Sunday, 10th November 2024

ಆಯ್ಕೆ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ!

ಸಿದ್ಧಾರ್ಥ ವಾಡೆನ್ನವರ, ಲೇಖಕರು

ಜೀವನದ ಮುಖ್ಯ ಉದ್ದೇಶ ಊಟ ಮಾಡಬೇಕು, ಅದು ಹಸಿವು ಆದಾಗ. ನಿದ್ರೆೆ ಮಾಡಬೇಕು, ಅದು ನಿದ್ರೆೆ ಬಂದಾಗ. ಹೀಗೆ ಮಾಡಿದರೆ ಉಲ್ಲಾಾಸದಿಂದ ಇರುತ್ತೇವೆೆ.

ದುಃಖ-ಸಂತೋಷ, ನಿರಾಶೆ-ಉಲ್ಲಾಾಸ, ಧೈರ್ಯ-ಹೆದರಿಕೆ, ಭಯ-ನಿರ್ಭಯ ಇವೆಲ್ಲ ಬೇರೆಯವರ ಸೃಷ್ಟಿಿ ಅಲ್ಲ. ಸಾಕ್ಷಾತ್ ನಮ್ಮದೇ ಸೃಷ್ಟಿಿ. ಹೀಗೆ ಒಂದು ಬಾರಿ ಯೋಚಿಸಿದರೆ ನಮ್ಮ ಬದುಕಿನ ಒಳ್ಳೆೆಯ ದಿನಗಳು ಆರಂಭವಾಗುತ್ತವೆ. ಜಗತ್ತಿಿನ ಸುಮಾರು 84 ಕೋಟಿ ಜೀವರಾಶಿಗಳು ನಮ್ಮ ಹಾಗೆ ಯೋಚಿಸುವುದಿಲ್ಲ. ನಿದ್ರೆೆ ಬಂದಾಗ ನಿದ್ರಿಿಸುತ್ತವೆ, ಹಸಿವಾದಾಗ ಸ್ವಪ್ರಯತ್ನದಿಂದ ಆಹಾರ ಸಂಗ್ರಹಿಸಿ ಆಹಾರ ಸೇವಿಸುತ್ತವೆ. ಆಧ್ಯಾಾತ್ಮ ಹೇಳುತ್ತದೆ, ಜೀವನದ ಮುಖ್ಯ ಉದ್ದೇಶ ಊಟ ಮಾಡಬೇಕು, ಅದು ಹಸಿವು ಆದಾಗ. ನಿದ್ರೆೆ ಮಾಡಬೇಕು ಅದು ನಿದ್ರೆೆ ಬಂದಾಗ. ಹೀಗೆ ಮಾಡಿದರೆ ಉಲ್ಲಾಾಸದಿಂದ ಇರುತ್ತೇವೆೆ, ಇದರಲ್ಲಿ ಬದಲಾವಣೆ ಆಗಬಾರದು.

ಹಸಿವಿಲ್ಲದೇ ಊಟ ಮಾಡುವುದು, ನಿದ್ರೆೆ ಬಾರದೇ ನಿದ್ರೆೆ ಮಾಡಲು ಯತ್ನಿಿಸುವುದು ಜೀವನಕ್ಕೆೆ ಅಪಾಯ. ಸಮಸ್ಯೆೆಗಳಾಗುತ್ತಿಿರುವುದಕ್ಕೆೆ ಮುಖ್ಯ ಕಾರಣ, ನಮ್ಮ ಸಮಯವನ್ನು ವಿಭಾಗಿಸಿ ಅದರ ಅಡಿಯಲ್ಲಿಯೇ ಬದುಕಲು ಪ್ರಯತ್ನಿಿಸುತ್ತಿಿದ್ದೇವೆ. ನಿಸರ್ಗ ಹಾಗೆ ಮಾಡು ಅಂತ ಹೇಳಿಲ್ಲ. ಅಂದರೆ ನಮಗೆ ನಮ್ಮ ಮನಸ್ಸಿಿನ ಮೇಲೆ ನಿಯಂತ್ರಣ ಇಲ್ಲ. ನಮ್ಮ ದೇಹ ಮತ್ತು ಮನಸ್ಸು ಅತಿ ಮುಖ್ಯ, ದುಃಖ ಅಲ್ಲಿಂದಲೇ ಆಗುತ್ತದೆ. ಅದರ ನಿವಾರಣೆಯೂ ಅಲ್ಲಿಂದಲೇ ಆಗಬೇಕು. ಅಂದರೆ ನಾವು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಬೇಕು.

