ಅಭಿವ್ಯಕ್ತಿ
ಡಾ.ಆರ್.ಜಿ.ಹೆಗಡೆ
ಮಮತಾ ಬ್ಯಾನರ್ಜಿ ಸಾಂವಿಧಾನಿಕ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವಂತಿದೆ. ಅವರ ಮಾತು – ಕೃತಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಮನಿಸಿ. ಅವರು ಪ್ರಧಾನಿ, ಕೇಂದ್ರ ಗೃಹಮಂತ್ರಿ ಮತ್ತು ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರನ್ನೇ (ಬಂಗಾಳಕ್ಕೆ ಹೊರಗಿನವರು ಎಂದು ಕರೆದುಬಿಟ್ಟರು. ಸಂದರ್ಭ ಯಾವುದೂ ಇರಬಹುದು. ಉದ್ದೇಶವೂ ಏನೂ ಇರಬಹುದು. ಆದರೆ ಪ್ರಧಾನಿಯನ್ನು , ಗೃಹ ಸಚಿವರನ್ನು, ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೊರಗಿನವರು ಎಂದು ಹೇಳಿದ್ದು ದೇಶದ ಇತಿಹಾಸ ದಲ್ಲಿ ಇದೇ ಮೊದಲ ಬಾರಿ.
ಕಾಶ್ಮೀರದ ಮುಖ್ಯಮಂತ್ರಿಗಳು, ಕೂಡ – ಕೇಂದ್ರ ಸರಕಾರ ಗಳೊಂದಿಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿಯವರನ್ನು ‘ಹೊರಗಿನವರು’ ಎಂದು ಹೇಳಿದ ದಾಖಲೆಗಳಿಲ್ಲ. ಆರ್ಟಿಕಲ್ 370ರ ರದ್ಧತಿಯ ನಂತರ ಕೂಡ. ಸಾಮಾನ್ಯವಾಗಿ ಬಿರುಮಾತು ಗಳನ್ನಾಡುವ ಮೆಹಬೂಬಾ ಮುಫ್ತಿ ಕೂಡ ಇಂಥ ಮಾತನಾಡಲಿಲ್ಲ. ಮಾತುಗಳು ಗಂಭೀರ ಸ್ವರೂಪದ ಪ್ರಶ್ನೆಗಳನ್ನೆತ್ತಿವೆ.
ಎಲ್ಲ ಮುಖ್ಯಮಂತ್ರಿಗಳು ಇದೇ ಮಾತು ಹೇಳಲಾರಂಭಿಸಿದರೆ ಏನಾಗುತ್ತದೆ? ಪ್ರಧಾನಿ ದೇಶದ ಎಲ್ಲ ರಾಜ್ಯಗಳಿಗೆ ಸಂಬಂಧಿಸಿ ದವರಲ್ಲವೇ? ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸೇರಿದವರೇ? ಮತ್ತೆ ಪ್ರಧಾನಿ ಹುದ್ದೆ ಎಂದರೇನು? ಸಂವಿಧಾನ ಈ ಕುರಿತು ಏನು ಹೇಳುತ್ತದೆ? ಸಾಂವಿಧಾನಿಕವಾಗಿ ರಾಜ್ಯವೊಂದರ ಮುಖ್ಯಮಂತ್ರಿಯ ಪರಿಮಿತಿ ಗಳೇನು? ಮಮತಾ ಬ್ಯಾನರ್ಜಿ ಬಂಗಾಳಕ್ಕೆ ಮಾತ್ರ ಸೇರಿದವರೇ? ಭಾರತವೆಂದರೇನು? ಮುಖ್ಯಮಂತ್ರಿ ಯೊಬ್ಬರು ಏನು ಮಾತನಾಡಿದರೂ ನಡೆಯುತ್ತದೆಯೇ? ಇನ್ನೂ ಮಹತ್ವದ ವಿಷಯವೆಂದರೆ ಮಮತಾ ಇಂಥ ಮಾತನ್ನು ಬಾಯಿತಪ್ಪಿ ಆಡಿದ್ದಲ್ಲ.
