Friday, 22nd November 2024

ಸರ್ಕಾರಿ ವೈದ್ಯರ ಚಿಕಿತ್ಸೆ ವೆಚ್ಚಕ್ಕೆ 1.5 ಕೋಟಿ ರೂ. ಬಿಡುಗಡೆ

ವಿಶಾಖಪಟ್ಟಣ: ಆಂಧ್ರಪ್ರದೇಶದ ಸರ್ಕಾರಿ ವೈದ್ಯ ಡಾ.ಎನ್‌.ಭಾಸ್ಕರ ರಾವ್‌ ಎಂಬುವರಿಗೆ ಸೋಂಕು ತಗುಲಿದ್ದು, ಅವರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ  1.5 ಕೋಟಿ ರೂ. ಬಿಡುಗಡೆ ಮಾಡಿದೆ.

ಗಚ್ಚಿಬೌಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗು ತ್ತಿದ್ದು, ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಘೋಷಣೆ ಮಾಡಿದ್ದಾರೆ.

ಪ್ರಕಾಶಂ ಜಿಲ್ಲೆಯ ಕರಮಚೇಡು ಎಂಬಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಭಾಸ್ಕರ್‌ (38) ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಸೋಂಕು ದೃಢ ಪಟ್ಟಿತ್ತು.

ಗುಂಟೂರು ಮೆಡಿಕಲ್‌ ಕಾಲೇಜಿನಲ್ಲಿ ರೇಡಿಯೋ ಡಯಾಗ್ನಾಸಿಸ್‌ ಪ್ರಧ್ಯಾಪಕಿಯಾಗಿರುವ ಅವರ ಪತ್ನಿ ಡಾ.ಭಾಗ್ಯಲಕ್ಷ್ಮೀ ಅವರಿಗೂ ಸೋಂಕು ತಗುಲಿತ್ತು. ಆದರೆ ಭಾಸ್ಕರ್‌ ರಾವ್‌ ಸ್ಥಿತಿ ಹದಗೆಟ್ಟಿತ್ತು ಮತ್ತು ಚಿಕಿತ್ಸಾ ವೆಚ್ಚ ಏರಿಕೆಯಾ ಗಿತ್ತು.