Sunday, 24th November 2024

ನಮ್ಮ ಯಶಸ್ಸಿನ ಹಿಂದೆ ಯಾರೆಲ್ಲಾ ಇರುತ್ತಾರೆ!

ಜೀವನದಲ್ಲಿ ನಾವೆಷ್ಟೋೋ ಸಂಗತಿಗಳಿಗೆ, ಜನರಿಗೆ ಕೃತಜ್ಞರಾಗಿರಬೇಕಾಗುತ್ತದೆ. ಯಶಸ್ವಿ ಬದುಕನ್ನು ಕಟ್ಟಿಿಕೊಳ್ಳಲು ಬೇಕಾದುದೆಲ್ಲವನ್ನೂ ಜೀವನ ನಮಗೆ ಒದಗಿಸಿ ಕೊಡುತ್ತದೆ. ಹ್ಯಾಾಗ್ಯಾಾಗೋ ಬದುಕುವುದಾದರೆ ಬದುಕಿ ಬಿಡಬಹುದು. ಆದರೆ ಹೀಗೇ ಬದುಕಬೇಕೆಂದು ನಿರ್ಧರಿಸಿದರೆ ಸುಂದರ ಬದುಕನ್ನು ಕಟ್ಟಿಿಕೊಳ್ಳುವುದು ಕಷ್ಟವೇನಲ್ಲ. ಅದರ ಜತೆಗೆ ನಾವು ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಮುಖ್ಯ. ಸಂತೋಷದಿಂದಿರುವವರು ಮಾತ್ರ ಬದುಕಿನೆಡೆಗೆ ಕೃತಜ್ಞರಾಗಿರುತ್ತಾಾರೆ ಎಂಬ ಮಾತಿದೆ. ಆದರೆ ನಿಜಕ್ಕೂ ಹಾಗಲ್ಲ, ಯಾರು ಕೃತಜ್ಞರಾಗಿರುತ್ತಾಾರೋ ಅವರು ಸಂತಸ, ನೆಮ್ಮದಿಯಿಂದಿರುತ್ತಾಾರೆ.

ನಾನು ದೇಶ-ವಿದೇಶಗಳಲ್ಲಿ ಸಂಚರಿಸಿ ಪ್ರವಚನಗಳನ್ನು ನೀಡುತ್ತೇನೆ, ಲೇಖನ ಬರೆಯುತ್ತೇನೆ. ಬಹಳಷ್ಟು ಜನ ನನ್ನನ್ನು ಮೆಚ್ಚಿಿಕೊಂಡಿದ್ದಾಾರೆ. ನಾವು ಭೇಟಿಯಾದಾಗ ‘ಗುರುಗಳೆ ನಿಮ್ಮ ಭಾಷಣ ಚೆನ್ನಾಾಗಿತ್ತು’ ಎಂದೋ ಅಥವಾ ‘ಮೊನ್ನೆೆ ನೀವು ಚೆನ್ನಾಾಗಿ ಬರೆದಿದ್ದೀರಿ’ ಎಂದೋ ಹೊಗಳುತ್ತಾಾರೆ. ಆಗ ನಾನು ಅದನ್ನು ನಯವಾಗಿ ಒಪ್ಪಿಿಕೊಳ್ಳುತ್ತೇನೆ. ಯಾಕೆಂದರೆ ಭಾಷಣಕ್ಕಾಾಗಿ ನಾನು ಬಹಳಷ್ಟು ಮಾನಸಿಕ ಸಿದ್ಧತೆಗಳನ್ನು ಮಾಡಿರುತ್ತೇನೆ. ಹಾಗಾಗಿ ಅವರ ಪ್ರಶಂಸೆಗಳಿಗೆ ನಾನು ಅರ್ಹ. ಆದರೆ ಅದಕ್ಕೆೆ ನಾನೊಬ್ಬನೇ ಕಾರಣನಲ್ಲ! ಆ ಯಶಸ್ಸಿಿಗೆ ‘ನಾನು’ ಪ್ರಥಮ ಕಾರಣನಿರಬಹುದು ಆದರೆ ನಾನೇ ಅದಕ್ಕೆೆ ಅಂತಿಮವಲ್ಲ. ನನ್ನಲ್ಲಿ ಸೇವಾ ಮನೋಭಾವವನ್ನು ಬೆಳೆಸಿದ ತಂದೆ-ತಾಯಿಗೂ ಆ ಯಶದಲ್ಲಿ ಪಾಲಿದೆ. ಇನ್ನು ಶಾಲೆಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರನ್ನು ಮರೆಯಲಾದೀತೆ? ಈಗಲೂ ನನಗೆ ಶ್ರೀಮತಿ ರಾಘವನ್, ಮಿಸ್ ವಿಜಯಲಕ್ಷ್ಮಿಿ, ಶ್ರೀಮತಿ ಪ್ರಿಿಯಾ ಮೊದಲಿಯಾರ್ ಮುಂತಾದ ಶಿಕ್ಷಕರು ಹೇಳಿಕೊಡುತ್ತಿಿದ್ದ ಪಾಠಗಳು ನೆನಪಿನಲ್ಲಿವೆ. ನಾನು ಇವತ್ತು ವೇದಿಕೆಯಲ್ಲಿ ನಿಂತು ಮಾತಾಡುತ್ತೇನೆ, ಬರೆಯುತ್ತೇನೆಂದರೆ ಅವರೇ ಅದಕ್ಕೆೆ ಕಾರಣರು.