ಮನುಷ್ಯನ ದೇಹ ರಚನೆ ಎನ್ನುವುದು ಒಂದು ರೀತಿಯ ರಾಸಾಯನಿಕ ಮಿಶ್ರಣ. ಕೆಲವೊಬ್ಬರು ಒಳ್ಳೆೆಯ ರಾಸಾಯನಿಕ ಜೋಡಣೆಯಿಂದ ಈ ಭೂಮಿಗೆ ಅವತರಿಸಿ ಬರುತ್ತಾಾರೆ. ಕೆಲವೊಬ್ಬರಲ್ಲಿ ಕೆಟ್ಟ ರಾಸಾಯನಿಕ ಜೋಡಣೆ. ನೋಡಲು ಮಾನವರೆಲ್ಲ ಒಂದೇ ರೀತಿಯಾಗಿ ಕಂಡರೂ ಬುದ್ಧಿಿಮತ್ತೆೆಗನುಗುಣವಾಗಿ ಅಳೆಯಲಾರಂಭಿಸಿದರೆ ಪ್ರತಿಯೊಬ್ಬರ ಮಧ್ಯ ತುಂಬಾ ವ್ಯತ್ಯಾಾಸವಿದೆ. ಎಲ್ಲರಿಗೂ ಅವರದೇ ಆದ ಚಿಂತನೆಗಳಿವೆ.

ಕೆಲವು ಮಕ್ಕಳನ್ನು ನೋಡಿ, ಅವರನ್ನು ಸಂತೋಷ ಪಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅವರು ಸಂತೋಷದಿಂದ ಇರುವುದೇ ಇಲ್ಲ. ಹೆಚ್ಚಾಾಗಿ 10 ವರ್ಷಗಳಿಗಿಂತ ಚಿಕ್ಕವರು ಅಂದರೆ ಮಗು ಇದ್ದಾಾಗ ಸಿಗುವ ಸಂತೋಷ 25ರ ನಂತರ ಸಿಗುವುದಿಲ್ಲ. ಅಂದರೆ ಆ ರೀತಿಯ ಸಂತೋಷ 25ರಿಂದ 40ರವರೆಗಿನ ಅವಧಿಯಲ್ಲಿ ಬಹುತೇಕರು ಅನುಭವಿಸುವುದಿಲ್ಲ. ಇದೆಲ್ಲಾಾ ನಾವು ಚಿಂತಿಸಿದ ಮತ್ತು ನಾವು ಸೃಷ್ಟಿಿಸಿಕೊಂಡ ಅನುಭವಗಳಿಂದಲೇ ಹೊರತು ಬೇರೆ ಯಾವ ಕಾರಣಗಳಿಂದ ಅಲ್ಲ.

ಅರಿಸ್ಟಾಾಟಲ್ ಗೊತ್ತಲ್ಲ, ಜಗತ್‌ಪ್ರಸಿದ್ದ ತತ್ವಜ್ಞಾಾನಿ. ನೋಡಲು ಯಾವುದೋ ಒಂದು ರೋಗಕ್ಕೆೆ ತುತ್ತಾಾಗಿರಬಹುದು ಎಂಬ ಭಾವ ಎಲ್ಲರಲ್ಲಿ ಬರುತ್ತಿಿತ್ತು. ಅದು ಅವರ ಬಾಹ್ಯಸ್ವರೂಪ. ಒಮ್ಮೆೆ ಅರಿಸ್ಟಾಾಟಲ್‌ನ ಪತ್ನಿಿಯನ್ನು ಕೆಲವರು ಪ್ರಶ್ನೆೆ ಮಾಡುತ್ತಾಾರೆ, ಏನೆಂದರೆ ನೀವು ಎಷ್ಟೊೊಂದು ಸುಂದರ ಇದ್ದೀರಿ! ಆದರೆ ಇಥವನನ್ನು ಏಕೆ ಮದುವೆ ಮಾಡಿಕೊಂಡಿರಿ? ಇದರಿಂದ ಜೀವನದಲ್ಲಿ ನೀವು ವಿಫಲರಾದಂತೆ ಕಂಡು ಬರುವುದಿಲ್ಲವೇ? ಆಯ್ಕೆೆಯಲ್ಲಿ ಮೋಸಹೋದಿರೇ…ಹೀಗೆ ಪ್ರಶ್ನೆೆ ಮಾಡುತ್ತಾಾರೆ.

