Sunday, 15th December 2024

ಈ ಪರಿಸ್ಥಿತಿಯಲ್ಲಿ ಮೇಲುಗೈ ಸಾಧನೆ

#corona

ಪ್ರಚಲಿತ

ಸದ್ಗುರು

ಕರೋನಾ ವೈರಸ್ ನಮ್ಮ ಅಸ್ತಿತ್ವದ ಕ್ರಿಯಾಶೀಲತೆಯನ್ನೇ ನಾನಾ ರೀತಿಯಲ್ಲಿ ಬದಲಾಯಿಸಿಬಿಟ್ಟಿದೆ. ಮಾನವ ಜನಾಂಗ ಇದರ ಅಟ್ಟಹಾಸದಿಂದ ತತ್ತರಿಸಿ ಹೋಗಿದೆ. ಈ ವೈರಸ್ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ, ಬಹಳಷ್ಟು ಜನರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡಿದೆ, ವಿವಿಧ ಹಂತಗಳಲ್ಲಿ ಕಷ್ಟಕ್ಕೀಡು ಮಾಡಿದೆ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಬೇಕೆಂದರೆ, ನಾವು ಆತಂಕ, ಹತಾಶೆ ಅಥವಾ ಭಯ ಪಡಬಾರದು.

ಇವೆ ನಮ್ಮನ್ನು ದುರ್ಬಲಗೊಳಿಸುತ್ತದೆ. ನಾವೀಗ ಸಂಕಷ್ಟದಲ್ಲಿ ಇರುವುದಂತೂ ಖಂಡಿತ ವಾಗಿಯೂ ನಿಜ. ಆದರೆ, ನಾವು ಯೋಚಿಸುತ್ತ, ಗಾಬರಿಯಿಂದ ಕಂಗಾಲಾಗುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಯಾವಾಗ ನಾವೆಂದುಕೊಂಡ
ರೀತಿಯಲ್ಲಿ ಏನೂ ಆಗುವುದಿಲ್ಲವೋ, ಆಗಲೇ ನಮ್ಮ ಸಂಪೂರ್ಣ ಸಾಮರ್ಥ್ಯದ ಬಳಕೆಯಾಗಬೇಕು. ನಾವು ಕಂಗಾಲಾದರೆ, ನಮ್ಮ ಚಟುವಟಿಕೆ ಕುಂಠಿತವಾಗುತ್ತದೆ.

ನಾವು ಉತ್ಸಾಹದಿಂದ, ಉಲ್ಲಾಸದಿಂದ ಮತ್ತು ಆನಂದದಿಂದ ಇದ್ದರೆ, ನಮ್ಮ ಪ್ರತಿರೋಧಕ ವ್ಯವಸ್ಥೆಯೂ, ಯಾವಾಗಲೂ ಆತಂಕ, ಭಯಗಳಿಂದ ಇರುವವರಿಗಿಂತ ಹೆಚ್ಚು ಉತ್ತಮವಾಗಿರುತ್ತದೆ ಎಂಬುದರ ಬಗ್ಗೆ ಗಣನೀಯವಾದ ಮಾಹಿತಿಗಳು
ಲಭ್ಯವಿದೆ. ಸದ್ಯಕ್ಕೆ, ನಮ್ಮ ಶಕ್ತಿ-ಸಾಮರ್ಥ್ಯಗಳು ಉತ್ತಮ ಹಂತದಲ್ಲಿದ್ದು, ನಮ್ಮ ದೇಹ ಮತ್ತು ಮನಸ್ಸುಗಳು ಅಗತ್ಯ ರೀತಿಯಲ್ಲಿ ಸ್ಪಂದಿಸಿದರೆ ಸಾಕು. ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಬೇಕಾದ ಸಮಯ ನಮ್ಮ ಬುದ್ಧಿವಂತಿಕೆ ಮತ್ತು ಪುಟಿದೇಳುವ ಚೈತನ್ಯ
ಈಗ ಮುಂಚೂಣಿಯಲ್ಲಿರಬೇಕು.