ಇನ್ನು ಎಂಜಿನಿಯರಿಂಗ್ ಓದಿ ಯಾವುದೋ ಕಂಪನಿ ಯಲ್ಲಿ ಕಂಪ್ಯೂೂಟರ್ ಮುಂದೆ ಕುಳಿತಿರಬೇಕಾಗಿದ್ದ ನನ್ನನ್ನು ಕೃಷ್ಣ ಮಾರ್ಗದಲ್ಲಿ ನಡೆಸಿದ ಗುರುಗಳನ್ನು ನೆನಪಿಸಿಕೊಳ್ಳಲೇಬೇಕು. ಎಚ್‌ಪಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದವನು ಈಗ ನಿಮಗೆ ಜೀವನ ಮೌಲ್ಯಗಳ ಪಾಠ ಮಾಡುತ್ತಿಿದ್ದೇನೆಂದರೆ, ನನ್ನಲ್ಲಿ ಅಧ್ಯಾಾತ್ಮದ ಹಸಿವು ಮೂಡಿಸಿದ, ಭಗವದ್ಗೀತೆಯ ಬಗ್ಗೆೆ, ಪುರಾಣಗಳ ಬಗ್ಗೆೆ ಪುಸ್ತಕಗಳನ್ನು ಬರೆದ ಶೀಲಾ ಪ್ರಭುಪಾದರೇ ಕಾರಣ. ಇನ್ನು ನನ್ನ ಪ್ರವಚನ ಕೇಳುವವರು ಮತ್ತು ಅದಕ್ಕೆೆ ಅವಕಾಶ ಮಾಡಿಕೊಡುವವರಿಲ್ಲದೆ ನಾನಾದರೂ ಏನು ಮಾಡಲು ಸಾಧ್ಯ? ನಾನು ಪರಿಶ್ರಮ ಹಾಕಿ ಪ್ರವಚನ ನೀಡುತ್ತೇನೆ, ಅದಕ್ಕಾಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತೇನೆ ನಿಜ. ಆದರೆ ನನ್ನ ಯಶಸ್ಸಿಿಗೆ ಇವರೆಲ್ಲರೂ ಕಾರಣರು ಮತ್ತು ಇವರೇ ಕಾರಣರು!

ನಾನು ಈಗ ಏನಾಗಿದ್ದೇನೋ ಅದಕ್ಕೆೆ ನಾನೊಬ್ಬನೇ ಕಾರಣನಲ್ಲ. ನೀವು ಈಗ ಏನಾಗಿದ್ದೀರೋ ಅದಕ್ಕೂ ನೀವೊಬ್ಬರೇ ಕಾರಣರಲ್ಲ. ನಿಮ್ಮ ಯಶಸ್ಸಿಿನ ಹಿಂದೆ ನೂರಾರು ಜನಗಳ ಪರಿಶ್ರಮವಿದೆ ಹಾಗೆಯೇ ನಿಮ್ಮ ಯಶಸ್ಸಿಿನಲ್ಲಿ ಅವರೆಲ್ಲರಿಗೂ ಪಾಲಿದೆ. ನಿಮಗಾಗಿ ಅವರೆಲ್ಲ ಸಾಕಷ್ಟು ತ್ಯಾಾಗಗಳನ್ನು ಮಾಡಿರುವಾಗ ಅದಕ್ಕೆೆ ನೀವು ನ್ಯಾಾಯ ಒದಗಿಸಿಕೊಡಲೇಬೇಕು. live your life  in such a way you are worthy for all the sacrifices made for you 

