ಅಭಿಪ್ರಾಯ
ಶ್ರೀದೇವಿ ವೈದ್ಯ
ಈ ಇಡೀ ವರ್ಷ ಒಂದು ಸೀರಿ ತೊಗೋಳಿಲ್ಲ ರೀ, ಬಳಿ ಸರದ ಜೋಡಿ ಮಾಸ್ಕನು ಒಂದು ಮ್ಯಾಚಿಂಗ್ ಮಾಡ್ಕೋ ಬೇಕಾಗ್ತದ ಅಂತ ಯಾರರೇ ಯಾವ್ದರೇ ಫಂಕ್ಷನ್ ಕರದ್ರ ಮ್ಯಾಚಿಂಗ್ ಮಾಸ್ಕ ಇಲ್ಲ ಅಂತ ಹೋಗಲಿಲ್ಲ ರೀ ನಾನು. ಕರೋನಾ ಅದರೀ ನಮ್ಮ ಮನಿಯವ್ರು ಎಲ್ಲೂ ಹೊರಗ ಹೋಗಬ್ಯಾಡ ಅಂತಾರ ಅಂತ ಎರಡು ಮೂರು ಮಂದಿ ಮುಂದ ಹೇಳೋದನ್ನ ಕೇಳಿ ಮ್ಯಾಚಿಂಗ್ ಮಾಸ್ಕ್ ಹೊಲಿಸ್ಕೊ, ಮ್ಯಾಚಿಂಗ್ ಮಾಸ್ಕ ಹೊಲಿಸ್ಕೊ ಅಂತ ಬೆನ್ನ ಹತ್ತಿ ಹೊಲಸೆ ಬಿಟ್ಟರು.
ಮುಂಜಾನೆದ್ದು ಇನ್ನು ಗ್ಯಾಸ್ಮ್ಯಾಲೆ ಛಾಕ್ಕ ಇಟ್ಟೆನಿ, ಗೆಳತಿ ಸುಮಾ ಫೋನ್ ಮಾಡಿ ಶ್ರೀದಿ ನ್ಯೂಸ್ ನೋಡಿದೆ ಏನು? ಪೇಪರ್ ಓದಿದೆನು? ಮತ್ತ ಲಾಕ್ಡೌನ್ ಮಾಡ್ತಾರಂತ ನೋಡು ಅಂದ್ಲು. ಮನಿಯವ್ರು ಛಾ ಕೊಡು ಅನ್ನೋವ್ರು ಮತ್ತ ಲಾಕ್ಡೌನ್ ಅಂತ ನೋಡು ಅಂದ್ರು.
ಮುಂಜಮುಂಜಾನೆದ್ದು ಯಾರರೇ ಛೋಲೋ ಸುದ್ದಿ ಹೇಳ್ತಾರ. ಇವ್ರಿಬ್ರುನು ಇzರ!! ಮನಸ್ನ್ಯಾಗ ಬೈಕೊಂಡು ಫೋನ್ ಶುರು ಮಾಡಿದ್ರ ಒಂದು ಇಪ್ಪತ್ತು ಮೆಸೇಜ್ ಮತ್ತೆ ಲಾಕ್ಡೌನ್ ಮಾಡ್ತಾರಂತ, ಅ ಮಾಡ್ಯಾರಂತ, ಇ ಮಾಡ್ಯಾರಂತ, ರಾತ್ರಿ ಅಷ್ಟ, ವೀಕೆಂಡ್ ಅಷ್ಟ ಅಂದ್ಕೋತ!! ಆತ ತೊಗೊ ಮತ್ತ ಪನೌತಿ ಹತು ಅಂದ್ಕೊಂಡೆ. ಲಾಕ್ಡೌನ್ ೨೦೨೦ ನೆನಪಾಗಿ ಎದಿ ಝಲ್ ಅಂತು!!