ಪದೇ ಪದೆ ಅದೇ ಮಾತುಗಳನ್ನು ಆಡುತ್ತಲೇ ಹೋದರು. ಭಾರತದಲ್ಲಿ ಒಳಗಡೆ ಯಾವಾಗಲೂ ಹೊಗೆ ಯಾಡುತ್ತಲೇ ಇರುವ
ಭಾಷೆ, ಸಂಸ್ಕೃತಿ, ಪ್ರಾದೇಶಿಕ ಭಾವನೆಗಳನ್ನು ತೀವ್ರವಾಗಿ ಕೆರಳಿಸಿದರು. ಚುನಾವಣೆ ಗೆದ್ದರು. ಆದರೆ ಕೇಂದ್ರ ರಾಜ್ಯ ಸಂಬಂಧಗಳ ಕುರಿತಾದ ಸ್ಥಾಪಿತ ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ ತಂದುಬಿಟ್ಟರು ಎಂದೇ ಹೇಳಬೇಕು. ಕೊಳ್ಳಿ ಇಟ್ಟುಬಿಟ್ಟರು. ಅವರು ಇಟ್ಟ ಬೆಂಕಿ ಉರಿಯುತ್ತಲೇ ಇದೆ.
ಪ್ರತ್ಯೇಕತೆಯ ಕೂಗು ಕ್ರಮೇಣ ಬಂಗಾಳ ದಿಂದಲೂ ಏಳಬಹುದು. ಮತ್ತೆ ಭಾವನೆಯ ಹೊಗೆ ಯಾಡುತ್ತಲೇ ಇರುವ ದೇಶದ ಕೆಲವು ರಾಜ್ಯಗಳಿಗೆ ಈಗ ಹೊಸ ಸ್ಪೂರ್ತಿಯೂ ದೊರೆತಿರಬಹುದು. ಈಶಾನ್ಯ ಭಾರತವಂತೂ ಸೂಕ್ಷ್ಮ ಪ್ರದೇಶ. ಬೇರೆ ಕೆಲವು
ರಾಜ್ಯಗಳಲ್ಲಿಯೂ ಅಂಥ ಶಕ್ತಿಗಳು ಇವೆ. ಈಗ ಮುಖ್ಯಮಂತ್ರಿಯೊಬ್ಬರು ಸಾಂವಿಧಾನಿಕ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ದೇಶದ ಒಳಹೊರಗಿನ ಅಂಥ ಶಕ್ತಿಗಳಿಗೆ ಅವರಿಗೆ ತಿಳಿದಿರದಿದ್ದ ಕೆಲವು ಮಾತುಗಳನ್ನೂ ಕಲಿಸಿಬಿಟ್ಟಂತಿದೆ.
ಪ್ರಶ್ನೆ ಎಂದರೆ, ಕಾಶ್ಮೀರಿ, ಖಲಿಸ್ಥಾನಿ ಉಗ್ರರಿಗೆ, ಪಾಕಿಸ್ತಾನ, ಚೀನಾಗಳಿಗೆ ಈಗ ನಾವು ಏನು ಉತ್ತರಿಸುವುದು? ಇನ್ನೂ ಒಂದು ಕಪ್ಪು ದಾಖಲೆ ಈಗ ಮಮತಾ ಹೆಸರಿನಲ್ಲಿದೆ. ದೇಶದಲ್ಲಿ ಸೂಕ್ಷ್ಮವಾಗಿ ಚುನಾವಣೆಯಲ್ಲಿ ಧರ್ಮದ, ಜಾತಿಯ ಹೆಸರಿನಲ್ಲಿ ಮತಗಳನ್ನು
ಒಂದುಗೂಡಿಸಲು ಪ್ರಯತ್ನಿಸು ವುದರಲ್ಲಿ ಯಾವ ಪಕ್ಷವೂ ಹಿಂದೇನೂ ಇಲ್ಲ.ಆದರೆ ಇಲ್ಲಿಯವರೆಗೆ ಯಾರೂ ಮಹತ್ವದ ಸಾಂವಿಧಾನಿಕ ಹುದ್ದೆಗಳಲ್ಲಿ ಇದ್ದವರು ಅಂಥ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ ದಾಖಲೆ ಇರಲಿಲ್ಲ. ಅದು ಚುನಾ ವಣಾ ಅಪರಾಧ ಕೂಡ. ಅದನ್ನು ಲೆಕ್ಕಿಸದ ಮಮತಾ ಪ್ರಚಾರದಲ್ಲಿ ಒಂದು ಕೋಮಿನವರಿಗೆ ಒಟ್ಟುಗೂಡಿ ಮತ ಚಲಾಯಿಸಿ ಎಂದು ಸಾರ್ವಜನಿಕವಾಗಿಯೇ ಕರೆಕೊಟ್ಟುಬಿಟ್ಟರು.
