Sunday, 15th December 2024

ಈ ಎಡಬಿಡಂಗಿಗಳ ಮುಖವಾಡಗಳನ್ನು ಕಳಚೋಣ ಬನ್ನಿ!

ನಮ್ಮ ನಡುವಿನ ಈ ನವರಂಗಿ ವಿದ್ವಾಾಂಸರು ತಮ್ಮ ಸಿದ್ಧಾಂತವನ್ನು ಶತಾಯಗತಾಯ ಸಾಧಿಸಲು ಸತ್ಯವನ್ನಾದರೂ ಹೇಳಿ ಬಿಡಬಹುದು ಎಂಬ ಕಾಲ ಎಂದು ಬಂದೀತೆಂದು ಕಾಯುತ್ತಿದ್ದೇನೆ!

ಪ್ರಜಾವಾಣಿಯ ವಿಜ್ಞಾಾನಾಂಕಣಕಾರ ನಾಗೇಶ ಹೆಗಡೆ ವಿಜ್ಞಾಾನದ ಹೆಸರಲ್ಲಿ ಅದೆಷ್ಟು ಸುಳ್ಳು ಪೊಳ್ಳು ಜೊಳ್ಳುಗಳನ್ನು ಓದುಗರ ಕಣ್ಣಿಿಗೆ ತೂರುತ್ತಾಾರೆಂಬುದನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವರಿಸುತ್ತ ಬಂದಿದ್ದೇನೆ. ಹಾಗೆ ವಿವರಿಸುವಾಗ ಅವರ ಸುಳ್ಳುಗಳನ್ನು ಬಿಚ್ಚಿಿಡುವುದಷ್ಟೇ ನನ್ನ ಉದ್ದೇಶವಾಗಿರಲಿಲ್ಲ. ಕಮ್ಯುನಿಸ್‌ಟ್‌ ಪಾಳೆಯದ ಪ್ರಳಯಾಂತಕ ಚಿಂತಕರು ಹೇಗೆ ನಾಜೂಕಾಗಿ ಸುಳ್ಳುಗಳನ್ನು ಪೋಣಿಸುತ್ತಾಾರೆಂಬ ಸೂಕ್ಷ್ಮವನ್ನು ಓದುಗರಿಗೆ ತಿಳಿಸುವುದೂ ಒಂದು ಉದ್ದೇಶವಾಗಿತ್ತು. ಸದ್ಯಕ್ಕಂತೂ ಅವರ ರೈಲುಬಂಡಿ ನಿಲ್ಲುವ ಸೂಚನೆಗಳಿಲ್ಲ. ಹಾಗಾಗಿ ಅವರ ಬರಹಗಳಲ್ಲಿರುವ ಸುಳ್ಳುಗಳನ್ನು ಪಟ್ಟಿ ಮಾಡುತ್ತ ಕೂರುವ ಬದಲು, ಅವರ ಬರವಣಿಗೆಯ ತಂತ್ರಗಳನ್ನೇ ಸ್ವಲ್ಪ ಓದುಗರಿಗೆ ಬಿಡಿಸಿಟ್ಟರೆ ಮುಂದೆ ಓದುಗರೇ ಸ್ವತಂತ್ರವಾಗಿ ಅವರ ಪ್ರತಿ ಲೇಖನದ ಅಸಲಿಯತ್ತನ್ನು ಅರ್ಥಮಾಡಿಕೊಳ್ಳಲು ಸುಲಭವಾದೀತೇನೋ. ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿವುದನ್ನು ಕಲಿಸುವ ಬಗೆ ಇದು. ಅದಕ್ಕಾಗಿ ಈ ಲೇಖನ.

ಯಾವುದೇ ವಿಷಯವನ್ನು ಅರ್ಥ ಮಾಡಿಸಲು ಉದಾಹರಣೆಗಿಂತ ಉತ್ತಮ ವಿಧಾನವಿಲ್ಲ. ಹಾಗೆಯೇ ಈ ಬರಹದಲ್ಲೂ ಒಂದು ಉದಾಹರಣೆ ಎತ್ತಿಿಕೊಳ್ಳುವೆ. ನಾಗೇಶ ಹೆಗಡೆ ಅಕ್ಟೋೋಬರ್ 10 ರಂದು ಪ್ರಜಾವಾಣಿಯ ತನ್ನ ಅಂಕಣದಲ್ಲಿ ಒಂದು ಲೇಖನ ಬರೆದರು. ರಥಾಶ್ವದಿಂದ ರಾಫೇಲ್‌ವರೆಗೆ ಎಂದದರ ಶೀರ್ಷಿಕೆ. ಅದರಲ್ಲಿ, ಭಾರತದಲ್ಲಿ ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಆರ್ಯರು ಬಂದಿರಲಿಲ್ಲ; ಅವರು ಭಾರತಕ್ಕೆೆ ಕಾಲಿಟ್ಟದ್ದು ಮೂರ್ನಾಲ್ಕು ಸಾವಿರ ವರ್ಷಗಳ ಈಚೆಗಷ್ಟೇ-ಎಂಬ ಹೊಸ ವಾದವನ್ನು ಮುಂದಿಟ್ಟರು. ಇದಕ್ಕೆೆ ಅವರು ಬಳಸಿಕೊಂಡದ್ದು ಸೆಲ್ ಮತ್ತು ಸೈನ್‌ಸ್‌ ಎಂಬ ಎರಡು ವಿಜ್ಞಾಾನ ಪತ್ರಿಿಕೆಗಳಲ್ಲಿ ಬಂದ ಸಂಶೋಧನಾ ಬರಹಗಳ ಬಗ್ಗೆೆ ಕಮ್ಯುನಿಸ್‌ಟ್‌ ಮುಖವಾಣಿಯಂಥ ಕೆಲವು ಪತ್ರಿಿಕೆಗಳಲ್ಲಿ ಪ್ರಕಟವಾದ ಅಭಿಪ್ರಾಾಯಗಳನ್ನು ಅರ್ಥಾತ್, ಹೆಗಡೆಯವರು ಮೂಲ ಸಂಶೋಧನಾ ಲೇಖನಗಳನ್ನು ಬಳಸಿಕೊಳ್ಳಲಿಲ್ಲ. ಅವಕ್ಕೆೆ ಪ್ರತಿಕ್ರಿಿಯೆ ಎಂಬಂತೆ ಬಂದ ಬರಹಗಳನ್ನು ಬಳಸಿಕೊಂಡರು.

ಮತ್ತು ಆ ಪ್ರತಿಕ್ರಿಿಯೆ ಅಥವಾ ಅಭಿಪ್ರಾಾಯಗಳು ಹೆಗಡೆಯವರ ಕಮ್ಯುನಿಸ್‌ಟ್‌ ಮನೋಧರ್ಮಕ್ಕೆೆ ಅನುಗುಣವಾದ್ದರಿಂದ ಎತ್ತಿಿಕೊಂಡರು. ಹಾಗೆ ಒಂದೆರಡು ಮೂಲಗಳನ್ನಷ್ಟೇ ಎದುರಿಟ್ಟುಕೊಂಡು, ಮೂಳೆ ಇಟ್ಟುಕೊಂಡು ಆನೆಯನ್ನು ಸೃಷ್ಟಿಿಸುವ ಮಂತ್ರವಾದಿಯಂತೆ, ಹೆಗಡೆ ನಾಲ್ಕೈದು ಸಾವಿರ ವರ್ಷಗಳ ಹಿಂದೆ ಏನೇನಾಗಿತ್ತು ಎಂಬುದನ್ನು ರಮಾನಂದ ಸಾಗರರ ಧಾರಾವಾಹಿಯಂತೆ ನಮ್ಮ ಮುಂದೆ ಹೇಳಿದರು. ಅವರ ಪ್ರಕಾರ ಭಾರತಕ್ಕೆೆ ಆರ್ಯರು ಬಂದದ್ದು ಮಧ್ಯ-ಏಷ್ಯದಿಂದ. ಸಿರಿಯಾ ಕಡೆಯಿಂದ. ಆರ್ಯರು ಭಾರತಕ್ಕೆೆ ಬರುವವರೆಗೆ ಇಲ್ಲಿನವರಿಗೆ ರಥಗಳ, ರಥಚಕ್ರಗಳ, ಕುದುರೆಗಳ ಪರಿಚಯ ಇರಲಿಲ್ಲ. ರಥ ಮತ್ತು ಅಶ್ವಗಳನ್ನು ಭಾರತಕ್ಕೆೆ ಪರಿಚಯಿಸಿದವರು ಆರ್ಯರು.