ಅಯ್ಯೋ ಮತ್ತ ಈ ಗಂಡಾ ಮಕ್ಕಳ ಮಾರಿ 24 ತಾಸು ನೋಡ್ಬೇಕಾ? ಆ ಸಿಂಕ್ ಅಂತು ಅಕ್ಷಯ್ ಸಿಂಕ್ ರೀ, ಭಾಂಡಿ ತಿಕ್ಕಿಧಾಂ ತಿಕ್ಕಿಧಾಂಗ ಅದೆಲ್ಲಿಂದ ಬಂದು ಬೀಳ್ತಾವೊ ಆ ಕೃಷ್ಣ ಪರಮಾತ್ಮನಿಗ ಗೊತ್ತು. ಇನ್ನೆನರ ಲಾಕ್ಡೌನ್ 2021 ಆದ್ರ ನಾ ಅಂತು ಡಿಕ್ಲೇರ್ ಮಾಡಾಕಿ ನಾ ಭಾಂಡಿ ತಿಕ್ಕೊಂಗಿಲ್ಲ ಅಂತ ಪ್ರತಿe ಮಾಡಬೇಕು ಅಂತ ಮಾಡೇನಿ. ಕರೋನಾ ಆಗಿ ಸಾಯ್ಲಿಕ್ರುನು ಈ ಭಾಂಡಿ ತಿಕ್ಕಿ ತಿಕ್ಕಿ ಸಾಯೋದ ಎಲ್ಲರೆ!!
ಇಪ್ಪತ್ತು ಸಲ ಛಾ ಮಾಡಿ ನಾಕ್ ಸಲ ತಿನ್ಲಿಕ್ಕೆ ಏನರೆ ಮಾಡ್ಬೇಕಾ? ನಾ ಒವಾ. ಆ ಕರೋನಾ ಇಂಥ ಖತರ್ನಾಕ್ ವೈರಸ್ ಅಂದ್ರ ರಾತ್ರಿ ಅಷ್ಟ ಬರ್ತದ್ರೀ, ವೀಕೆಂಡ್ ಅಷ್ಟ ಮಜಾ ಮಾಡ್ತದ ರೀ, ಈ ಎಲೆಕ್ಷನ್ ಪ್ರಚಾರಕ್ಕ, ಸ್ಟ್ರಕ್ ಇದ್ದ ಒಟ್ಟ ಹೋಗಂಗಿಲ್ಲ!!
ನೀವು ಹಂಗ ಸುಮ್ನ ಪಾರ್ಕ್ ಹೋಗಿ ದೂರ ದೂರ ಇದ್ರು ಅ ಓಡೋಡಿ ಬರ್ತದ, ನಿಮ್ಮ ಮನಿ ಮುಂದ ನೀವು ಮಾಸ್ಕ ಹಾಕ್ಕೊಂಡ ನಿಂತ್ರು ಅ ಬಂತಂತ ಲೆಖ್ಖ. ಭಾರಿ ಮಷ್ಕರಿ ಮಾಡತದ ಮತ್ತ!! ಹೋದ ಸಲ ಮಿಕ್ಸೆಡ್ ಫೀಲಿಂಗ್ಸ್ ಥರ ಆತ್ರಿ ಈ ಕರೋನಾ, ದಿನ ಒಂದೊಂದು ಚಾಲೆಂಜ್ – ಕಪಲ್ ಚಾಲೆಂಜ, ಸಾರಿ ಚಾಲೆಂಜ, ಮಕ್ಕಳ ಚಾಲೆಂಜ, ನತ್ತಿನ ಚಾಲೆಂಜ್ ಅಂದ್ಕೋತ ಫೇಸ್‌ಬುಕ್‌ದಾಗ ಫೋಟೋ ಹಾಕಿದ್ದ ಹಾಕಿದ್ದರೀ. ನಮ್ಮನಿ ಅವರು ಟೊಂಟ ಒಗದದ್ದ ಒಗದದ್ದ. ಎರಡ ಮಕ್ಕಳ ತಾಯಿ ಆದ ಮ್ಯಾಲೆ ನಮಗೂ ಸಣ್ಣ ನಡ ಇರಬೇಕು ಅಂದ್ರ ಹೆಂಗ ಸಾಧ್ಯ ಅದ.
