ಆದಿವಾಸಿ ಜನಾಂಗವನ್ನು ಮೂಸಿಯೂ ನೋಡದ ಕೋವಿಡ್
ಕಾಡು, ಮೇಡುಗಳಲ್ಲಿ ಅಲೆಯುವ ಜನಾಂಗಗಳು
ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ
ಕರೋನಾ ಇಡೀ ವಿಶ್ವದ ಜನತೆಯ ಧೈರ್ಯವನ್ನೇ ಉಡುಗಿಸಿದೆ. ಅದಕ್ಕೆ ಪರಿಹಾರವಾಗಿ ಲಸಿಕೆ ತೆಗೆದುಕೊಂಡರೂ ಹಲವರಲ್ಲಿ ಮತ್ತೆ ಕರೋನಾ ಕಾಣಿಸಿಕೊಂಡಿದೆ.
ದೇಶ, ಭಾಷೆ, ವರ್ಗಗಳ ನೋಡದ ಕರೋನಾ ಇನ್ನೂ ಆದಿ ವಾಸಿಗಳ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಎನ್ನುವುದೂ ಒಂದು
ಪ್ರಶ್ನೆಯಾದರೆ ಅವರಲ್ಲಿಯ ಅ ಅಂಥ ಶಕ್ತಿ ಎಂತದ್ದು ಎನ್ನುವುದೂ ಪ್ರಶ್ನೆಯೇ. ತೀರಾ ನಗರಕ್ಕೆ ಅಂಟಿಕೊಂಡಿರುವ ಕೆಲ ಜನರಲ್ಲಿ ಕರೋನಾ ಕಾಣಿಸಿಕೊಂಡರೂ ಅದರಿಂದ ಯಾರಿಗೂ ಮರಣ ಬಂದಿಲ್ಲ, ಸಾಮಾನ್ಯ ಥಂಡಿ, ಜ್ವರವಾಗಿ ಮುಗಿದಿದೆ.
ಪಶ್ಚಿಮ ಘಟ್ಟ ಪ್ರದೇಶಕ್ಕೊಳಪಟ್ಟ ಉತ್ತರಕನ್ನಡ ಜಿಲ್ಲೆ ಶೇ. 85 ಅರಣ್ಯ ಪ್ರದೇಶವನ್ನೊಳಗೊಂಡಿದೆ. ಇಲ್ಲಿ ಸಾಕಷ್ಟು ಹಿಂದುಳಿದ ಸಿದ್ದಿ, ಗೌಳಿ, ಮರಾಠಿ ಮುಂತಾದ ಅನೇಕ ಸಮುದಾಯದ ಜನ ವಾಸವಾಗಿದ್ದಾರೆ. ಕಾಡಂಚನ್ನೇ ತಮ್ಮ ಬದುಕಾಗಿಸಿ ಕೊಂಡ ಈ ಭಾಗದ ಜನರಿಗೆ ಪಟ್ಟಣದ, ನಗರದ ವ್ಯಾಮೋಹ, ದಾಹವಿಲ್ಲ.
ವಿದ್ಯಾವಂತರೂ ಹೌದು: ತಮ್ಮ ಪಾಡಿಗೆ ತಾವು ಅರಣ್ಯ ಬದಿಯಲ್ಲಿ ಜೀವನ ನಡೆಸಿಕೊಂಡು ಹೋಗುವವರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಿದ್ದಿ ಜನಾಂಗವಿರುವುದು ಯಲ್ಲಾಪುರ ತಾಲೂಕಿನಲ್ಲಿ. ಇವರು ಶ್ರಮಿಕ ಜೀವಿಗಳು. ಯಾವುದೇ ಆಡಂಬರದ ನಡುವೆ ನಿಲ್ಲರು. ಯಂತ್ರಗಳ ಸಹಾಯವಿಲ್ಲದೇ ಮನೆಯ ಒಳಗೂ ಮನೆಯ ಹೊರಗೂ ಕಾರ್ಯ ನಿರ್ವಹಿಸುವುದೇ ಹೆಚ್ಚು.
