Friday, 22nd November 2024

ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಆರ್ ವಿ ಎನ್

ಶಾಸಕರಿಂದ ರಬ್ಬಣಕಲ್ ಕೆರೆ ವೀಕ್ಷಣೆ..

ಮಾನವಿ: ರಬ್ಬಣಕಲ್ ಗ್ರಾಮದ ಪಕ್ಕದಲ್ಲಿರುವ ಮಾನ್ವಿ ಪಟ್ಟಣದ ಜನರಿಗಾಗಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ಮಾಡಿ ಬೇಸಿಗೆಯಲ್ಲಿ ಹಿನ್ನೆಲೆಯಲ್ಲಿ ಮಾನವಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಕಳೆದ ಒಂದು ವಾರದಿಂದ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಕೆರೆಗೆ ನೀರನ್ನು ತುಂಬಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮಾನವಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ಸರಬರಾಜು ಮಾಡುವುದರ ಬಗ್ಗೆ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಅಧಿಕಾರಿಗಳಿಗೆ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು ಕೆರೆ ಸಂಪೂರ್ಣ ಭರ್ತಿಗೆ ಒಂಬತ್ತು ಅಡಿ ಎತ್ತರ ಪ್ರಮಾಣದ ನೀರು ಸಂಗ್ರಹವಾಗಬೇಕು ಆದರೆ 7 ಅಡಿ ನೀರು ಮಾತ್ರ ಭರ್ತಿಯಾಗಿದೆ ಕಾರಣ ಬೇಸಿಗೆಯಲ್ಲಿ ಮಾನಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ವ್ಯವಸ್ಥೆ ಮಾಡುವುದರ ಮೂಲಕ ಸಮಸ್ಯೆ ನಿರ್ವಹಣೆ ಮಾಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ಕೊಟ್ಟರು

ನಗರದಲ್ಲಿ ನಡೆಯುತ್ತಿರುವ ಜುಮಬಲ್ ದೊಡ್ಡಿ ಕೆರೆ ಹತ್ತಿರ ನಿರ್ಮಾಣವಾಗುತ್ತಿರುವ ಓವರ್ ಹೆಡ್ ಟ್ಯಾಂಕ್ ಕಾಮ ಗಾರಿಯನ್ನು ವೀಕ್ಷಣೆ ಮಾಡಿದರು. ಸಂಬಂಧಪಟ್ಟ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡ ಬೇಕೆಂದು ಸೂಚನೆ ಕೊಟ್ಟರು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪುರಸಭೆ ಸದಸ್ಯ ರಾದ ರಾಜಾ ಮಹೇಂದ್ರ ನಾಯಕ, ಪುರಸಭೆ ಸದಸ್ಯರಾದ ಇಬ್ರಾಹಿಂ ಖುರೀಷ, ಶರಣಪ್ಪ ಮೇದಾ, ಭಾಷ ಸಾಬ್, ಹನುಮಂತ ಭೋವಿ, ಶಿವರಾಜ ನಾಯಕ, ಮೌಲ ಸಾಬ್, ಹಂಪನಗೌಡ ನೀರಮಾನವಿ, ಗೋಪಾಲ ನಾಯಕ ಹರವಿ, ಮರೇಗೌಡ ಬುದ್ದಿನ್ನಿ, ಯಲಪ್ಪ ನಾಯಕ ಉಪಸ್ಥಿತರಿದ್ದರು.