ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಎರಡು ತುಂಬು ಕುಟುಂಬದ ಮದುವೆ ಸಮಾರಂಭ. ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ. ಈ ಸಮಯದಲ್ಲಿ ಆ ಕುಟುಂಬ ಗಳ ವಿರೋಧಿ ಕುಟುಂಬದ ಒಂದು ತಂಡ ಹೇಗಾದರು ಮಾಡಿ ಈ ಮದುವೆಯನ್ನು ಹಾಳುಮಾಡಿ ಸಂಭ್ರಮಿಸಬೇಕೆಂಬ ವಿಕೃತ ಹಪಾಪಿಯಲ್ಲಿ ತೊಡಗುತ್ತದೆ. ಅದಕ್ಕಾಗಿ ಒಂದು ಕಾರ್ಯತಂತ್ರವನ್ನು ರೂಪಿಸುತ್ತದೆ.
ಹೇಗೆಂದರೆ ಮೊದಲಿಗೆ ವಧು ಮತ್ತು ವರನ ಗುಣನಡೆತೆಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಅಂಶಗಳನ್ನು ಸಿದ್ಧ ಮಾಡಿಕೊಳ್ಳುವುದು. ಅವರ ಬಗ್ಗೆ ಬಹಿರಂಗವಾಗಿ ಅವಹೇಳನ ಮಾಡುವಂಥ ಒಂದತ್ತು ವ್ಯಕ್ತಿಗಳನ್ನು ಸೃಷ್ಟಿಸುವುದು. ವರ
ಒಬ್ಬ ಕುಡುಕ ಹೆಣ್ಣುಬಾಕ ಎಂಬಂತೆ ನಿರೂಪಿಸಲು ಒಂದು ನಾಟಕ ಪ್ರಸಂಗ ಏರ್ಪಡಿಸುವುದು, ವಧುವಿನ ಚಾರಿತ್ರ್ಯ ಹಾಳು ಮಾಡುವಂತೆ ಸಂದರ್ಭಗಳನ್ನು ಸನ್ನಿವೇಶಗಳನ್ನು ತಿರುಚಿ ರೂಪಾಂತರಿಸಿ ದಾಖಲಿಸಿಕೊಳ್ಳುವುದು. ಆ ಎರಡೂ ಮನೆಯ ಸದಸ್ಯರುಗಳ ಹಿನ್ನಲೆ ನಡತೆಗಳಿಗೆ ಕಳಂಕ ತರಲು ಏನೇನು ಮಾಡಬೇಕು.
ಯಾರಿಂದ ಮಾಡಿಸಬೇಕು ಎಂಬುದನ್ನು ತಯಾರು ಮಾಡುವುದು. ಇಷ್ಟಲ್ಲದೇ ಮದುವೆ ನಡೆಯುವ ಕಲ್ಯಾಣ ಮಂಟಪದ ವ್ಯವಸ್ಥೆಗಳನ್ನು ಅವ್ಯವಸ್ಥೆಗಳೆಂಬಂತೆ ನೆಂಟರು ಸಂಬಂಧಿಕರ ನಡುವೆ ಬಿಂಬಿಸುವುದು. ಅಡುಗೆ ಭಟ್ಟರೇ ಸರಿಯಿಲ್ಲ, ಊಟ
ವಿಷಪೂರಿತವಾಗಿರುತ್ತದೆ, ಪುರೋಹಿತರು ಸರಿಯಿಲ್ಲ, ಓಲಗದವರು ಸರಿಯಿಲ್ಲ, ಮದುವೆ ಶಾಸ್ತ್ರಗಳೇ ಸರಿಯಿಲ್ಲ. ಸಂಸಾರ ನಡೆಸಲು ಬರುವುದಿಲ್ಲ, ಆ ಮದುವೆಯಿಂದ ಆ ಮನೆತನಗಳಿಂದ ಊರೇ ಹಾಳಾಗುತ್ತದೆ, ಈ ಮದುವೆಯನ್ನು ತಡೆಯಿರಿ, ಮಾಂಗಲ್ಯ ಧಾರಣೆ ಯಾಗದಂತೆ ಪ್ರತಿಭಟಿಸಿ, ಸಂಬಂಧಗಳಿಗೆ ಕೊಳ್ಳಿಯಿಟ್ಟು ಎರಡೂ ಮನೆಗಳ ಮಾನಮರ್ಯಾದೆಯನ್ನು
ಹರಾಜುಹಾಕಿ, ಊರೂರೇ ಈ ಕುಟುಂಬಕ್ಕೆ ಛೀಮಾರಿ ಹಾಕುವಂತೆ ಮಾಡಿ ಮತ್ತು ಹಾಗೆ ಮಾಡಲು ಹೀಗೆ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ.
