ರಾಜ್ಯ ಸರಕಾರ ಲಾಕ್ಡೌನ್ ಹೇರಿದ ನಂತರ ರಾಜ್ಯದಲ್ಲಿ ದಿನೇದಿನೆ ಪ್ರಕರಣಗಳು ಇಳಿಮುಖವಾಗುತ್ತಿರುವುದು ರಾಜ್ಯದ ಜನರು
ನಿಟ್ಟುಸಿರು ಬಿಡುವಂತೆ ಮಾಡಿದೆಯಾದರೂ, ಅಷ್ಟೆ ಜಾಗೃತಿ ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಏರಿಕೆ ಕಾಣುತ್ತಿವೆ. ನಗರ ಪ್ರದೇಶಗಳಲ್ಲಿ ಸುಶಿಕ್ಷಿತ ಜನರು ಜೀವ ಭಯದಿಂದ ಸೋಂಕಿತರು ಮನೆಯಲ್ಲಿಯೇ ಜಾಗೃತಿವಹಿಸಿ ಚಿಕಿತ್ಸೆ ಪಡೆಯುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಬಂದಂತಹ ವ್ಯಕ್ತಿಗಳು ಗ್ರಾಮದ ತುಂಬೆ ತಿರುಗಾಡುತ್ತಿದ್ದಾರೆ.
ಸರಿಯಾಗಿ ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಮನೆಯಲ್ಲಿ ಚಿಕ್ಕಮಕ್ಕಳಿರುತ್ತಾರೆ ಅವರ ಬಗ್ಗೆಯಾದರೂ ಕಾಳಜಿ ವಹಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲದೆ ಅನಾಗರಿಕರಂತೆ ವರ್ತಿಸುತ್ತಾರೆ. ಇನ್ನೂ ಕೆಲವರು ಕರೋನಾ ಎಂಬುದೇ ಸುಳ್ಳು ಎಂಬ ಉಡಾ- ಮಾತುಗಳನ್ನಾಡುತ್ತಿದ್ದಾರೆ. ಆದ್ದರಿಂದ ಸರಕಾರಕ್ಕೆ ಸ್ವಲ್ಪ ಹೊರೆಯಾದರು ಚಿಂತೆ ಇಲ್ಲ ಸೋಂಕು ಕಾಣಿಸಿಕೊಂಡಂತವರನ್ನು
ಹೋಮ್ ಐಸೋಲೇಷನ್ ಮಾಡದೆ ಕೋವಿಡ್ ಕೇರ್ ಸೆಂಟರ್ಪ್ರಾರಂಭಿಸಿ ಅಲ್ಲೇ ಚಿಕಿತ್ಸೆ ನೀಡಿ. ಇನ್ನು ಮಾಧ್ಯಮಗಳು ಕರೋನಾದ ಬಗ್ಗೆ ದಿನವೀಡಿ ಜನರಲ್ಲಿ ಭಯ ಹುಟ್ಟಿಸುವಂತಹ ಸುದ್ದಿ ಬಿತ್ತರ ಮಾಡುವುದನ್ನು ನಿಲ್ಲಿಸಲಿ.
ಜಾಗೃತಿ ಮೂಡಿಸುತ್ತಿದ್ದೇವೆ ಎಂಬ ಹಣೆಪಟ್ಟಿಯೊಂದಿಗೆ ಅದೆಷ್ಟೊ ಜನರ ಜೀವ ತೆಗೆದುಕೊಳ್ಳುತ್ತಿವೆ. ಪ್ರತಿದಿನ ಸೋಂಕಿತರ ಅಂಕಿ ಅಂಶಗಳನ್ನು ನೀಡುವುದರೊಂದಿಗೆ ಹುಷಾರಾಗುತ್ತಿರುವವರ ಬಗ್ಗೆಯೂ ಸ್ವಲ್ಪ ಮಾಹಿತಿ ನೀಡಲಿ. ಇದರಿಂದಾಗಿ ತಮಗೆ ಸೋಂಕು ತಗುಲಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಆದ್ದರಿಂದ ಮಾಧ್ಯಮಗಳು ಜಾಗೃತಿ ಹೆಸರಲಿ ವೈಭವೀಕರಿಸಿ ಸುದ್ದಿ ಪ್ರಸಾರ ಮಾಡುವುದನ್ನು ಬಿಟ್ಟು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಿ.
– ಮಣಿಕಂಠ ಪಾ. ಹಿರೇಮಠ ಚವಡಾಪೂರ