Thursday, 19th September 2024

ಉದ್ಯಮಿ ನವನೀತ್ ಕಾಲ್ರಾಗೆ ಜಾಮೀನು

ನವದೆಹಲಿ: ಆಮ್ಲಜನಕ ಸಾಂದ್ರತೆಯ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ನವನೀತ್ ಕಾಲ್ರಾಗೆ ದಿಲ್ಲಿ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.

ಆಮ್ಲಜನಕ ಸಾಂದ್ರತೆಯ ಕಾಳಸಂತೆ ಪ್ರಕರಣದ ಪ್ರಮುಖ ಆರೋಪಿ ಕಾಲ್ರಾ ಕಳೆದ ಬುಧವಾರ ನಗರದ ಸಾಕೇತ್ ನ್ಯಾಯಾಲಯ ದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕಾಲ್ರಾ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ದಿಲ್ಲಿ ಪೊಲೀಸರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಅವರ ಮುಂದೆ ಮನವಿ ಸಲ್ಲಿಸಿದರು.

ಆದರೆ, ನ್ಯಾಯಾಲಯ ತಲಾ ಒಂದು ಲಕ್ಷ ರೂ. ಎರಡು ವೈಯಕ್ತಿಕ ಶೂರಿಟಿ ಬಾಂಡ್ ಮೇಲೆ ಕಾಲ್ರಾರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಆಮ್ಲಜನಕ ಸಾಂದ್ರಕವನ್ನು ಮಾರಾಟ ಮಾಡಿರುವ ಗ್ರಾಹಕರನ್ನು ಸಂಪರ್ಕಿಸಬಾರದು, ಸಾಕ್ಷ್ಯಗಳನ್ನು ಹಾಳು ಮಾಡಬಾರದು ಅಥವಾ ಪ್ರಭಾವ ಬೀರಬಾರದು. ಪೊಲೀಸರು ಕರೆದಾಗ ತನಿಖೆಗೆ ಹಾಜರಾಗುವಂತೆ ನ್ಯಾಯಾಲಯವು ಆರೋಪಿಗೆ ನಿರ್ದೇಶನ ನೀಡಿತು.

Leave a Reply

Your email address will not be published. Required fields are marked *