ಹೀಗೆ ಇಂಥ ಮನೆಹಾಳು ಕೆಲಸಕ್ಕೆ ವ್ಯವಸ್ಥಿತವಾದ ಕಥೆ ಚಿತ್ರಕಥೆ ಹೆಣೆದು ಷಡ್ಯಂತ್ರವನ್ನು ಮ್ಯಾನುಫ್ಯಾಕ್ಚರ್ ಮಾಡುವುದನ್ನೇ ಟೂಲ್ ಕಿಟ್ ಎಂದು ಕರೆಯಬಹುದು. ಕಳೆದ ವರ್ಷದವರೆಗೂ ಈ ಟೂಲ್‌ಕಿಟ್ ಎಂಬ ಪದ ಸಾಮಾನ್ಯ ಭಾರತೀಯರಿಗೆ
ಪರಿಚಯ ವಿರಲಿಲ್ಲ. ಕೆಲ ದೇಶಗಳಲ್ಲಿ ಈ ಟೂಲ್‌ಕಿಟ್ ತಂತ್ರವನ್ನು ಸಾಮಾಜಿಕ ನ್ಯಾಯ ಮತ್ತು ಮಾನವಹಕ್ಕುಗಳ ಪ್ರಚಾರಕರು
ಪ್ರತಿಭಟನಾ ಮಾರ್ಗಗಳಾಗಿ ಒದಗಿಸಲು, ಜಾಗೃತಿ ಮೂಡಿಸಲು ಮತ್ತು ಪ್ರತಿಭಟನಾಕಾರರನ್ನು ಪ್ರಚೋದನೆಗೊಳಿಸಲು ಸೂಚಿಸಲು ಬಳಸುತ್ತಿದ್ದರು. ಮೊದಲು ಭಾಷಣಗಳು ಮತ್ತು ಕರಪತ್ರಗಳಿಂದ ನಡೆಸಲ್ಪಟ್ಟ ಪ್ರತಿಭಟನೆಗಳಿಗೆ ಪರ್ಯಾಯವಾಗಿ ಆಧುನಿಕ ಸಂಘಟನೆಯ ರೂಪವಾಗಿ ದೊಡ್ಡ ಪ್ರತಿಭಟನೆಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ಈ ಡಿಜಿಟಲ್ ಟೂಲ್ ಕಿಟ್‌ಗಳು ಪರಿಣಾಮಕಾರಿ ಸಾಧನವಾಗಿ ವಿಕಸನಗೊಂಡಿವೆ.
ಯುಎನ್ ಸಂಸ್ಥೆಗಳಿಂದ ಹಿಡಿದು ಎನ್‌ಜಿಒಗಳವರೆಗೆ ಅನೇಕ ಸಂಸ್ಥೆಗಳು ಅವುಗಳನ್ನು ನಿಯಮಿತವಾಗಿ ಬಳಸುತ್ತವೆ. ಇಂಟರ್ನೆಟ್ ಯುಗವಾದ ಇಂದು ಈ ಟೂಲ್‌ಕಿಟ್ ಅತಿವೇಗವಾಗಿ ಪ್ರಚೋದಿಸಿ ಪ್ರತಿಭಟನೆಗಳಿಗೆ ಆನ್‌ಲೈನ್ ಮತ್ತು ಆನ್ – ಗ್ರೌಂಡ್ ಬೆಂಬಲವನ್ನು ಒದಗಿಸುವುದು, ದೂರದವರೆಗೆ ಹರಡಿರುವ ಬೆಂಬಲಿಗರನ್ನು ಒಂದುಗೂಡಿಸುವುದು. ಒಂದು ವಿಷಯದ ಕುರಿತು ಜಾಗೃತಿ ಮೂಡಿಸಲು ರಚಿಸಲಾಗುವ ಒಂದು ಮಾರ್ಗಸೂಚಿ.
ಸರಳವಾಗಿ ಹೇಳುವುದಾದರೆ, ಚಳವಳಿ ಅಥವಾ ಹೋರಾಟ ನಡೆಸುವವರಿಗೆ ಮಾರ್ಗದರ್ಶಿ ಸೂತ್ರ. ಯಾವಾಗ ಮತ್ತು ಹೇಗೆ ಪ್ರತಿಭಟನೆ ಮಾಡಬೇಕು ಎಂದು ಮೊದಲೇ ರೂಪಿಸುವ ಒಂದು ಪುಟ್ಟ ಕೈಪಿಡಿ ಇದಾಗಿರುತ್ತದೆ. ಇನ್ನೂ ಸರಳವಾಗಿ ಹೇಳ ಬೇಕೆಂದರೆ ನಮ್ಮ ದೇಶದ ಸಾರ್ವಭೌಮತೆ ಘನತೆಯನ್ನು ವ್ಯವಸ್ಥಿತವಾಗಿ ಕುಲಗೆಡಿಸಲು ಉತ್ಪಾದಿಸಿರುವ ದೇಶದೊಳಗಿನ ದ್ರೋಹಿಗಳ ಮನೆಹಾಳು ಕುಂತಂತ್ರ ಅಸ್ತ್ರ.
