನು ಹಾಕುತ್ತಿದ್ದಾರೆ.
ತರಕಾರಿಗಳಾದ ಈರುಳ್ಳಿ, ಮೆಣಸು, ಖಾದ್ಯ ತೈಲದ ಜತೆಗೆ ಬೀನ್ಸ್, ಬೆಂಡೆ ಮತ್ತಿತರ ಕೆಲವು ತರಕಾರಿಗಳೂ, ದಿನಬಳಕೆ ದಿನಸಿ ಅಂಗಡಿ ವಸ್ತುಗಳು, ತಂಬಾಕು, ಗುಟಕಾ, ಸಿಗರೇಟ್, ಬೀಡಿ, ವಸ್ತುಗಳನ್ನು ದುಪ್ಪಟ್ಟು ಹಣವನ್ನು ಗ್ರಾಹಕರಿಂದ ವ್ಯಾಪಾರಸ್ಥರು ಕೂಡ ದುಪ್ಪಟ್ಟು ಹಣ ಪಡೆಯುತ್ತಿರುವುದು ಸಾಮಾನ್ಯವಾಗಿ ಪಟ್ಟಣದಲ್ಲಿ ಕಂಡುಬರುತ್ತಿದೆ.
ಆದರೆ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳು ಕೂಡ ಯಾವುದೇ ಕಿರಾಣಿ ಅಂಗಡಿಗಳಿಗೆ, ತರಕಾರಿ ಅಂಗಡಿಗಳಿಗೆ, ಗುಟಕಾ ಏಜೆನ್ಸಿಗಳಿಗೆ ಸಿಗರೇಟ್ ಏಜೆನ್ಸಿದಾರರಿಗೆ, ಇತರೆ ದಿನಬಳಕೆ ವಸ್ತುಗಳ ಏಜೆನ್ಸಿ ದಾರರಿಗೆ ಯಾವುದೇ ನೋಟಿಸ್ ನೀಡದೆ ಇರುವುದು ದುರ್ದೈವದ ಸಂಗತಿ.
ಈಗಾಗಲೇ ಕೇಂದ್ರ ಸರ್ಕಾರದ ಬೆಲೆ ಏರಿಕೆಯಾಗಿ ಬಡ ರೈತರು ಬೇಳೆಕಾಳುಗಳು, ಅಕ್ಕಿ, ಅಡುಗೆ ಎಣ್ಣೆ, ಗ್ಯಾಸ್, ಪೆಟ್ರೋ ಲಿಯಂ ಉತ್ಪನ್ನಗಳು, ಸೇರಿದಂತೆ ಅನೇಕ ಬೆಲೆ ಏರಿಕೆಯಿಂದ ಬೇಸತ್ತಿರುವ ಬಡವರ ಮೇಲೆ ಈ ಲಾಕ್ ಡೌನ್ನಿಂದ ದುಡಿಯುವುದಕ್ಕೂ ಕೆಲಸವಿಲ್ಲದ ಈ ಸಂದರ್ಭದಲ್ಲಿ ಸಣ್ಣ ಪುಟ್ಟ ಸಾಮಾಗ್ರಿಗಳು ಕೂಡ ಮೂಲ ಬೆಲೆಗಿಂತ ಅಧಿಕ ವಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಸೂಕ್ತ ಕ್ರಮವನ್ನು ಕೈಗೊಂಡರೆ ಸ್ವಲ್ಪಮಟ್ಟಿಗೆ ಯಾದರೂ ಬಡವರ ಪರ ಕೆಲಸ ಮಾಡಿದಂತೆ ಆಗುತ್ತದೆ.
ಸಾರ್ವಜನಿಕರಿಗೆ ಮಹಾಮಾರಿ ಕರೋನ ಭಯ ಒಂದು ಕಡೆಯಾದರೆ ದಿನಬಳಕೆ ವಸ್ತುಗಳ ದುಬಾರಿ ಆಗಿರುವುದನ್ನು ಖರೀದಿಗೆ ಖರೀದಿ ಮಾಡಲಾಗಿದೆ.
ಈ ಎಲ್ಲಾ ಸಮಸ್ಯೆಗಳು ಬಿಜೆಪಿ ಸರ್ಕಾರ ಯಾವುದೇ ಕಡಿವಾಣ ಹಾಕದಿರುವುದೇ ಇದಕ್ಕೆಲ್ಲ ಕಾರಣ ಎಂದು ಸಾರ್ವ ಜನಿಕರು ಬಿಜೆಪಿಯನ್ನು ದೂರುತ್ತಿರುವುದು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದು ವ್ಯಾಪಾರಸ್ಥರು ಅಧಿ ಕಾರಿಗಳು ಮಾಡುತ್ತಿರುವ ಎಡವಟ್ಟಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿರುವುದು ದುರ್ದೈವದ ಸಂಗತಿ ಅಲ್ಲದೆ ಮತ್ತೇನೂ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.