ಮತ್ತೆ ಪ್ರಚಾರದಿಂದ ಒಂದು ದಿನ ಬಹಿಷ್ಕೃತಗೊಂಡ ದೇಶದ ಮುಖ್ಯಮಂತ್ರಿ ಎಂಬ ‘ಕೀರ್ತಿ’ ಈಗ ಅವರ ಹೆಸರಲ್ಲಿದೆ. ಅದಕ್ಕಾಗಿ ಚುನಾವಣಾ ಆಯೋಗದಿಂದ ಒಂದು ದಿನದ ‘ಶಿಸ್ತಿನ ಕ್ರಮ’ವನ್ನೂ ಅವರು ಎದುರಿಸಿದ್ದು ನಮಗೆ ಗೊತ್ತಿದೆ. ಬಂಗಾಳಕ್ಕೆ ಚಂಡ ಮಾರುತ ಯಾಸ್ ಬಂತು. ಸಂಬಂಧಿಸಿದ ರಾಜ್ಯಗಳಾದ ಒರಿಸ್ಸಾ ಮತ್ತು ಬಂಗಾಳಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದರು ಪ್ರಧಾನಿ. ಸಭೆಗೆ ನವೀನ್ ಪಟ್ನಾಯಕ್ ಹಾಜರಾದರು. ಆದರೆ ಹಾಜರಾಗಬೇಕಿದ್ದ, ಬರುತ್ತೇನೆಂದು ಹೇಳಿದ್ದ ಮಮತಾ ಮತ್ತು ಇರಬೇಕಾದ್ದು ಕರ್ತವ್ಯವಾಗಿದ್ದ ಬಂಗಾಳದ ಮುಖ್ಯ ಕಾರ್ಯದರ್ಶಿ ಬರಲೇ ಇಲ್ಲ.
ಪ್ರಧಾನಿಯವರೇ ಕಾದರೂ ಬರಲಿಲ್ಲ. ಇದೂ ಒಂದು ದಾಖಲೆಯೇ! ಮುಖ್ಯಮಂತ್ರಿಯಾಗಿ ತಮ್ಮದೇ ರಾಜ್ಯಕ್ಕೆ ಸಂಬಂಧಿಸಿದ
ಸಭೆಗೆ ಹಾಜರಾಗುವ ಸಾಂವಿಧಾನಿಕ ಕರ್ತವ್ಯವನ್ನು, ಕನಿಷ್ಠ ಪ್ರಧಾನಿ ರಾಜ್ಯಕ್ಕೆ ಬಂದಾಗ ತೋರಲೇಬೇಕಾದ ಶಿಷ್ಟಾಚಾರಗಳನ್ನು ಅವರು ತೋರಲೇ ಇಲ್ಲ. ವಿಶೇಷವೆಂದರೆ ರಾಜ್ಯದ ಮುಖ್ಯ ಕಾರ್ಯದರ್ಶಿಯೂ ಸಭೆಗೆ ಬರಲಿಲ್ಲ. ನಂತರ ಕೆಲಕಾಲ ಬಂದು ಹೋದರು.
ವಿಶೇಷವೆಂದರೆ ನಿವೃತ್ತರಾಗುತ್ತಿದ್ದ ಇದೇ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ಮಮತಾ ಅವರ ಕೋರಿಕೆಯನ್ನು ಮನ್ನಿಸಿ ಕೇಂದ್ರ ಸರಕಾರ ವಿಸ್ತರಿಸಿತ್ತು. ಈಗ ಅವರನ್ನು ಕೇಂದ್ರ ಸೇವೆಯಿಂದ ಆಶಿಸ್ತಿನ ಆಧಾರದ ಮೇಲೆ ಬಿಡುಗಡೆ ಮಾಡಿತು. ಏಕೆಂದರೆ
ಅಧಿಕಾರಿಯೊಬ್ಬರು ಪ್ರಧಾನಿಯ ಆದೇಶದ ವಿರುದ್ಧ ನಡೆದುಕೊಳ್ಳುವುದು ಗಂಭೀರ ವಿಷಯ.