ಒಂದು ಯಂತ್ರವನ್ನು ಸರಿಪಡಿಸಲು ಅದಕ್ಕೆ ಬೇಕಾದ ಉಪಕರಣಗಳ ಪೆಟ್ಟಿಗೆಯನ್ನು ಟೂಲ್‌ಕಿಟ್ ಎನ್ನಲಾಗುತ್ತದೆ. ಆದರೆ ಈಗ ಭಾರತದಲ್ಲಿ ಚಾಲ್ತಿಯಲ್ಲಿರುವ ಈ ಟೂಲ್‌ಕಿಟ್ ಯಂತ್ರವನ್ನು ಸರಿಪಡಿಸುವುದಿರಲಿ, ಆಡಳಿತ ಮತ್ತು ಪ್ರಜಾಪ್ರಭುತ್ವದ ಯಂತ್ರ ವನ್ನು ವ್ಯವಸ್ಥಿತವಾಗಿ ಕುಲಗೆಡಿಸಲು ಈ ಟೂಲ್‌ಕಿಟ್ ಡಬ್ಬ ಸದ್ದುಮಾಡುತ್ತಿದೆ. ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷ ತಯಾರಿಸಿದೆ ಎನ್ನದ ಈ ಮನೆಹಾಳು ಟೂಲ್‌ಕಿಟ್ ವಿಚಾರ ದೇಶ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ವಕ್ತಾರರು ಆರೋಪಿಸಿ ಬಹಿರಂಗ ಪಡಿಸಿರುವ ನಾಲ್ಕು ಪುಟಗಳ ಟೂಲ್‌ಕಿಟ್ ಮಾರ್ಗಸೂಚಿಯನ್ನು ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಯ ಸದಸ್ಯರಾಗಿರುವ ರಾಜೀವ ಗೌಡರ ಕಚೇರಿಯ ಸೌಮ್ಯವರ್ಮ ಎಂಬಾಕೆ ತಯಾರಿಸಿದ್ದಾಳೆಂದು ತಿಳಿದುಬಂದಿದೆ.
ಆದರೆ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ಅಲ್ಲಗೆಳೆದು ಬಿಜೆಪಿ ವಕ್ತಾರರ ಮೇಲೆ ದೂರು ಅಥವಾ ಎಫ್ ಐಆರ್ ದಾಖಲಿಸುವಂತೆ ಹೇಳಿಕೆ ನೀಡಿದೆ. ಇನ್ನೊಂದೆಡೆ ಶಶಾಂಕ ಝಾ ಎಂಬ ವಕೀಲರು ನೇರ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿಸಲ್ಲಿಸಿ ಟೂಲ್ ಕಿಟ್ ಕುರಿತು ಕೂಡಲೇ ತನಿಖೆಯಾಗಬೇಕು ಮತ್ತು ಕಾಂಗ್ರೆಸ್ ಪಕ್ಷದ ನೋಂದಣಿಯನ್ನು ಅಮಾನತಿ ನಲ್ಲಿರಿಸಬೇಕೆಂದು ಕೋರಿದ್ದಾರೆ. ಇದರ ಹಿಂದಿನ ಸತ್ಯಸಂಗತಿಗಳು ಅತಿಶೀಘ್ರವಾಗಿ ದೇಶದ ಪ್ರಜೆಗಳಿಗೆ ತಿಳಿಯಬೇಕಿದೆ.