‘ನನ್ನ ಪತಿಯನ್ನು ಆಯ್ಕೆೆ ಮಾಡಿಕೊಳ್ಳುವ ಮುಂಚೆ ನಾನು ಹಲವು ಹಂತಗಳಲ್ಲಿ ಅವರ ಬಗ್ಗೆೆ ಅಧ್ಯಯನ ಮಾಡಿದೆ, ಅವರ ಬಗ್ಗೆೆ ಎಲ್ಲವನ್ನೂ ತಿಳಿದುಕೊಂಡೇ ಆಯ್ಕೆೆ ಮಾಡಿಕೊಂಡಿದ್ದೇನೆೆ. ನನ್ನ ಪತಿಯನ್ನು ಆಯ್ಕೆೆ ಮಾಡಿಕೊಳ್ಳುವ ಮುಂಚೆ ನಾನು ಎಲ್ಲವನ್ನೂ ಯೋಚಿಸಿದ್ದೇನೆ’ ಎಂದು ಉತ್ತರಿಸುತ್ತಾಾರೆ ಆಕೆ. ಅರಿಸ್ಟಾಾಟಲ್ ಅವರನ್ನು ನಾನು ಹಲವು ಬಾರಿ ಪರೀಕ್ಷೆಗೊಳಪಡಿಸಿ ನೋಡಿದೆ, ಒಂದೇ ಒಂದು ದಿನ, ಯಾವುದೇ ಕ್ಷಣ, ಯಾವುದೇ ಸಂದರ್ಭದಲ್ಲಿ ಆತ ದುಃಖಿತನಾಗಿರಲಿಲ್ಲ, ಅಸಂತೋಷದಿಂದ ಇರಲಿಲ್ಲ. ಸದಾ ಹಸನ್ಮುಖಿ, ಸಂತೋಷದಿಂದ ಒಬ್ಬನೇ ಇರುತ್ತಿಿದ್ದ, ಒಬ್ಬನೇ ಕುಳಿತುಕೊಳ್ಳುತ್ತಿಿದ್ದ. ನೋಡಲು ಸುಂದರನಾಗಿರಲಿಲ್ಲ. ಆದರೂ ಸದಾ ಸಂತೋಷದಿಂದ ಇರುತ್ತಿಿದ್ದ. ಈ ಕಾರಣದಿಂದಲೇ ನಾನು ಅವನನ್ನು ಮದುವೆ ಆಗಿದ್ದೇನೆ ಎನ್ನುತ್ತಾಾರೆ. ತಮ್ಮ ಆಯ್ಕೆೆ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಾಾರೆ.

ಮನುಷ್ಯನ ಪ್ರತಿ ಅನುಭವದಲ್ಲಿ, ನಾನಾ ರೀತಿಯ ರಾಸಾಯನಿಕ ಮಿಶ್ರಣ ಇರುತ್ತದೆ. ಶಾಂತಿ, ಸಂತೋಷ, ಪ್ರೀತಿ, ಉಲ್ಲಾಾಸ, ಭಾವಪರವಶತೆ, ಸಂಕಟ, ಅಸಂತೋಷ, ಆತಂಕ, ದುಗುಡ, ನಿರಾಶೆ-ಈ ಎಲ್ಲಾಾ ಸಂದರ್ಭಗಳಲ್ಲಿ ಮತ್ತು ನಾನಾ ಸನ್ನಿಿವೇಶಗಳಲ್ಲಿ ನಮ್ಮ ದೇಹದಲ್ಲಿ ರಾಸಾಯನಿಕ ಮಿಶ್ರಣ ನಾನಾ ಹಂತದಲ್ಲಿ, ನಾನಾ ರೀತಿಯಲ್ಲಿರುತ್ತದೆ. ಅಂದರೆ ಮನುಷ್ಯನ ಪ್ರತಿ ಅನುಭವವೂ ನಾನಾ ರೀತಿಯ ರಾಸಾಯನಿಕ ಮಿಶ್ರಣ. ಆಹಾರ ಪಧಾರ್ಥವನ್ನೇ ತೆಗೆದುಕೊಳ್ಳಿಿ. ಯಾವುದನ್ನು ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಇದರಲ್ಲಿ ಜಾಣ್ಮೆೆಯನ್ನು ಪ್ರಯೋಗಿಸಿದರೆ, 24ಗಂಟೆಗಳ ಕಾಲ ಲವಲವಿಕೆಯಿಂದ ಇರಬಹುದು.

