ಮಧುಗಿರಿ: ಮಹಾಮಾರಿ ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೂಡ ಕೈಜೋಡಿಸ ಬೇಕೆಂದು ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಆಡಳಿತದ ಚುಕ್ಕಾಣಿ ಹಿಡಿದು ಏಳು ವರ್ಷ ತುಂಬಿದ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಶಕ್ತಿ ಕೆಂದ್ರ ಗ್ರಾಮಗಳಲ್ಲಿ ನೆಡಲು ೧೮೦೦ ಸಸಿಗಳನ್ನು ವಿತರಿಸಿ ಮಾತ ನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿವೆ. ಇದಕ್ಕೆ ಪ್ರತಿ ಯೊಬ್ಬರೂ ಸಹ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.
ಮೋದಿಯವರ ಆಡಳಿತ ವೈಖರಿಯಿಂದ ಭಾರತ ವಿಶ್ವದಲ್ಲಿ ಹೆಚ್ಚು ಅಭಿವೃದ್ದಿ ಹೊಂದಿದ ದೇಶವಾಗುತ್ತಿದೆ. ಯಾವುದೇ ಭ್ರಷ್ಟಾ ಚಾರ ನಡೆಸದೆ ೭ ವರ್ಷ ಪೂರೈಸಿ ಹೊಸ ಮೈಲುಗಲ್ಲನ್ನು ನಿರ್ಮಿಸಿದ್ದು, ಈ ಆಚರಣೆಯನ್ನು ಎಲ್ಲಾ ಗ್ರಾಮಗಳಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಜನಪರ ಆಡಳಿತ ನೀಡಲು ಕಾರ್ಯಕರ್ತರ ಶ್ರಮವೂ ಕೂಡ ಹೆಚ್ಚಿನದಾಗಿದ್ದು, ಮುಂದೆಯೂ ಸಹ ಕಾರ್ಯಕರ್ತರು ಇದೇ ರೀತಿ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಸುರೇಶ್ ರೆಡ್ಡಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಇಮ್ತಿಯಾಜ್ ಪಾಷ, ಮಾಹಿತಿ ಪ್ರಮು ಪಿ.ಎಸ್.ಭಾಗ್ಯಪ್ರಸಾದ್ ಹಾಗೂ ಪದಾಧಿಕಾರಿಗಳು ಇದ್ದರು.