ಮುಖ್ಯಕಾರ್ಯದರ್ಶಿ ಸರಕಾರದ ಅಧಿಕಾರಿ. ಸಾರ್ವಜನಿಕ ಉದ್ಯೋಗಿ. ನಂತರ ಆ ಅಧಿಕಾರಿಯ ಸೇವೆಯನ್ನು ವಿಸ್ತರಿಸ ಬೇಕೆಂದೂ ಮಮತಾ ಒತ್ತಡ ತಂದರು. ಅದನ್ನು ಕೇಂದ್ರ ಒಪ್ಪಿಕೊಳ್ಳದಿದ್ದಾಗ ಮತ್ತೆ ಗಲಾಟೆ ಮಾಡಿದರು. ಇಲ್ಲೂ ಅವರು ಗಮನಿಸಬೇಕಿತ್ತು. ಐಎಎಸ್ ಅಧಿಕಾರಿಗಳ ಸೇವೆಯನ್ನು ನಿರ್ಧರಿಸುವ ಜವಾಬ್ದಾರಿ ಕೇಂದ್ರದ್ದು. ಅವರನ್ನು ವಾಪಸ್ ಕರೆಸಿ ಕೊಳ್ಳುವ ಕಾನೂನಾತ್ಮಕ ಹಕ್ಕು ಕೇಂದ್ರ ಸರಕಾರಕ್ಕಿದೆ. ಇಂಥವರನ್ನು ನಮ್ಮ ರಾಜ್ಯಕ್ಕೆ ಅಧಿಕಾರಿಗಳನನ್ನಾಗಿ ಕಳುಹಿಸಿ ಎಂದು ರಾಜ್ಯ ಸರಕಾರಗಳು ಕೇಂದ್ರವನ್ನು ವಿನಂತಿಸಿಕೊಳ್ಳಬಹುದು.
ಕೇಂದ್ರ ಅದನ್ನು ಸಾಧಾರಣವಾಗಿ ಒಪ್ಪಿಕೊಳ್ಳುತ್ತದೆ. ಆದರೆ ಅದನ್ನು ಒಪ್ಪಿಕೊಂಡೇ ಬಿಡಬೇಕು ಎನ್ನುವ ಬಾಧ್ಯತೆ ಕೇಂದ್ರ ಸರಕಾರಕ್ಕೆ ಇಲ್ಲ. ವಿಷಯ ಅಲ್ಲಿಗೇ ಮುಗಿಯಲಿಲ್ಲ. ಈಗ ಆ ಅಧಿಕಾರಿಯನ್ನು ದೀದಿ ತಮ್ಮ ಮುಖ್ಯ ಸಲಹೆಗಾರನನ್ನಾಗಿ ನೇಮಿಸಿ ಕೊಂಡಿದ್ದಾರೆ. ಅಂದರೆ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ. ಪ್ರಧಾನಿ ವಿರುದ್ಧ ಅಶಿಸ್ತು ತೋರಿದ್ದನ್ನು ಗೌರವಿಸಿ ಅವರಿಗೆ ರತ್ನ ಗಂಬಳಿ ಹಾಸಿದ್ದಾರೆ. ಇವೆಲ್ಲ ಈಗಿನ ಸಂಗತಿಗಳು. ಹಿಂದಿನ ಕಥೆಗಳೂ ಇವೆ.
ಕೇಂದ್ರ ಸರಕಾರ ರೈತರಿಗೆ ಕೊಡಮಾಡಿದ ಕೃಷಿಸಮ್ಮಾನ್ ಅನ್ನು ಬಂಗಾಳ ಸರಕಾರ ಗೌರವಿಸಲಿಲ್ಲ. ಕೇಂದ್ರ ಪ್ರಾಯೋಜಿತ ಇನ್ನೂ ಹಲವು ಯೋಜನೆ ಗಳನ್ನು ಬಂಗಾಳ ಸರಕಾರ ಒಪ್ಪಿಕೊಳ್ಳಲಿಲ್ಲ. ‘ದಿಟ್ಟ ಮುಖ್ಯಮಂತ್ರಿ’ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರದ ಮಾತುಗಳನ್ನು, ಆದೇಶಗಳನ್ನು ಮೀರಿ ನಡೆಯುತ್ತಲೇ ಇದ್ದಾರೆ. ಸರಿ. ಕೇಂದ್ರ ರಾಜ್ಯ ಸಂಬಂಧಗಳ ಕುರಿತು ಸಂವಿಧಾನ ಏನು ಹೇಳುತ್ತದೆ ನೋಡೋಣ. ನಮ್ಮ ಸಂವಿಧಾನ ರಾಜ್ಯಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದೆ. ಆಪರೇಶನಲ್
ಫ್ರೀಡಂ ನೀಡಿದೆ. ಇದರ ಹಿಂದೆ ಸದುದ್ದೇಶವಿತ್ತು. ಇದೆ.