ಎಲ್ಲವನ್ನು ಮನಸ್ಸು ನಿರ್ಧರಿಸುತ್ತದೆ. ಹಾಲು ಕುಡಿದು ಬದುಕಬೇಕೋ ಅಥವಾ ಅಲ್ಕೋೋಹಾಲ್ ಕುಡಿದು ಬದುಕಬೇಕೋ? ಹೆಚ್ಚುಕಾಲ ಸಂತೋಷದಿಂದ ಬದುಕಬೇಕೋ ಅಥವಾ ಹೆಚ್ಚುಕಾಲ ಅಸಂತೋಷದಿಂದ ಬದುಕಬೇಕೋ? ಇದು ಯಾರ ನಿರ್ಧಾರ? ನಮ್ಮ ನಿರ್ಧಾರ ಅಲ್ಲವೇ? ಸಂತೋಷ, ಅಸಂತೋಷದ ಸೃಷ್ಟಿಿ ನಮ್ಮಿಿಂದಲೇ ಅಲ್ಲವೇ? ಆದರೂ ಈ ಮನುಷ್ಯ ತನ್ನ ವಿಫಲತೆಗೆ ಬೇರೆಯವರನ್ನು ದ್ವೇಷಿಸುತ್ತಿಿದ್ದಾಾನೆ, ಇದು ಸರಿಯಲ್ಲ. ಯಶಸ್ಸು ಸಿಕ್ಕರೆ ಅದು ನನ್ನಿಿಂದಲೇ ಎನ್ನುತ್ತಾಾನೆ. ವಿಫಲನಾದರೆ ಅದು ಬೇರೆಯವರಿಂದ ಅನ್ನುತ್ತಾಾನೆ. ಎಲ್ಲದಕ್ಕೂ ಬೇರೆಯವರನ್ನು ದ್ವೇಷಿಸುವುದು ಮಹಾತಪ್ಪುು. ಇಂತಹ ನಿರ್ಧಾರಕ್ಕೆೆ ಬಂದರೆ ಆಧ್ಯಾಾತ್ಮದ ದಾರಿಯಲ್ಲಿದ್ದೇವೆ ಎಂದರ್ಥ.

ವಸ್ತುಗಳನ್ನು ಪ್ರೀತಿಸುತ್ತೇವೆ, ಹಾಗೆಯೇ ಈ ಮನುಷ್ಯ ಕೂಡಾ ಒಂದು ವಸ್ತುವೇ ಆಗಿದ್ದಾಾನೆ. ಆದರೆ ಈ ಮನುಷ್ಯ ಅತೀ ಮುಖ್ಯವಾದ ಮತ್ತು ಅತೀ ಮಹತ್ವವಾದ ವಸ್ತು ಎಂದರೆ ತಪ್ಪಾಾಗುವುದಿಲ್ಲ. ಇಂದು ನಮ್ಮನ್ನು ನಾವು ಕಾಳಜಿ ಮಾಡಿಕೊಳ್ಳುತ್ತಿಿಲ್ಲ. ಬದಲಾಗಿ ನಮ್ಮ ಹತ್ತಿಿರ ಇರುವ ವಸ್ತುಗಳ ಮೇಲೆ ಕಾಳಜಿ ಹೊಂದಿದ್ದೇವೆ. ಇದೇ ನಮ್ಮನ್ನು ನಿರಾಶೆಯಲ್ಲಿ ದೂಡುತ್ತವೆ.

ಇಂದು ಪ್ರಜಾಪ್ರಭುತ್ವ ಅಸ್ತಿಿತ್ವದಲ್ಲಿದೆ. ಮನುಷ್ಯನಿಗೆ ಎಷ್ಟೊೊಂದು ಸ್ವಾಾತಂತ್ರ್ಯ ಇದೆ. ಹಿಂದಿನ ಯಾವ ಶತಮಾನಗಳಲ್ಲಿ ಇಷ್ಟೊೊಂದು ಸವಲತ್ತುಗಳು ಈ ಮನುಷ್ಯನಿಗೆ ಇರಲಿಲ್ಲ. ಜತೆಗೆ ಇಷ್ಟೊೊಂದು ರೋಗಗಳೂ ಇರಲಿಲ್ಲ. ಒಂದು ಸಾಧನೆ ಆಗಬೇಕೆಂದರೆ ಎಲ್ಲಾಾ ರೀತಿಯ ವಿಚಾರಗಳನ್ನು ಎಲ್ಲಾಾ ರೀತಿಯ ಆಯಾಮಗಳಲ್ಲಿ ಅಳೆಯಬೇಕು. ಯಾವುದೇ ಗ್ಯಾಾಜೆಟ್ ಖರೀದಿ ಮಾಡಿದಾಗ ಅದರೊಂದಿಗೆ ಒಂದು ಕೈಪಿಡಿ ಕೊಡುತ್ತಾಾರೆ. ಅದು ಮುಖ್ಯವಲ್ಲವೇ? ಅದೇ ರೀತಿ ಈ ದೇಹದ ಆಕೃತಿಯ ಬಗ್ಗೆೆನೂ ಒಂದು ಕೈಪಿಡಿ ಇದೆ, ಅದನ್ನು ನಾವು ಅನುಸರಿಸುತ್ತಿಿಲ್ಲ.