ಇವರಿಗೆ ಬರೇ ನಮ್ಮ ಪೋಟೋಕ ಒಂದ ಏನ ಅರ ಅನಲಿಲ್ಲ ಅಂದ್ರ ತಿಂದಿದ್ದು ಕರಗುದಿಲ್ಲ ಆ ಲೇವಲ್ ಮಾಡಿದ್ರು. ಕಪಲ್ ಚಾಲೆಂಜ್ ಅದ ಫೋಟೋ ತಗಿಸ್ಕೊಳೋಣು ಅಂದ್ರ ನಿನ್ನ ಗಂಡನ ಜೋಡಿ ನೀ ತಗಸಕೊಂಡದ್ದೇನು ಚಾಲೆಂಜ್ ಅಲ್ಲ, ಬ್ಯಾರೆದವರ ಗಂಡನ ಜೋಡಿ ತಗಿಸ್ಕೊ ಅದು ಚಾಲೆಂಜ್ ಅನ್ಬೇಕಾ? ! ಸಾರಿ ಚಾಲೆಂಜ್ ಅದ ಒಂದು ಛನ್ದನಿ ಫೋಟೋ ತಗಿರಿ
ಅಂದ್ರ ಹೋಗ ಮಾರಾಳ ಕೆಟ್ಟ ಶೆಕ್ಯಾಗ ನಾನ ಬನಿಯನ್ ಬರ್ಮುಡಾ ಹಾಕ್ಕೊಂಡು ಕೂತೇನಿ, ನಿಂದೊಬ್ಬಕಿದು ಅಂದು
ಇದ್ದ ಬನಿಯನ್ ತಗದ ಒಗದ್ರ.
ನಾ ಏನ್ ಬಿಡ್ರಿ ಸೆಲೀ ತಕ್ಕೊಂಡು ಕಳಸ್ತೇನಿ ನಿಮ್ಮ ಹಣೆಬಾರ ಅಷ್ಟ!! ನಾ ಅರ ಏನ್ಮಾಡ್ಲಿ!! ಅಂತ ಭಾಳ ಸಲ ಒಬ್ಬಕಿನ ಪೋಟೋ ತಕ್ಕೊಂಡಿದ್ದೆ. ಇನ್ನೂ ಈ ಛಾ ಗಿರ್ಮಿಟ್ಟ ಸುದ್ದಿ ಹೇಳಬೇಕು ನಿಮಗ. ಇನ್ನೂ ಸಂಜಿ ನಾಕ ಹೊಡಿದಿರುದಿಲ್ಲ ಆವಾಗ ಚಾಲು… ಛಾ ಗಿರ್ಮಿಟ್ ಮಾಡು ಬಿಸಿಲ ಭಾಳ್ ಅದ ಮಿರ್ಚಿ ಕರಿ ಅಂತ ಬೆನ್ನ ಹತ್ತಿಬಿಡೋರು. ಅಲ್ರರಿ ಈ ಬಿಸಲಾಗ ಯಾರ ಅರೇ
ಮಿರ್ಚಿ ತಿನ್ತಾರೇನ್ರೀ ಅಂದ್ರ ನಿನ್ನ ವಾಟ್ಸ್‌ಆಪ್ ಸ್ಟೇಟಸ್‌ಗೆ ಬೇಕ ಅನ್ಬೇಕಾ? ಇನ್ಸ್ಟಾಗ್ರಾಮ್ದಾಗ ಫುಡೀಸ್ ಟ್ಯಾಗ್ ಮಾಡು 2k ಲೈP ಬರ್ತಾವ ಅಂತ ಪಂಪ್ ಹೊಡದ್ ಹೊಡದ್ ಮಾಡ್ಸೆಬಿಟ್ಟ್ರು ಕಡಿಕ!!
