ಬೀಜಿಂಗ್: ಮ್ಯಾನ್ಮಾರ್ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಮೂರು ಮಂದಿ ಪ್ರಾಣ ಕಳೆದುಕೊಂಡು, ಎರಡು ಡಜನ್ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7.3 ಭೂಕಂಪನದ ತೀವ್ರತೆ ದಾಖಲಾಗಿದ್ದು, ಸ್ಥಳದಲ್ಲಿ ಬೀಡುಬಿಟ್ಟಿರುವ ರಕ್ಷಣಾ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
621 ಮೈಲಿ ದೂರವಿರುವ ಉತ್ತರ ಚೀನಾದ ಕಿಂಗ್ಹೈ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಶನಿವಾರ ಎರಡನೇ ಭೂಕಂಪನ ಸಂಭವಿಸಿದೆ.
ವಿರಳ ಜನಸಂಖ್ಯೆ ಇರುವ ಪ್ರದೇಶದಲ್ಲಿ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿಲ್ಲ. ಯುನ್ನಾನ್ ಪ್ರಾಂತ್ಯದ ಭೂಕಂಪನ ಬ್ಯೂರೋ ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 6.4 ಎಂದು ನೀಡಿದೆ. ಜನಸಂಖ್ಯೆ ವಿರಳವಾಗಿರುವುದರಿಂದ ಭೂಕಂಪ ಹೆಚ್ಚು ಪ್ರಭಾವ ಬೀರಿಲ್ಲ.