Thursday, 19th September 2024

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಕೊಲ್ಕತ್ತಾ:
ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ ಡ್ರಾಾ ಮಾಡಿಕೊಳ್ಳುವಲ್ಲಿ ಸಫಲವಾಯಿತು.

2011ರ ಬಳಿಕ ಇದೇ ಮೊದಲ ಬಾರಿ ಫುಟ್ಬಾಾಲ್ ನಗರಿ ಕೊಲ್ಕತ್ತಾಾದ ಇಲ್ಲಿನ ವಿವೇಕಾನಂದ ಭಾರತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಗೆಲುವು ಪಡೆಯಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಬಾಂಗ್ಲಾಾದೇಶದ ಕೆಚ್ಚೆೆದೆಯ ಆಟ ಇದಕ್ಕೆೆ ಅವಕಾಶ ನೀಡಲೇ ಇಲ್ಲ.

ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆದಿತ್ತು. ಮೊದಲಾವಧಿಯ 42ನೇ ನಿಮಿಷದಲ್ಲಿ ಸಾದ್ ಉದ್ದೀನ್ ಅವರು ಹೆಡರ್ ಮೂಲಕ ಬಾಂಗ್ಲಾಾದೇಶಕ್ಕೆೆ ಗೋಲಿನ ಖಾತೆ ತೆರೆದರು. ಮೊದಲ ಅವಧಿ ಮುಕ್ತಾಾಯಕ್ಕೆೆ ಬಾಂಗ್ಲಾಾ 1-0 ಮುನ್ನಡೆ ಸಂಪಾದಿಸಿತು.

ನಂತರ, ಎರಡನೇ ಅವಧಿಯಲ್ಲಿ ತೀವ್ರ ಕಣಕ್ಕೆೆ ಇಳಿದ ಭಾರತ, ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಬಾಂಗ್ಲಾಾ ರಕ್ಷಣಾ ಕೋಟೆ ಬೇಧಿಸಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯ ಮುಗಿಯುವ ಕೊನೆಯ ಕ್ಷಣಗಳಲ್ಲಿ ಆದಿಲ್ ಖಾನ್ ಅವರು 88ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತವನ್ನು ಸೋಲಿನಿಂದ ಪಾರು ಮಾಡಿದರು. ಅಂತಿಮವಾಗಿ ಪಂದ್ಯ 1-1 ಅಂತರದಲ್ಲಿ ಡ್ರಾಾನಲ್ಲಿ ಮುಕ್ತಾಾಯವಾಯಿತು.

ಭಾರತ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಡ್ರಾಾ ಹಾಗೂ ಮತ್ತೊೊಂದರಲ್ಲಿ ಸೋಲು ಅನುಭವಿಸಿದೆ. ಎರಡು ಅಂಕಗಳನ್ನು ಚೆಟ್ರಿಿ ಪಡೆ ‘ಇ’ ಗುಂಪಿನ ಪಟ್ಟಿಿಯಲ್ಲಿ ನಾಲ್ಕನೇ ಸ್ಥಾಾನ ಪಡೆದಿದೆ. ಬಾಂಗ್ಲಾಾದೇಶ ಒಂದು ಅಂಕದೊಂದಿಗೆ ಕೊನೆಯ ಸ್ಥಾಾನ ಪಡೆದಿದೆ.