ಒಂದು ಫೋಟೋ ತಗಿ ಅಂದ್ರ ತಗಿಲಿಲ್ಲ ನಾ ನೋಡ್ರಿ ಇನ್ಸ್ಟಾಗ್ರಾಮು, 2k ಲೈP ಅನ್ನೋಣ ಮಾಡಿ ಕೊಟ್ಟೆ. ಅಪ್ಪ ಹಿಂಗ ಪಂಪ್ ಹೊಡಿಯೋದು, ಮಕ್ಕಳು ಅಮ್ಮ ಆಲೂ ಪರೋಠ ವಾಸನಿ ಬರ್ಲಿಕತದ, ಚೋಲೆ ಬಟೂರೆ ಮಾಡಿಯೇನು? ವಡಾ ಪಾವ್ ತಿನ್ನಲಾರದ ಭಾಳ ದಿನ ಆತು, ಅವರ ಮನ್ಯಾಗ ಸಮೋಸ ಮಾಡಿದ್ರು, ಇವರ ಮನ್ಯಾಗ ಪಾನಿ ಪುರಿ ಮಾಡಿದ್ರು, ನಮ್ಮ ಮನ್ಯಾಗ್ ಬರೆ ಚಪಾತಿ ಪಲ್ಯ ಅಂದ್ಕೋತ ಅಡ್ಡಾಡಿದ್ವು.
ಟೀವ್ಯಾಗ ರಾಮಾಯಣ, ಮಹಾಭಾರತ ನೋಡಿ ಛೋಲೋ ಏನರೆ ಕಲೀತಾರೆನೋ ಅಂದ್ರ ಅಮ್ಮ ರಾಮ ಅವ್ರ ಅಮ್ಮ ಅಪ್ಪನ್ನ ಮಾತು ಕೇಳಂಗಿಲ್ಲ ಅವ ಬ್ಯಾಡ ಬಾಯ್ ಇದ್ದಾನ ಅನ್ಬೇಕಾ? ಆತ ತೊಗೋಪ, ಎಲ್ಲಾ ಹೋಗಬೇಕು ಅದ ಬುದ್ದಿ ಅಂದ್ಕೊಂಡೆ ಮನಸ್ನ್ಯಾಗ. ಜೋರಾಗಿ ಏನು ಹೇಳಂಗಿಲ್ಲ ರೀ. ಸುಮ್ನೆ ಇಯರ್ ಫೋನ್ ಹಾಕೊಂಡು ಕಾಲ್ ಅದ ಕಾಲ್ ಅದ ಅಂದ್ಕೋತ ಕೂತಿರ್‌ತಾರ ಆದ್ರ ಕಿವಿ ಎಲ್ಲ ನನ್ನ ಕಡೆನ!!! ನಾ ಏನ್ ಮಾಡ್ತೇನಿ ಯಾರಿಗ್ ಫೋನ್ ಮಾಡ್ತೇನಿ ಯಾರ್ ನನಗ ಫೋನ್ ಮಾಡ್ತರ, ಏನ್ ಗಾಸಿಪ್ ಅದ.
ನಾ ಏನ್ ಮಾತಾಡಿದೆ ಎಲ್ಲ ಗೊತ್ತಿರ್‌ತದ!!! ನಾನ ಮರ್ತಿತೇನ್ರೀ. ಆದ್ರ ತಾವು ನೆನಪಿಟ್ಟಕೊಂಡು ಹೇಳ್ತಾರ!!! ಒಂದು ವರ್ಷಾತು ನೋಡ್ರಿ ಲಾಕ್‌ಡೌನ್ ಅಂತ ಸುರು ಆಗಿದ್ದು ವರ್ಕ್ ಫ್ರಮ್ ಹೋಂ, ಸ್ಟಡಿ ಫ್ರಮ್ ಹೋಂ ಆಗಿ ಕಡಿಕ ಹೋಂ ಅಲೋನ್ ಅಗೆದ.
ನಮ್ಮನಿಯವ್ರು ಅಂದ್ರು ನಿನಗ ಒಂದು ಸಿಂಪಲ್ ಐಡಿಯಾ ಕೊಡ್ತೇನಿ ಭಾಂಡಿ ತಿಕ್ಕೋ ಮುಂದ ನೀವೆಲ್ಲ ಗೆಳತ್ಯಾರು ವಾಟ್ಸ್‌ಆಪ್ ಗ್ರೂಪ್ ಕಾಲ್ ಮಾಡಿ ಮಾತಾಡ್ಕೋತ ಭಾಂಡಿ ತಿಕ್ಕ್ರಿ, ಅಂದ್ರ ಯಾರಿಗೂ ಬ್ಯಾಸರ ಆಗಂಗಿಲ್ಲ.
