Saturday, 23rd November 2024

ಚಿಪ್ಕೊ ಚಳವಳಿ ನಾಯಕ ಸುಂದರ್ ಲಾಲ್ ಬಹುಗುಣ ಇನ್ನಿಲ್ಲ

ನವದೆಹಲಿ: ಚಿಪ್ಕೊ ಚಳವಳಿಯ ನಾಯಕ, ಪರಿಸರವಾದಿ ಸುಂದರ್ ಲಾಲ್ ಬಹುಗುಣ(94)ಅವರು ಕರೋನಾ ಸೋಂಕಿ ನಿಂದ ಶುಕ್ರವಾರ ಮೃತಪಟ್ಟಿದ್ದಾರೆ.

ಮೇ 8ರಂದು ಕರೋನಾ ಸೋಂಕು ದೃಢಪಟ್ಟಿದ್ದು, ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಶುಕ್ರವಾರ ಮಧ್ಯಾಹ್ನ ನಿಧನರಾಗಿರುವುದಾಗಿ ರಿಷಿಕೇಶ ಏಮ್ಸ್ ಆಸ್ಪತ್ರೆ ದೃಢ ಪಡಿಸಿದೆ.

1927ರ ಜನವರಿಯಲ್ಲಿ ಉತ್ತರಾಖಂಡದಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಅವರು ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಕುರಿತು ಚಳವಳಿ ನಡೆಸಿದವರು. ದೇಶಾದ್ಯಂತ ಪರಿಸರ ರಕ್ಷಣೆ ಕುರಿತು ಹಲವು ಆಂದೋಲನಕ್ಕೆ ಸಾಕ್ಷಿಯಾದವರು.

1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿದ್ದು, 1977ರಲ್ಲಿ ಉತ್ತರಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್ ಲಾಲ್ ಬಹುಗುಣ ನಾಂದಿ ಹಾಡಿದ್ದರು. 1981ರಲ್ಲಿ ಪದ್ಮಶ್ರೀ ಹಾಗೂ 2009ರಲ್ಲಿ ಇವರಿಗೆ ಪದ್ಮವಿಭೂಷಣ ಗೌರವ ದೊರೆತಿತ್ತು.