ಜನರನ್ನು ಕಾಪಾಡಲು ಮತ್ತು ಸಾವಿನ ಸಂಖ್ಯೆಯನ್ನು ಇಳಿಮುಖಗೊಳಿಸಲು, ನಮ್ಮ ಪ್ರಜ್ಞಾಪೂರ್ವಕ ಕಾರ್ಯಾಚರಣೆ ಈಗ ಬಹಳ ಮುಖ್ಯವಾಗಿದೆ. ನಾವು ಬಲವಂತದಿಂದಲ್ಲದೆ ಪ್ರಜ್ಞೆಯಿಂದ ಎದುರಿಸಿದರೆ, ಈಗಿನ ಪರಿಸ್ಥಿತಿಯನ್ನು ಇನ್ನೂ ಉತ್ತಮವಾಗಿ
ನಿರ್ವಹಿಸಬಹುದು. ವೈರಸ್ ಇರಲಿ ಇಲ್ಲದಿರಲಿ, ನಿರ್ಬಂಧಗಳು ನಮ್ಮನ್ನು ಬಾಹ್ಯ ಚಟುವಟಿಕೆ ಗಳಿಗೆ ತಲೆಬಾಗುವಂತೆ ಮಾಡು ತ್ತದೆ. ಮುಖ್ಯವಾಗಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುವಾಗ ಹತಾಶರಾಗಿ, ನಾವೇ ಸಮಸ್ಯೆಯಾಗಬಾರದು, ಆದರೆ ಪ್ರಜ್ಞಾ ಪೂರ್ವಕರಾಗಿ ನಾವು ಆ ಸಮಸ್ಯೆಯ ಪರಿಹಾರದ ಒಂದು ಭಾಗವಾಗಬೇಕು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಅನಾವಶ್ಯಕವಾಗಿ ಹೊರಗಡೆ ತಿರುಗಾಡದಿರುವುದು – ಇಂತಹ ಮೂಲ ಶಿಸ್ತುಗಳನ್ನು ಅತ್ಯಾವಶ್ಯವಾಗಿ ಪಾಲಿಸಬೇಕು. ಈಗ ವ್ಯಾಕ್ಸಿನ್‌ಗಳು ಲಭ್ಯವಾಗಿದೆ, ಅದೃಷ್ಟವೆಂದರೆ,
ಭಾರತದ ತಯಾರಾದ ವ್ಯಾಕ್ಸಿನ್‌ಗಳು- ಎಲ್ಲರೂ ವಯೋಮಾನಕ್ಕೆ ಅನುಸಾರವಾಗಿ ತಮ್ಮ ಸರದಿ ಬಂದಾಗ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಕೆಲವರು ವ್ಯಾಕ್ಸಿನ್ ವಿರೋಧಿಗಳಾಗಿದ್ದರೆ.

ಅಂತಹವರಿಗೆ ನನ್ನದೊಂದು ಸರಳ ಪ್ರಶ್ನೆ: ‘ಮಗುವಾಗಿದ್ದಾಗ ನಿಮಗೆ ವ್ಯಾಕ್ಸಿನ್ ಕೊಡಿಸದಿದ್ದರೆ, ಇಂದು ನೀವು ಬದುಕಿರು ತ್ತಿದ್ದಿರೇ ? ನಮ್ಮಲ್ಲಿ ಎಷ್ಟು ಜನ ನಮ್ಮ ಕಾಲ ಮೇಲೆ ನಾವು ನಿಲ್ಲಲು ಸಾಧ್ಯವಾಗುತ್ತಿತ್ತು?’ ಆಧುನಿಕ ವೈದ್ಯಕೀಯ ಹಲವಾರು ರೀತಿಯಲ್ಲಿ ವರದಾನ ವಾಗಿದೆ. ಇದೇನು ನಮ್ಮ ಆರೋಗ್ಯದ ಪ್ರತಿಯೊಂದು ಅಂಶಕ್ಕೂ ಉತ್ತರವಲ್ಲ, ಆದರೆ ಇದೊಂದು ದೊಡ್ಡ ವರದಾನವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ವ್ಯಾಕ್ಸಿನ್ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ವ್ಯಾಕ್ಸಿನ್ ಪಡೆದ ನಂತರವೂ ಮಾಸ್ಕ್ ಧರಿಸು ವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರೆಸಬೇಕು. ಈ ಪಿಡುಗು ಸಂಪೂರ್ಣವಾಗಿ ತೊಡೆದು ಹೋಗುವ ತನಕ ನಾವೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ಯೋಗಾಬ್ಯಾಸ, ಆಹಾರಗಳಿಂದ ನಿರೋಧಕ ಶಕ್ತಿ: ಹಲವಾರು ಅರೋಗ್ಯ ತಜ್ಞರು ಹೇಳುವ ಪ್ರಕಾರ, ನಾವು ಎಷ್ಟೇ, ಏನೇ ಮಾಡಿದರೂ ಸೋಂಕು ಯಾವುದೋ ಒಂದು ಸಮಯದಲ್ಲಿ ನಮ್ಮ ಶರೀರವನ್ನು ಸೇರುತ್ತದೆ. ಇಲ್ಲಿ ಪ್ರಶ್ನೆಯೆಂದರೆ, ನಾವು ಇದರಿಂದ ತೀವ್ರವಾದ ಲಕ್ಷಣಗಳಿಂದ ಹೊರಬರುತ್ತೇವೋ ಅಥವಾ ನಾವು ಲಕ್ಷಣ ರಹಿತರಾಗಿ ಬರುತ್ತೇವೆಯೋ ಎಂಬುದು. ಹೇಗೇ ಆದರೂ ನಾವು ಈ ಸೋಂಕಿನಿಂದ ಹೆಚ್ಚು ಅಪಾಯವಿಲ್ಲದೆ ಹೊರಬರಲು ನಮ್ಮ ಆಮ್ಲಜನಕದ ಮಟ್ಟ ಸಹಜವಾಗಿ ಉತ್ತಮ ವಾಗಿರಬೇಕು ಮತ್ತು ನಮ್ಮ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಬಹಳ ಮುಖ್ಯವಾಗುತ್ತದೆ. ಈಗ ಅತಿ ಮುಖ್ಯವಾಗಿ ರುವುದು, ನಾವು ಅನಾರೋಗ್ಯದಿಂದ ಆಸ್ಪತ್ರೆ ಸೇರದಂತೆ ಇರುವುದು. ನಮ್ಮಲ್ಲಿ ಕೆಲವು ಲಕ್ಷ ಜನರಾದರೂ ಆಸ್ಪತ್ರೆಗೆ ಅನಗತ್ಯ ವಾಗಿ ಹೋಗದೇ ಮನೆಯ ಆರೈಕೆ ಮಾಡಿಕೊಳ್ಳಲು ಸಾಧ್ಯವಾದರೆ, ಇದು ಕೇವಲ ನಮಗಷ್ಟೇ ಅಲ್ಲದೆ, ಇತರ ಲಕ್ಷಾಂತರ ಜನರ ಜೀವವನ್ನು ಉಳಿಸಲು ಸಹಾಯವಾಗುತ್ತದೆ.