ಆಧ್ಯಾಾತ್ಮದಲ್ಲಿ ಈ ದೇಹ ಪಂಚಮಹಾಭೂತಗಳ ಮಿಶ್ರಣ ಎಂದು ಹೇಳುತ್ತಾಾರೆ. ಅಂದರೆ ಅದು ನೀನಲ್ಲ. ನೋಡಿ ನಾವೆಲ್ಲ ಕೆಲವು ದಿನಗಳವರೆಗೆ ಈ ಭೂಮಿಯ ಮೇಲೆ ಇದ್ದು ಮತ್ತೆೆ ಈ ಭೂಮಿಯನ್ನು ಸೇರುವುದೇ ಆಗಿದೆ. ನಾವು ಈ ಭೂಮಿಯ ಭಾಗವಷ್ಟೇ, ಅದು ನಾವಲ್ಲ. ಈ ಭೂಮಿಯನ್ನು ಪ್ರೀತಿಸಿದರೆ ನಮ್ಮನ್ನು ನಾವು ಪ್ರೀತಿಸಿದಂತೆ.

ನೆನಪಿನ ಶಕ್ತಿಿ ಕಡಿಮೆ ಇದೆ ಎಂದು ಬಹುತೇಕರು ಹೇಳುತ್ತಾಾರೆ. ಅವರಿಗೆ ಒಂದು ಪ್ರಶ್ನೆೆ ಕೇಳುತ್ತೇನೆ, ನೀವು ಯಾರಿಗಾದರೂ ಸಾಲ ನೀಡಿದರೆ ಮರೆಯುತ್ತೀರಾ? ಇಲ್ಲವಲ್ಲ, ಅದೇಕೆ ನೆನಪು ಇದೆ? ಅಂದರೆ ಯಾವುದು ಮುಂದೆ ನಮ್ಮ ಸಂತೋಷಕ್ಕೆೆ ಮರಳಿ ಸಿಗುತ್ತದೆ, ಅದನ್ನು ನಾವು ಮರೆಯುವುದಿಲ್ಲ. ನಾವು ಪದೇಪದೆ ಯೋಚಿಸಿದರೆ ಅದು ತಾನಾಗಿಯೇ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಅಧ್ಯಯನ ಮಾಡುವಾಗ ಇದು ನನಗೆ ಮುಂದೆ ಅಗತ್ಯವಿದೆ, ಇದು ನನ್ನ ಜೀವನ ರೂಪಿಸುತ್ತದೆ, ಇದು ನನಗೆ ಅತೀ ಹೆಚ್ಚು ಅಂಕಗಳನ್ನು ಪಡೆಯಲು ಅನುವು ಮಾಡಿ ಕೊಡುತ್ತದೆ ಎಂದು ಆ ಸಮಯದಲ್ಲಿ ಯೋಚಿಸಿ ಅದನ್ನೇ ಪದೇಪದೆ ನೋಡಿದರೆ, ನೆನಪಿಸಿಕೊಂಡರೆ ಅದು ನಮ್ಮ ಮೆಮೊರಿ ಚಿಪ್‌ನಲ್ಲಿ ಸ್ಟೋೋರ್ ಆಗಿ ಬಿಡುತ್ತದೆ. ಹಲವರು ಹಾಗೆ ಮಾಡುವುದಿಲ್ಲ. ಅದೇ ಅವರ ದೌರ್ಬಲ್ಯ.

ಮನುಷ್ಯ ತಾನು ಬದುಕಲು ರಾಷ್ಟ್ರ, ಭಾಷೆ, ಧರ್ಮ, ಜಾತಿ, ಊರು ಸೃಷ್ಟಿಿ ಮಾಡಿಕೊಂಡಿದ್ದಾಾನೆ. ಇವೆಲ್ಲ ನಾವು ಸುಖದಿಂದ ಬದುಕಲು ನಾವೇ ನಿರ್ಮಿಸಿಕೊಂಡ ಆಯಾಮಗಳು. ಅವುಗಳನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡು ಬದುಕಿದರೆ ದುಃಖ ಪಡುವ ಅಗತ್ಯ ಇಲ್ಲ.