ಇನ್ನು ನನ್ನ ಯಶಸ್ಸಿಿಗೆ ಅಂತಿಮ ಕಾರಣಿಕರ್ತ ಶ್ರೀಕೃಷ್ಣ ಪರಮಾತ್ಮನೆಂದೇ ನಾನು ನಂಬುತ್ತೇನೆ. ನಾನು ಹಲವಾರು ಕಡೆ ಪ್ರವಚನಗಳನ್ನು ನೀಡಿದ್ದೇನೆ. ಚೆನ್ನಾಾಗಿ ಮಾತನಾಡಬೇಕೆಂದು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇನೆ. ಮಾತನಾಡಲು ಬಹಳ ವಿಷಯವಿರುವಾಗ ಯಾವುದನ್ನೂ ಮರೆಯಬಾರದೆಂದು ಎಲ್ಲವನ್ನೂ ನೋಟ್ ಮಾಡಿಟ್ಟುಕೊಳ್ಳುವುದು ನನ್ನ ಅಭ್ಯಾಾಸ. ಆದರೂ ಕೆಲವೊಮ್ಮೆೆ ನಾನಂದುಕೊಂಡಷ್ಟು ಚೆನ್ನಾಾಗಿ ಮಾತನಾಡಲು ಆಗುವುದಿಲ್ಲ. ಆದರೆ ಒಂದು ಪ್ರವಚನ ಕಾರ್ಯಕ್ರಮದಲ್ಲಿ ಮುಖಭಂಗವಾಗಿದ್ದನ್ನು ಮರೆಯಲು ನನಗೆ ಸಾಧ್ಯವೇ ಇಲ್ಲ.

ನಾನು ಓದಿದ ವಿಶ್ವವಿದ್ಯಾಾಲಯದ ಹಳೆ ವಿದ್ಯಾಾರ್ಥಿಗಳ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಪ್ರವಚನ ನೀಡಲು ಬನ್ನಿಿ ಎಂದು ನನಗೂ ಆಹ್ವಾಾನ ನೀಡಿದ್ದರು. ಆ ಸಮಾರಂಭದಲ್ಲಿ ನನ್ನದೇ ಸ್ನೇಹಿತರು, ಬ್ಯಾಾಚ್‌ಮೇಟ್‌ಗಳು ಇದ್ದರು. ಅವರಲ್ಲೊೊಬ್ಬ ನನ್ನಂತೆಯೇ ಹರಿಕೃಷ್ಣ ಭಕ್ತ. ಆತನೂ ಕೂಡ ಆ ವಿಶ್ವವಿದ್ಯಾಾಲಯದ ಹಳೆಯ ವಿದ್ಯಾಾರ್ಥಿ. ಆತ ಒಮ್ಮೆೆ ನನ್ನ ಬಳಿ ಬಂದು ‘ನನಗೆ ನಿನ್ನ ಪ್ರವಚನಗಳನ್ನು ಕೇಳುವುದೆಂದರೆ ಆಗುವುದಿಲ್ಲ. ತಲೆನೋವು ಬರುತ್ತದೆ’ ಎಂದು ಹೇಳಿದ್ದ. ಆ ಮಾತನ್ನು ನಾನು ಮರೆತಿರಲಿಲ್ಲ. ಅವತ್ತು ಅವನೂ ಕೂಡ ಸಮಾರಂಭದಲ್ಲಿದ್ದುದರಿಂದ ನನಗೆ ಮಾತನಾಡಲು ಆಗಲೇ ಇಲ್ಲ. ನಾನು ಮಾಡಿಕೊಂಡಿದ್ದ ಸಿದ್ಧತೆಗಳೆಲ್ಲವೂ ವ್ಯರ್ಥವಾದವು. ಯಾಕೆಂದರೆ ಅಂದು ನನ್ನ ಹೃದಯದಲ್ಲಿದ್ದ ಪರಮಾತ್ಮ ನನ್ನ ಕೈ ಹಿಡಿಯಲಿಲ್ಲ. ನನ್ನ ಪರಿಶ್ರಮ, ನನ್ನ ಹಿತೈಷಿಗಳ ತ್ಯಾಾಗಗಳಾವುವೂ ಅಂದು ನನಗೆ ಯಶಸ್ಸು ಕೊಡಲಿಲ್ಲ. ಅದಕ್ಕೇ ಹೇಳುವುದು ನಿಮ್ಮ ಯಶಸ್ಸಿಿನ ಅಂತಿಮ ಕಾರಣಿಕರ್ತ ಭಗವಂತನೆಂದು. ಅವನ ಕೃಪೆಯಿರದೆ ಏನೂ ನಡೆಯದು. ದಕ್ಕಿಿದ ಯಶಸ್ಸಿಿನಲ್ಲಿ ಇವರೆಲ್ಲರ ಶ್ರಮವಿದೆ ಎಂದು ಒಪ್ಪಿಿಕೊಳ್ಳುವ ಪ್ರಾಾಮಾಣಿಕತೆ ನಮಗಿರಬೇಕು.