ನಮ್ಮಿಂದ ಸಾಧ್ಯವಾಗುವುದನ್ನೆ ನಾವೀಗ ಮಾಡಬೇಕು. ಯೋಗ ಪದ್ಧತಿಯಲ್ಲಿ ಈ ವೈರಸ್‌ಗೆ ಪ್ರತಿರೋಧ ಹೆಚ್ಚಿಸುವ ಹಲವಾರು ವಿಧಾನಗಳಿವೆ. ಒಂದು ಸರಳವಾದ, ಆದರೆ ಪ್ರಬಲವಾದ ಪ್ರಕ್ರಿಯೆ ಎಂದರೆ, ಸಿಂಹ ಕ್ರಿಯಾ. ಇದನ್ನು ದಿನಕ್ಕೆ ಒಂದೆರಡು ಬಾರಿ
ಕೆಲವೇ ನಿಮಿಷಗಳು ಅಭ್ಯಾಸ ಮಾಡಿದರೂ ಅದು ನಮ್ಮ ಶ್ವಾಸಕೋಶದ ಸಾಮರ್ಥ್ಯ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸು ತ್ತದೆ. ರಕ್ತ ಚಲನೆಯಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಾಷ್ಟಾಂಗ ಒಂದು ಉತ್ತಮ ಅಭ್ಯಾಸ.

ಇದರ ವಿಶೇಷತೆಯೆಂದರೆ, ನಮ್ಮ ಶರೀರದ ಎಂಟು ಅಂಗಗಳು ನೆಲವನ್ನು ಸ್ಪರ್ಶಿಸುತ್ತದೆ, ಮತ್ತು ಅದೇ ಭಂಗಿಯಲ್ಲಿ ಸ್ವಲ್ಪ
ಸಮಯ ಇರುತ್ತೇವೆ. ಈ ಭಂಗಿಯಲ್ಲಿ ನಮ್ಮ ಸಂಪೂರ್ಣ ಶ್ವಾಸಕೋಶ ವ್ಯವಸ್ಥೆ ಒಂದು ವಿಶಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸು ತ್ತದೆ. ಈ ಅಭ್ಯಾಸಗಳು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ.