ಇಷ್ಟಕ್ಕೂ ಈ ನಾಲ್ಕು ಪುಟಗಳ ಟೂಲ್‌ಕಿಟ್‌ನಲ್ಲಿರುವ ವಿಚಾರಗಳನ್ನು ಗಮನಿಸಿದರೆ ದೇಶಾಭಿಮಾನಿ ಭಾರತೀಯರಿಗೆ ಗಾಬರಿ ಯಾಗುತ್ತದೆ. ಪ್ರಧಾನಿ ಮೋದಿಯವರ ಮೇಲಿನ ದ್ವೇಷವು ಇಡೀ ದೇಶವನ್ನು ಸರ್ವನಾಶ ಮಾಡುವಷ್ಟು ಉದ್ವೇಗದಲ್ಲಿರುವುದು ಇಲ್ಲಿ ಅನಾವರಣಗೊಂಡಿದೆ. ಪ್ರಸ್ತುತ ಕರೋನಾ ಸಾಂಕ್ರಾಮಿಕ ಪರಿಸ್ಥಿತಿಯನ್ನೇ ತಿರುಚಿ ಕಾಂಗ್ರೆಸ್ ಪಕ್ಷ ಮರುಹುಟ್ಟು ಪಡೆದು ಕೊಳ್ಳುವ ಗುರಿಯಾಗಿಸಿಕೊಂಡಿರುವಂತೆ ಕಾಣುತ್ತಿದೆ. ಮೊದಲಿಗೆ ಈ ಟೂಲ್‌ಕಿಟ್ ಮೋದಿಯವರ ಖ್ಯಾತಿಯನ್ನು ಹಳ್ಳಕ್ಕಿಳಿಸುವು ದಕ್ಕೇ ವಿಶೇಷ ಯೋಜನೆಗಳಿದ್ದು, ಮೋದಿಯವರ ತವರು ಗುಜರಾತ್ ರಾಜ್ಯವನ್ನು ಕಳಂಕಕ್ಕೆ ಈಡುಮಾಡುವುದು, ವಿಶ್ವ ಆರೋಗ್ಯ ಸಂಸ್ಥೆಯೇ ಈ ವೈರಸನ್ನು ಯಾವುದೇ ದೇಶದೊಂದಿಗೆ ಹೆಸರುಕಟ್ಟಿ ಉಖಿಸಬಾರದೆಂದು ಎಚ್ಚರಿಸಿದ್ದರೂ ಎರಡನೇ ಅಲೆಯ ಕುರಿತು ಬರೆಯುವಾಗಲೆ ಭಾರತರದ ರೂಪಾಂತರಿ ವೈರಸ್ – ಮೋದಿ ವೈರಸ್ ಎಂದೆ ಉಲ್ಲೇಖಿಸಬೇಕೆಂದು ಆಗ್ರಹಿಸ ಲಾಗಿದೆ.
ಹೆಚ್ಚೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಡಬೇಕು. ಇಂಥ ಕೆಲಸ ಮಾಡುವ ಕಾರ್ಯಕರ್ತರಿಗೆ ಬೇಕಾದ ಸಹಾಯವನ್ನು ಮಾಡುವುದು, ಅಮಿತ್ ಶಾ ತಲೆಮರೆಸಿಕೊಂಡಿzರೆ. ಜೈ ಶಂಕರ್ ಕ್ವಾರಂಟೈನಿನಲ್ಲಿದ್ದರೆ, ರಾಜನಾಥ್ ಸಿಂಗ್ ಸೈಡ್‌ಲೈನ್ ಆಗಿದ್ದಾರೆ. ನಿರ್ಮಲ ಸೀತಾರಾಂ ನಾಲಾಯಕ್ಕು ಎಂದು ಮಂತ್ರಿಗಳನ್ನು ಜರಿಯಿರಿ, ಕರೋನಾ ಸಾವುಗಳ ಹೆಣ ಗಳನ್ನು ಮತ್ತು ಅದನ್ನು ಸಾಮೂಹಿಕವಾಗಿ ಸುಡುತ್ತಿರುವ ಚಿತ್ರಗಳನ್ನು ಹೆಚ್ಚೆಚ್ಚು ಬಳಸುವುದು, ಸ್ಥಳೀಯ ಕಾರ್ಯ ಕರ್ತರು ಸಾಧ್ಯವಾದಷ್ಟೂ ತಮ್ಮ ಸುತ್ತಲಿನ ಆಸ್ಪತ್ರೆಗಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಸಿಗೆಗಳನ್ನು ಹೌಸ್ ಫುಲ್ ಮಾಡುವು ದರ ಮೂಲಕ ವೈದ್ಯಕೀಯ ವ್ಯವಸ್ಥೆಗಳನ್ನು ಹಾಳುಮಾಡಿ ಬಿಜೆಪಿ ತಲೆಗೆ ಕಟ್ಟುವುದು.
ಪಿಎಂ ಕೇರ್ ನಿಧಿಯನ್ನು ಟೀಕಿಸಲು ಡೋಂಗಿಜೀವಿಗಳನ್ನು ಬಳಸಿಕೊಳ್ಳಿ, ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ಮೋದಿಯವರ
ಸ್ವಂತಮನೆ ಎಂಬಂತೆ ಬಿಂಬಿಸಿ, ಕುಂಭಮೇಳವನ್ನು ಕರೋನಾ ಸೂಪರ್ ಸ್ಪೆ ಡರ್ ಎಂದು ಬಾಯಿಬಡಿದುಕೊಳ್ಳಿ, ಆದರೆ ಈದ್ ಅನ್ನು ಶುಭ ಸಾಮಾಜಿಕ ಸಮ್ಮಿಲನವೆಂದು ಸಮರ್ಥಿಸಿ. ಭಾರತ ಮತ್ತು ಮೋದಿ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳಿ, ಹೀಗೆ ಬಿಜೆಪಿ ಸರಕಾರದ ವಿರುದ್ಧ ಪತ್ರಿಕೆಗಳಲ್ಲಿ ಪ್ರೀಪೇಡ್ ಲೇಖನಗಳು ಪ್ರಕಟವಾಗಬೇಕು.