ಅವರು ಬಂದು ಭಾರತದ ಉಳಿದ ಜನಸಂಖ್ಯೆೆಯಲ್ಲಿ ಬೆರೆತುಹೋದರು. ಹಾಗಾಗಿ ಭಾರತದ ಅಷ್ಟೂ ಜನಸಂಖ್ಯೆೆ ಮುಂದೆ ಆರ್ಯನ್ ರಕ್ತವುಳ್ಳ ಬೆರಕೆ ಸಂಸ್ಕೃತಿಯಾಯಿತು. ಇದು ಹೆಗಡೆಯವರ ಲೇಖನದ ಸಾರಾಂಶ. ಈ ಫಲಿತಾಂಶಗಳ ಸಿಂಧುತ್ವವನ್ನು ಪ್ರಶ್ನಿಿಸಿ ನಾನು ಫೇಸ್‌ಬುಕ್ ಗೋಡೆಯಲ್ಲಿ ಒಂದಷ್ಟು ಪ್ರಶ್ನೆೆಗಳನ್ನು ಕೇಳಿದೆ. ನನ್ನಂತೆ ಹಲವಾರು ಮಂದಿ ಹೆಗಡೆಯವರ ಲೇಖನದ ವಿಶ್ವಾಾಸಾರ್ಹತೆಯನ್ನು ನೇರವಾಗಿ ಪ್ರಶ್ನಿಿಸಿದರು. ಮುಜುಗರಕ್ಕೊೊಳಗಾದವರಂತೆ ಕಂಡುಬಂದ ಹೆಗಡೆ ಲೇಖನಕ್ಕೆೆ ಸಮರ್ಥನೆ ಎಂದು ಮತ್ತೊೊಂದು ಫೇಸ್‌ಬುಕ್ ಬರಹವನ್ನು ತನ್ನ ಗೋಡೆಯಲ್ಲಿ ಬರೆದುಕೊಂಡರು. ನಾನು ಇಂದು ಪ್ರಯೋಗಕ್ಕಾಾಗಿ ಎತ್ತಿಿಕೊಂಡಿರುವುದು ಹೆಗಡೆಯವರ ಈ ಗೋಡೆಬರಹವನ್ನು ಅದರಲ್ಲೇನಿದೆ? ಬರಹದ ಮುಖ್ಯ ಭಾಗ ಇಲ್ಲಿದೆ: ಮೂರು ಸಾವಿರ ವರ್ಷಗಳ ಹಿಂದೆ (ಈಗಿನ) ಸಿರಿಯಾ ದೇಶವನ್ನು ಮಿತಾನ್ನಿಿ ವಂಶಸ್ಥರು ಆಳುತ್ತಿಿದ್ದರು. ಅವರ ಹಿಂದಿನ ತಲೆಮಾರಿನ ಎಲ್ಲ ರಾಜರ ಹೆಸರೂ ಸಂಸ್ಕೃತ ಮೂಲದ್ದೇ ಆಗಿತ್ತು. ಋಗ್ವೇದಿಕ್ ಸಂಸ್ಕೃತದ ಹೆಸರುಗಳು ಬಳಕೆಯಲ್ಲಿದ್ದವು (ಪುರುಷ, ತಶ್ರುತ (ದಶರಥ), ಸುವರ್ದತ, ಇಂದ್ರೋತ, ಸುಬಂಧು ಇತ್ಯಾಾದಿ). ಅವರು ರಥ ಕುದುರೆಗಳ ಬಳಕೆಯಲ್ಲಿ ನಿಷ್ಣಾಾತರಾಗಿದ್ದರು. ಐಕ (ಏಕ), ತಿರಾ (ಮೂರು), ಸತ್ತಾಾ, ಅಸುವ (ಅಶ್ವ) ಇತ್ಯಾಾದಿ ಪದಗಳು ಹಾಸುಹೊಕ್ಕಾಾಗಿದ್ದವು. ಋಗ್ವೇದದಲ್ಲಿ ಹೇಳಲಾದ ದೇವತೆಗಳನ್ನೂ ಆರಾಧಿಸುತ್ತಿಿದ್ದರು.

ಕ್ರಿಿ.ಪೂ. 1380ರಲ್ಲಿ ಪಕ್ಕದ ರಾಜನೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಇದಕ್ಕೆೆ ಇಂದ್ರ ವರುಣ ಮಿತ್ರ ಮತ್ತು ನತಸ್ಯ (ಅಶ್ವಿಿನಿ) ಸಾಕ್ಷಿ ಎಂಬ ಮಾತೂ ಇದೆ. ಇದು ಹೇಗೆ ಸಾಧ್ಯ? ಒಂದು ಅಧ್ಯಯನದ ಪ್ರಕಾರ ಮಧ್ಯ ಏಷ್ಯದಲ್ಲಿ ಉರಲ್ ಪರ್ವತದ ತಪ್ಪಲಿನ ಹುಲ್ಲುಗಾವಲಿನಲ್ಲಿ (ಅದಕ್ಕೆೆ ಸ್ಟೆೆಪ್ ಎನ್ನುತ್ತಾಾರೆ) ಈಗಿನ ಕಜಕ್‌ಸ್ತಾಾನ್ ಆಸುಪಾಸು ವಿಕಾಸಗೊಂಡು ಒಂದು ಸಮುದಾಯ ವೇದಕಾಲದ ಸಂಸ್ಕೃತವನ್ನು ಹೋಲುವ ಭಾಷೆಯನ್ನೂ ಬಳಸುತ್ತಿಿತ್ತು.

ಕ್ರಮೇಣ ಅವರಲ್ಲಿ ಎರಡು ಪಂಗಡಗಳು ಒಡೆದು ಯೋಧ+ರಥಾಶ್ವ ಪಡೆಯೊಂದು ಸಿರಿಯಾಕ್ಕೆೆ ಹೋಗಿ ಅಲ್ಲಿನ ರಾಜರ ಊಳಿಗದಲ್ಲಿದ್ದು ಕ್ರಮೇಣ ರಾಜ್ಯವನ್ನೇ ಕೈವಶ ಮಾಡಿಕೊಂಡಿತು. ವೇದಕಾಲದ ಸಂಸ್ಕೃತವೇ ಅವರ ಭಾಷೆಯಲ್ಲಿ ಶೇಷರೂಪದಲ್ಲಿ ಉಳಿದು ಬಂದಿದೆ. ಇತ್ತ ಇನ್ನೊೊಂದು ಪಡೆ ಹಿಂದೂಖುಷ್ ಪರ್ವತಗಳನ್ನು ದಾಟಿ ಪೇಶಾವರ ಪಂಜಾಬ್ ಕಡೆ ಬರಬರುತ್ತಾಾ ವೇದ ಇತ್ಯಾಾದಿಗಳನ್ನು ಉಳಿಸಿಕೊಂಡೋ ಬೆಳೆಸಿಕೊಂಡೋ ಬಂತು. ಮಾರ್ಗಮಧ್ಯೆೆಯ ಹೋರಾಟಗಳಲ್ಲಿ ಅಥವಾ ಕವಿಸಮಯದಲ್ಲಿ ರಾಮಾಯಣ ಮಹಾಭಾರತ ಎಲ್ಲ ಆಗಿರಬೇಕು. ಅವರು (ಆರ್ಯನ್ನರು) ಕುದುರೆ ರಥಗಳನ್ನು (ಅವರ ರಥಗಳ ಗಾಲಿಗಳು ಇಡಿಯಾಗಿರಲಿಲ್ಲ, ಕಡ್ಡಿಿ ಇದ್ದವು), ಸಂಸ್ಕೃತ ಸಂಬಂಧಿ ಭಾಷೆಗಳನ್ನೂ ಸಿಂಧೂ ಕಣಿವೆಗೆ ತಂದರು. ಅವರು ಬರುವುದಕ್ಕಿಿಂತ ಮೊದಲು ಅಲ್ಲಿ ಮತ್ತು ರಾಖಿಗಡಿಯಲ್ಲಿ ವಾಸಿಸುತ್ತಿಿದ್ದ ಜನರಿಗೆ ಆರ್ಯ ಸಂಸ್ಕೃತಿ ಗೊತ್ತಿಿರಲಿಲ್ಲ. ಅಲ್ಲಿ ಲಭಿಸಿದ ಅಸ್ಥಿಿಪಂಜರದಲ್ಲಿ ಆರ್ಯನ್ ವಂಶವಾಹಿಗಳು ಇಲ್ಲ.