ಕಳೆದ 200 ವರ್ಷಗಳಲ್ಲಿ ವಿಜ್ಞಾಾನದ ಸಹಾಯದಿಂದ ಈ ಮನುಷ್ಯ ಒಳ್ಳೆೆಯವುಗಳ ಬದಲಾಗಿ ಕೆಟ್ಟವುಗಳನ್ನೇ ಹೆಚ್ಚಾಾಗಿ ನಿರ್ಮಿಸಿಕೊಂಡಿದ್ದಾಾನೆ. ಪ್ರತಿಯೊಂದು ದೇಶ ಏನು ಸಂಪಾದನೆ ಮಾಡುತ್ತಿಿದೆ. ಅದನ್ನು ಹೆಚ್ಚಾಾಗಿ ಮಿಲಿಟರಿಗೋಸ್ಕರ, ಯುದ್ಧ ಸಾಮಗ್ರಿಿಗಳಿಗೋಸ್ಕರ ಖರ್ಚು ಮಾಡುತ್ತಿಿದೆ. ಎರಡನೆಯದಾಗಿ ಔಷಧಗಳಿಗೋಸ್ಕರ ಖರ್ಚು ಮಾಡುತ್ತಿಿದೆ. ಮೂರನೇ ಸ್ಥಾಾನದಲ್ಲಿ ಆಹಾರ ಸೇವಿಸಲು ಖರ್ಚು ಮಾಡುತ್ತಿಿದೆೆ. ಅಂದರೆ ಜನ ನೀಡಿದ ತೆರಿಗೆ ಹಣ ಮಿಲಿಟರಿಗೆ ಹೆಚ್ಚಾಾಗಿ ಖರ್ಚು ಆಗುತ್ತಿಿದೆ.

ಸೃಷ್ಟಿಿ ನೀಡಿದ ನೀರು ಮತ್ತು ಗಿಡಮರಗಳು ಮನುಷ್ಯನ ಕಲ್ಯಾಾಣಕ್ಕಾಾಗಿ ಇವೆ. ಅವುಗಳನ್ನು ಸರ್ವನಾಶ ಮಾಡುತ್ತಿಿದ್ದೇವೆ ಅಂದರೆ ನಮ್ಮನ್ನು ನಾವೇ ಸರ್ವನಾಶ ಮಾಡಿಕೊಳ್ಳುತ್ತಿಿದ್ದೇವೆ. ಅವುಗಳ ರಕ್ಷಣೆಯೇ ನಮ್ಮ ರಕ್ಷಣೆ.

ಶತ-ಶತಮಾನಗಳಿಂದ ಮನುಷ್ಯ ಈ ಭೂಮಿಯ ಮೇಲೆ ಬದುಕುತ್ತಿಿದ್ದಾಾನೆ. ಅತ್ಯಂತ ಹೆಚ್ಚು ಸುಖದಿಂದ ಇರಲು ಅಗತ್ಯವಿರುವ ಸವಲತ್ತುಗಳು ಇಂದು ಸಿಗುತ್ತಿಿವೆ. ಇಷ್ಟಾಾಗಿಯೂ ಈ ಮನುಷ್ಯ ದುಃಖದಿಂದ ಇದ್ದಾಾನೆ. ಆತಂಕ, ಹೆದರಿಕೆ, ಅಸಂತೋಷ ಇವನನ್ನು ಕಾಡುತ್ತಿಿದೆ. ಅಂದು ಜನ ಸಂತೋಷದಿಂದ ಇರುತ್ತಿಿದ್ದರು ಮತ್ತು ಇದ್ದುದ್ದರಲ್ಲಿಯೇ ಬದುಕುತ್ತಿಿದ್ದರು. ಅಂದು ಸಂಪತ್ತು ಸಂಗ್ರಹಣೆಗೋಸ್ಕರ ಇಷ್ಟೊೊಂದು ಚಿಂತಿಸುತ್ತಿಿರಲಿಲ್ಲ. ಹೆಚ್ಚು ಸವಲತ್ತುಗಳೊಂದಿಗೆ ಹೆಚ್ಚು ಸಂತೋಷದಿಂದ ಇರಬೇಕೆಂದರೆ ನಮಗೆ ಉಳಿದಿರುವ ದಾರಿ ಒಂದೇ ಅದೇ ಧ್ಯಾಾನ-ಆಧ್ಯಾಾತ್ಮ. ಧ್ಯಾಾನ-ಆಧ್ಯಾಾತ್ಮದ ಅನುಕರಣೆಯಲ್ಲಿ ಬದುಕಿದರೆ ನಮ್ಮ ಬದುಕೇ ಒಂದು ಸ್ವರ್ಗ.ನಾವು ಸಾಗುತ್ತಿಿರುವುದು ಸಂತೋಷದಿಂದ ಅಸಂತೋಷದೆಡೆಗೆ, ಅದು ಆಗಬಾರದು. ಆಯ್ಕೆೆ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಎಲ್ಲವೂ ನಮ್ಮಿಿಂದಲೇ ಆಗುತ್ತಿಿದೆ. ನಮ್ಮ ಅಂತರಂಗ ಶುದ್ಧಿಿಯಾಗಬೇಕು. ಆಯ್ಕೆೆ ನಮ್ಮಿಿಂದಲೇ ಆಗಲಿ. ಆ ಆಯ್ಕೆೆ ಧ್ಯಾಾನ ಮತ್ತು ಆಧ್ಯಾಾತ್ಮ ಆಧಾರಿತವಾಗಿರಬೇಕು.