ನಾವು ಬೇರೆ ಹಲವು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಎದುರಿಸಿದಂತೆ ಇದನ್ನೂ ಸಮರ್ಥವಾಗಿ ನಿರ್ವಹಿಸಲು ಅಗತ್ಯ ವಿರುವ ಆಂಟಿಬಾಡಿ (ಪ್ರತಿಕಾಯಗಳು) ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆಯಲು, ನಾವು ಇನ್ನೂ ಹಲವು
ವಿಷಯಗಳನ್ನು ಅನುಸರಿಸಬೇಕು. ಕರೋನಾ ವೈರಸ್‌ಗೆ ಇದು ಚಿಕಿತ್ಸೆಯಲ್ಲ, ಆದರೆ ಇವುಗಳ ಅಭ್ಯಾಸದಿಂದ ಆರರಿಂದ ಎಂಟು ವಾರಗಳಲ್ಲಿ ನಮ್ಮ ಪ್ರತಿರೋಧಕ ವ್ಯವಸ್ಥೆಯನ್ನು ಕೆಲವು ಪ್ರತಿಶತವಾದರೂ ಹೆಚ್ಚಿಸಬಹುದು. ಒಂದು ಅತ್ಯಂತ ಸರಳ
ಅಭ್ಯಾಸವೆಂದರೆ, ಬಿಸಿ ನೀರಿಗೆ ಸ್ವಲ್ಪ ಜೇನುತುಪ್ಪ, ಚಿಟಿಕೆ ಅರಿಶಿಣ ಮತ್ತು ಸಾಧ್ಯವಾದರೆ, ಸ್ವಲ್ಪ ಪುದಿನ ಅಥವಾ ಕೊತ್ತಂಬರಿ ಯನ್ನೂ ಸೇರಿಸಿ ಕುಡಿಯುವುದು.

ಪ್ರತಿ ಮೂರು ಗಂಟೆಗೊಮ್ಮೆ ಇದನ್ನು ಕುಡಿಯುವುದರಿಂದ ಉಸಿರಾಟದ ಸೋಂಕು ಗಳನ್ನು ತಡೆಗಟ್ಟಬಹುದು. ಏಕೆಂದರೆ ಈ ಎಲ್ಲ ಸೋಂಕು ಗಳು ಶ್ವಾಸನಾಳಕ್ಕೆ ಹೋಗುವ ಮೊದಲು ಗಂಟಲಿನ ಮನೆ ಮಾಡುತ್ತವೆ. ಬೇವಿನೆಲೆ, ಬೆಟ್ಟದ ನೆಲ್ಲಿಕಾಯಿ,
ನಿಲವೇಂಬು ಕಷಾಯ, ಮತ್ತು ಸಾಂಪ್ರದಾಯಿಕ ಕೊಡುಗೆಗಳಾದ ಜೀವಲೇಹ್ಯಂ ಅಥವಾ ಚ್ಯವನಪ್ರಾಶ – ಇವುಗಳು ಕೂಡ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸವಾಲನ್ನು ಎದುರಿಸಿ ನಿಲ್ಲುವುದು: ಸವಾಲಿನ ಸಮಯಗಳು ಮಾನವರ ಉತ್ತಮ ಸಾಮರ್ಥ್ಯವನ್ನು ಹೊರ ತಂದಿದೆ. ಈ ವಿಶಿಷ್ಟತೆ ಸವಾಲುಗಳಿಂದ ಕುಗ್ಗಬಾರದು. ಮಾನವರಾದ ನಾವೇ ವೈರಸ್‌ನ ವಾಹಕಗಳು. ಹಾಗಾಗಿ ನಾವೇ ಅದರ ಹರಡುವಿಕೆ ಯನ್ನು ತಡೆಯಬೇಕು ಮತ್ತು ಅದರಿಂದ ಆಗುತ್ತಿರುವ ವ್ಯಾಪಕ ಹಾನಿಯನ್ನು ತಡೆಯಬೇಕು. ಈಗ ಒಬ್ಬರನೊಬ್ಬರು ದೂಷಿಸುವು ದನ್ನು ಬಿಟ್ಟು ನಾವೆ ಒಗ್ಗಟ್ಟಾಗಿ ನಿಂತು ನಮ್ಮ ಸಾಮರ್ಥ್ಯವನ್ನು ತೋರಿಸಬೇಕು. ನಾವೆಲ್ಲರೂ ಧೈರ್ಯದಿಂದ ಬದ್ಧರಾಗಿದ್ದು, ಪ್ರeಪೂರ್ವಕವಾಗಿ ಈ ಪರಿಸ್ಥಿತಿಯನ್ನು ಎದುರಿಸಿ, ಉತ್ತಮ ರೀತಿಯಿಂದ ನಮ್ಮ ಮನುಕುಲವನ್ನು ಬಲವಾಗಿರಿಸೋಣ.