ಏನೆಂದರೆ ನಮ್ಮ ದೇಶದ ಬಹುತ್ವಗಳನ್ನು ಸಂಸ್ಕತಿಗಳನ್ನು, ವಿಭಿನ್ನತೆಗಳನ್ನು ಇಟ್ಟುಕೊಂಡೇ ಹೋಗುವ ಸಲುವಾಗಿ ರಾಜ್ಯ ಗಳಿಗೆ ಸ್ವಾತಂತ್ರ್ಯ ಇರಬೇಕು. ಆದರೆ ಅದೇ ಸಂದರ್ಭದಲ್ಲಿ ನೀಡಲಾಗುವ ಸ್ವಾತಂತ್ರ್ಯವನ್ನು ರಾಜ್ಯಗಳು ದುರ್ಬಳಕೆ ಮಾಡಿ ಕೊಂಡು ಪ್ರತ್ಯೇಕತಾವಾದಿ ಧೋರಣೆಗಳನ್ನು ತಳೆದುಬಿಡಬಹುದು ಎಂಬ ಅರಿವೂ ಸಂವಿಧಾನದ ನಿರ್ಮಾತೃಗಳಿಗೆ ಇತ್ತು. ಈ
ಉದ್ದೇಶಕ್ಕಾಗಿಯೇ ನಮ್ಮ ಸಂವಿಧಾನ ಕೇಂದ್ರ ಸರಕಾರಕ್ಕೆ ಅಪಾರ ಶಕ್ತಿ ನೀಡಿದೆ. ನಮ್ಮ ಸಂವಿಧಾನದ ಬಲವಾದ ಆಶಯಗಳು ಕೇಂದ್ರೀಕರಣವನ್ನು ಎತ್ತಿ ಹಿಡಿಯುವವು.
ಭಾರತೀಯ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸಲಾಗಿದ್ದೂ ಇದೇ ಹಿನ್ನೆಲೆಯಲ್ಲಿ. ದೇಶದ ಒಟ್ಟಾರೆ ನಿಯಂತ್ರಣವನ್ನು ಕೇಂದ್ರಕ್ಕೆ ನೀಡುವ ಸಲುವಾಗಿ. ಅವಶ್ಯಕತೆಯಿದ್ದಲ್ಲಿ ಹೊಸ ರಾಜ್ಯಗಳನ್ನು ಸೃಷ್ಟಿಸುವ, ರಾಜ್ಯ ಸರಕಾರಗಳನ್ನು ಅಮಾನತಿ ನಲ್ಲಿಡುವ, ಬರಖಾಸ್ತುಗಳಿಸುವ ಅಧಿಕಾರಗಳೂ ಕೇಂದ್ರಕ್ಕಿವೆ. ಈ ಎಲ್ಲ ಶಕ್ತಿ ಬಳಸಿಕೊಂಡೇ ಕೇಂದ್ರ ಸರಕಾರ ಕಾಶ್ಮೀರದಲ್ಲಿ ಇದ್ದ ಅಧಿಕಾರ
ವ್ಯವಸ್ಥೆಯನ್ನು ಬದಲಾಯಿಸಿದ್ದು. ಮತ್ತೆ ವೆಸ್ಟ್ಮಿನಿಸ್ಟರ್ ಮಾದರಿ ಯಲ್ಲಿರುವ ನಮ್ಮ ದೇಶದ ಅಧಿಕಾರದ ಮುಖ್ಯ
ನಿರ್ವಹಣ ಧಿಕಾರಿ ಪ್ರಧಾನಿ. ಕೇಂದ್ರ ಬಿಂದು ಪ್ರಧಾನಿ.