ಇದಿಷ್ಟು ಹೆಗಡೆಯವರು ಬರೆದಿರುವ ಕಥೆ. ಅವರದೇ ಶಬ್ದಗಳಲ್ಲಿ, ಒಂದನ್ನೂ ಅತ್ತಿಿತ್ತ ಮಾಡದೆ ಕೊಟ್ಟಿಿದ್ದೇನೆ. ಈಗ ಇದನ್ನು ಸ್ವಲ್ಪ ವಿಶ್ಲೇಷಿಸೋಣ. ಈ ಇಷ್ಟು ಕಥೆಯನ್ನು ನಾಗೇಶ ಹೆಗಡೆಯವರು ಸ್ಕ್ರೋೋಲ್ ಎಂಬ, ಎಡಪಂಥೀಯ ವಿಚಾರಗಳನ್ನು ಹರಡುವುದಕ್ಕೆೆಂದೇ (ಜತೆಗೆ, ಮೋದಿಯನ್ನು ಹಾಗೂ ಮೋದಿ ಸರಕಾರವನ್ನು ಟೀಕಿಸಲೆಂದೇ ಮೀಸಲಿರುವ) ಪತ್ರಿಿಕೆಯಲ್ಲಿ ಪ್ರಕಟವಾದ ಒಂದು ಲೇಖನದಿಂದ ಯಥಾವತ್ ಎತ್ತಿಿಕೊಂಡಿದ್ದಾಾರೆ (ಮೂಲ ಲೇಖನವನ್ನು ತನ್ನ ಫೇಸ್‌ಬುಕ್ ಪೋಸ್‌ಟ್‌‌ನಲ್ಲಿ ಉಲ್ಲೇಖಿಸಿದ್ದಾಾರೆ ಕೂಡ). ಸ್ಕ್ರೋೋಲ್ ಪತ್ರಿಿಕೆಯಲ್ಲಿ ಪ್ರಕಟವಾದ ಬರಹದ ಲೇಖಕ ಶೊಯೆಬ್ ದನಿಯಾಲ್ ಎಂಬಾತ. ಈತ ಸಂಶೋಧಕನಲ್ಲ, ಇತಿಹಾಸಜ್ಞನಲ್ಲ, ವಿಜ್ಞಾಾನಿಯಲ್ಲ, ಭಾಷಾಶಾಸ್ತ್ರಜ್ಞನಲ್ಲ. ಮತ್ಯಾಾರು? ರಾಜಕೀಯ ವಿಡಂಬನಕಾರ.

ಮೋದಿ ಸರಕಾರವನ್ನು ಟೀಕಿಸಿ ಬರೆಯಲೆಂದೇ ಜೀವನ ಮುಡಿಪಿಟ್ಟಿಿರುವ ಓರ್ವ ಜರ್ನಲಿಸ್‌ಟ್‌ ಅಷ್ಟೆೆ! ಈತ ಇದುವರೆಗೆ ಏನೇನು ಬರೆದಿದ್ದಾಾನೆ ಎಂದು ಗೂಗಲ್ ಮಾಡಿದರೆ ಧಂಡಿಯಾಗಿ ಮೋದಿದ್ವೇಷೀ, ಹಿಂದೂದ್ವೇಷೀ ಬರಹಗಳು ಸಿಗುತ್ತವೆ. ನಾಲ್ಕಾಾರು ಲೇಖನಗಳ ಶೀರ್ಷಿಕೆ ಓದಿದರೇ ಸಾಕು, ಅವುಗಳಲ್ಲಿ ಆತ ಏನು ಹೇಳಿದ್ದಾಾನೆಂಬುದು ಸುಸ್ಪಷ್ಟವಾಗುತ್ತದೆ. ಈ ಮೇಲೆ ಹೆಗಡೆಯವರು ಉಲ್ಲೇಖಿಸಿರುವ ಲೇಖನವನ್ನು ಆತ ಬರೆದದ್ದು 2015ರ ಜುಲೈನಲ್ಲಿ. ಸಂದರ್ಭ: ಬ್ಯಾಾಂಕಾಕ್‌ನಲ್ಲಿ ನಡೆಯಲಿದ್ದ 16ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಲು ಭಾರತವೂ ಉತ್ಸಾಾಹದಿಂದ ಮುಂದೆ ಬಂದದ್ದು. ಭಾರತವು ಅದೆಂದೋ ಮೃತವಾಗಿರುವ ಭಾಷೆಯ ವಾರಸುದಾರನೆಂದು ಹೇಳಿಕೊಳ್ಳುತ್ತ, ಸರಕಾರಿ ಖರ್ಚಿನಲ್ಲಿ ಸಂಸ್ಕೃತ ಪಂಡಿತರನ್ನು ಈ ಸಮ್ಮೇಳನಕ್ಕೆೆ ಕಳಿಸಲು ಉತ್ಸುಕವಾಗಿದೆ, ಇದು ಖಂಡನೀಯ-ಎಂದು ಪ್ರತಿಭಟನಾರ್ಥವಾಗಿ ಶೊಯೆಬ್ ಬರೆದಿದ್ದ ಲೇಖನ ಅದು.

ಸಂಸ್ಕೃತ ಹುಟ್ಟಿಿದ್ದು ಭಾರತದಲ್ಲಿ ಅಲ್ಲ, ದೂರದ ಸಿರಿಯಾದಲ್ಲಿ; ಹಾಗಾಗಿ ಭಾರತವು ಸಂಸ್ಕೃತದ ವಿಷಯದಲ್ಲಿ ಹೆಮ್ಮೆೆಪಡಲು ಕಾರಣವೇನೂ ಇಲ್ಲ. ಇದು ಅವನ ಲೇಖನದ ವರಸೆ. ಇನ್ನು ಆ ಲೇಖನದಲ್ಲಿರಬಹುದಾದ ತಿರುಳು ಏನು ಎಂಬುದನ್ನು ಯಾರೂ ಊಹಿಸಬಹುದು. ಲೇಖನದಲ್ಲಿ ಆತ, ಸಂಸ್ಕೃತವೆಂಬುದು ಹಿಂದೂಗಳ ದೈವತ್ವದ ಭಾಷೆ. ಅದೆಷ್ಟು ಪವಿತ್ರವೆಂದರೆ ಹಿಂದೂಗಳಲ್ಲಿ ನೂರಕ್ಕೆೆ 75ರಷ್ಟಿಿರುವ ಕೆಳವರ್ಗದ ಜನರು ಅದನ್ನು ಕಿವಿಯಿಂದ ಕೇಳಲು ಅವಕಾಶವಿರಲಿಲ್ಲ. ಈಗ ಭಾರತೀಯ ಜನತಾ ಪಕ್ಷವು ತನ್ನ ಹೈಪರ್-ನ್ಯಾಾಷನಲಿಸಮ್ ಅನ್ನು ದೇಶಾದ್ಯಂತ ಉದ್ದೀಪಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಸಂಸ್ಕೃತವನ್ನು ವೈಭವೀಕರಿಸುತ್ತಿಿದೆ. ಎಂದು ಬರೆದಿದ್ದಾಾನೆ. ತಮಾಷೆ ಎಂದರೆ, ಸಂಸ್ಕೃತ ಒಂದು ಸತ್ತ ಭಾಷೆ, ಅದಕ್ಕೆೆ ಅಸ್ತಿಿತ್ವವೇ ಇಲ್ಲ ಎಂದು ಹೇಳುವ ಈತ, ಅದಾಗಿ ನಾಲ್ಕನೇ ಸಾಲಿಗೆ ಬರುವಾಗ ಸಂಸ್ಕೃತದ ಶಬ್ದಗಳೆಲ್ಲ ಇಂದೂ ಚಾಲ್ತಿಿಯಲ್ಲಿವೆ ಎನ್ನುತ್ತಾಾನೆ! ನಾಗೇಶ ಹೆಗಡೆಯವರು ತನ್ನ ಬರಹದಲ್ಲಿ ಒಂದು ಸಂಶೋಧನೆಯ ಪ್ರಕಾರ ಎಂದಿದ್ದಾಾರಲ್ಲ, ಅದು ಈತನ ಲೇಖನವನ್ನು ಉಲ್ಲೇಖಿಸಿಯೇ.