ಎರಡನೆಯದಾಗಿ ಕೃತಜ್ಞತೆಯೆಂದರೆ ಜ್ಞಾಾಪಕ ಶಕ್ತಿಿ. ನಾನು ಹೇಳುತ್ತಿಿರುವ ಮೆಮೊರಿ ಪವರ್ ನೀವಂದುಕೊಂಡಂತೆ ಅಂಕಿ, ಸಂಖ್ಯೆೆಗಳನ್ನು ನೆನಪಿಟ್ಟುಕೊಳ್ಳುವ ಶಕ್ತಿಿಯಲ್ಲ. ಒಬ್ಬಾಾತ ನನ್ನ ಬಳಿ ಹೇಳುತ್ತಿಿದ್ದ, ‘ನಾನು ಎಲ್ಲವನ್ನೂ ಬೇಗ ಮರೆತು ಬಿಡುತ್ತೇನೆ. ಯಾವ ವಿಷಯವೂ ನೆನಪಲ್ಲಿ ಉಳಿಯುವುದೇ ಇಲ್ಲ’ ಎಂದು. ‘ಹೌದಾ, ಏನೇನೆಲ್ಲ ಮರೆಯುತ್ತೀರಿ?’ ಎಂದು ನಾನು ಕೇಳಿದೆ. ಅದಕ್ಕೆೆ ಆತ ‘ ಹೆಸರು, ಟೆಲಿಫೋನ್ ನಂಬರ್, ಮಾಡಬೇಕಾದ ಕೆಲಸಗಳೆಲ್ಲ ಮರೆತು ಹೋಗುತ್ತವೆ. ಕೆಲವೊಮ್ಮೆೆ ನಾನೇನನ್ನು ಮರೆತಿದ್ದೇನೆಂದೇ ನನಗೆ ನೆನಪಾಗುವುದಿಲ್ಲ. ಒಟ್ಟಿಿನಲ್ಲಿ ಎಲ್ಲವನ್ನೂ ಮರೆಯುತ್ತೇನೆ’ ಎಂದ!