ಪ್ರಥಮ ಬಾರಿಗೆ ವಿಧಾನಪರಿಷತ್ ಮೆಟ್ಟಿಲೇರಿದವರೂ ಇದೇ ಯಲ್ಲಾಪುರ ತಾಲೂಕಿನ ಶಾಂತಾರಾಮ ಸಿದ್ದಿ, ಇವರ ದೂರದ ಕುಟುಂಬ ವರ್ಗದವರೂ ಕಾನೂನು ಅಭ್ಯಸಿಸಿದ್ದು, ಸಾಕಷ್ಟು ವಿದ್ಯಾವಂತರೂ ಸಮುದಾಯ ದಲ್ಲಿದ್ದಾರೆ. ಅವರಲ್ಲಿಯ ರೋಗ ನಿರೋಧಕ ಶಕ್ತಿ ಅಪಾರ. ತಾಲೂಕಿನ ಕಿರವತ್ತಿ ಭಾಗದ ಗೌಳಿ ಸಮುದಾಯ ದವರಂತೂ ಹಸು ಮೇಯಿಸಿಕೊಂಡು ಹಾಲು
ಮಾರಿ ಕೊಂಡು, ಇರುವ ಅಲ್ಪ ಸ್ವಲ್ಪ ಭೂಮಿಯಲ್ಲೇ ಹತ್ತಿ ಬೆಳೆದು, ಜೀವನ ಸಾಗಿಸುವವರೇ ಹೆಚ್ಚು.
ಇಲ್ಲಿದೆ ಕರೋನಾ
ಅವರಿಗೆ ಬೇಕಾಗುವ ತರಕಾರಿ, ಕಾಯಿ ಪಲ್ಯೆಗಳನ್ನೂ ಬೆಳೆದುಕೊಳ್ಳುತ್ತಾರೆ. ಇಲ್ಲಿನ ಪಾಣಿಗುಂಡಿಯಲ್ಲಿ 50 ರಷ್ಟು ಕುಟುಂಬ ಗಳು ವಾಸಿಸುತ್ತಿದ್ದು ಅಂದಾಜು 200ರಷ್ಟು ಜನಸಂಖ್ಯೆ ಇದೆ. ಇಲ್ಲಿ ಹೆಚ್ಚಾಗಿ ಗೌಳಿ ಸಮುದಾಯವಿದೆ. ಅಂತೆಯೇ ತೊಟ್ಟಿಲ ಗುಂಡಿಯಲ್ಲಿ 40 ಮನೆಗಳಿದ್ದು 150ರಷ್ಟು ಜನಸಂಖ್ಯೆ ಇದೆ. ತಾವರೆಕಟ್ಟಾ, ಗುಡಂದೂರಿನಲ್ಲಿ 30,45 ಮನೆಗಳಿದ್ದು, 270 ಜನ ವಾಸವಾಗಿದ್ದಾರೆ. ಇಲ್ಲಿ ಪರಿಶಿಷ್ಟ ಪಂಗಡದ ಸಿದ್ದಿ ಜನಾಂಗವಿದೆ. ಈ ಯಾವ ಭಾಗದಲ್ಲೂ ಕರೋನಾ ಸೋಂಕಿಲ್ಲ. ಇಂತ
ಹತ್ತಾರು ಹಳ್ಳಿಗಳು ಇವೆ.
ಇಲ್ಲಿಲ್ಲ ಕರೋನಾ!