ನಾಗೇಶ ಹೆಗಡೆ ಮತ್ತು ಶೊಯೆಬ್ ಪ್ರಕಾರ, ಕಜಕ್‌ಸ್ತಾಾನದ ಉರಲ್ ಪರ್ವತಗಳ ತಪ್ಪಲಿನಲ್ಲಿದ್ದ ಜನಾಂಗವೇ ಎರಡಾಗಿ ಒಡೆದು ಒಂದು ಭಾಗ ಸಿರಿಯಾಗೆ ಹೋಯಿತು, ಇನ್ನೊೊಂದು ತಂಡ ಹಿಂದೂಖುಷ್ ಮೂಲಕ ಭಾರತಕ್ಕೆೆ ಬಂತು. ಸಿರಿಯಾಗೆ ಹೋದವರು ಮೊದಲು ಅಲ್ಲಿನ ರಾಜನ ಊಳಿಗದಲ್ಲಿದ್ದುಕೊಂಡು ನಂತರ ತಾವೇ ರಾಜ್ಯಾಾಡಳಿತ ಮಾಡಿದರು. ತಮಾಷೆ ಎಂದರೆ, ಉರಲ್ ಬೆಟ್ಟಗಳ ತಪ್ಪಲಿಂದ ಹೋದವರ ಪೈಕಿ ಒಂದು ಕವಲಿನವರು ಮಾತ್ರ ವೇದಗಳನ್ನು ಉಳಿಸಿಕೊಂಡರು, ಇನ್ನೊೊಂದು ಕವಲು ಉಳಿಸಿಕೊಳ್ಳಲಿಲ್ಲ. ಯಾವುದೇ ವ್ಯಕ್ತಿಿ ಅಥವಾ ಸಮುದಾಯ ತಮ್ಮ ಕೈಗೆ ರಾಜ್ಯಾಾಧಿಕಾರ ಸಿಕ್ಕಾಾಗ ತಮ್ಮ ಸಿದ್ಧಾಾಂತಗಳನ್ನು, ತಮ್ಮ ಧರ್ಮವನ್ನು, ತಮ್ಮ ಅಜೆಂಡಾಗಳನ್ನು ಹರಡುವುದಕ್ಕೆೆ ಪ್ರಾಾಮುಖ್ಯ ಕೊಡುತ್ತಾಾರೆ. ಅದು ಅಂದಿನ ಮೌರ್ಯ ಸಾಮ್ರಾಾಜ್ಯದಿಂದ ಇಂದಿನ ಮೋದಿ ಸರಕಾರದವರೆಗೆ ಎಲ್ಲೆೆಲ್ಲೂ ನಡೆದಿರುವ ಸಹಜ ಪ್ರಕ್ರಿಿಯೆ. ಆದರೆ, ಸಿರಿಯಾದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಆರ್ಯರು ವೇದಗಳ ಪ್ರಚಾರಕ್ಕೆೆ ಮನಸ್ಸು ಮಾಡಲೇ ಇಲ್ಲ! ಯಾಕೋ! ವೇದವನ್ನು ಉಳಿಸಿಕೊಂಡವರು ಹಿಂದೂಖುಷ್ ಮೂಲಕ ಮರಳುಗಾಡು, ಗುಡ್ಡಗಾಡು, ಬೆಟ್ಟ-ಕಣಿವೆ ಎಲ್ಲವನ್ನೂ ಹತ್ತಿಿಳಿಯುತ್ತ ಬಸವಳಿಯುತ್ತಿಿದ್ದ ಅಲೆಮಾರಿ ಆರ್ಯರು ಮಾತ್ರವೇ. ಇದು ವಿಚಿತ್ರ ಅನ್ನಿಿಸುವುದಿಲ್ಲವೆ? ಬಹುಶಃ ಈ ಸಂದೇಹ ನಾಗೇಶರಿಗಾಗಲೀ ಶೊಯೆಬ್‌ಗಾಗಲೀ ಬಂದಿಲ್ಲ. ಬಂದರೆ ಅವರು ಅದಕ್ಕೂ ಒಂದು ಹೊಸ ಕತೆ ಕಟ್ಟುತ್ತಾಾರೆ. ಸಿರಿಯಾದ ಜನರೂ ವೇದಗಳನ್ನು ಕಾಪಿಟ್ಟಿಿದ್ದರು, ಅದರ ಒಂದು ಪ್ರತಿ ಇಂತಿಂಥ ಮ್ಯೂಸಿಯಮ್ಮಿಿಲ್ಲಿದೆ ಎಂದು ವಿಳಾಸವಿಲ್ಲದ ಹೆಸರೊಂದನ್ನು ತೇಲಿಬಿಡುತ್ತಾಾರೆ.

ಹಿಂದೂಖುಷ್ ಮೂಲಕ ಭಾರತಕ್ಕೆೆ ಬರುತ್ತಿಿದ್ದ ಆರ್ಯರು ದಾರಿ ಮಧ್ಯದಲ್ಲಿ ರಾಮಾಯಣ, ಮಹಾಭಾರತಗಳನ್ನು ಸೃಷ್ಟಿಿಸಿದರು ಎಂಬುದು ನಾಗೇಶ ಹೆಗಡೆಯವರ ಅಭಿಪ್ರಾಾಯ (ಕವಿಸಮಯ ಎಂಬ ವ್ಯಂಗ್ಯವನ್ನೂ ಗಮನಿಸಿ). ಮಹಾಭಾರತದ ಕೇಂದ್ರಗಳು ಹಸ್ತಿಿನಾವತಿ, ಇಂದ್ರಪ್ರಸ್ಥ. ಯುದ್ಧ ನಡೆದದ್ದು ಕುರುಕ್ಷೇತ್ರದಲ್ಲಿ. ಮಹಾಕಾವ್ಯದ ಕತೆಯು ಅತ್ತ ಗಾಂಧಾರದಿಂದ ಇತ್ತ ಮಣಿಪುರದವರೆಗೆ ವಿಸ್ತರಿಸಿದೆ. ಆದರೆ ಆ ಕಾವ್ಯವನ್ನು ಭಾರತದ ಹೊರಗಿದ್ದ, ಇನ್ನೂ ಭಾರತಕ್ಕೆೆ ಬರುತ್ತಿಿದ್ದ, ಭಾರತವನ್ನು ಇದುವರೆಗೆ ನೋಡಿರದೇ ಇದ್ದ ಜನಾಂಗವೊಂದು ಸೃಷ್ಟಿಿಸಿತು ಎಂದರೆ ಯಾವ ಮಡೆಯನಾದರೂ ನಂಬಿಯಾನೆ? ಅದೇ ರೀತಿಯಲ್ಲಿ ಕೋಸಲದಿಂದ ಶ್ರೀಲಂಕೆಯವರೆಗೆ ಭಾರತದ ಉತ್ತರ-ದಕ್ಷಿಣಗಳಿಗೆ ಹಬ್ಬಿಿರುವ ರಾಮಾಯಣದ ಕತೆಯನ್ನು, ಭಾರತವನ್ನೇ ನೋಡದ, ನಡುದಾರಿಯಲ್ಲಿದ್ದ ಅಪರಿಚಿತನೊಬ್ಬ ಬರೆದ ಎಂದು ಹೇಳಿದರೆ ಈ ದೇಶದ ಕಟ್ಟಕಡೆಯ ಮೂರ್ಖನಾದರೂ ನಂಬಿಯಾನೆ? ಯಾವುದೇ ಜನಾಂಗ ತನ್ನ ತಾಯ್ನಾಾಡು ಬಿಟ್ಟು ಪರದೇಶಕ್ಕೆೆ ಅನಿವಾರ್ಯವಾಗಿಯಾದರೂ ಹೊರಟುನಿಂತರೆ ತನ್ನ ಮಾತೃಭೂಮಿಯನ್ನು ಸಾಹಿತ್ಯದಲ್ಲಿ ಶಾಶ್ವತವಾಗುಳಿಸುವ ಕೆಲಸವನ್ನು ಮಾಡುತ್ತದೆಯೇ ಹೊರತು ತಾನು ನೋಡದ, ಕೇಳದ, ಕಾಲೂರದ ಸ್ಥಳದ ಬಗ್ಗೆೆ ಮಹಾಕಾವ್ಯ ಬರೆಯುವುದಿಲ್ಲ.