ಅಂಥ ಅಧಿಕಾರ ಪ್ರಧಾನಿ ಮತ್ತು ಕೇಂದ್ರ ಸರಕಾರಕ್ಕಿದೆ. ಇಂಥ ಅಧಿಕಾರವನ್ನು ಬಳಸಿಯೇ ಇಂದಿರಾ ಗಾಂಧಿ ತುರ್ತು ಸ್ಥಿತಿ ಜಾರಿಗೆ ತಂದಿದ್ದು. ಮತ್ತೆ ಇದೆಲ್ಲ ಅಧಿಕಾರವನ್ನು ಸಂವಿಧಾನ ಪ್ರಧಾನಿಗೆ ನೀಡಿದ್ದು ಅವರನ್ನು ಸರ್ವಾಧಿಕಾರಿಯನ್ನಾಗಿಸಲೇನೂ ಅಲ್ಲ. ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿ ಅವರ ಮೇಲೆ ಇದೆ. ಹಾಗಾಗಿ ದೇಶದ ಆ ಪ್ರಶ್ನೆ ಬಂದಾಗ
ಅವರಿಗೆ ಅಪರಿಮಿತ ಶಕ್ತಿ ಇದೆ. ಇಂದಿರಾ ಗಾಂಧಿ ಒಂದು ಕಾಲದಲ್ಲಿ ಕೇಂದ್ರದ ಜತೆ ಸಹಕಾರ ತೋರದಿದ್ದ ರಾಜ್ಯ ಸರಕಾರ ಗಳನ್ನು ಅವುಗಳಿಗೆ ಮೆಜಾರಿಟಿ ಇದ್ದಾಗಲೂ ಕಿತ್ತು ಬೀಸಾಡಿದ್ದು ನಮಗೆ ಗೊತ್ತಿದೆ. ಅಂಥ ಪ್ರಾವಿಶನ್ ಇಂದೂ ಕೂಡ
ಸಂವಿಧಾನದಲ್ಲಿದೆ. ಆರ್ಟಿಕಲ್ 364 ಇಂದೂ ಜೀವಂತವಾಗಿಯೇ ಇದೆ.
ಮತ್ತೆ ಹಾಗೆ ನೋಡಿದರೆ ಕೇಂದ್ರ – ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಲ್ಲಿಯೂ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿವೆ. ಅಲ್ಲಿ ಗೊಂದಲಗಳಿಲ್ಲ. ಅಧಿಕಾರವನ್ನು ಸಂವಿಧಾನವೇ ಕೇಂದ್ರ ರಾಜ್ಯಗಳ ನಡುವೆ ಹಂಚಿದೆ. ಮೂರು ಲಿಸ್ಟ್ಗಳಿವೆ. ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಕನ್ ಕರೆಂಟ್ ಲಿಸ್ಟ್. ಇಲ್ಲಿಯೂ ಕೂಡ ಸಂವಿಧಾನ ಒಂದು ಮಾತು ಹೇಳಿದೆ.ಏನೆಂದರೆ ಕೇಂದ್ರ ರಾಜ್ಯಗಳ ನಡುವೆ ಒಮ್ಮೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಘರ್ಷಣೆ ಹುಟ್ಟಿಕೊಂಡರೆ ಕೇಂದ್ರ ಸರಕಾರದ ನಿರ್ಧಾರವೇ ಅಂತಿಮ. ಅಲ್ಲದೆ ಯಾವುದಾದರೂ ಹೆಚ್ಚುವರಿ ವಿಷಯಗಳು ಹುಟ್ಟಿಕೊಂಡರೆ ಅಂಥ ವಿಷಯಗಳ ಕುರಿತ ಕೊನೆಯ ಮಾತು ಕೇಂದ್ರದ್ದು.
ಮತ್ತು ಅಂಥ ತೀರ್ಮಾನಗಳಿಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬದ್ಧವಾಗಿರಬೇಕಾಗುತ್ತದೆ. ಇದು ಸಾಂವಿಧಾನಿಕ ಸ್ಥಿತಿ. ಮುಖ್ಯಮಂತ್ರಿಗಳು ಕೇಂದ್ರಕ್ಕೆ ಸೆಡ್ಡು ಹೊಡೆಯುವಂತಿಲ್ಲ. ಅಥವಾ ಪ್ರಧಾನಿ ಹುದ್ದೆಗೆ ಅಗೌರವ ತೋರುವಂತಿಲ್ಲ.
ಕುತೂಹಲದ ಪ್ರಶ್ನೆಯೆಂದರೆ ಈ ವಿಷಯಗಳು ಕೇಂದ್ರಮಂತ್ರಿಯಾಗಿದ್ದ, ಮುಖ್ಯಮಂತ್ರಿಯಾಗಿ ಎರಡು ಅವಧಿ ಮುಗಿಸಿದ ಮಮತಾ ಅವರಿಗೆ ಗೊತ್ತಿಲ್ಲವೇ? ಗೊತ್ತಿರಲೇಬೇಕು. ಗೊತ್ತಿದೆ. ಆದರೂ ಹೀಗೆ ವರ್ತಿಸುತ್ತಿರುವುದು ಏಕೆ? ಅದು ರಾಜಕೀಯ.
