Saturday, 14th December 2024

ಸಮಯ ಆದರೂ ತೆರೆಯದ  – ವಲಯ ಅರಣ್ಯ ಕಚೇರಿ

ಮಾನ್ವಿ : ಬೇಸಿಗೆ ಕಾಲದಲ್ಲಿ ಕೆಂಡದಂತಹ ಬಿಸಿಲಿಗೆ ಪ್ರತಿಯೊಬ್ಬರೂ ಪರದಾಡುವಂತಾಗಿದು. ಬಿಸಿಲಿನ ತಾಪಕ್ಕೆ ದಿನೇ ದಿನೇ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಇದನ್ನು ಅರಿತ ರಾಜ್ಯ ಸರಕಾರ ಬೇಸಿಗೆ ಕಾಲದಲ್ಲಿ ಕಚೇರಿ ವೇಳೆಯನ್ನು  ಬೆಳಿಗ್ಗೆ 8 ಗಂಟೆ ಯಿಂದ 1 ಗಂಟೆವರಗೆ ಬದಲಾವಣೆ ಮಾಡಿದರೂ ಅಧಿಕಾರಿಗಳು ಮಾತ್ರ ಕಚೇರಿಗೆ ಬರುವುದೇ ಇಲ್ಲವೆ ಎಂದು ಸಾರ್ವಜನಿ ಕರು ಆರೋಪಿಸುತ್ತಿದ್ದಾರೆ.
ಸರಕಾರಿ ನೌಕರರ ಆರೋಗ್ಯದ ಕಾಳಜಿಯಿಂದ ಈ ಬದಲಾವಣೆ ಮಾಡಿದರೂ ಕೂಡ ತಾಲ್ಲೂಕಿನ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದರೆ ಕೊರೋನಾ ಮಹಾಮಾರಿ ಹಿನ್ನೆಲೆ ಲಾಕ್ ಡೌನ್  ಘೋಷಣೆ ಯಾಗಿದ್ದು ಬೆಳಗಿನ ಜಾವ 10 ಗಂಟೆಗೆ ಲಾಕ್‌ ಡೌನ್ ಸಮಯ ಮುಗಿಯುತ್ತದೆ ಅಷ್ಟರೊಳಗೆ ನಮ್ಮ ಕಾರ್ಯಗಳನ್ನು ಮುಗಿಸಿ  ಕೊಳ್ಳೋಣ ಎನ್ನುವ ಸಾರ್ವಜನಿಕರಿಗೆ ನಿರಾಸೆಯನ್ನು ತಂದಿರುವ  ಕೆಲವು ಇಲಾಖೆಯ ಅಧಿಕಾರಿಗಳು ಕಚೇರಿಯತ್ತ ಬರುವುದೇ ಇಲ್ಲ ಆದರೂ ಕೆಲವು ಸಿಬ್ಬಂದಿಗಳನ್ನಾದರೂ ಇರಬೇಕು ಎನ್ನುವುದು ಸಾರ್ವಜನಿಕರ ಕಳಕಳಿ ಆಗಿತ್ತು.