ಉರಲ್ ಬೆಟ್ಟಗಳ ತಪ್ಪಲಿನಿಂದ ಪಶ್ಚಿಿಮಕ್ಕೆೆ-ಸಿರಿಯಕ್ಕೆೆ ಹೋದವರ ಭಾಷೆ ವೇದಕಾಲೀನ ಸಂಸ್ಕೃತವನ್ನು ಹೋಲುತ್ತಿಿತ್ತು ಎನ್ನುವ ನಾಗೇಶರು, ಎರಡು ಸಾಲು ದಾಟಿ ಮೂರನೆಯದಕ್ಕೆೆ ಬರುವಷ್ಟರಲ್ಲಿ, ಆ ಜನರು ಆಡುತ್ತಿಿದ್ದದ್ದು ವೇದ ಸಂಸ್ಕೃತವೇ ಎಂಬ ಖಚಿತತೆಯತ್ತ ಬರುತ್ತಾಾರೆ! ವೇದಕಾಲದ ಸಂಸ್ಕೃತವನ್ನು ಹೋಲುವ ಭಾಷೆ ಎಂಬುದಕ್ಕೂ ವೇದಕಾಲದ್ದೇ ಸಂಸ್ಕೃತ ಎಂಬುದಕ್ಕೂ ವ್ಯತ್ಯಾಾಸ ಇಲ್ಲವೆ? ಸಿರಿಯಾ ಕಡೆ ಹೋದ ಈ ವೈದಿಕ ಜನ, ನಾಗೇಶರ ಪ್ರಕಾರ, ವೇದಗಳಲ್ಲಿ ಉಲ್ಲೇಖಿಸಿದ್ದ ದೇವತೆಗಳನ್ನು ಪೂಜಿಸುತ್ತಿಿದ್ದರು. ಅಂದರೆ ವೇದಗಳ ಬೆಳವಣಿಗೆ ಆ ಕಾಲಕ್ಕಾಾಗಲೇ ಆಗದ್ದಿರಬೇಕು. ಹಾಗಾದರೆ ಅಲ್ಲಿ ವೇದಪಾಠ, ವೇದಾಗಮಗಳ ಬೆಳವಣಿಗೆ ಯಾಕೆ ಆಗಲಿಲ್ಲ? ಸಿರಿಯಾದಲ್ಲಿ ರಾಜರಾಗಿ ಅಧಿಕಾರ ಗೆದ್ದಮೇಲೂ ವೈದಿಕರು ತಮ್ಮ ಸಂಸ್ಕೃತಿ-ಸಾಹಿತ್ಯಗಳಿಗೆ ರಾಜಮನ್ನಣೆ ಕೊಡುವ ಕೆಲಸವನ್ನು ಮಾಡಲಿಲ್ಲವೇಕೆ? ತಮಾಷೆಯೆಂದರೆ, ಇದಕ್ಕೆೆ ತದ್ವಿಿರುದ್ಧವೆನ್ನುವಂತೆ ವೇದದ ಸಮಸ್ತಜ್ಞಾಾನವನ್ನೂ ಕಾಪಿಟ್ಟವರು ಉರಲ್ ಬೆಟ್ಟಗಳ ತಪ್ಪಲಿಂದ ಪೂರ್ವಕ್ಕೆೆ ಬಂದವರು ಮಾತ್ರವೇ! ಉರಲ್‌ನಿಂದ ಪೂರ್ವಕ್ಕೆೆ, ಹಿಂದೂಖುಷ್ ಕಣಿವೆಗಳತ್ತ ನಡೆದುಬಂದ ಈ ಜನರಿಗೆ ಕೈಯಲ್ಲಿ ಅಧಿಕಾರವಿರಲಿಲ್ಲ. ಆದರೂ ಅವರು ವೇದಗಳನ್ನು ರಕ್ಷಿಸಿದರು, ಬೆಳೆಸಿದರು, ಹರಡಿದರು. ಮೂರ್ನಾಲ್ಕು ಸಾವಿರ ವರ್ಷಗಳೇ ಕಳೆದರೂ ಅದನ್ನು ಜತನದಿಂದ ಉಳಿಸಿಕೊಂಡರು. ಈ ಮ್ಯಾಾಜಿಕ್ ನಡೆಯಲು ಕಾರಣವೇನು?

ಈ ವಾದವನ್ನೇ ಇನ್ನಷ್ಟು ಬೆಳೆಸುತ್ತೇನೆ. ವೇದಗಳನ್ನು ಅಪೌರುಷೇಯ ಎನ್ನುತ್ತೇವೆ. ಬಿಡಿ, ಮನುಷ್ಯಮಾತ್ರರೇ ಅವನ್ನು ಸೃಷ್ಟಿಿಮಾಡಿದರು ಎಂದೇ ಇಟ್ಟುಕೊಳ್ಳೋೋಣ. ಸೃಷ್ಟಿಿಯಾದ ಮೇಲೆ ಹಲವು ನೂರು ವರ್ಷಗಳ ಕಾಲ ಅದು ತಲೆಮಾರಿನಿಂದ ತಲೆಮಾರಿಗೆ ಹರಿದುಬಂದದ್ದು ಕೇವಲ ಶ್ರುತಿಯಾಗಿ. ಅಂದರೆ ಮೌಖಿಕ ರೂಪದಲ್ಲಿ. ವೇದಗಳನ್ನು ಭೂರ್ಜಪತ್ರಗಳಲ್ಲಾಾಗಲೀ ತಾಳೆಗರಿಯಲ್ಲಾಾಗಲೀ ಬರೆದಿಡುವ ಕ್ರಮವಿರಲಿಲ್ಲ. ಹಾಗೆ ಶ್ರುತಿಯಾಗಿ ಹರಿದುಬಂದದ್ದೇ ಅದೆಷ್ಟೋೋ ಶತಮಾನಗಳ ನಂತರ ಬರಹರೂಪಕ್ಕಿಿಳಿಯಿತು. ಭಾಷೆ ಹುಟ್ಟುವುದು ಮಾತಿನ ಮೂಲಕ, ನಂತರವಷ್ಟೇ ಲಿಪಿ ಜನ್ಮತಾಳುತ್ತದೆ ಎಂಬುದು ನಮಗೆ ಗೊತ್ತಿಿರುವ ವಿಚಾರ. ಲಿಪಿ ಹುಟ್ಟಿಿ, ಭಾಷೆ ಆಮೇಲೆ ಸೃಷ್ಟಿಿಯಾಗುತ್ತದೆ ಎಂದು ಹೇಳಿದ ಒಬ್ಬನೇ ಒಬ್ಬ ವಿಜ್ಞಾಾನಿ, ವಿದ್ವಾಾಂಸ ಜಗತ್ತಿಿನಲ್ಲಿ ಇಲ್ಲ. ನಾಗೇಶ ಹೆಗಡೆಯವರ ಪ್ರಕಾರ ಕ್ರಿಿ.ಪೂ. 1380ರಲ್ಲಿ ಮಿತಾನ್ನಿಿ ವಂಶಸ್ಥರು ಪಕ್ಕದ ರಾಜನ ಜತೆ ಒಂದು ಲಿಖಿತ ಒಪ್ಪಂದ ಮಾಡಿಕೊಂಡರು. ಅಂದರೆ ಆ ಕಾಲಕ್ಕಾಾಗಲೇ ಮಿತಾನ್ನಿಿ ಜನ ಲಿಪಿ ಬಳಸುತ್ತಿಿದ್ದರು ಎಂದಾಯಿತು. ನಾಗೇಶರ ಪ್ರಕಾರ, ವೈದಿಕರು ಭಾರತವನ್ನು ಪ್ರವೇಶಿಸಿದ್ದೂ ಅದೇ ಕಾಲದಲ್ಲಿ. ಲಿಪಿ ಬಳಸುತ್ತಿಿದ್ದ ಮಿತಾನ್ನಿಿಗಳು ವೇದಗಳನ್ನು ಬರೆದಿಡಲಿಲ್ಲ. ಭಾರತಕ್ಕೆೆ ಬಂದ ವೈದಿಕರು, ತಮ್ಮಲ್ಲಿ ಲಿಪಿಬಳಕೆ ಇಲ್ಲದಿದ್ದರೂ, ವೇದವನ್ನು ಕಷ್ಟಪಟ್ಟು ಶ್ರುತಿಪಾಠದ ರೂಪದಲ್ಲಿ ಉಳಿಸಿಕೊಂಡರು! ಇದು ವಿಚಿತ್ರ ಅನ್ನಿಿಸುವುದಿಲ್ಲವೆ?