ಎಲ್ಲಿ ಹಸುರು ಜಾಸ್ತಿಿ ಇದೆ ಅಲ್ಲಿ ತಾಪಮಾನ ಕಡಿಮೆ ಇರುತ್ತದೆ. ಅಂತರ್ಜಲ ಹೆಚ್ಚು ಇರುತ್ತದೆ. ಪರಿಸರವನ್ನು ನಾಶ ಮಾಡಿ ತಾಪಮಾನವನ್ನು ಹೆಚ್ಚಿಿಸಿಕೊಳ್ಳುತ್ತಿಿದ್ದೇವೆ. ಜತೆಗೆ ಅಂತರ್‌ಜಲ ಕಡಿಮೆಯಾಗಿ ಹಲವು ರೋಗಗಳಿಗೆ ತುತ್ತಾಾಗುತ್ತಿಿದ್ದೇವೆ. ಏನೇನು ಮಾಡಿದರೆ ಕ್ಯಾಾನ್ಸರ್ ಅಥವಾ ಹಲವು ರೋಗಗಳಿಗೆ ತುತ್ತಾಾಗಬೇಕಾಗುತ್ತದೆ ಎಂಬ ಮಾಹಿತಿ ಎಲ್ಲೆೆಡೆಯೂ ಸಿಗುತ್ತದೆ. ಆದರೆ, ಏನೂ ಉಪಯೋಗವಿಲ್ಲ. ಯಾರಿಗೂ ಆ ಕಡೆ ಧ್ಯಾಾಸವಿಲ್ಲ. ಆ ಕ್ಷಣ ಆಕಾಶದಲ್ಲಿ ತೇಲಾಡಲು ಮನುಷ್ಯ ತನ್ನನ್ನು ತಾನೇ ಸರ್ವ ನಾಶ ಮಾಡಿಕೊಳ್ಳುತ್ತಿಿದ್ದಾಾನೆ.

ಒಂದು ದಿನ ಒಬ್ಬ ರಾಜ ಒಬ್ಬ ಸಂತನನ್ನು ಭೇಟಿ ಆಗುತ್ತಾಾನೆ. ಅವರಿಬ್ಬರ ಮಧ್ಯ ಚರ್ಚೆ ಆರಂಭವಾಗುತ್ತದೆ. ರಾಜ ಕೇಳುತ್ತಾಾನೆ, ಜ್ಞಾಾನಿಗಳೇ ನಾನು ಯಾರು ಅಂತಾ ನಿಮಗೆ ಗೊತ್ತೇ? ಸಂತ ಹೇಳುತ್ತಾಾನೆ, ‘ಕ್ಷಮಿಸಿ ನನಗೆ ಗೊತ್ತಿಿಲ್ಲ’. ರಾಜ ಹೇಳುತ್ತಾಾನೆ, ‘ನಾನು ಈ ದೇಶದ ರಾಜ’. ಇದನ್ನು ಕೇಳಿದ ಸಂತ ರಾಜನಿಗೆ ಕೇಳುತ್ತಾಾನೆ ‘ಮಾನ್ಯರೆ, ಎಷ್ಟು ವರ್ಷಗಳಿಂದ ನೀವು ಈ ದೇಶದ ರಾಜರಾಗಿದ್ದೀರಿ?’ ರಾಜ ಹೇಳುತ್ತಾಾನೆ, ‘ಕಳೆದ 20 ವರ್ಷಗಳಿಂದ ನಾನೇ ರಾಜನಾಗಿದ್ದೇನೆ’ ಆ ಸಂತ ಮತ್ತೆೆ ಕೇಳುತ್ತಾಾನೆ, ‘ನೀವು 20 ವರ್ಷಗಳ ಹಿಂದೆ ರಾಜರಾಗಿರಲಿಲ್ಲ ಅಲ್ಲವೇ?’ ಅದಕ್ಕೆೆ ರಾಜ ಹೌದು ಎನ್ನುತ್ತಾಾನೆ. ಸಂತ ಮುಂದುವರೆದು ಮತ್ತೆೆ ಕೇಳುತ್ತಾಾನೆ ‘ಮುಂದಿನ ದಿನಗಳಲ್ಲಿ ಯಾವುದೋ ದೇಶದ ರಾಜ ನಿಮ್ಮ ಮೇಲೆ ಆಕ್ರಮಣ ಮಾಡಿ ನಿಮ್ಮನ್ನು ಸೋಲಿಸಿ ಈ ದೇಶವನ್ನು ಆಕ್ರಮಿಸಿಕೊಂಡರೆ ನೀವು ಮುಂದೆ ರಾಜನಾಗಿರುವುದಿಲ್ಲ, ಇದು ಸರೀನಾ?’ ‘ಹೌದು ಜ್ಞಾಾನಿಗಳೇ’ ಎಂದು ರಾಜ ಹೇಳುತ್ತಾಾನೆ. ‘

