ವೈ.ಎನ್.ಹೊಸಕೋಟೆ : ಗ್ರಾಮದ ಸಂತೆಮೈದಾನ, ಸಂತೆಊರು ಬಾಗಿಲು, ಬಸ್‌ನಿಲ್ದಾಣ, ಕಾಳಿದಾಸ ನಗರ ಇನ್ನಿತರೆ ಪ್ರದೇಶಗಳಲ್ಲಿರುವ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಎಸ್.ಸಿ.ಭಾರತಿ ಮತ್ತು ಸಿಬ್ಬಂದಿ ವರ್ಗ ಗುರುವಾರ ರಾತ್ರಿ ದಾಳಿ ನಡೆಸಿ ಸಾವಿರಾರು ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಐದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.