Friday, 22nd November 2024

ಬೆಂಕಿಗೆ ಆಹುತಿಯಾಗಿ, ಮುಳುಗಿದ ಯುದ್ಧನೌಕೆ ‘ಖಾರ್ಗ್‌’

ಟೆಹ್ರಾನ್‌: ಇರಾನ್‌ನ ಬೃಹತ್‌ ಯುದ್ಧನೌಕೆ ‘ಖಾರ್ಗ್‌’ ಬೆಂಕಿಗೆ ಆಹುತಿಯಾಗಿ, ಒಮಾನ್‌’ನ ಗಲ್ಪ್ ಪ್ರದೇಶದಲ್ಲಿ ಮುಳುಗಿರುವ ಕುರಿತು ವರದಿಯಾಗಿದೆ. ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿ ಯಲ್ಲಿ ಜಾಸ್ಕ್‌ ಬಂದರಿನ ಸಮೀಪ ಹಡಗು ಮುಳುಗಿತು.

1977ರಲ್ಲಿ ಬ್ರಿಟನ್‌ನಲ್ಲಿ ನಿರ್ಮಾಣವಾದ ಈ ಯುದ್ಧನೌಕೆ 1984ರಲ್ಲಿ ಇರಾನ್‌ಗೆ ಹಸ್ತಾಂತರಗೊಂಡಿತ್ತು. ಪ್ರಮುಖ ಸರಕು ಸಾಗಣೆ ನೌಕೆಯಾಗಿ ಹಾಗೂ ಹೆಲಿಕಾ ಪ್ಟರ್‌ಗಳ ಚಿಮ್ಮು ಹಲಗೆಯಾಗಿ ಬಳಕೆಯಾಗುತ್ತಿತ್ತು.

ಇರಾನ್‌ ನೌಕಾಪಡೆಯಲ್ಲಿ ಸಂಭವಿಸಿದ ಮೂರನೇ ದೊಡ್ಡ ದುರಂತವಾಗಿದೆ. 2020ರಲ್ಲಿ ಜಸ್ಕ್‌ ಬಂದರಿನ ಬಳಿ ಕ್ಷಿಪಣಿಯೊಂದು ಅಚಾತುರ್ಯದಿಂದ ನೌಕಾಪಡೆಯ ಹಡಗಿದೆ ಅಪ್ಪಳಿಸಿ 19 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. 2018ರಲ್ಲಿ ನೌಕಾಪಡೆಯ ಯುದ್ಧನೌಕೆ ಕ್ಯಾಸ್ಪಿಯನ್‌ ಸಮುದ್ರದಲ್ಲಿ ಮುಳುಗಿತ್ತು.