ಒಂದನೆಯದು; ಚುನಾವಣೆ ಗೆಲ್ಲಬೇಕಿತ್ತು. ಅದಕ್ಕಾಗಿ ಅವರಿಗೆ ಎರಡು ಅವಶ್ಯಕತೆಗಳಿದ್ದವು. ಒಂದು. ಪ್ರಾದೇಶಿಕತೆಯ ಭಾವನೆಯನ್ನು ಕೆರಳಿಸುವುದು. ಎರಡು; ಮೋದಿಯಂತಹ ವ್ಯಕ್ತಿಯ ಎದುರುನಿಲ್ಲಬಲ್ಲ ದಿಟ್ಟ ಮಹಿಳೆ – ಎಂದು ಜನಮಾನಸ ದಲ್ಲಿ ಬೇರುಬಿಡುವುದು.
ಚುನಾವಣೆಯ ನಂತರ ಬಹುಶಃ ಅವರಿಗೆ ರಾಷ್ಟ್ರೀಯವಾಗಿ ಇನ್ನೊಂದು ಅರಿವು, ಎಚ್ಚರ ಮಮತಾ ಅವರಿಗೆ ಬಂದಿದೆ. ಮೋದಿ ವಿರುದ್ಧ ನಿಲ್ಲಬಹುದಾದ ಸಶಕ್ತ ವಿರೋಧಿ ನಾಯಕತ್ವದ ಸ್ಥಾನ ಖಾಲಿ ಇರುವುದು ಗೊತ್ತಾಗಿದೆ. ಪ್ರಧಾನಿ ಹುದ್ದೆಗೆ ಯುಪಿಎ
ಅಭ್ಯರ್ಥಿಯಾಗುವ ಹವಣಿಕೆಯ ಭಾಗ ಈ ಆಟ ಇರಲೂಬಹುದು. ಮತ್ತೊಂದು ವಿಷಯ. ಒಮ್ಮೆ ಕೇಂದ್ರ ಸರಕಾರ ತನ್ನ
ಶಕ್ತಿಯನ್ನು ಬಳಸಿ ಮಮತಾ ಸರಕಾರದ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾದರೆ ಪ್ರಧಾನಿ ಸರ್ವಾಧಿಕಾರಿ ಎಂದು ಹೇಳುತ್ತ ಚುನಾವಣೆಗೆ ಹೋಗಬಹುದು.
ಆಗ ಮೋದಿ ವಿರುದ್ಧದ ರಾಷ್ಟ್ರೀಯ ನಾಯಕತ್ವ ನೇರವಾಗಿ ದೀದಿಗೆ ದೊರೆತುಬಿಡುತ್ತದೆ. ಉಳಿದೆಲ್ಲ ನಾಯಕರೂ ಮಂಕಾಗಿ
ಹೋಗುತ್ತಾರೆ. ದೀದಿ ಪ್ರಧಾನಿ ಹುದ್ದೆಗೆ ಹತ್ತಿರ ಬಂದುಬಿಡುತ್ತಾರೆ. ಮಮತಾ ಅವರನ್ನು ಬೆಂಬಲಿಸುವ ರಾಜಕೀಯ ಅನಿವಾ ರ್ಯತೆ ಉಳಿದ ನಾಯಕರುಗಳಿಗೆ ಉಂಟಾಗಿ ಬಿಡುತ್ತದೆ. ಲೆಕ್ಕಾಚಾರ ಒಳ್ಳೆಯದೇ.
ರಾಜಕೀಯ ಆಟಗಳೆಲ್ಲ ಇರಲಿ. ಅಭ್ಯಂತರವೇನೂ ಇಲ್ಲ. ಆದರೆ ನಡುವೆ ಮಮತಾ ಅರಿಯಬೇಕು. ಏನೆಂದರೆ ಸಂವಿಧಾನದ ಶಿಷ್ಟಾಚಾರಗಳು ಅವರ ನಡವಳಿಕೆಯನ್ನು ಬೆಂಬಲಿಸುತ್ತಿಲ್ಲ