ಇಂದಿನ ಜೀವನದಲ್ಲಿ ಮರೆಯುವುದು ಸಾಮಾನ್ಯ ಸಂಗತಿ. ಅಷ್ಟಕ್ಕೂ ಎಲ್ಲವನ್ನೂ ಯಾಕೆ ನೆನಪಿಟ್ಟುಕೊಳ್ಳಬೇಕು. ನಮ್ಮೆೆಲ್ಲರ ಬಳಿಯೂ 100, 120 ಜಿಬಿ ಸಾಮರ್ಥ್ಯದ ಮೊಬೈಲ್‌ಗಳಿವೆ. ಎಲ್ಲವನ್ನೂ ಅಲ್ಲಿಯೇ ಸ್ಟೋೋರ್ ಮಾಡಿಟ್ಟುಕೊಳ್ಳುತ್ತೇವೆ. ಅಬ್ಬಬ್ಬಾಾ ಆ ಮೊಬೈಲ್‌ಗಳಲ್ಲಿ ಏನೇನಿರುವುದಿಲ್ಲ. ಹಾಡು, ವಿಡಿಯೊ, ಫೋಟೊ, ಮುಖ್ಯವಾದ ಡೇಟ್‌ಗಳನ್ನೂ ಅದರಲ್ಲೇ ಸೇವ್ ಮಾಡಿಕೊಂಡ ಮೇಲೆ ನೆನಪಲ್ಲಿಟ್ಟುಕೊಳ್ಳುವ ಕಷ್ಟವೆಲ್ಲಿದೆ ಹೇಳಿ. ಆದರೆ ನಾನು ಹೇಳುತ್ತಿಿರುವುದು ಆ ಜ್ಞಾಾಪಕ ಶಕ್ತಿಿಯ ಬಗ್ಗೆೆ ಅಲ್ಲ. ಅಂಕಿ, ಸಂಖ್ಯೆೆಗಳನ್ನು ಮರೆಯುವುದು ಸಾಮಾನ್ಯ ಆದರೆ ನಿಮಗೆ ಒಳ್ಳೆೆಯದನ್ನು ಮಾಡಿದವರನ್ನು, ಜೀವನದ ಹಾದಿಯಲ್ಲಿ ಜತೆಯಾದವರನ್ನು, ಕಷ್ಟದಲ್ಲಿ ಕೈ ಹಿಡಿದವರನ್ನು ಮರೆಯುವುದಿದೆಯಲ್ಲ ಅದು ನಿಜಕ್ಕೂ ಅಪರಾಧ.

ನಾನು ಓದಿದ್ದು ಕ್ರಿಿಶ್ಚಿಿಯನ್ ಕಾನ್ವೆೆಂಟ್‌ನಲ್ಲಿ. ಆಗ ನಾವು ಪ್ರತಿದಿನ ಪ್ರಾಾರ್ಥನೆ ಸಮಯದಲ್ಲಿ ಒಂದು ಹಾಡನ್ನು ಹೇಳುತ್ತಿಿದ್ದೆೆವು. “count the many blessings and name them one by one it shall surprise you what the lord has done’. ಎಂಥ ಸಾಲುಗಳಿವು ನೋಡಿ! ನಿಮಗೆ ಸಿಕ್ಕಿಿರುವ ಎಲ್ಲ ಅವಕಾಶಗಳನ್ನು, ಹಾರೈಕೆಗಳನ್ನು, ಒಳ್ಳೆೆಯ ಸಂಗತಿಗಳನ್ನು ಪಟ್ಟಿಿ ಮಾಡುತ್ತಾಾ ಹೋದರೆ ನಿಜಕ್ಕೂ ದೇವರು ನಿಮಗಾಗಿ ಏನೇನೆಲ್ಲ ನೀಡಿದ್ದಾಾನೆ ಎಂದು ಆಶ್ಚರ್ಯವಾಗುತ್ತದೆ.