ಈ ಕಮ್ಯುನಿಸ್ಟರು ತಮ್ಮ ಥಿಯರಿಗಳನ್ನು ಹೇಗೆ ಕಟ್ಟುತ್ತಾಾರೆ ನೋಡೋಣ. ಮೊದಲಿಗೆ ಅವರಿಗೆ ಅವರದ್ದೇ ಆದ ಕೆಲವು ಸ್ಥಾಾಪಿತ ಸಿದ್ಧಾಾಂತಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆರ್ಯರು ಭಾರತಕ್ಕೆೆ ಹೊರಗಿನಿಂದ ಬಂದರು, ಹಿಂದೂಗಳು ಇಲ್ಲಿದ್ದ ಮೂಲನಿವಾಸಿಗಳನ್ನು ತುಳಿದರು, ಪುರೋಹಿತಶಾಹಿ ಇಡೀ ಸಮಾಜವನ್ನು ತನ್ನ ಕಪಿಮುಷ್ಟಿಿಯಲ್ಲಿ ಹಿಡಿದುಕೊಂಡಿತ್ತು, ಸಂಸ್ಕೃತ ಕೇವಲ ಸಮಾಜದ ಉನ್ನತಸ್ಥರದವರ ಸೊತ್ತಾಾಗಿತ್ತು, ಆರ್ಯರು ವರ್ಣಾಶ್ರಮ ಪದ್ಧತಿ ತಂದರು.. ಹೀಗೆ ಮುಂದುವರಿಯುತ್ತದೆ ಆ ಚರ್ವಿತಚರ್ವಣ. ಒಂದು ಕಾಲದಲ್ಲಿ ಬ್ರಿಿಟಿಷರಿಗೆ ತಾವು ವಸಾಹತುಗಳನ್ನು ಸ್ಥಾಾಪಿಸಿದ ಪ್ರದೇಶಗಳಲ್ಲಿ, ಎಲ್ಲವೂ ಹೊರಗಿನಿಂದ ಬಂತು ಎಂಬ ಥಿಯರಿಯನ್ನು ಸೃಷ್ಟಿಿಸಿ ಹರಡುವ ಅನಿವಾರ್ಯತೆ ಇತ್ತು.

ಉದಾಹರಣೆಗೆ, ಭಾರತದಲ್ಲಿದ್ದ ಮೂಲ ನಿವಾಸಿಗಳು ಪೆದ್ದರು, ಅಯೋಗ್ಯರು. ಅವರನ್ನು ಹೊರಗಿನಿಂದ ಬಂದ ಆರ್ಯರು ಸಂಸ್ಕೃತಿ, ಶಿಷ್ಟಾಾಚಾರ ಕಲಿಸಿ ಉದ್ಧರಿಸಿದರು ಎಂಬ ಕತೆಯನ್ನು ಹರಡುವ ಅಗತ್ಯವಿತ್ತು. ಹೊರಗಿಂದ ಬಂದು ಈ ದೇಶದ ಜನರನ್ನು ಆಳುವುದು ಹೊಸತೇನೂ ಅಲ್ಲ; ಹಿಂದಿನವರು ಮಾಡಿದರು, ಹಾಗಾಗಿ ನಾವೂ ಮಾಡಿದ್ದೇವೆ. ಎಂಬುದನ್ನು ಆ ಮೂಲಕ ಸ್ಥಾಾಪಿಸಬೇಕಿತ್ತು. ತಮ್ಮ ಆಕ್ರಮಣಕ್ಕೆೆ, ವೈಟ್ ಮ್ಯಾಾನ್‌ಸ್‌ ಬರ್ಡನ್ ಎಂಬ ಅಸಂಬದ್ಧ ಪರಂಗಿ ಪರಿಕಲ್ಪನೆಗೆ ಒಂದು ಜಸ್ಟಿಿಫಿಕೇಶನ್ನನ್ನು ಈ ರೀತಿ ತೋರಿಸಬೇಕಿತ್ತು. ಹಾಗಾಗಿ ಆರ್ಯ ಸಿದ್ಧಾಾಂತವನ್ನು ಪುರಸ್ಕರಿಸಿದರು. ನಂತರದ ಎಡಪಂಥೀಯ ಚಿಂತಕರಿಗೆ ತಮ್ಮ ಎಡಚಿಂತನೆ (ಅರ್ಥಾತ್ ವಿದೇಶಿ ನೆಲದಲ್ಲಿ ಹುಟ್ಟಿಿದ ಮಾರ್ಕ್‌ಸ್‌‌ವಾದ) ಭಾರತವನ್ನು ಉದ್ಧರಿಸಲಿಕ್ಕೆೆಂದೇ ಇದೆ ಎಂದೂ ಸಾಧಿಸಬೇಕಿತ್ತು.

ಅಲ್ಲದೆ ನೆಹರೂ ಯುಗದಲ್ಲಿ ಇತಿಹಾಸ ಪಠ್ಯಪುಸ್ತಕಗಳನ್ನು ಸೆಕ್ಯುಲರೀಕರಿಸುವ ಹೊಣೆಯನ್ನು ಅವರೇ ಹೊತ್ತಿಿದ್ದರಿಂದ ಮುಸ್ಲಿಿಂ ದಾಳಿಕೋರರ ಆಕ್ರಮಣ, ಹಿಂಸಾಚಾರಗಳಿಗೆಲ್ಲ ಒಂದು ತಾತ್ತ್ವಿಿಕ ಹಿನ್ನೆೆಲೆಯನ್ನೊೊದಗಿಸಲೆಂದು ಆರ್ಯರ ಆಕ್ರಮಣದ ಸಿದ್ಧಾಾಂತವನ್ನು ಮುಂದೆ ಮಾಡಿದರು. ಆಕ್ರಮಣದ ಸಿದ್ಧಾಾಂತಕ್ಕೆೆ ತಕ್ಕಷ್ಟು ವಿಜ್ಞಾಾನದ ಪುಷ್ಟಿಿ ಸಿಗದೇ ಹೋದಾಗ ಅದುವೇ ಆಗಮನ ಎಂದಾಯಿತು. ಆರ್ಯರು ಬಂದು ಜಗಳಪಗಳ ಮಾಡದೆ ಭಾರತದ ತುಂಬ ಹರಡಿದ್ದ ದ್ರಾಾವಿಡರನ್ನು ದಕ್ಷಿಣಕ್ಕೆೆ ಓಡಿಸಿದರು. ಎಂಬ ಸಿದ್ಧಾಾಂತ ಬಹಳ ಕಾಲ ಪ್ರಚಾರದಲ್ಲಿತ್ತು. ಡಿಎನ್‌ಎ ಟೆಸ್‌ಟ್‌ ಮಾಡಿಸಿ ಬಿಡೋಣಲ್ಲ ಎಂದು ವಿಜ್ಞಾಾನ ಹೇಳತೊಡಗಿದ ಮೇಲೆ ಈಗ ಆಗಮನದ ಸಿದ್ಧಾಾಂತವನ್ನೂ ಎಡ-ಬಿಡಂಗಿಗಳು ಬಹುಪಾಲು ಬದಲಾಯಿಸಿದ್ದಾಾರೆ. ಆರ್ಯರು ದ್ರಾಾವಿಡರ ಜತೆ ಬೆರಕೆಯಾದರು; ಹಾಗಾಗಿ ಭಾರತದಾದ್ಯಂತ ಇರುವುದು ಬೆರಕೆ ತಳಿಯೇ-ಎಂಬ ಹೊಸ ಸಿದ್ಧಾಾಂತ ಈಗ ಬಂದಿದೆ! ದೇಶದಲ್ಲಿರುವುದು ಆರ್ಯ ದ್ರಾಾವಿಡರ ಬೆರಕೆ ಎಂದಾದರೆ ಇದೇ ಎಡಪಂಥೀಯರು ಸೃಷ್ಟಿಿಸಿದ ವರ್ಣಾಶ್ರಮ ಪದ್ಧತಿ ಆಚರಿಸಲಾಗುತ್ತಿಿತ್ತು ಎಂಬ ವಾದವೇ ಮುರಿದು ಬೀಳುತ್ತದೆ!