ಭಾರತದಲ್ಲಿರುವ ವಿದೇಶಿ ಪತ್ರಕರ್ತರುಗಳಿಂದ ಭಾರತ ಅವ್ಯವಸ್ಥೆಯಲ್ಲಿದೆ ಅಸಹಾಯಕ ಸ್ಥಿತಿಯಲ್ಲಿದೆ ಎಂದೆ ತರಾವರಿ ಪೋಸ್ಟ್
ಪೇಡ್ ಲೇಖನಗಳನ್ನು ಬರೆದು ಜಾಗತಿಕವಾಗಿ ಭಾರತವನ್ನು ಬಲಹೀನಗೊಳಿಸುವುದು. ಇದಕ್ಕಾಗಿ ಅಸಹಿಷ್ಣು ಪೀಡೆಗಳೆಂಬ ಲದ್ದಿಜೀವಿಗಳನ್ನು ಉಪಯೋಗಿಸಿಕೊಳ್ಳಿ. ಹೀಗೆ ಸಾಧ್ಯವಾದಷ್ಟೂ ಮೋದಿ ಸರಕಾರವನ್ನು ಹೀನಾಯಮಾನವಾಗಿ ಚಿತ್ರಿಸಿ ಸಾರ್ವಜನಿಕರನ್ನು ದಾರಿತಪ್ಪಿಸಿ ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತವೆಂಬ ಮಾತನ್ನು ಸುಳ್ಳಾಗಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂಬಂತೆ ಈ ಟೂಲ್‌ಕಿಟ್ ರಣದನಿಯಾಗಿದೆ.
ಇಬ್ಬರು ವ್ಯಕ್ತಿಗಳಲ್ಲಿ ಯಾರು ಸುಂದರವೆಂದು ಪ್ರದರ್ಶಿಸಿ ಎಂದಾಗ ಕುರೂಪಿ ವ್ಯಕ್ತಿ ಎದುರಿಗಿರುವ ವ್ಯಕ್ತಿಯ ಮುಖಕ್ಕೆ ಸಗಣಿ
ಹೊಡೆದು ತಾನು ಈಗ ಸುಂದರವಾಗಿದ್ದೇನೆ ನೋಡಿ ಎಂದು ಹೇಳಿದಂತಿದೆ ಈ ಸಂಚು. ದುರಂತವೆಂದರೆ ಮೊನ್ನೆಯಷ್ಟೇ ಅರವಿಂದ ಕೇಜಿವಾಲ ಸಿಂಗಾಪುರ ವೈರಸ್ ಎಂದು ಟ್ವೀಟ್ ಮಾಡಿದ್ದಕ್ಕೇ ಇಡೀ ಸಿಂಗಪುರ ದೇಶ ಕ್ರೇಜಿವಾಲಗೆ ಛೀಮಾರಿ ಯಾಕಿತ್ತು. ಆದರೆ ಮೋದಿ ವೈರಸ್ – ಭಾರತೀಯ ತಳಿ ವೈರಸ್ ಎಂದು ಮನೆದ್ರೋಹಿಗಳು ಸಂಬೋಧಿಸಿದರೆ ಭಾರತದಲ್ಲಿ
ಭಾರತೀಯರೇ ಸುಮ್ಮನಿರುತ್ತಾರೆ. ಅಸಲಿಗೆ ಈ ಟೂಲ್ ಕಿಟ್ ಎಂಬ ಮನೆಹಾಳು ಕೆಲಸವನ್ನು ಕಾಂಗ್ರೆಸ್ ಮಾಡಿತ್ತೋ ಇಲ್ಲವೋ ಎಂಬುದು ತನಿಖೆಯ ನಂತರ ತಿಳಿಯಬಹುದು.
ಆದರೆ ಇಂಥ ಮಾತೃದ್ರೋಹಿ ಕೆಲಸವನ್ನು ಯಾವ ಪಕ್ಷದವರೇ ಮಾಡಲಿ ಅದು ಅಕ್ಷಮ್ಯ ಕೆಲಸ. ಹೀಗೆ ಕೊಲೆಪಾತಕ ಕರೋನಾ ದೊಂದಿಗೆ ಇಂಥ ತಲೆಹಿಡುಕ ಕುಂತ್ರಗಳ ವಿರುದ್ಧವೂ ನಮ್ಮ ದೇಶ ಹೋರಾಡ ಬೇಕಿರುವುದು ವಿಪರ್ಯಾಸ. ಇಸ್ರೇಲನ್ನು ನೋಡಿ, ಆ ದೇಶದ ಸುತ್ತ ಬರೀ ವೈರಿ ರಾಷ್ಟ್ರಗಳೇ ಇದ್ದರೂ ಇಸ್ರೇಲ್ ಪೂರ ದೇಶಾಭಿಮಾನಿಗಳೇ ಇzರೆ. ಆದರೆ ನಮ್ಮಲ್ಲಿ
ಸುತ್ತಲೂ ವೈರಿರಾಷ್ಟ್ರಗಳಿದ್ದು ಒಳಗೇ ಅವರಿಗಿಂತಲೂ ಮಿಗಿಲಾದ ದೇಶದ್ರೋಹಿಗಳನ್ನಿಟ್ಟುಕೊಂಡು ಬದುಕುತ್ತಿದೆ.