ಮೂರು ತಿಂಗಳ ಹಿಂದೆ ನನ್ನ ಬಳಿ 25 ವರ್ಷದ ಯುವಕನೊಬ್ಬ ಬಂದಿದ್ದ. ನನ್ನನ್ನು ನೋಡಿದವನೇ ಅಳಲು ಶುರು ಮಾಡಿದ. ಬೆಳೆದು ನಿಂತ ಯುವಕನೊಬ್ಬ ಹಾಗೆ ಅಸಹಾಯಕವಾಗಿ ಅಳುವುದನ್ನು ನೋಡಿ ಕಸಿವಿಸಿಯಾಯಿತು. ಏನಾಯ್ತೆೆಂದು ಸಮಾಧಾನದಿಂದ ಕೇಳಿದೆ. ಆತ ಹೇಳಿದ ‘ನನಗೆ ನಮ್ಮಮ್ಮನನ್ನು ಕ್ಷಮಿಸಲು ಆಗುತ್ತಿಿಲ್ಲ’ ಎಂದ. ‘ವಿಷಯ ಏನು?’ ಎಂದು ಕೇಳಿದೆ. ‘ಇವತ್ತು ನಮ್ಮಿಿಬ್ಬರ ಮಧ್ಯೆೆ ಜಗಳವಾಯಿತು. ಆಗ ಅವರು ಹೇಳಿದರು ‘25 ವರ್ಷದ ಹಿಂದೆ ನೀನು ಹೊಟ್ಟೆೆಯಲ್ಲಿದ್ದಾಾಗ ನಿನ್ನನ್ನು ತೆಗೆಸಲೆಂದು ಡಾಕ್ಟರ್ ಬಳಿ ಹೊರಟಿದ್ದೆೆ. ಛೆ! ಅವತ್ತು ನಾನು ಮನಸ್ಸು ಬದಲಾಯಿಸಬಾರದಿತ್ತು. ನಿನ್ನಂಥವನಿಗೆ ಜನ್ಮ ಕೊಟ್ಟು, ಬೆಳೆಸಿ ತಪ್ಪುು ಮಾಡಿದೆ’ ಎಂದು ಹೇಳಿದರು. ನನಗೆ ಅದನ್ನು ತಡೆದುಕೊಳ್ಳಲಾಗುತ್ತಿಿಲ್ಲ. ತಾಯಿಯಾದವಳು ಮಗುವನ್ನು ಕೊಲ್ಲುವ ನಿರ್ಧಾರ ತೆಗೆದುಕೊಳ್ಳಬಹುದೆ?’ ಎಂದು ಕೇಳಿದ.

ನಾನು ಕೇಳಿದೆ ‘ನಿನ್ನನ್ನು ತಾಯಿ ಹೇಗೆ ಸಾಕಿದರು?’. ‘ನನ್ನನ್ನು ಕಂಡರೆ ಅಮ್ಮನಿಗೆ ಜೀವ. ಒಂದು ದಿನವೂ ನನ್ನನ್ನು ಬಿಟ್ಟಿಿದ್ದವರಲ್ಲ. ಪ್ರತಿದಿನವೂ ಪ್ರೀತಿಯಿಂದ ನೋಡಿಕೊಳ್ಳುತ್ತಾಾರೆ’ ಎಂದ. ‘ಯಾವುದೋ ಸಂಕಷ್ಟದ ಸಮಯದಲ್ಲಿ ಆಕೆಯ ತಲೆಯಲ್ಲಿ ಮೂಡಿದ ಯೋಚನೆಗೆ ನೀನು ಅವರನ್ನು ದ್ವೇಷಿಸುವುದು ಸರಿಯೇ? ಹಾಗಾದರೆ ನಿನಗಾಗಿ ಆಕೆ ಮಾಡಿದ ತ್ಯಾಾಗಗಳಿಗೆ ಬೆಲೆಯೇ ಇಲ್ಲವೇ? 25 ವರ್ಷದ ಪ್ರೀತಿಯನ್ನು ಒಂದೇ ಕ್ಷಣದಲ್ಲಿ ಮರೆಯಬಹುದೆ?’ ಎಂದು ಕೇಳಿದೆ. ಈಗ ಆತ ತಾಯಿಯೊಂದಿಗೆ ಸಂತಸದಿಂದ ಇದ್ದಾಾನೆ.

ಇಂಗ್ಲಿಿಷ್‌ನಲ್ಲಿ ಒಂದು ಮಾತಿದೆ “God gives,gives and forgives but man gets, gets and forget . ಬದುಕಿನಲ್ಲಿ ಅವೆಷ್ಟೋೋ ಜನರಿಂದ ನಾವು ಸಹಾಯ, ಸ್ನೇಹ, ಪ್ರೀತಿ, ವಾತ್ಸಲ್ಯ ಪಡೆದುಕೊಂಡಿದ್ದೇವೆ. ಬಾಚಿ, ಬಾಚಿ ತೆಗೆದುಕೊಂಡ ಮೇಲೆ ಈಗ ನಾವು ಅವರಿಗೆ ಋಣಿಗಳಾಗುತ್ತೇವಲ್ಲವೆ? ಅವರೆಲ್ಲರಿಗೂ ಹೇಗೆ ಕೃತಜ್ಞತೆ ಹೇಳುವುದು? ಹೇಗೆ ನಮ್ಮ ಋಣದ ಭಾರ ಕಡಿಮೆ ಮಾಡಿಕೊಳ್ಳುವುದು? ಈಗಂತೂ ಸಹಾಯಕ್ಕೆೆ ಪ್ರತಿಯಾಗಿ ‘ಥ್ಯಾಾಂಕ್ಯೂ’ ಹೇಳಿದರೆ ಮುಗಿಯಿತು, ಲೆಕ್ಕ ಚುಕ್ತಾಾ ಎಂದು ಭಾವಿಸುತ್ತೇವೆ. ಆದರೆ ಥ್ಯಾಾಂಕ್ಯೂ ಎಂಬುದು ಹೇಳಿದಷ್ಟು ಸುಲಭವಲ್ಲ. ಥ್ಯಾಾಂಕ್ಯೂ ಎಂದು ಹೇಳುವಾಗ ಅದನ್ನು ಅರ್ಥೈಸಿಕೊಳ್ಳಬೇಕು ಮತ್ತು ಅದರಲ್ಲಿ ಜೀವಿಸಬೇಕು.