ಇಷ್ಟೆೆಲ್ಲ ಬಗೆ ಬಗೆಯ ಸಿದ್ಧಾಾಂತಗಳನ್ನು ಸೃಷ್ಟಿಿಸಲಾಯಿತಲ್ಲ? ಇವಾವುದಕ್ಕೂ ವೈಜ್ಞಾಾನಿಕ ಆಧಾರಗಳೊಂದೂ ಇರಲಿಲ್ಲ ಎಂಬುದು ವಿಸ್ಮಯ! ಅಲ್ಲದೆ ಇಂಥ ಥಿಯರಿಗಳಿಗೆ ವೈಜ್ಞಾಾನಿಕ ಆಧಾರಗಳನ್ನು ಕೇಳಬೇಕೆಂಬ ಎಚ್ಚರವೂ ಭಾರತೀಯರಲ್ಲಿರಲಿಲ್ಲ (ನಿಜಕ್ಕೂ ಮಡೆಯರೇ ಎನ್ನೋೋಣವೇ?) 90ರ ದಶಕದಲ್ಲಿ ಆರ್ಕಿಯಾಲಜಿಯಲ್ಲಿ ಒಂದಷ್ಟು ಸುಧಾರಣೆಯಾದವು. ರಾಖಿಗಡಿಯ ಉತ್ಖನನವಾಯಿತು. ಡಿಎನ್‌ಎ ಆಧಾರದಲ್ಲಿ ಜನಾಂಗಗಳ ವಲಸೆಯ ಕುರಿತು ಊಹಿಸುವ ಹೊಸ ವಿಧಾನಗಳು ಬಂದವು. ಈ ಹೊಸ ಬದಲಾವಣೆಗೆ ತಕ್ಕಂತೆ ಎಡಪಂಥೀಯರು ತಮ್ಮ ಬಣ್ಣ ಬದಲಿಸಿಕೊಂಡರು.

ಯಾವ ಮೂಳೆಯಲ್ಲಿ, ವಿದೇಶಿಯರ ವರ್ಣತಂತುಗಳ ಛಾಯೆಯೇ ಇಲ್ಲ ಎಂದು ವಿಜ್ಞಾಾನಿಗಳು ಹೇಳುತ್ತಾಾರೋ ಆ ಮೂಳೆಯ ವಾರಸುದಾರರು (ಅರ್ಥಾತ್, ಆ ಮೂಳೆಯನ್ನು ತನ್ನ ದೇಹದಲ್ಲಿ ಹೊತ್ತಿಿದ್ದ ವ್ಯಕ್ತಿಿ) ತೀರಿಕೊಂಡ ಮೇಲೆಯೇ ಆರ್ಯರು ಭಾರತಕ್ಕೆೆ ಬಂದರು. ಎಂಬ ಥಿಯರಿಗಳನ್ನು ಈಗ ಕಟ್ಟಲಾಗುತ್ತಿಿದೆ. ಹೀಗೆ ಮಾಡಲು ಹೋಗಿ ಈ ಎಡ ಸಿದ್ಧಾಾಂತಿಗಳು ಆರ್ಯರ ಆಗಮನವನ್ನು ತಮಗೆ ಬೇಕಾದಂತೆ ಕ್ರಿಿಸ್ತಪೂರ್ವ, ಕ್ರಿಿಸ್ತಶಕ ಎನ್ನುತ್ತ ಹಿಂದುಮುಂದಕ್ಕೆೆ ಎಳೆದಾಡತೊಡಗಿದ್ದಾಾರೆ.

ಉದಾಹರಣೆಗೆ ರಾಖಿಗಡಿಯಲ್ಲಿ ಸಿಕ್ಕಿಿದ ಮೂಳೆ ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಿಂದಿನದೆಂದೂ, ಆ ಮೂಳೆಯಲ್ಲಿ ಪರದೇಶಿಗಳ ವರ್ಣತಂತು ಇರಲಿಲ್ಲವೆಂದೂ ವಿಜ್ಞಾಾನಿಗಳು ಹೇಳಿದರಲ್ಲ? ಆಗ ನಾಗೇಶ್ ಹೆಗಡೆ, ಆರ್ಯರು ಬಂದದ್ದು ಆ ರಾಖಿಗಡಿಯ ವ್ಯಕ್ತಿಿ ಸತ್ತ ಮೇಲೆಯೇ ಎಂಬ ನಿರ್ಣಯ ಹೊರಡಿಸಿದರು. ಆದರೆ, ಅವರಿಗೆ ತೊಡಕಾಗಿದ್ದೇನೆಂದರೆ ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳ ಕಾಲನಿರ್ಣಯ. ಅವನ್ನು ಆರ್ಯರು ಬರೆದದ್ದು ಎಂದು ಈ ಎಡವಾದಿಗಳೆಲ್ಲ ತೀರ್ಪು ಕೊಟ್ಟಾಾಗಿದೆ. ಆ ಕಾವ್ಯಗಳಲ್ಲಿರುವ ಘಟನೆಗಳ ಕಾಲ ನಾಲ್ಕೂವರೆ ಸಾವಿರ ವರ್ಷಗಳಿಗಿಂತ ಹಿಂದಕ್ಕೆೆ ಹೋಗುತ್ತದೆ. ಅಷ್ಟು ಹಿಂದೆಯೇ ವ್ಯಾಾಸ-ವಾಲ್ಮೀಕಿಗಳು ಕಾವ್ಯ ಬರೆದಿಟ್ಟಿಿದ್ದರೆಂದರೆ ಅವರು ಅದಾಗಲೇ ಭಾರತದಲ್ಲಿ ಇದ್ದರು ಎಂಬುದನ್ನು ಒಪ್ಪಿಿಕೊಂಡಂತಾಗುತ್ತದೆ! ಇದೆಲ್ಲ ಗೊಂದಲಕ್ಕೆೆ ಒಂದು ಮಧ್ಯಮಸೂತ್ರದಂತೆ ನಾಗೇಶರು, ಆರ್ಯರು ಮಧ್ಯ-ಏಷ್ಯದಿಂದ ಇಳಿದು ಹಿಂದೂಖುಷ್ ಒಳಗೆ ಬರುತ್ತಿಿರುವಾಗಲೇ ಮಹಾಕವಿಗಳು ಮಹಾಕಾವ್ಯಗಳನ್ನು ರಚಿಸಿ ಬಿಡುವಂತೆ ಮಾಡಿಬಿಟ್ಟರು! ಅಂದರೆ ಭಾರತಕ್ಕಿಿನ್ನೂ ಕಾಲಿಡದ ಕವಿಗಳು ಭಾರತದ ಎಲ್ಲವನ್ನೂ ಸ್ವತಃ ಕಣ್ಣಲ್ಲಿ ನೋಡಿದವರಂತೆ ದಿವ್ಯದೃಷ್ಟಿಿಯವರಾಗಿ ಭಾರತದ ಕತೆಗಳನ್ನು ಬರೆದಿಟ್ಟರು!