ಅಂದರೆ ನಿಜವಾದ ಅರ್ಥದಲ್ಲಿ ನೀವು ರಾಜ ಅನ್ನುವುದು ಸುಳ್ಳು ಮತ್ತು ಭ್ರಮೆ ಅಲ್ಲವೇ?’ ಸಂತ ಕೇಳುತ್ತಾಾನೆ. ಇದನ್ನು ಕೇಳಿ ಗಾಳಿ ತುಂಬಿದ ಬಲೂನಿಗೆ ಸೂಜಿಯಿಂದ ಪಂಚರ್ ಮಾಡಿದ ಹಾಗೆ ಆಗುತ್ತದೆ, ಆ ಕ್ಷಣ ರಾಜನಿಗೆ ಅನಿಸುತ್ತದೆ ‘ನನ್ನಲ್ಲಿ ವಿಶೇಷತೆ ಏನೂ ಇಲ್ಲ, ನಾನೂ ಮನುಷ್ಯನೇ. ಜ್ಞಾಾನಿಯ ಜ್ಞಾಾನದ ಅಮೃತ ರಾಜನ ಗರ್ವವನ್ನು ಕಡಿಮೆ ಮಾಡುತ್ತದೆ. ನಾನು ಇಂದು ರಾಜನಾಗಿದ್ದೇನೆ ಅಷ್ಟೇ, ನಾಳೆ ಇರುವುದಿಲ್ಲ ಎನ್ನುವ ಜ್ಞಾಾನ ಬಂದರೆ ಗರ್ವ ಬರುವುದಿಲ್ಲ. ಎಲ್ಲರ ಹಾಗೇ ನಾನೂ ಮನುಷ್ಯನೆ, ಭಿನ್ನತೆ ಹುಡುಕುವುದು ಬೇಡ, ಈ ಭಾವನೆ ಎಲ್ಲರಲ್ಲಿ ಬರಲಿ. ಸಂತರು ಅವರ ಕಾರ್ಯ ಮಾಡುತ್ತಿಿದ್ದಾಾರೆ. ರಾಜನು ಅವನ ಕಾರ್ಯ ಮಾಡುತ್ತಿಿದ್ದೇನೆ.

ಹೆಚ್ಚು ಸವಲತ್ತುಗಳೊಂದಿಗೆ ಹೆಚ್ಚು ಸಂತೋಷದಿಂದ ಇರಬೇಕೆಂದರೆ ನಮಗೆ ಉಳಿದಿರುವ ದಾರಿ ಒಂದೇ ಧ್ಯಾಾನ-ಆಧ್ಯಾಾತ್ಮ. ಅದರ ಅನುಕರಣೆಯಲ್ಲಿ ಬದುಕಿದರೆ ನಮ್ಮ ಬದುಕೇ ಒಂದು ಸ್ವರ್ಗ.

ಈ ಭೂಮಿಯ ಮೇಲೆ ಅವರವರ ಕರ್ತವ್ಯ ನಿಭಾಯಿಸಲು ಅವರವರು ಬಂದಿದ್ದಾಾರೆ. ಶಾಶ್ವತ ಏನೂ ಇಲ್ಲ, ಈ ಭೂಮಿ, ನೀರು, ಪರಿಸರ ಇವು ಶಾಶ್ವತ, ನಾವಲ್ಲ! ಹೀಗೆ ಅರಿತುಕೊಂಡರೆ ನಾವು ಜ್ಞಾಾನಿಗಳಾಗಲು ಸಾಧ್ಯ. ಇದರಿಂದ ನಾವೂ ಸಂತೋಷದಿಂದ ಇರುವುದಲ್ಲದೆ ನಮ್ಮ ವಾರಸುದಾರರೂ ಸಂತೋಷದಿಂದ ಇರುತ್ತಾಾರೆ. ನಮ್ಮ ಆಯ್ಕೆೆ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ.