Saturday, 23rd November 2024

ಲಸಿಕೆ ಲಭ್ಯವಿದೆಯೆಂದು ಹರ್ಷವರ್ಧನ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಗೆಹ್ಲೋಟ್‌

ಜೈಪುರ: ದೇಶದಲ್ಲಿ ಕೋವಿಡ್‌ ಲಸಿಕೆಗಳ ಲಭ್ಯತೆ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆರೋಪ ಮಾಡಿದ್ದಾರೆ.

ಸರ್ಕಾರದ ಬಳಿ 1 ಕೋಟಿ ಡೋಸ್‌ ಲಸಿಕೆಗಳ ದಾಸ್ತಾನು ಇದೆ ಎಂದು ಮೇ 19ರಂದು ಹರ್ಷವರ್ಧನ್‌ ಹೇಳಿಕೆ ನೀಡಿದ್ದರು. ಆದರೆ, ಲಸಿಕೆ ಕೊರತೆಯಿಂದ ದೇಶದಾದ್ಯಂತ ಲಸಿಕಾ ಕೇಂದ್ರಗಳು ಮುಚ್ಚುತ್ತಿವೆ ಎಂದಿದ್ದಾರೆ.

ಹರ್ಷವರ್ಧನ್‌ ಸುಳ್ಳಿನ ಸರಮಾಲೆ ಸೃಷ್ಟಿಸಲು ಸಮರ್ಥರು. ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು. ಜನರು ಆಮ್ಲಜನಕ ಸಿಗದೇ ಪರದಾಡುತ್ತಿದ್ದಾರೆ. ಆದರೆ ಸಚಿವರು ಆಮ್ಲಜನಕದ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. 1 ಕೋಟಿ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೂ ಹಂಚಿದರೆ ಕೇವಲ ಒಂದೇ ದಿನದಲ್ಲಿ ಲಸಿಕೆ ಖಾಲಿ ಆಗುತ್ತದೆ. ಏಪ್ರಿಲ್‌ 2ರಂದು ದೇಶದಾದ್ಯಂತ 42 ಲಕ್ಷ ಡೋಸ್‌ ಲಸಿಕೆಗಳನ್ನು ನೀಡಲಾಗಿತ್ತು. ಈಗ ದಿನಕ್ಕೆ ಕೇವಲ 16 ಲಕ್ಷ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ.

ಗಂಗಾ ಮತ್ತು ಯಮುನಾ ನದಿ ತೀರಗಳಲ್ಲಿ ಮೃತ ದೇಹಗಳನ್ನು ಸುಡುವ ಮತ್ತು ಭಸ್ಮವನ್ನು ನದಿಗೆ ಬಿಡುವ ಕುರಿತು ಅವೈಜ್ಞಾ ನಿಕ ಪದ್ಧತಿಯಲ್ಲಿ ಈ ಕ್ರಿಯೆಗಳು ನಡೆದರೆ ಕೊರೊನಾ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಗೆಹ್ಲೋಟ್ ಹೇಳಿ ದ್ದಾರೆ.