ಇಸ್ರೇಲಿನಲ್ಲಿ ಇಲ್ಲಿನಂತೆ ಸೇನೆಗೇ ಸಾಕ್ಷಿ ಕೇಳುವ ಕ್ರೇಜಿವಾಲಗಳಿಲ್ಲ. ಭಯೋತ್ಪಾದಕರು ಹೆಣವಾದಾಗ ಬಾಯಿಬಡಿದುಕೊಳ್ಳಲು ಅಲ್ಲಿ ಇಲ್ಲಿನಂಥ ಗುಲಾಮರು ಗಳಿಲ್ಲ. ಬೆದರಿಕೆ ಹಾಕಲು ಓವೈಸಿಗಳಿಲ್ಲ, ಶತ್ರು ದೇಶಗಳನ್ನು ಬೆಂಬಲಿಸುವ ಜಿಹಾದಿಗಳು ಕಮ್ಮಿನಿಷ್ಠರುಗಳ ದೇಶದ್ರೋಹಿ ಪಡೆಗಳಿಲ್ಲ. ನಕಲಿ ಹೋರಾಟಗಾರರು, ಭಗವಾನ್‌ಗಳು, ಬರಗೆಟ್ಟ ಬಕೇಟು ಸಾಹಿತಿಗಳು,
ಹಿಂಸಾತ್ಮಕ ನಿಶ್ಚೇತನಗಳು, ಖಾನ್‌ಗಳೆಂಬ ತಗಡು ಸಿನಿಮಾ ಟೂಲ್‌ಕಿಟ್ ಗಿರಾಕಿಗಳು, ಮಾಧ್ಯಮಗಳು ಇಸ್ರೇಲಿನಲ್ಲಿಲ್ಲ.
ಅಲ್ಲಿರುವ ವಿರೋಧ ಪಕ್ಷಗಳು ಮತ್ತು ಪ್ರತಿಯೊಬ್ಬ ನಾಗರಿಕನೂ ದೇಶಭಕ್ತರೇ ಆಗಿzರೆ. ಆದರೆ ನಮ್ಮಲ್ಲಿ ಮುಕ್ಕಾಲು ಮಂದಿ ಸ್ವಾರ್ಥಿಗಳು ನಿರಾಭಿಮಾನಿಗಳು ಗುಲಾಮರುಗಳಿದ್ದಾರೆ. ಇಲ್ಲಿನ ಟೂಲ್‌ಕಿಟ್ ಗಿರಾಕಿಯೊಬ್ಬ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಹಿಂದೂ ದೇವಸ್ಥಾನಗಳಲ್ಲಿನ ಬಂಗಾರವನ್ನು ಬಳಕೆ ಮಾಡಬೇಕೆಂದು ಸಲಹೆ ನೀಡುತ್ತಾನೆ. ಯಾಕೆ? ಒಬ್ಬೊಬ್ಬ ರಾಜಕಾರಣಿಯ ಸಾವಿರಾರು ಕೋಟಿ ಆಸ್ತಿಗಳನ್ನು ಮುಟ್ಟುಗೋಲಾಗಿಸಿ ಬಳಸಲು ಹೇಳಬಹುದಲ್ಲವೇ?.
ಆದರೆ ನಮ್ಮ ದೇಶದ ಹಾಲಿ ರಾಷ್ಟ್ರಪತಿಯವರು ತಮಗಿರುವ 10 ಕೋಟಿ ಮೌಲ್ಯದ ಐಷರಾಮಿ ಕಾರು ತ್ಯಜಿಸಿ, ತಮ್ಮ ವೇತನ ದಲ್ಲಿ ಒಂದೂವರೆ ಲಕ್ಷ ಸೇರಿದಂತೆ ವಾರ್ಷಿಕ 40 ರಿಂದ 45 ಕೋಟಿ ರುಪಾಯಿಗಳನ್ನು ಉಳಿಸುತ್ತಾರೆ. ಇದನ್ನೇ ಎಲ್ಲಾ ನಾಯಕರು ಅನುಸರಿಸಬಹುದಲ್ಲವೇ?. ಆದರೆ ಅದನ್ನು ಮೋದಿಯವರು ಮಾತ್ರ ಮಾಡಬೇಕು!
