Saturday, 23rd November 2024

ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಣೆ

ನವದೆಹಲಿ: ಉದ್ಯಮಿ ಮೆಹುಲ್ ಚೋಕ್ಸಿಯ ಜಾಮೀನು ಅನ್ನು ಡೊಮೆನಿಕಾ ಕೋರ್ಟ್ ನಿರಾಕರಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ.

ಆಂಟಿಗುವಾದಿಂದ ಡೊಮಿನಿಕಾಕ್ಕೆ ಅಕ್ರಮವಾಗಿ ನುಸುಳಿರುವ ಬಗ್ಗೆ ಡೊಮಿ ನಿಕಾ ಕೋರ್ಟ್​​ನಲ್ಲಿ ಬುಧವಾರ ವಿಚಾರಣೆ ನಡೆದಿತ್ತು. ಪ್ರಕರಣ ಸಂಬಂಧ ಜಾಮೀನು ನಿರಾಕರಿಸಿದೆ ಎಂದು ಅವರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಅಂತೆಯೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರಣೆ ಕೂಡ ನಡೆಯಲಿದ್ದು, ಈ ವಿಚಾರಣೆಗೆ ಚೋಕ್ಸಿ ಕೂಡ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ಮೇ 23 ರಂದು ಊಟಕ್ಕೆಂದು ಹೊರಟಿದ್ದ ಮೆಹುಲ್ ಚೋಕ್ಸಿ ಆಂಟಿಗುವಾದಿಂದ ನಾಪತ್ತೆಯಾಗಿದ್ದರು. ಬಳಿಕ ಆಂಟಿಗುವಾ ಪೊಲೀಸರು ಚೋಕ್ಸಿಗಾಗಿ ತೀವ್ರ ಶೋಧ ನಡೆಸಿದ್ದರು. ಈ ವೇಳೆ ಚೋಕ್ಸಿ ಡೊಮೆನಿಕಾದಲ್ಲಿ ಬಂಧನಕ್ಕೀಡಾಗಿದ್ದರು. ಡೊಮೆನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.