ಒಮ್ಮೆೆ ಯೋಚಿಸಿ. ಕುಂತಿ ಜ್ಯೇಷ್ಠಪುತ್ರ ಕರ್ಣನನ್ನು ಗಂಗೆಯಲ್ಲಿ ತೇಲಿಬಿಟ್ಟಳು. ಮಗು ಬೆಸ್ತರಿಗೆ ಸಿಕ್ಕಿಿತು. ಬ್ರಾಾಹ್ಮಣರಿಗಷ್ಟೇ ಶಸ್ತ್ರಾಾಸ್ತ್ರವಿದ್ಯೆೆ ಕಲಿಸುತ್ತೇನೆಂದ ಪರಶುರಾಮರಲ್ಲಿ ಶೂದ್ರ ಕರ್ಣ ವಟುರೂಪದಲ್ಲಿ ಸೇರಿಕೊಂಡ. ಪರಶುರಾಮರೇ ಸ್ವತಃ ದ್ವಿಿಜೋತ್ತಮರು. ಕರ್ಣ ಮುಂದೆ ತನ್ನ ಕ್ಷತ್ರಿಿಯಪರಾಕ್ರಮವನ್ನು ಪ್ರದರ್ಶಿಸಿ ದುರ್ಯೋಧನನಿಗೆ ಮೆಚ್ಚಾಾಗಿ ಅಂಗ ರಾಜ್ಯದ ಅಧಿಪತಿಯಾದ. ಇವೆಲ್ಲ ನಡೆದದ್ದು ನಿಜ ಹೌದಾದರೆ ಇನ್ನೂ ಭಾರತವನ್ನು ಪ್ರವೇಶಿಸುತ್ತಿಿದ್ದ ವ್ಯಾಾಸರು ಭೌಗೋಳಿಕ ಖಚಿತತೆಯೊಂದಿಗೆ ಆ ಘಟನಾವಳಿಗಳನ್ನು ಬರೆದುಬಿಟ್ಟದ್ದು ಹೇಗೆ? ಅಥವಾ ವ್ಯಾಾಸರು ಇಲ್ಲಿ ನಡೆದ ಕತೆಯನ್ನು ಭಾರತ ಪ್ರವೇಶಿಸುವ ಮೊದಲೇ ಬರೆದರೆನ್ನಿಿ. ಆರ್ಯರ ಆಗಮನಕ್ಕೆೆ ಮುನ್ನವೇ ಇಲ್ಲಿ ಬ್ರಾಾಹ್ಮಣ, ಕ್ಷತ್ರಿಿಯ, ಶೂದ್ರ ಎಂಬೆಲ್ಲ ವರ್ಣ ವ್ಯವಸ್ಥೆೆ ಇತ್ತು ಎಂದಾಗುತ್ತದಲ್ಲ? ಊಹ್ಞೂ, ಹಾಗಲ್ಲ, ಇಡೀ ಮಹಾಭಾರತವೇ ಕಲ್ಪನೆಯ ಕತೆ ಎನ್ನುತ್ತೀರೋ? ಹಾಗಾದರೆ ಕರ್ಣನಿಗೆ ಮೋಸವಾಯಿತು ಎಂಬ ಕತೆಯೂ ಪೂರ್ತಿ ಸುಳ್ಳಾಾಗುತ್ತದೆ. ಅವನನ್ನು ಕಾನೀನನೆಂದು ಜರೆದರು ಎಂಬ ಕತೆಯಾಗಲೀ ಕುಲಂ ಕುಲಮಲ್ತು ಎಂದು ಕರ್ಣ ಭಾಷಣ ಬಿಗಿದನೆಂಬ ಪಂಪನ ಕಾವ್ಯವಾಗಲೀ ಎಲ್ಲವೂ ಕವಿ ಕಲ್ಪಿಿತ ಎಂಬ ನಿರ್ಣಯಕ್ಕೆೆ ಬರಬೇಕಾಗುತ್ತದೆ! ಮಹಾಭಾರತ-ರಾಮಾಯಣಗಳೇ ಈ ನೆಲದಲ್ಲಿ ನಡೆಯಲಿಲ್ಲವೆಂದ ಮೇಲೆ ವೇದಗಳ ಮಾತೇನು! ಮನುಸ್ಮತಿಯ ಮಾತೇನು! ಅವುಗಳ ಮೇಲೆ ಈ ಎಡಬುದ್ಧಿಿಜೀವಿಗಳು ಇನ್ನೂ ಇನ್ನೂ ಸುತ್ತಿಿಗೆ ಬಡಿಯುತ್ತಿಿರುವುದು ಅಸಂಗತವಾಗುವುದಿಲ್ಲವೆ?

ಇದನ್ನು ಇನ್ನಷ್ಟು ಬೆಳೆಸಬಹುದು. ಆದರೆ ಓದುಗರಿಗೆ ಎಡಪಂಥೀಯರ ಹಗ್ಗದ ನಡಿಗೆಯಂಥ ಸರ್ಕಸ್ಸು ಅರ್ಥವಾಗಿದೆಯೆಂದು ಭಾವಿಸುತ್ತೇನೆ. ಇವರು ಮೊದಲು ಒಂದು ಥಿಯರಿಯನ್ನು ತಮ್ಮ ಮೂಗಿನ ನೇರಕ್ಕೆೆ ಕಟ್ಟುತ್ತಾಾರೆ. ಆ ಥಿಯರಿಗೆ ಅಪಾಯ ಒದಗುತ್ತದೆ ಎಂದಾಗ ಅದನ್ನು ಬೀಳದೆ ನಿಲ್ಲಿಸಲೆಂದು ಮತ್ತೊೊಂದು ಪೂರಕ ಥಿಯರಿಯನ್ನು ಸೃಷ್ಟಿಿಸುತ್ತಾಾರೆ. ಕಟ್ಟಿಿದ ಮನೆಯಲ್ಲಿ ಒಂದು ಗೋಡೆ ಕುಸಿಯುತ್ತದೆ ಎಂದಾಗ ಅದನ್ನು ತಡೆಯಲು ಮತ್ತೊೊಂದೆಡೆ ಗೋಡೆ ಕಟ್ಟುತ್ತ, ಬಾಗಿಲು ಒಡೆಯುತ್ತ, ಕಿಟಕಿ ಇಡುತ್ತ, ಇದ್ದ ಕಿಟಕಿ ತೆಗೆಯುತ್ತ ಹೀಗೆ ಕಟ್ಟುಕಟ್ಟುತ್ತ ಹೋಗುವ ಕಟ್ಟುಕತೆ ಇದು. ಕೊಟ್ಟಕೊನೆಗೆ ಆ ಮನೆಗೆ ಒಳಬರಲಿಕ್ಕೂ ಬಾಗಿಲಿಲ್ಲ, ಒಳಬಂದವರು ಹೊರಹೋಗಲೂ ಬಾಗಿಲಿಲ್ಲ, ಅಂಥ ಪರಿಸ್ಥಿಿತಿ ಏರ್ಪಡುತ್ತದೆ. ಇಂಥ ಉಸಿರು ಬಿಗಿಸುವಂಥ ಥಿಯರಿಗಳನ್ನು ಎಡಪಂಥೀಯರು ಕಟ್ಟುತ್ತ ಇರುವವರೆಗೂ ನಮ್ಮ ದೇಶಕ್ಕೆೆ ಮುಕ್ತಿಿಯೇ ಇಲ್ಲ! ಬೆಳಕು ಕಾಣದ ಈ ಹೊಗೆಗೂಡಿನೊಳಗೆ ಕಣ್ಣುಕತ್ತಲೆ ಬಂದು ಅಲೆದಾಡುತ್ತಿಿರುವ ನಾವು ಮೊದಲು ಕಿಟಕಿಯ ಬಾಗಿಲನ್ನಾಾದರೂ ತೆರೆದು ಬೆಳಕಿನ ಕೋಲು ಒಳಬರುವಂತೆ ಮಾಡಬೇಕಿದೆ.

ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳ ಕಾಲನಿರ್ಣಯ. ಅವನ್ನು ಆರ್ಯರು ಬರೆದದ್ದು ಎಂದು ಈ ಎಡವಾದಿಗಳೆಲ್ಲ ತೀರ್ಪು ಕೊಟ್ಟಾಾಗಿದೆ.