ಟೂಲ್‌ಕಿಟ್‌ನಲ್ಲಿರುವಂಥ ಮನಸ್ಥಿತಿ ಈಗಾಗಲೇ ನಮ್ಮ ದೇಶದಲ್ಲಿ ಕಾರ್ಯಾಚರಣೆಗಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಂಗಾನದಿಯಲ್ಲಿ ಹೆಣಗಳು ತೇಲುವ 2015ರ ಹಳೆಯ ಫೋಟೋಗಳನ್ನು ಹಾಕಿ ಉತ್ತರಪ್ರದೇಶದ ಈಗಿನ ಯೋಗಿಜೀ ಮತ್ತು ಬಿಹಾರ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸವನ್ನು ಮಾಡಿ ಆಮಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್
ಗುಪ್ತಾ ಎಂಬಾತ ಸಿಕ್ಕಿಬಿದ್ದಿದ್ದಾನೆ. ಆರಂಭದಲ್ಲಿ ವ್ಯಾಕ್ಸಿನ್ ಕಂಡುಹಿಡಿದಾಗ ಮೋದಿ ವ್ಯಾಕ್ಸಿನ್ ಎಂದು ಅಪಹಾಸ್ಯ ಮಾಡಿ ಅಯೋಗ್ಯ ವ್ಯಂಗಚಿತ್ರಕಾರರನ್ನು ಬಳಸಿಕೊಂಡು ಲಸಿಕೆ ವಿರುದ್ಧ ಅಪಪ್ರಚಾರ ಮಾಡಿ ಸಾರ್ವಜನಿಕರು ಲಸಿಕೆಯನ್ನು ಅನುಮಾನದ ನೋಡುವಂತೆ ಮಾಡಿ ಭಯಬಿದ್ದು ಲಸಿಕೆ ಪಡೆದುಕೊಳ್ಳದಂಥ ವಾತಾವರಣ ಸೃಷ್ಟಿಸಲಾಯಿತು.
ಇದರ ಪರಿಣಾಮ ಎರಡನೇ ಅಲೆಯಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಪರೋಕ್ಷವಾಗಿ ಪಾತ್ರವಹಿಸಿದರು ಗುಲಾಮರುಗಳು. ಇಂಥ ಟೂಲ್‌ಕಿಡ್ ರಚನೆಯ ಹಿಂದೆ ಪ್ರಸ್ತುತ ಜಾಗತಿಕ ಬೆಳವಣಿಗೆಗಳೂ ಪೂರಕವಾಗಿದೆ. ಪೋಲಿಯೋ ಲಸಿಕೆಗಾಗಿ ಇಪ್ಪತ್ತು ವರ್ಷ ಕಾದ ನಮ್ಮದೇಶ ಕೇವಲ ಒಂಬತ್ತು ತಿಂಗಳಲ್ಲಿ ಕರೋನಾ ವಿರುದ್ಧ ವ್ಯಾಕ್ಸಿನ್ ಕಂಡುಹಿಡಿದು
ಅದನ್ನು ನೆರೆದೇಶಗಳಿಗೂ ಹಂಚಿ ಅದಕ್ಕೆ ಪ್ರತಿಯಾಗಿ ಆಕ್ಸಿಜನ್ ಮತ್ತು ಆಕ್ಸಿಜನ್ ಉಪಕರಣಗಳ ನೆರವನ್ನು ಪಡೆದ ಭಾರತ ಪ್ರತಿಯೊಬ್ಬರಿಗೂ ಲಸಿಕೆ ಎಂಬ ಅಭಿಯಾನವನ್ನು ಆರಂಭಿಸಿದಾಗಲೇ ಇಲ್ಲಿನ ಗುಲಾಮರು ಕೆರಳಿ ಹೋದರು.