ಭಾಂಡಿನೂ ಸ್ವಚ್ಛ ಆಗ್ತಾವ ಮಾತು ಆಗ್ತಾವ ಅಂತ ಹೇಳಿ ತಾವು ಪಾರಾಗಿಬಿಟ್ಟರು. ನಾವೆ ಗೆಳತ್ಯಾರು ಮಾತಾಡ್ಕೋತ ತಿಕ್ಕಿದ್ದ ತಿಕ್ಕಿದ್ದು ತೊಳದದ್ದ ತೊಳದದ್ದು. ನನ್ನ -ಂq ಗಂಡಂದ್ರುನು ಎಲ್ಲ ಮನಸ್ನ್ಯಾಗ ರಗಡಷ್ಟು ಥ್ಯಾಂಕ್ಸ್ ಹೇಳಿರ್‌ತಾರ ಇವರಿಗೆ.
ಮತ್ತ ಹಿಂಗ ಅಗದಿ ಭರ್ತಿ ಲಾಕ್ಡೌನ್ ಟೈಂದಾಗನ ದೋಸೆ ಬಟಾಟಿ ಪಲ್ಯ, ಖೊಬ್ರಿ ಚಟ್ನಿ ಮಾಡೇನಿ. ತಿಂದಾರ ಅಪ್ಪ ಮಕ್ಕಳು, ಮಸ್ತ ಆಗ್ಯಾವ ಮಸ್ತ ಆಗ್ಯಾವ ಅನ್ಕೋತ ಆಮೇಲೆ ನೋಡಿದ್ರ ಸಾವಕಾಶಾಗಿ ಯಾರಿಗೋ ಹೇಳಲಿಕತ್ತಾರ, ಇವತ್ತ ನಮ್ಮ ಮನ್ಯಾಗ ದೋಸಾ ಮಾಡ್ಯಾರ ಮೂರು ಹೊತ್ತು, ನಾಳೆ ಒಪ್ಪತ್ತು ಮುಂಜಾನೆ ನಾಷ್ಟಾಕ್ಕ ಪಡ್ಡು ಮಾಡ್ತರ, ನಾಡದ ನಾಷ್ಟಾಕ್ಕ ಅದ ಹಿಟ್ಟಿಂದ ಮದ್ವಿ ಮಾಡಿ ಉಳ್ಳಾಗಡ್ಡಿ ಮೆಣಶಿನಕಾಯಿ ಹಾಕಿ ಉತ್ತಪ್ಪ ಮಾಡ್ತರ ಅಂತ!!!.
ಎಷ್ಠರೇ ಇದ್ದಿತು ಇವರದ್ದು ಅಂತೇನಿ, ನಾ ಮಾರನೇ ದಿನ ಚೋಲೆ ಭಟುರೆ ಮಾಡಿದ್ರಾತು ಅಂತ ಕಾಬುಲಿ ಚನ ನೆನಿ ಹಾಕಿದ್ದೇರಿ.
ಮತ್ತ ಪಾಪ ಪಡ್ಡು ತಿಂತೇನಿ ಅಂತಾರ. ನಾಅರ ಯಾಕ ಬ್ಯಾಡ ಅನ್ಲಿ ಅಂತ ಪಡ್ಡು ಮಾಡಿ ಕೊಟ್ಟೆ. ಅವರು ಹೆಂಗ ನನ್ನ ಮ್ಯಾಲೆ ಒಂದು ಕಿವಿ ಇಟ್ಟಿರ್‌ತಾರ, ನಾನು ಎರಡು ಕಿವಿ ಇಟ್ಟಿರ್‌ತೇನಿ. ಅಕಸ್ಮಾತ್ ಇಂಗ್ಲಿಷ್ ಮಾತಾಡಿದ್ರ ಇಗ್ನೋರ್ ಮಾಡ್ತೇನಿ ಕನ್ನಡ ಮಾತಾಡಿದ್ರ ಕಿವಿ ದೊಡ್ಡವು ಮಾಡಿಕೊಂಡು ಕೇಳಿಸಿಕೊತೇನಿ.
