Thursday, 12th December 2024

ಉಮಾಪತಿ ಚುಕ್ಕಿಯವರ ಕಾರ್ಯಕ್ರಮ ರದ್ದು

ಮಾನವಿ : ಕರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ವಿದಿಸಿದ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಲಿಂ.
ಉಮಾಪತಿ ಚುಕ್ಕಿಯವರ ೪೪ ನೇ ಪುಣ್ಯ ಸ್ಮರಣೋತ್ಸವ ಹಾಗೂ ಬಸವತತ್ವ ಚಿಂತನ ಗೋಷ್ಠಿ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪಗೌಡ ಸಿರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿವರ್ಷ ಜೂ. ೧೧ ರಂದು ಪುಣ್ಯ ಸ್ಮರಣೋತ್ಸವ ಹಾಗೂ ಬಸವತತ್ವ ಚಿಂತನ ಗೋಷ್ಠಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ
ಪುರಸ್ಕಾರ ಮತ್ತು ವಿವಿಧ ಕೃತಿಗಳು ರಚಿಸಿದ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಗಳು ನಡೆಸಲಾಗುತ್ತಿತ್ತು ಆದರೆ ಕರೊನಾ ಎರಡನೇ ಅಲೆ ಇರುವುದರಿಂದ ಈ ಬಾರಿಯೂ ಕೂಡ ಕಾರ್ಯಕ್ರಮ ರದ್ದು ಮಾಡಿ ಮನೆಯಲ್ಲಿ ಸರಳವಾಗಿ ೪೪ ನೇ ಪುಣ್ಯ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.