ಒಂದೆಡೆ ದೇಶದೊಳಗೆ ಭಯೋತ್ಪದಾಕರ ದಾಳಿಗಳು ನಿಂತುಹೋದವು. ಪಾಕಿಸ್ತಾನದ ಭಯೋತ್ಪಾದಕರ ಹೆಣಬೀಳಿಸಿದರೆ ಭಾರತೀಯರು ಸಂಭ್ರಮಿಸಬಾರದೆಂಬ ಪುಟಗೋಸಿಗಳು, ಅವರುಗಳನ್ನು ಬ್ರದರ್ಸ್‌ಗಳೆಂದು ಮಮಕಾರ ತೋರುವ ತಲೆಹಿಡುಕ
ಪೂರ್ವಕಸುಬಿನ ನಾಲಾಯಕ್ಕುಗಳೂ, ಭಾಗ್ಯವಿಧಾತರುಗಳು, ಖಾಲಿತಲೆಯ ಕನಸುಗಾರರು ಕಂಗಾಲಾಗಿ ಕೂತರು. ಪಕ್ಕಾ ತಂದೆ ತಾಯಿಗೆ ಹುಟ್ಟಿದಂತೆ ಇಸ್ರೇಲ್ ದೇಶ ಭಯೋತ್ಪಾದಕ ಶತ್ರುಗಳ ಹೆಣಗಳನ್ನು ಗುಡ್ಡೆಹಾಕಿ ಅವರ ನೆಲೆಯನ್ನು ಆಕ್ರಮಿಸಿ ಕೊಳ್ಳುತ್ತಿದ್ದರೆ, ಅದೇ ಇಸ್ರೇಲ್ ದೇಶದಿಂದ ಭಾರತಕ್ಕೆ ಆಕ್ಸಿಜನ್ ಸರಬರಾಜಾಗುತ್ತಿರುವುದು ಇಲ್ಲಿನ ದೇಶದ್ರೋಹಿ ಗುಲಾಮರಿಗೆ ಉಸಿರುಗಟ್ಟಿಸುತ್ತಿದೆ.
ಮೋದಿಯವರು ಸೌದಿ ಅರೇಬಿಯಾ ದುಬೈ ಯುಎಇ ಕುವೈತ್ ರಾಷ್ಟ್ರಗಳೊಂದಿಗಿನ ಉತ್ತಮ ಬಾಂಧವ್ಯಕ್ಕಿಂತ ಇಸ್ರೇಲ್‌ನೊಂದಿಗೆ ಉತ್ತಮ ಸ್ನೇಹವಿರಿಸಿಕೊಂಡಿರುವುದನ್ನೇ ಬಳಸಿಕೊಂಡು ದೇಶದೊಳಗೆ ಮನೆದ್ರೋಹಿಗಳನ್ನು ಪ್ರಚೋದಿಸಿ ಭಾರತದ ವಿರುದ್ಧ ಕೆಂಡಕಾರುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ತಿಂಗಳಿಗೆ ಐವತ್ತು ಲಕ್ಷ ನಷ್ಟ ಅನುಭವಿಸುತ್ತಿದೆ ಎಂದು ಹೇಳಿಕೊಳ್ಳುವ ಐದುಪೈಸೆ ಚಾನಲ್‌ಗಳು ಪುಂಖಾನುಪುಂಖವಾಗಿ ಬೊಗಳುತ್ತಿರುವುದನ್ನು ನೋಡಿದರೆ ಟೂಲ್‌ಕಿಟ್ ಎಫೆಕ್ಟ್‌ನ
ಪ್ರೀಪೇಡೋ ಪೋಸ್ಟ್‌ಪೇಡೋ ಎಂಬ ಸಂಶಯ ಮೂಡುತ್ತದೆ.
ಇಂಥ ದರಿದ್ರರ ಸಿದ್ಧಾಂತ ಹೇಗಿದೆಯೆಂದರೆ – ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ ಅದಕ್ಕೆ ಬಿಜೆಪಿ ಸರಕಾರ ಹೊಣೆಯಾಗಬೇಕು. ಅದೇ ಬಿಜೆಪಿ ಸರಕಾರ ಇಲ್ಲದ ರಾಜ್ಯದಲ್ಲಿ ಯಡವಟ್ಟಾದರೆ ಅದಕ್ಕೆ ಪ್ರಧಾನಿ ಮೋದಿಯವರು ಕಾರಣವಾಗಬೇಕು – ಹೇಗಿದೆ ನೋಡಿ ಇವರ ಲಾಜಿಕ್ಕು !. ಒಟ್ಟಾರೆಯಾಗಿ ಹೇಳಬೇಕೆಂದರೆ ಭೂಮಂಡಲದಲ್ಲಿ ದೇಶಾಭಿಮಾನ ಕ್ಕಿಂತಲೂ ದೇಶದ್ರೋಹಕ್ಕೇ ಹೆಚ್ಚು ಮುಕ್ತವಾದ ಅವಕಾಶವಿರುವ ಏಕೈಕ ದೇಶವೆಂದರೆ ನಮ್ಮ ಭಾರತ.
ಒಂದೆಡೆ ಕರೋನಾ ಒಂದೆಡೆ ದೇಶದ್ರೋಹಿ ಟೂಲ್‌ಕಿಟ್ ಗಿರಾಕುಗಳು ಮತ್ತೊಂದೆಡೆ ಉಂಡುಮಲಗುವ ನಿರಭಿಮಾನಿಗಳು
ಇವರೆಲ್ಲರನ್ನೂ ಸಂಭಾಳಿಸುತ್ತಾ ಅಭಿವೃದ್ಧಿ ಪ್ರಗತಿಯನ್ನು ಬಿತ್ತಬೇಕು. ಮೇರಾ ಭಾರತ್ ಮಹಾನ್ !?.