ನಾವು ಪಡೆದಿದ್ದನ್ನು ಬೇರೆಯವರಿಗೆ ಕೊಡೋಣ. ನೀಡಿದವರಿಗೇ ಅದನ್ನು ಹಿಂದಿರುಗಿಸಲಾಗುವುದಿಲ್ಲ ನಿಜ ಆದರೆ ಬೇರೆಯವರಿಗೆ ಸಹಾಯ ಮಾಡಬಹುದಲ್ಲ. ಭೂಮಿಯ ಮೇಲೆ ಬದುಕಿರುವ ನಾವೆಲ್ಲರೂ ಒಂದರ್ಥದಲ್ಲಿ ಋಣದ ಹಂಗಿನಲ್ಲಿದ್ದೇವೆ. ಒಬ್ಬರಿಂದ ಪಡೆದುಕೊಂಡಿದ್ದನ್ನು ಇನ್ನೊೊಬ್ಬರಿಗೆ ನೀಡಿ ಋಣಮುಕ್ತರಾಗಬೇಕಿದೆ. ಬದುಕೆಂದರೆ ಲಯವಾದ ಉಸಿರಾಟ ಕ್ರಿಿಯೆಯಿದ್ದಂತೆ. ಉಸಿರಾಡುವಾಗ ಗಾಳಿಯನ್ನು ಒಳಗೆಳೆದುಕೊಂಡು ಜಾಸ್ತಿಿ ಹೊತ್ತು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಅದನ್ನು ಹೊರಗೆ ಬಿಡಲೇಬೇಕು. ಹಾಗೆಯೇ ಪೂರ್ತಿ ಗಾಳಿಯನ್ನು ಹೊರಹಾಕಿಯೂ ಬದುಕಲಾಗದು. ಜೀವನವೆಂದರೆ ಇದೇ.Talking in and giving out is life!

ನಾವು ಬೇರೆಯವರಿಂದ ಪಡೆಯಲೇಬೇಕು. ಪಡೆಯದೆ ಕೊಡುವುದಾದರೂ ಹೇಗೆ? ನಿಮ್ಮಲ್ಲಿ ವಿಶ್ವಾಾಸವಿರದಿದ್ದರೆ ಬೇರೆಯವರಲ್ಲಿ ಹೇಗೆ ಭರವಸೆ ತುಂಬುವುದು? ಪ್ರೀತಿಸಲ್ಪಡದೆ ಪ್ರೀತಿಸಲು ಸಾಧ್ಯವೆ? ನಿಮ್ಮ ಬಳಿ ಏನೂ ಇಲ್ಲದಿದ್ದರೆ ಬೇರೆಯವರಿಗೆ ಏನು ಕೊಡುತ್ತೀರಿ? ಹಾಗಾಗಿ ಬೇರೆಯವರಿಂದ ಪಡೆದುಕೊಳ್ಳಿಿ, ಸಂಪಾದಿಸಿ, ಜೀವನದಲ್ಲಿ ಯಶಸ್ವಿಿಯಾಗಿ. ನಿಮ್ಮ ಸಮಯ, ಸಂಪತ್ತು, ಶಕ್ತಿಿಯನ್ನು ಇತರರ ಒಳಿತಿಗಾಗಿ ಬಳಸಿ. ಸೇವಾ ಮನೋಭಾವ ಬೆಳೆಸಿಕೊಳ್ಳಿಿ.