ಅರಣ್ಯದ ನಡುವೆಯೇ ವಾಸವಾಗಿರುವ ಆದಿವಾಸಿ ಜನಾಂಗಕ್ಕೆ ಕರೋನಾ ಕಾಟವೇ ಇಲ್ಲ. ಇವರು ಎಲ್ಲರಂತೆಯೇ ಓಡಾಡಿ ಕೊಂಡು ಇರುವವರೇ ಆದರೂ ನಗರದ ಸಂಪರ್ಕದಿಂದ ಸ್ವಲ್ಪ ದೂರವೇ ಉಳಿಯುವವರಾಗಿದ್ದು, ಕಾಡು ಮೇಡುಗಳಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡವರು. ಆದ್ದರಿಂದ ಈ ಭಾಗದಲ್ಲೆಲ್ಲೂ ಕರೋನಾ ರೋಗ ಸೋಂಕಿಲ್ಲ. ಅವರೆಲ್ಲದರೂ ನೆಮ್ಮದಿಯ ಬದುಕು. ಲಾಕ್ ಡೌನ್ ಬಗ್ಗೆ ಅವರಿಗೆ ಅಸಮಾಧಾನವಿಲ್ಲ. ಇವರಲ್ಲಿ ಕೆಲವರೂ ಆಸ್ಪತ್ರೆಯನ್ನು ಕಂಡವರೇ ಅಲ್ಲ.
ಆಕ್ಸಿಜನ್ ಪ್ಲಾಂಟ್
ಆದಿವಾಸಿ ಜನರು ಇರುವುದೇ ಕಾಡಿನ ಮಧ್ಯೆ ಆದ್ದರಿಂದ ಅವರಿಗೆ ಆಕ್ಸಿಜನ್ ಕೊರತೆಯೇ ಆಗದು. ಅಲ್ಲದೇ ಅವರಿಗೆ ತುರ್ತು ಔಷಧವೆಂದರೆ ಕಾಡಲ್ಲಿ ಸಿಗುವ ಔಷಧವೇ ಆಗಿದೆ. ಯಾವುದೇ ಇಂಗ್ಲಿಷ್ ಔಷಧವಿಲ್ಲದೇ ಅವರ ಬಾಣಂತನ ಮುಗಿಯುತ್ತಿತ್ತಂತೆ. ಅಂತ ತಾಯಿಯ ಎದೆಹಾಲು ಕುಡಿದ ಮಕ್ಕಳಿಗೂ ಯಾವುದೇ ರೋಗ ಬಾಧಿಸದಂತೆ. ಅಲ್ಲದೇ ಇಂದಿಗೂ ಸಹ ಯಾವುದೇ ಸಿದ್ದಿ ಜನರು ಮಾರಣಾಂತಿಕ ರೋಗದಿಂದ ಮೃತಪಟ್ಟಿದ್ದು ತೀರಾ ಕಡಿಮೆ. ಕಾಡಿನಲ್ಲಿ ಸಿಗುವ ನಿರಮ್ಮುಳ ಆಕ್ಸಿಜನ್ ಅವರ ಬದುಕಿಗೆ ದಿನವೂ ಔಷಧವಾಗಿದೆ. ಒಂದೊಂದು ಮರದ ಗಾಳಿಯೂ ಒಂದೊಂದು ರೀತಿಯ ರೋಗವನ್ನು ಹೋಗಲಾಡಿಸಿರ ಬಹುದೇನೋ. ಒಟ್ಟಾರೆಯಾಗಿ ಈ ಕಾಡಿನ ಜನರ ನೆಮ್ಮದಿಯಂತೂ ಕರೋನಾ ಕೆಡಿಸಿಲ್ಲ ಎನ್ನುವುದೇ ಸಮಾಧಾನ.
***
ನಮ್ಮವರು ಸದಾಕಾಲ ಕಾಡು, ಮರದ ಜತೆಗೆ ಇರುತ್ತಾರೆ. ಹಾಗಾಗಿ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಅಲ್ಲದೇ ಅನವಶ್ಯಕ ಪಟ್ಟಣದತ್ತ ಮುಖ ಮಾಡುವುದಿಲ್ಲ. ವಿಶೇಷವಾಗಿ ನಮ್ಮಲ್ಲಿ ಕೆಂಪಿರುವೆ ತಿನ್ನುತ್ತಾರೆ. ಅದೇ ರೋಗ
ನಿರೋಧಕ ಶಕ್ತಿಗೆ ಮೂಲ ಕಾರಣ.
-ಶಾಂತಾರಾಮ ಸಿದ್ದಿ ವಿಪ ಸದಸ್ಯ