Thursday, 19th September 2024

ಮುಂಬೈನಲ್ಲಿ ಪೆಟ್ರೋಲ್‌ ’ಶತಕ’

ಮುಂಬೈ: ಕಳೆದ ಕೆಲವು ದಿನಗಳಿಂದ ಪೈಸೆಗಳ ರೂಪದಲ್ಲಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ದರ ಮುಂಬೈನಲ್ಲಿ ಶತಕ ಬಾರಿಸಿದೆ. ಶನಿವಾರ ಪೆಟ್ರೋಲ್ ಲೀಟರ್ ಗೆ 100.19 ರೂ. ಮತ್ತು ಡೀಸಲ್ ಗೆ 92.17 ರೂ. ಇದೆ.

ಥಾಣೆ ಮತ್ತು ನವೀ ಮುಂಬೈ ಈ ಎರಡು ನಗರಗಳಲ್ಲಿ ಪೆಟ್ರೋಲ್ ಲೀಟರ್ ಗೆ 100.32 ರೂ. ಮತ್ತು ಡೀಸಲ್ ಲೀಟರ್ ಗೆ 92.17 ರೂ. ದರವಿದೆ.

ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93.94 ರೂ. ಇದ್ದು, ಡೀಸಲ್ ಗೆ 91.87 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕ್ರಮವಾಗಿ 95.51 ರೂ. ಮತ್ತು 89.65 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ ಗೆ 93.97 ರೂಪಾಯಿಯಿದೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಶತಕ ದಾಟಿದೆ.