ಅವರಿಗರೇ ಏನು ಅನ್ನೋದು, ಪಾಪ ದಿನ ಮುಂಜಾನೆ 8ಕ್ಕ ಹೋಗಿ ರಾತ್ರಿ 10ಕ್ಕ ಬರ್ತಿದ್ರು, ಈಗ ಮುಂಜಾನಿಂದ ರಾತ್ರಿ ತನ ನಮ್ಮದ ಮಾರಿ ನೋಡಿ ನೋಡಿ ಬ್ಯಾಸರ ಅಗೆದ. ಆದ್ರ ಪಾಪ ಅನ್ನೋ ಹಂಗಿಲ್ಲ ಅನುಭೋಗ್ಸೋ ಹಂಗಿಲ್ಲ. ಯಾರರೇ ಕೇಳಿದ್ರ
ಭಾಳ್ ಛೋಲೋ ಅಡಗಿ ಮಾಡ್ತಾಳ ಅಂತ ಹೇಳ್ತಾರ, ಹೇಳಬೇಕಲ್ರೀ ಮತ್ತ, ಲಾಕ್ಡೌನ್ ಬ್ಯಾರೆ!!!
ಈ ಇಡೀ ವರ್ಷ ಒಂದು ಸೀರಿ ತೊಗೋಳಿಲ್ಲ ರೀ, ಬಳಿ ಸರದ ಜೋಡಿ ಮಾಸ್ಕನು ಒಂದು ಮ್ಯಾಚಿಂಗ್ ಮಾಡ್ಕೋಬೇಕಾಗ್ತದ ಅಂತ ಯಾರರೇ ಯಾವ್ದರೇ ಫಂಕ್ಷನ್ ಕರದ್ರ ಮ್ಯಾಚಿಂಗ್ ಮಾಸ್ಕ ಇಲ್ಲ ಅಂತ ಹೋಗಲಿಲ್ಲ ರೀ ನಾನು. ಕರೋನಾ ಅದರೀ ನಮ್ಮ ಮನಿಯವ್ರು ಎಲ್ಲೂ ಹೊರಗ ಹೋಗಬ್ಯಾಡ ಅಂತಾರ ಅಂತ ಎರಡು ಮೂರು ಮಂದಿ ಮುಂದ ಹೇಳೋದನ್ನ ಕೇಳಿ ಮ್ಯಾಚಿಂಗ್ ಮಾಸ್ಕ್ ಹೊಲಿಸ್ಕೊ, ಮ್ಯಾಚಿಂಗ್ ಮಾಸ್ಕ ಹೊಲಿಸ್ಕೊ ಅಂತ ಬೆನ್ನ ಹತ್ತಿ ಹೊಲಸೆ ಬಿಟ್ಟರು.
ಅವರಿಗೇನ ಅಷ್ಟ ಎರಡು ಮೂರು ತಾಸು ಫ್ರೀ ಆಗಿ ಇರಬಹುದು ಅಂತ!!. ಮತ್ತ ಫಂಕ್ಷನ್ ಹೋದ್ರ ಕ್ಯಾರಿಯರ್ ಬ್ಯಾರೆ ಕೊಟ್ಟು ಕಳಸ್ತಾರ ನೋಡ್ರಿ, ಅದು ಇರ್ತದ ಆದ್ರ ಬಾಯಿಲೇ ಹೇಳೋ ಹಂಗಿಲ್ಲ. ಅಕಸ್ಮಾತ್ ಲಾಕ್ಡೌನ್ ೨೦೨೧ ಆದ್ರ ಭಾಳ ಶ್ಯಾಣೇ ಆಗ್ಬೇಕು
ಅಂತ ನಾವೆ ಗೆಳತ್ಯಾರು ಮಾತಾಡಿಕೊಂಡೇವಿ ರೀ, ಏನ್ ಪಂಪ್ ಹೊಡದ್ರು ಬರೆ ಅನ್ನ ಹುಳಿ ಚಪಾತಿ ಪಲ್ಯ ಅಷ್ಟ ಮಾಡೋದು, ಪಾಪ ಹೋಗ್ಲಿ ಬಿಡು ಅಂತ ಎರಡು ಸರ್ತೆ ಛಾ ಅಷ್ಟ.